RCB vs KKR Highlights IPL 2023: ಕೆಕೆಆರ್ ವಿರುದ್ಧ 81 ರನ್ಗಳಿಂದ ಸೋತ ಆರ್‌ಸಿಬಿ
Royal Challengers Bangalore vs Kolkata Knight Riders IPL 2023 Highlights in Kannada: ಇಂದು ನಡೆದ ಐಪಿಎಲ್ನ 9 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 81 ರನ್ಗಳಿಂದ ಸೋಲಿಸಿ ಬೃಹತ್ ಜಯ ಸಾಧಿಸಿದಲ್ಲದೆ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದೆ.

ಇಂದು ನಡೆದ ಐಪಿಎಲ್ನ 9 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 81 ರನ್ಗಳಿಂದ ಸೋಲಿಸಿ ಬೃಹತ್ ಜಯ ಸಾಧಿಸಿದಲ್ಲದೆ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಬೆಂಗಳೂರು ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತ ಕೋಲ್ಕತ್ತಾ ತಂಡ ಕಳಪೆ ಆರಂಭ ಪಡೆದಿದ್ದರ ಹೊರತಾಗಿಯೂ ರಹಮಾನುಲ್ಲಾ ಗುರ್ಬಾಜ್ ಅವರ ಅರ್ಧಶತಕ ಮತ್ತು ಶಾರ್ದೂಲ್-ರಿಂಕು ಅವರ 100 ರನ್ ಜೊತೆಯಾಟದಿಂದಾಗಿ ಕೋಲ್ಕತ್ತಾ ತಂಡ 205 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಬೆಂಗಳೂರು ತಂಡ ಅಬ್ಬರದ ಆರಂಭ ಪಡೆಯಿತ್ತಾದರೂ, ಆನಂತರ ಸ್ಪಿನ್ನರ್ಗಳ ವಿರುದ್ಧ ಮುಗ್ಗರಿಸಿ ಕೆವಲ 123 ರನ್‌ಗಳಿಗೆ ಆಲೌಟ್ ಆಯಿತು.
LIVE NEWS & UPDATES
-
ಕೆಕೆಆರ್ಗೆ ಮೊದಲ ಗೆಲುವು
ವರುಣ್ ಚಕ್ರವರ್ತಿ ತಮ್ಮದೇ ಎಸೆತದಲ್ಲಿ ಆಕಾಶ್ ದೀಪ್ ಕ್ಯಾಚ್ ಪಡೆದು ಆರ್‌ಸಿಬಿಯನ್ನು 123 ರನ್‌ಗಳಿಗೆ ಆಲ್ ಔಟ್ ಮಾಡಿದರು. ಕೆಕೆಆರ್ ತವರಿನಲ್ಲಿ ಮೊದಲ ಜಯ ದಾಖಲಿಸಿತು. ವರುಣ್ 4 ಹಾಗೂ ಸುಯಶ್ ಶರ್ಮಾ 3 ವಿಕೆಟ್ ಪಡೆದರು.
-
ಒಂಬತ್ತನೇ ವಿಕೆಟ್ ಪತನ
ಬೆಂಗಳೂರಿನ ಒಂಬತ್ತನೇ ವಿಕೆಟ್ ಪತನ, ಸುಯಾಶ್ ಅವರ ಓವರ್‌ನಲ್ಲಿ ಕರ್ಣ್ ಶರ್ಮಾ 1 ರನ್‌ಗಳಿಸಿ ಸ್ಲಿಪ್ನಲ್ಲಿ ಕ್ಯಾಚಿತ್ತು ಔಟಾದರು. 15 ಓವರ್‌ಗಳ ನಂತರ ಬೆಂಗಳೂರು ಸ್ಕೋರ್ 102/9
-
-
ಎಂಟನೇ ವಿಕೆಟ್ ಪತನ
ಬೆಂಗಳೂರಿನ ಎಂಟನೇ ವಿಕೆಟ್ ಪತನವಾಗಿದೆ. ಆರ್ಸಿಬಿಯ ಕೊನೆಯ ಭರವಸೆಯಾಗಿದ್ದ ದಿನೇಶ್ ಕಾರ್ತಿಕ್ 9 ರನ್ ಗಳಿಸಿ ಔಟಾದರು. 13 ಓವರ್‌ಗಳ ನಂತರ ಬೆಂಗಳೂರು ಸ್ಕೋರ್ 86/8
-
ಏಳನೇ ವಿಕೆಟ್ ಪತನ
ಐಪಿಎಲ್‌ನಲ್ಲಿ ಮೊದಲ ಪಂದ್ಯವನ್ನಾಡುತ್ತಿರುವ ಸುಯ್ಯಶ್ ಶರ್ಮಾ ಮೊದಲ ವಿಕೆಟ್ ಪಡೆದಿದ್ದಾರೆ. 1 ರನ್ ಗಳಿಸಿದ್ದ ಅನುಜ್ ಕ್ಯಾಚಿತ್ತು ಔಟಾಗಿದ್ದಾರೆ. ಬೆಂಗಳೂರು ತಂಡದ ಸ್ಥಿತಿ ಹದಗೆಟ್ಟಿದೆ
-
ಆರನೇ ವಿಕೆಟ್ ಪತನ
ಬೆಂಗಳೂರಿನ ಆರನೇ ವಿಕೆಟ್ ಪತನ, ಶಾರ್ದೂಲ್ ಅವರ ಓವರ್‌ನಲ್ಲಿ ಮೈಕಲ್ ಬ್ರಾಕ್ಸ್‌ವೆಲ್ 19 ರನ್ ಗಳಿಸಿ ಔಟಾದರು. ಬೆಂಗಳೂರು ಸ್ಕೋರ್ 11.3 ಓವರ್‌ಗಳಲ್ಲಿ 83/6
-
-
10 ಓವರ್‌ಗಳ ನಂತರ ಬೆಂಗಳೂರು ಸ್ಕೋರ್ 69/5
ಮೈಕಲ್ ಬ್ರೇಸ್ ವೆಲ್ 12 ರನ್ ಹಾಗೂ ದಿನೇಶ್ ಕಾರ್ತಿಕ್ 2 ರನ್ ಗಳಿಸಿ ಆಡುತ್ತಿದ್ದಾರೆ. 10 ಓವರ್‌ಗಳ ನಂತರ ಬೆಂಗಳೂರು ಸ್ಕೋರ್ 69/5
-
ಬೆಂಗಳೂರಿನ ಐದನೇ ವಿಕೆಟ್ ಪತನ
ಬೆಂಗಳೂರಿನ ಐದನೇ ವಿಕೆಟ್ ಪತನ, ಸುನಿಲ್ ನರೈನ್ ಅವರ ಓವರ್‌ನಲ್ಲಿ ಶಹಬಾಜ್ ಅಹ್ಮದ್ 1 ರನ್ ಗಳಿಸಿ ಔಟಾದರು. 9 ಓವರ್‌ಗಳ ನಂತರ ಬೆಂಗಳೂರು ಸ್ಕೋರ್ 61/5
-
ವರುಣ್ಗೆ 3ನೇ ವಿಕೆಟ್
ಮ್ಯಾಕ್ಸ್‌ವೆಲ್ ವಿಕೆಟ್ ಬಳಿಕ ಬಂದ ಹರ್ಷಲ್ ಪಟೇಲ್ ಕೂಡ ಕೇವಲ 2 ಎಸೆತದಲ್ಲಿ ಯಾವುದೇ ರನ್ ಬಾರಿಸದೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇವರು ಕೂಡ ಕ್ಲೀನ್ ಬೌಲ್ಡ್ ಆದರು.
-
ಮ್ಯಾಕ್ಸ್‌ವೆಲ್ ಕೂಡ ಔಟ್
8ನೇ ಓವರ್ ಎಸೆಯಲು ಬಂದ ವರುಣ್ ಚಕ್ರವರ್ತಿ ಡೇಂಜರಸ್ ಮ್ಯಾಕ್ಸ್‌ವೆಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದಾರೆ. ಆರ್‌ಸಿಬಿ ಮೂವರು ಆಟಗಾರರು ಕೂಡ ಒಂದೇ ರೀತಿಯಲ್ಲಿ ವಿಕೆಟ್ ಒಪ್ಪಿಸಿದ್ದಾರೆ.
-
ಫಾಫ್ ಔಟ್
6ನೇ ಓವರ್ ಎಸೆಯಲು ಬಂದ ವರುಣ್ ಚಕ್ರವರ್ತಿ ಎರಡನೇ ಎಸೆತದಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ವಿಕೆಟ್ ಪಡೆದರು.
-
ಕೊಹ್ಲಿಔಟ್
5ನೇ ಓವರ್ ಎಸೆಯಲು ಬಂದ ಸುನೀಲ್ ನರೈನ್ ಐದನೇ ಎಸೆತದಲ್ಲಿ ಕೊಹ್ಲಿ ಕ್ಲೀನ್ ಬೌಲ್ಡ್ ಆದರು. ನರೈನ್ ಅವರ ಗೂಗ್ಲಿ ಬೌಲ್ ಅರಿಯದ ಕೊಹ್ಲಿ 21 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.
-
ಸೌಥಿಗೆ ಸಿಕ್ಸ್
4ನೇ ಓವರ್ ಎಸೆದ ಸೌಥಿ 2 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದಂತೆ 23 ರನ್ ನೀಡಿದರು. ಈ ಓವರ್‌ನಲ್ಲಿ ಕೊಹ್ಲಿ 1 ಬೌಂಡರಿ ಬಾರಿಸಿದರೆ ಉಳಿದ ಕೆಲಸವನ್ನು ಫಾಫ್ ಮಾಡಿದರು.
-
ಫಾಫ್ ಫೋರ್
ಉಮೇಶ್ ಎಸೆದ 3ನೇ ಓವರ್‌ನಲ್ಲಿ ನಾಯಕ ಫಾಫ್ ಮಿಡ್ ಆಫ್ ತಲೆಯ ಮೇಲೆ ಬೌಂಡರಿ ಬಾರಿಸಿದರು. ಈ ಓವರ್‌ನಲ್ಲಿ 7 ರನ್ ಬಂದವು.
-
ಆರ್‌ಸಿಬಿ ಬ್ಯಾಟಿಂಗ್ ಆರಂಭ
ಆರ್‌ಸಿಬಿ ಬ್ಯಾಟಿಂಗ್ ಆರಂಭಿಸಿದ್ದು, ಆರಂಭಿಕರಾಗಿ ಕೊಹ್ಲಿ ಹಾಗೂ ಡು ಪ್ಲೆಸಿಸ್ ಕಣಕ್ಕಿಳಿದಿದ್ದಾರೆ. ಉಮೇಶ್ ಯಾದವ್ ಎಸೆದ ಮೊದಲ ಓವರ್‌ನಲ್ಲಿ ಕೊಹ್ಲಿ 2 ಬೌಂಡರಿ ಬಾರಿಸಿದರು.
-
205 ರನ್‌ಗಳ ಗುರಿ
ಕೆಕೆಆರ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 204 ರನ್ ಗಳಿಸಿತು. ಇದರೊಂದಿಗೆ ಆರ್ ಸಿಬಿಗೆ 205 ರನ್‌ಗಳ ಟಾರ್ಗೆಟ್ ನೀಡುವಲ್ಲಿ ಕೆಕೆಆರ್ ಯಶಸ್ವಿಯಾಗಿದೆ. ಕೆಕೆಆರ್ ಪರ ಅಬ್ಬರದ ಇನ್ನಿಂಗ್ಸ್ ಆಡಿದ ಶಾರ್ದೂಲ್ ಠಾಕೂರ್ ಕೇವಲ 29 ಎಸೆತಗಳಲ್ಲಿ 68 ರನ್ ಬಾರಿಸಿದರು.
-
ಕೋಲ್ಕತ್ತಾದ ಏಳನೇ ವಿಕೆಟ್ ಪತನ
ಕೋಲ್ಕತ್ತಾದ ಏಳನೇ ವಿಕೆಟ್ ಪತನ, ಶಾರ್ದೂಲ್ ಠಾಕೂರ್ 68 ರನ್ ಗಳಿಸಿ ಔಟಾದರು.
-
ರಿಂಕು ಅರ್ಧಶತಕ ಮಿಸ್
ಹರ್ಷಲ್ ಪಟೇಲ್ ಅವರ ಓವರ್‌ನಲ್ಲಿ ರಿಂಕು 46 ರನ್ ಗಳಿಸಿ ಔಟಾದರು. 19 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 192/6
-
ಸಿರಾಜ್ ದುಬಾರಿ
ಕೋಲ್ಕತ್ತಾ ಪರ ಶಾರ್ದೂಲ್ 63 ರನ್ ಹಾಗೂ ರಿಂಕು ಸಿಂಗ್ 30 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಶಾರ್ದೂಲ್ ಹಾಗೂ ರಿಂಗ್ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು.
-
ಶಾರ್ದೂಲ್ 20 ಎಸೆತಗಳಲ್ಲಿ ಅರ್ಧಶತಕ
ಕೋಲ್ಕತ್ತಾ ಪರ ಶಾರ್ದೂಲ್ 58 ರನ್ ಹಾಗೂ ರಿಂಕು ಸಿಂಗ್ 23 ರನ್ ಗಳಿಸಿ ಆಡುತ್ತಿದ್ದಾರೆ. ಶಾರ್ದೂಲ್ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದರೊಂದಿಗೆ ಶಾರ್ದೂಲ್ ಮತ್ತು ರಿಂಕು ಕೋಲ್ಕತ್ತಾದ ಪರವಾಗಿ 50 ರನ್ ಜೊತೆಯಾಟವನ್ನು ರಚಿಸಿದರು.
-
16 ಓವರ್ ಅಂತ್ಯ
ಕೋಲ್ಕತ್ತಾ ಪರ ಶಾರ್ದೂಲ್ 47 ರನ್ ಹಾಗೂ ರಿಂಕು ಸಿಂಗ್ 21 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಶಾರ್ದೂಲ್ 1 ಬೌಂಡರಿ ಕೂಡ ಬಾರಿಸಿದರು.
-
ಶಾರ್ದೂಲ್ ಆರ್ಭಟ
15ನೇ ಓವರ್‌ನಲ್ಲಿ ಶಾರ್ದೂಲ್ ಬ್ಯಾಕ್ ಟು ಬ್ಯಾಕ್ 2 ಸಿಕ್ಸರ್ ಬಾರಿಸಿದರು. ತತ್ತರಿಸಿದ ಕೆಕೆಆರ್ ಇನ್ನಿಂಗ್ಸ್ನ ಜೀವ ತುಂಬುತ್ತಿರುವ ಶಾರ್ದುಲ್ ಕೇವಲ 15 ಎಸೆತದಲ್ಲಿ 42 ರನ್ ಬಾರಿಸಿದ್ದಾರೆ.
-
ಶಾರ್ದೂಲ್ ಫೋರ್
13ನೇ ಓವರ್ ಎಸೆದ ಆಕಾಶ್ ದೀಪ್ 2 ಬೌಂಡರಿ 1 ಸಿಕ್ಸರ್ ಹಾಗೂ 1 ನೋ ಬಾಲ್ ಸೇರಿದಂತೆ 19 ರನ್ ಬಿಟ್ಟುಕೊಟ್ಟರು. ಕೊನೆಯ ಎಸೆತದಲ್ಲಿ ನೋ ಬಾಲ್ನ ಲಾಭ ಪಡೆದ ಶಾರ್ದೂಲ್ ಭರ್ಜರಿ ಸಿಕ್ಸರ್ ಬಾರಿಸಿದರು.
-
ಶೂನ್ಯಕ್ಕೆ ರಸೆಲ್ ಔಟ್
ಗುರ್ಬಾಜ್ ವಿಕೆಟ್ ಬಳಿಕ ಬಂದ ರಸೆಲ್ ಎದುರಿಸಿದ ಮೊದಲ ಎಸೆತದಲ್ಲೇ ಲಾಂಗ್ ಆಫ್ನಲ್ಲಿ ಕ್ಯಾಚಿತ್ತು ಔಟಾಗಿದ್ದಾರೆ.
-
ಗುರ್ಬಾಜ್ ಔಟ್
12ನೇ ಓವರ್ ಎಸೆಯಲು ಬಂದ ಕರಣ್ ಶರ್ಮಾ 2ನೇ ಎಸೆತದಲ್ಲಿ ಅರ್ಧಶತಕ ಬಾರಿಸಿದ್ದ ಗುರ್ಬಾಜ್ ವಿಕೆಟ್ ಉರುಳಿಸಿದ್ದಾರೆ. ರಿವರ್ ಸ್ವಿಪ್ ಆಡಲು ಯತ್ನಿಸಿದ ಗುರ್ಬಾಜ್, ಶಾರ್ಟ್ನಲ್ಲಿ ಕ್ಯಾಚಿತ್ತು ಔಟಾದರು.
-
ಗುರ್ಬಾಜ್ ಅರ್ಧಶತಕ
ಆರಂಭಿಕ ಹಂತದಲ್ಲಿ ತತ್ತರಿಸಿದ ಕೆಕೆಆರ್ ಇನ್ನಿಂಗ್ಸ್ ಜೀವ ತುಂಬಿದ ಗುರ್ಬಾಜ್ 40 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ. ಕರಣ್ ಶರ್ಮಾ ಎಸೆದ 10ನೇ ಓವರ್‌ನಲ್ಲಿ ಸ್ಕ್ವೈರ್ ಕಡೆ ಸ್ವೀಪ್ ಶಾಟ್ ಆಡಿ ಸಿಕ್ಸರ್ ಬಾರಿಸಿದರು. ಇದರೊಂದಿಗೆ ಅರ್ಧಶತಕ ಪೂರೈಸಿದರು.
-
ಗುರ್ಬಾಜ್ ಅಬ್ಬರ
9ನೇ ಓವರ್‌ನಲ್ಲಿ ಗುರ್ಬಾಜ್ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ಒಟ್ಟು 14 ರನ್ ಬಂದವು.
-
8 ಓವರ್ ಅಂತ್ಯ
8ನೇ ಓವರ್ ಎಸೆದ ಶಹಬಾಸ್ 6 ರನ್ ನೀಡಿದರು. ಈ ಓವರ್‌ನಲ್ಲಿ ಗುರ್ಬಾಜ್ ಸ್ವೀಪ್ ಶಾಟ್ ಆಡಿ ಡೀಪ್ ಮಿಡ್ ವಿಕೆಟ್ನಲ್ಲಿ ಬೌಂಡರಿ ಬಾರಿಸಿದರು.
-
ನಾಯಕ ರಾಣಾ ಔಟ್
ಪವರ್ ಪ್ಲೇ ಬಳಿಕ 7ನೇ ಓವರ್ ಎಸೆಯಲು ಬಂದ ಬ್ರೆಸ್ವೆಲ್ ಕೆಕೆಆರ್ ನಾಯಕ ನಿತೀಶ್ ರಾಣಾ ವಿಕೆಟ್ ಪಡೆದುಕೊಂಡಿದ್ದಾರೆ.
-
ಪವರ್ ಪ್ಲೇ ಅಂತ್ಯ
ಪವರ್ ಪ್ಲೇನ ಕೊನೆಯ ಓವರ್ ಎಸೆದ ವಿಲ್ಲಿ 1 ಬೌಂಡರಿ ಸೇರಿದಂತೆ 6 ರನ್ ಬಿಟ್ಟುಕೊಟ್ಟರು. ಈ ಪವರ್ ಪ್ಲೇನಲ್ಲಿ ಕೆಕೆಆರ್ ಪ್ರಮುಖ 2 ವಿಕೆಟ್ ಕಳೆದುಕೊಂಡು 47 ರನ್ ಗಳಿಸಿದೆ.
-
ಗುರ್ಬಾಜ್ ಸಿಕ್ಸರ್
5ನೇ ಓವರ್ ಎಸೆಯಲು ಬಂದ ಆಕಾಶ್ ದೀಪ್ ಎರಡನೇ ಎಸೆತದಲ್ಲಿಯೇ ಫೈನ್ ಲೆಗ್ ಮೇಲೆ ಸಿಕ್ಸರ್ ಹೊಡೆಸಿಕೊಂಡರು. ಈ ಬಾಲ್ ನೋಬಾಲ್ ಆಗಿದ್ದು ಮುಂದಿನ ಎಸೆತದಲ್ಲಿ 2 ರನ್ ಬಂದವು.
-
ಸತತ 2ನೇ ವಿಕೆಟ್
ಮೊದಲ ಎಸೆತದಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಬೌಲ್ಡ್ ಮಾಡಿದ್ದ ವಿಲ್ಲಿ, ಎರಡನೇ ಎಸೆತದಲ್ಲಿ ಮಂದೀಪ್ ಸಿಂಗ್ರನ್ನು ಶೂನ್ಯಕ್ಕೆ ಔಟ್ ಮಾಡಿದ್ದಾರೆ.
-
ಅಯ್ಯರ್ ಔಟ್
4ನೇ ಓವರ್ ಎಸೆದ ಡೇವಿಡ್ ವಿಲ್ಲಿ ಮೊದಲ ಎಸೆತದಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದಾರೆ.
-
ಸಿರಾಜ್ ದುಬಾರಿ
3ನೇ ಓವರ್ ಎಸೆದ ಸಿರಾಜ್ ಬರೋಬ್ಬರಿ 15 ರನ್ ಬಿಟ್ಟುಕೊಟ್ಟರು. ಈ ಓವರ್‌ನಲ್ಲಿ ಗುರ್ಬಾಜ್ 2 ಬೌಂಡರಿ ಬಾರಿಸಿದರೆ, ಬೈಸ್ ಮೂಲಕ ಮತ್ತೊಂದು ಬೌಂಡರಿ ಬಂತು.
-
2 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 12/0
ಡೇವಿಡ್ ವಿಲ್ಲಿ ಅವರ ಓವರ್‌ನಲ್ಲಿ ಕೋಲ್ಕತ್ತಾ 3 ರನ್‌ಗಳಿಸಿತು. ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ 2 ರನ್ ಮತ್ತು ರಹಮಾನುಲ್ಲಾ ಗುರ್ಬಾಜ್ 5 ರನ್ ಗಳಿಸಿ ಆಡುತ್ತಿದ್ದಾರೆ.
-
ಬ್ಯಾಟಿಂಗ್ ಆರಂಭಿಸಿದ ಕೆಕೆಆರ್
ಟಾಸ್ ಸೋತ ಕೆಕೆಆರ್ ಬ್ಯಾಟಿಂಗ್ ಆರಂಭಿಸಿದೆ. ತಂಡದ ಪರ ಗುರ್ಬಾಜ್ ಹಾಗೂ ವೆಂಕಟೇಶ್ ಅಯ್ಯರ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸಿರಾಜ್ ಎಸೆದ ಮೊದಲ ಓವರ್‌ನಲ್ಲಿ ಬೌಂಡರಿ ಸೇರಿದಂತೆ 9 ರನ್ ಬಂದವು.
-
ಆರ್‌ಸಿಬಿ ತಂಡ
ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮೈಕಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
-
ಕೆಕೆಆರ್ ತಂಡ
ನಿತೀಶ್ ರಾಣಾ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಮನ್ದೀಪ್ ಸಿಂಗ್, ರಿಂಕು ಸಿಂಗ್, ಆಂಡ್ರೆ ರಸೆಲ್, ಸುಯಾಶ್ ಶರ್ಮಾ, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.
-
ಟಾಸ್ ಗೆದ್ದ ಆರ್‌ಸಿಬಿ
ಸತತ ಎರಡನೇ ಬಾರಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ.
-
ಹೆಡ್ ಟು ಹೆಡ್ ರೆಕಾರ್ಡ್
ಈ ಎರಡು ತಂಡಗಳು ಐಪಿಎಲ್‌ನಲ್ಲಿ 30 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಬೆಂಗಳೂರು ತಂಡ 14 ಬಾರಿ ಹಾಗೂ ಕೋಲ್ಕತ್ತಾ ತಂಡ 16 ಬಾರಿ ಜಯ ಸಾಧಿಸಿದೆ.
Published On - Apr 06,2023 6:20 PM
