IPL 2023: ಆರ್​ಸಿಬಿಗೆ ಹಸಿರೇ ಅಪಾಯ! ಗ್ರೀನ್ ಜೆರ್ಸಿ ಪಂದ್ಯಗಳಲ್ಲಿ ಆರ್​ಸಿಬಿ ಪ್ರದರ್ಶನ ಹೇಗಿದೆ ಗೊತ್ತಾ?

IPL 2023: 2011ರಿಂದ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿರುವ ಆರ್​ಸಿಬಿ ಐಪಿಎಲ್‌ನಲ್ಲಿ ಒಟ್ಟು 11 ಪಂದ್ಯಗಳನ್ನು ಆಡಿದೆ.

IPL 2023: ಆರ್​ಸಿಬಿಗೆ ಹಸಿರೇ ಅಪಾಯ! ಗ್ರೀನ್ ಜೆರ್ಸಿ ಪಂದ್ಯಗಳಲ್ಲಿ ಆರ್​ಸಿಬಿ ಪ್ರದರ್ಶನ ಹೇಗಿದೆ ಗೊತ್ತಾ?
ಗ್ರೀನ್ ಜೆರ್ಸಿಯಲ್ಲಿ ಆರ್​ಸಿಬಿ
Follow us
ಪೃಥ್ವಿಶಂಕರ
|

Updated on:Apr 22, 2023 | 8:10 PM

ಭಾನುವಾರ ನಡೆಯಲ್ಲಿರುವ ಡಬಲ್ ಹೆಡರ್​ನಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತನ್ನ 7ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (Royal Challengers Bangalore vs Rajasthan Royals) ವಿರುದ್ಧ ತವರಿನಲ್ಲಿ ಸೆಣಸಲಿದೆ . ಈ ಪಂದ್ಯದಲ್ಲಿ ಆರ್​ಸಿಬಿ ಆಟಗಾರರು ತಮ್ಮ ಎಂದಿನ ಕೆಂಪು ಮತ್ತು ಕಪ್ಪು ಮಿಶ್ರಿತ ಜೆರ್ಸಿಯ ಬದಲು ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಾಸ್ತವವಾಗಿ 2011 ರ ಐಪಿಎಲ್​ನಿಂದ ಆರ್​ಸಿಬಿ ಒಂದು ಪಂದ್ಯದಲ್ಲಿ ಗ್ರೀನ್ ಜೆರ್ಸಿ (Green Jersey) ತೊಟ್ಟು ಪಂದ್ಯವನ್ನಾಡಲು ಆರಂಭಿಸಿತು. ಅಂದಿನಿಂದ ಆರ್​ಸಿಬಿ ಪ್ರತಿ ವರ್ಷ ಐಪಿಎಲ್‌ನಲ್ಲಿ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ತೊಟ್ಟು ಆಡುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 16ನೇ ಆವೃತ್ತಿಯಲ್ಲಿ ಆರ್​ಸಿಬಿ ಈ ಬಾರಿ ಪಿಂಕ್ ಆರ್ಮಿ ವಿರುದ್ಧ ಹಸಿರು ಜೆರ್ಸಿ ಧರಿಸಲಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರಣದಿಂದ ಆರ್‌ಸಿಬಿ (RCB) ತಂಡ ಈ ವಿಭಿನ್ನ ಹಾದಿಯನ್ನು ಹಿಡಿದಿದೆ. ಈ ಹಸಿರು ಜರ್ಸಿಯ ವಿಶೇಷತೆಯೆಂದರೆ 100 ಪ್ರತಿಶತ ಮರುಬಳಕೆಯ ವಸ್ತುಗಳಿಂದ ಈ ಜರ್ಸಿಯನ್ನು ತಯಾರಿಸಲಾಗಿರುತ್ತದೆ. ಇದೀಗ ನಾಳಿನ ಪಂದ್ಯದಲ್ಲಿ ಫಾಫ್ ಪಡೆ ಇದೇ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದೆ. ಆದರೆ ಈ ಪಂದ್ಯ ಆರಂಭಕ್ಕೂ ಮುನ್ನ ಆರ್​ಸಿಬಿ ಅಭಿಮಾನಿಗಳಲ್ಲಿ ಸೋಲಿನ ಆತಂಕ ಎದುರಾಗಿದೆ. ಏಕೆಂದರೆ ಆರ್​ಸಿಬಿ ಹಸಿರು ಜೆರ್ಸಿ ತೊಟ್ಟು ಆಡಿದ ಪಂದ್ಯಗಳಲ್ಲಿ ಗೆದ್ದಿದ್ದಕ್ಕಿಂತ ಸೋತಿದ್ದೆ ಹೆಚ್ಚು.

2011ರಿಂದ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿರುವ ಆರ್​ಸಿಬಿ ಐಪಿಎಲ್‌ನಲ್ಲಿ ಒಟ್ಟು 11 ಪಂದ್ಯಗಳನ್ನು ಆಡಿದೆ. ಈ ಹನ್ನೊಂದು ಪಂದ್ಯಗಳಲ್ಲಿ ಆರ್‌ಸಿಬಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆದ್ದಿದ್ದರೆ, ಇನ್ನುಳಿದ 7 ಪಂದ್ಯಗಳಲ್ಲಿ ಸೋಲನುಭವಿಸಿದೆ. ಹಾಗಿದ್ದರೆ ಪ್ರತಿ ವರ್ಷ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯುವ ಆರ್​ಸಿಬಿಯ ಪ್ರದರ್ಶನ ಆ ಪಂದ್ಯದಲ್ಲಿ ಹೇಗಿತ್ತು ಎಂಬುದರ ವಿವರ ಇಲ್ಲಿದೆ.

MI vs PBKS Live Score IPL 2023: ಟಾಸ್ ಗೆದ್ದ ರೋಹಿತ್; ಪಂಜಾಬ್ ಬ್ಯಾಟಿಂಗ್

ಗ್ರೀನ್ ಜೆರ್ಸಿಯಲ್ಲಿ ಆರ್​ಸಿಬಿ ಪ್ರದರ್ಶನ

  1. 1) 2011ರಲ್ಲಿ ಮೊದಲ ಬಾರಿಗೆ ಹಸಿರು ಜೆರ್ಸಿಯಲ್ಲಿ ಪಂದ್ಯವನ್ನಾಡಿದ್ದ ಆರ್​ಸಿಬಿಗೆ ಗೆಲುವು ಸಿಕ್ಕಿತ್ತು.
  2. 2) 2012 ರಲ್ಲಿ ಸೋಲು.
  3. 3) 2013ರಲ್ಲೂ ಸೋಲು.
  4. 4) 2014 ರಲ್ಲೂ ಸೋಲು
  5. 5) 2015 ರಲ್ಲಿ ಯಾವುದೇ ಪಲಿತಾಂಶವಿಲ್ಲದೆ ಪಂದ್ಯ ಅಂತ್ಯಗೊಂಡಿತ್ತು.
  6. 6) 2016ರಲ್ಲಿ ಹಸಿರು ಜೆರ್ಸಿಯ ಪಂದ್ಯದಲ್ಲಿ ಆರ್​ಸಿಬಿ ಗೆಲುವು ಸಾಧಿಸಿತ್ತು.
  7. 7) 2017 ರಲ್ಲಿ ಮತ್ತೆ ಸೋಲು.
  8. 8) 2018ರ ಐಪಿಎಲ್‌ನಲ್ಲೂ ಗೆಲುವು ಸಿಗಲಿಲ್ಲ.
  9. 9) 2019ರಲ್ಲೂ ವಿರಾಟ್ ಬಳಗ ಹಸಿರು ಜೆರ್ಸಿಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ.
  10. 10) 2020 ರ ಐಪಿಎಲ್​ನಲ್ಲೂ ಆರ್‌ಸಿಬಿ ಸೋಲಬೇಕಾಯಿತು.
  11. 11)ಕಳೆದ ಐಪಿಎಲ್​ನಲ್ಲಿ ಅಂದರೆ 2022 ರ ಐಪಿಎಲ್​ನಲ್ಲಿ ಗೆಲುವು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:09 pm, Sat, 22 April 23

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್