AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ರಜತ್ ಪಾಟಿದಾರ್ ಬದಲಿ ಆಟಗಾರ ಯಾರು? RCB ಮುಂದಿದೆ 3 ಆಯ್ಕೆ

IPL 2023 Kannada: ಆರ್​ಸಿಬಿ ತಂಡದಿಂದ ಹೊರಬಿದ್ದಾಗ ಅವರ ಬದಲಿಗೆ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ರಜತ್ ಪಾಟಿದಾರ್ ಬದಲಿಗೆ ಆರ್​ಸಿಬಿ ಮುಂದೆ 3 ಆಯ್ಕೆಗಳಿವೆ. ಅವರೆಂದರೆ...

TV9 Web
| Edited By: |

Updated on: Apr 06, 2023 | 6:23 PM

Share
IPL 2023 RCB: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ರಿಂದ ಆರ್​ಸಿಬಿ ಆಟಗಾರ ರಜತ್ ಪಾಟಿದಾರ್ ಹೊರಬಿದ್ದಿದ್ದಾರೆ. ಪಾದದ ನೋವಿನ ಸಮಸ್ಯೆಯ ಕಾರಣ ಪಾಟಿದಾರ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದಾಗ್ಯೂ ಆರ್​ಸಿಬಿ ಫ್ರಾಂಚೈಸಿ ಬದಲಿ ಆಟಗಾರನನ್ನು ಹೆಸರಿಸಿಲ್ಲ.

1 / 6
ಸಾಮಾನ್ಯವಾಗಿ ಆರ್​ಸಿಬಿ ತಂಡದಿಂದ ಭಾರತೀಯ ಆಟಗಾರರು ಹೊರಬಿದ್ದರೆ, ಅವರ ಬದಲಿಯಾಗಿ ಮಾಜಿ ಆರ್​ಸಿಬಿ ಆಟಗಾರರನ್ನು ಆಯ್ಕೆ ಮಾಡುವ ವಾಡಿಕೆಯಿದೆ. ಇದಕ್ಕೆ ಉದಾಹರಣೆ ಕಳೆದ ಸೀಸನ್​ನಲ್ಲಿ ತಂಡದಲ್ಲಿದ್ದ ಲವ್​​ನೀತ್ ಸಿಸೋಡಿಯಾ ಆರ್​ಸಿಬಿ ತಂಡದಿಂದ ಹೊರಬಿದ್ದಾಗ ಅವರ ಬದಲಿಗೆ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಿರುವುದು. ಇದೀಗ ರಜತ್ ಪಾಟಿದಾರ್ ಬದಲಿಗೆ ಆರ್​ಸಿಬಿ ಮುಂದೆ 3 ಆಯ್ಕೆಗಳಿವೆ. ಅವರೆಂದರೆ...

2 / 6
ಸಚಿನ್ ಬೇಬಿ: 2021 ರ ಐಪಿಎಲ್​ ವೇಳೆ ತಂಡದಲ್ಲಿದ್ದ ಆರ್​ಸಿಬಿ ಮಾಜಿ ಅಟಗಾರ ಸಚಿನ್ ಬೇಬಿ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಏಕೆಂದರೆ 2022-23 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸಚಿನ್ 206 ರನ್​ ಕಲೆಹಾಕಿದ್ದರು. ಹಾಗೆಯೇ ರಣಜಿ ಟ್ರೋಫಿಯಲ್ಲಿ ಮೂರು ಶತಕಗಳನ್ನು ಒಳಗೊಂಡಂತೆ 83 ರ ಸರಾಸರಿಯಲ್ಲಿ 830 ರನ್​ಗಳಿಸಿದ್ದಾರೆ. ಹೀಗಾಗಿ ಉತ್ತಮ ಫಾರ್ಮ್​ನಲ್ಲಿರುವ ಸಚಿನ್ ಬೇಬಿಗೆ ಆರ್​ಸಿಬಿ ಮಣೆಹಾಕಬಹುದು.

3 / 6
ಲವ್​ನೀತ್ ಸಿಸೋಡಿಯಾ: ಕಳೆದ ಸೀಸನ್​ನ ಆರಂಭದಲ್ಲಿ ಗಾಯಗೊಂಡು ಆರ್​ಸಿಬಿ ತಂಡದಿಂದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಲವ್​ನೀತ್ ಸಿಸೋಡಿಯಾ ಹೊರಬಿದ್ದಿದ್ದರು. ಇವರ ಬದಲಿಗೆ ರಜತ್ ಪಾಟಿದಾರ್ ಆಯ್ಕೆಯಾಗಿದ್ದರು. ಇದೀಗ ಪಾಟಿದಾರ್ ಹೊರಬಿದ್ದಿರುವ ಕಾರಣ ಅವರ ಸ್ಥಾನದಲ್ಲಿ ಲವ್​ನೀತ್ ಸಿಸೋಡಿಯಾಗೆ ಸ್ಥಾನ ನೀಡಲಿದ್ದಾರಾ ಕಾದು ನೋಡಬೇಕಿದೆ.

4 / 6
ಮೊಹಮ್ಮದ್ ಅಜರುದ್ದೀನ್: ಐಪಿಎಲ್ 2021 ರ ಆರ್​ಸಿಬಿ ತಂಡದಲ್ಲಿ ಸ್ಥಾನ ಪಡೆದಿದ್ದ ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಮೊಹಮ್ಮದ್ ಅಜರುದ್ದೀನ್ ಅವರನ್ನು ಈ ಬಾರಿ ಯಾವುದೇ ತಂಡ ಖರೀದಿಸಿಲ್ಲ. ದೇಶೀಯ ಅಂಗಳದ ಡ್ಯಾಶಿಂಗ್ ಬ್ಯಾಟ್ಸ್​ಮನ್ ಎನಿಸಿಕೊಂಡಿರುವ ಅಜರ್​ಗೆ ಈ ಬಾರಿ ಬದಲಿ ಆಟಗಾರನಾಗಿ ಆರ್​ಸಿಬಿ ತಂಡಕ್ಕೆ ಮರಳಿದರೂ ಅಚ್ಚರಿಪಡಬೇಕಿಲ್ಲ.

5 / 6
RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.

6 / 6
Follow Us
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ

'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?

ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!

ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ

‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ

ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!

ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ

ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ

ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ

ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?