RCB vs KKR: ಟಾಸ್ ವೇಳೆ ತಪ್ಪು ಗ್ರಹಿಕೆ: ಆಕ್ರೋಶ ವ್ಯಕ್ತಪಡಿಸಿದ ಕೆಕೆಆರ್ ನಾಯಕ

IPL 2023: RCB vs KKR- ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡರು.

RCB vs KKR: ಟಾಸ್ ವೇಳೆ ತಪ್ಪು ಗ್ರಹಿಕೆ: ಆಕ್ರೋಶ ವ್ಯಕ್ತಪಡಿಸಿದ ಕೆಕೆಆರ್ ನಾಯಕ
KKR vs RCB
Edited By:

Updated on: Apr 06, 2023 | 7:50 PM

IPL 2023: RCB vs KKR: ಕೊಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ಆರ್​ಸಿಬಿ ಹಾಗೂ ಕೆಕೆಆರ್ (RCB vs KKR) ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದ ಆರಂಭಕ್ಕೂ ಮುನ್ನ ನಡೆದ ಟಾಸ್ ಪ್ರಕ್ರಿಯೆಯು ಇದೀಗ ವಿವಾದಕ್ಕೆ ಕಾರಣವಾಗಿದೆ. ಕೆಕೆಆರ್ ತಂಡದ ನಾಯಕ ನಿತೀಶ್ ರಾಣಾ ಟಾಸ್ ಹಾಕಿದ್ದರು. ಇತ್ತ ನಾಣ್ಯವನ್ನು ಪರಿಶೀಲಿಸಿದ ಮ್ಯಾಚ್ ರೆಫರಿ ಶಕ್ತಿ ಸಿಂಗ್, ಹೆಡ್ಸ್​ ಆಗಿದ್ದು ಕೆಕೆಆರ್ ಟಾಸ್ ಗೆದ್ದಿದೆ ಎಂದರು. ಆದರೆ ಇದೇ ವೇಳೆ ಫಾಫ್ ಡುಪ್ಲೆಸಿಸ್ ನಾನು ಹೆಡ್ಸ್ ಅಂದಿರುವುದಾಗಿ ತಿಳಿಸಿದ್ದಾರೆ. ಇದರಿಂದ ಕೆಲ ಕ್ಷಣ ಗೊಂದಲವಾಯಿತು. ಇದಾಗ್ಯೂ ಕಮೆಂಟೇಟರ್ ಸಂಜಯ್ ಮಂಜ್ರೇಕರ್ ಆರ್​ಸಿಬಿ ನಾಯಕ ಹೆಡ್ಸ್ ಅಂದಿರುವುದನ್ನು ಸ್ಪಷ್ಟಪಡಿಸಿದರು. ಹೀಗಾಗಿ ರೆಫರಿ ಆರ್​ಸಿಬಿ ಟಾಸ್ ವಿನ್ನರ್ ಎಂದರು.

ಅತ್ತ ಕೆಕೆಆರ್ ನಾಯಕ ನಿತೀಶ್ ರಾಣಾ ಸಂಜಯ್ ಮಂಜ್ರೇಕರ್ ಜೊರೆ ವಾಗ್ವಾದಕ್ಕಿಳಿಯಲು ಮುಂದಾದರು. ಅಲ್ಲದೆ ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಮುಂದೆ ಸಾಗಿದರು. ಆ ಬಳಿಕ ಮಾತನಾಡಿದ ಫಾಫ್ ಡುಪ್ಲೆಸಿಸ್ ನಾನು ಹೆಡ್ಸ್ ಅಂದಿರುವುದು. ಆದರೆ ಉಚ್ಚಾರಣೆ ತಪ್ಪು ಗ್ರಹಿಕೆಯಿಂದ ಗೊಂದಲ ಉಂಟಾಗಿದೆ ಎಂದರು. ಅಲ್ಲದೆ ನಾವು ಈ ಪಂದ್ಯದಲ್ಲಿ ಬೌಲ್ ಮಾಡುತ್ತೇವೆ. ಏಕೆಂದರೆ ಕಳೆದ ರಾತ್ರಿ ಇಬ್ಬನಿ ಇತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಅದು ಸ್ಕಿಡ್ ಆಗಲಿದೆ ಎಂದು ಭಾವಿಸುತ್ತೇವೆ ಎಂದು ತಿಳಿಸಿದರು.
ಹಾಗೆಯೇ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ ಡುಪ್ಲೆಸಿಸ್, ಈ ಪಂದ್ಯದಲ್ಲಿ ರೀಸ್ ಟೋಪ್ಲಿ ಕಣಕ್ಕಿಳಿಯುತ್ತಿಲ್ಲ. ಬದಲಾಗಿ ಡೇವಿಡ್ ವಿಲ್ಲಿ ಆಡಲಿದ್ದಾರೆ ಎಂದರು.

ಇದನ್ನೂ ಓದಿ
IPL Records: ಧೋನಿ ಬೆಸ್ಟ್ ಫಿನಿಶರ್ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ
IPL 2023: ಭರ್ಜರಿ ದಾಖಲೆ ನಿರ್ಮಾಣ: ಐಪಿಎಲ್​ ಅಂಗಳದಲ್ಲಿ ಹೊಸ ಕ್ರಿಸ್ ಗೇಲ್
IPL 2023: RCB ತಂಡಕ್ಕೆ ಬಿಗ್ ಶಾಕ್; ಸ್ಟಾರ್ ಬ್ಯಾಟ್ಸ್​ಮನ್ ಐಪಿಎಲ್​ನಿಂದ ಔಟ್
Virat Kohli Record: ಮೊದಲ ಪಂದ್ಯದಲ್ಲೇ ಭರ್ಜರಿ ದಾಖಲೆ ಬರೆದ ವಿರಾಟ್ ಕೊಹ್ಲಿ

ಇದೀಗ ಆರ್​ಸಿಬಿ ಹಾಗೂ ಕೆಕೆಆರ್ ನಡುವಣ ಟಾಸ್ ಪ್ರಕ್ರಿಯೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಗೊಂದಲಕ್ಕೆ ಕಾರಣವಾಗಿದ್ದ ಪ್ರಕ್ರಿಯೆಯ ಬಗ್ಗೆ ಕೆಕೆಆರ್​ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಮತ್ತೊಮ್ಮೆ ಟಾಸ್ ಹಾಕುವ ಅವಕಾಶ ಇದ್ದರೂ, ಗೊಂದಲದೊಂದಿಗೆ ರೆಫರಿ ಟಾಸ್ ಪ್ರಕ್ರಿಯೆ ಮುಗಿಸಿರುವುದು ಉತ್ತಮ ನಡೆಯಲ್ಲ ಎಂಬ ವಾದವನ್ನು ಕೆಕೆಆರ್ ಫ್ಯಾನ್ಸ್ ಮುಂದಿಡುತ್ತಿದ್ದಾರೆ.

ಉಭಯ ತಂಡಗಳು ಹೀಗಿವೆ:

ಕೊಲ್ಕತ್ತಾ ನೈಟ್ ರೈಡರ್ಸ್​: ನಿತೀಶ್ ರಾಣಾ (ನಾಯಕ), ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಮನ್ದೀಪ್ ಸಿಂಗ್, ರಿಂಕು ಸಿಂಗ್, ಆಂಡ್ರೆ ರಸೆಲ್, ಸುಯಶ್ ಶರ್ಮಾ, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡುಪ್ಲೆಸಿ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮೈಕಲ್ ಬ್ರೇಸ್‌ವೆಲ್, ಶಹಬಾಝ್ ಅಹ್ಮದ್, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.