MI vs PBKS Highlights IPL 2023: ಮುಂಬೈಗೆ ಸೋಲಿನ ಪಂಚ್ ಕೊಟ್ಟ ಪಂಜಾಬ್
Mumbai indians vs Punjab Kings IPL 2023 Highlights in Kannada: ಗೆಲುವಿನ ಹಾದಿಯಲ್ಲಿದ್ದ ಮುಂಬೈ ಅಂತಿಮ ಹಂತದಲ್ಲಿ ಎಡವಿದರೆ, ಇತ್ತ ಸೋಲುವ ಪಂದ್ಯವನ್ನು ಅದ್ಭುತ ರೀತಿಯಲ್ಲಿ ಪಂಜಾಬ್ 13 ರನ್ಗಳಿಂದ ಗೆದ್ದುಕೊಂಡಿತು.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಕೊನೆಯ ಓವರ್‌ನಲ್ಲಿ ನಿರ್ಣಯಗೊಳ್ಳುವುದರೊಂದಿಗೆ ಮತ್ತೊಂದು ರೋಚಕತೆ ಸೃಷ್ಟಿಸಿತು. ಗೆಲುವಿನ ಹಾದಿಯಲ್ಲಿದ್ದ ಮುಂಬೈ ಅಂತಿಮ ಹಂತದಲ್ಲಿ ಎಡವಿದರೆ, ಇತ್ತ ಸೋಲುವ ಪಂದ್ಯವನ್ನು ಅದ್ಭುತ ರೀತಿಯಲ್ಲಿ ಪಂಜಾಬ್ 13 ರನ್ಗಳಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ನಿಗದಿತ 20 ಓವರ್‌ಗಳಲ್ಲಿ 214 ರನ್ಗಳಬೃಹತ್ ಟಾರ್ಗೆಟ್ ಸೆಟ್ ಮಾಡಿತು. ಈ ಗುರಿ ಬೆನ್ನಟ್ಟಿದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 201 ರನ್ ಗಳಿಸಲಷ್ಟೇ ಶಕ್ತವಾಯಿತು.
LIVE NEWS & UPDATES
-
ಪಂಜಾಬ್ ಕಿಂಗ್ಸ್ಗೆ ಗೆಲುವು
ಮುಂಬೈ ಇಂಡಿಯನ್ಸ್ ತಂಡವನ್ನು ಪಂಜಾಬ್ ಕಿಂಗ್ಸ್ 13 ರನ್ಗಳಿಂದ ಸೋಲಿಸಿತು. ಕೊನೆಯ ಓವರ್‌ನಲ್ಲಿ ಮುಂಬೈ ಗೆಲುವಿಗೆ 16 ರನ್‌ಗಳ ಅಗತ್ಯವಿತ್ತು.ಅರ್ಷದೀಪ್ ಸಿಂಗ್ ಈ ಓವರ್‌ನಲ್ಲಿ ಎರಡು ವಿಕೆಟ್ ಪಡೆದು ಕೇವಲ ಎರಡು ರನ್ ನೀಡಿದರು. ಮುಂಬೈ ಗೆಲುವಿಗೆ 215 ರನ್ ಗಳಿಸಬೇಕಿತ್ತು ಆದರೆ ಈ ತಂಡ 201 ರನ್ ಗಳಿಸಲಷ್ಟೇ ಶಕ್ತವಾಯಿತು.
-
ತಿಲಕ್, ನೇಹಾಲ್ ಔಟ್
ಅಂತಿಮ ಓವರ್‌ನಲ್ಲಿ ಪಂದ್ಯ ರೋಚಕ ಸ್ಥಿತಿ ತಲುಪಿದೆ. ಆಗಲೇ ಅರ್ಷದೀಪ್ ಸಿಂಗ್ ತಿಲಕ್ ವರ್ಮಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಮುಂದಿನ ಎಸೆತದಲ್ಲಿ ನೆಹಾಲ್ ವಧೇರಾ ಕೂಡ ಔಟಾದರು.
-
ಡೇವಿಡ್ ಸಿಕ್ಸ್
19 ನೇ ಓವರ್‌ನ ಎರಡನೇ ಎಸೆತದಲ್ಲಿ ಟಿಮ್ ಸಿಕ್ಸರ್ ಬಾರಿಸಿದರು. ಲೋ ಫುಲ್ಟೋಸ್ ಚೆಂಡನ್ನು ಟಿಮ್ ಡೇವಿಡ್ ಸ್ಕ್ವೇರ್ ಲೆಗ್ ಮೂಲಕ ಸಿಕ್ಸರ್ ಗೆ ಹೊಡೆದರು.
ಸೂರ್ಯಕುಮಾರ್ ಯಾದವ್ ಔಟ್
ಅರ್ಷದೀಪ್ ಸಿಂಗ್ ದೊಡ್ಡ ವಿಕೆಟ್ ಪಡೆದರು. ಸೂರ್ಯಕುಮಾರ್ ಯಾದವ್ ಅವರನ್ನು ಬಲಿಪಶು ಮಾಡಿದ್ದಾರೆ. ಇದು ಪಂದ್ಯಕ್ಕೆ ಮಹತ್ವದ ತಿರುವು ಕೂಡ ಆಗಬಹುದು. ಸೂರ್ಯ 3 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ 56 ರನ್ ಗಳಿಸಿದರು.
ಸೂರ್ಯ ಸ್ಫೋಟ
17ನೇ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಸೂರ್ಯ ತಮ್ಮ ಅರ್ಧಶತಕ ಪೂರೈಸಿದರು. ಸೂರ್ಯ ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು.
ಗ್ರೀನ್ ಔಟ್
ಮುಂಬೈಗೆ ಮೂರನೇ ಹೊಡೆತ ಬಿದ್ದಿದೆ. ಕ್ಯಾಮರೂನ್ ಗ್ರೀನ್ ಔಟ್ ಆಗಿದ್ದಾರೆ. 16ನೇ ಓವರ್‌ನ ಮೂರನೇ ಎಸೆತದಲ್ಲಿ ಗ್ರೀನ್, ಸ್ಯಾಮ್ ಕರನ್‌ಗೆ ಕ್ಯಾಚ್ ನೀಡಿದರು.
ಗ್ರೀನ್ ಅರ್ಧಶತಕ
15ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಗ್ರೀನ್ ಸಿಕ್ಸರ್ ಬಾರಿಸಿ 50 ರನ್ ಪೂರೈಸಿದರು. 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಕರನ್‌ಗೆ ಸಿಕ್ಸರ್
14ನೇ ಓವರ್‌ನ ಆರಂಭದಲ್ಲಿ ಸೂರ್ಯ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಫೋರ್ ಹೊಡೆದರು. ಆ ಓವರ್‌ನ ಕೊನೆಯ ಎಸೆತದಲ್ಲಿ ವೈಡ್ ಲಾಂಗ್ ಆಫ್ ಓವರ್‌ನಲ್ಲಿ ಸಿಕ್ಸರ್ ಬಾರಿಸಿದರು. ಹೀಗಾಗಿ ಓವರ್‌ನಲ್ಲಿ 14 ರನ್‌ಗಳು ಬಂದವು.
ಸೂರ್ಯಾ ಸಿಕ್ಸ್
13ನೇ ಓವರ್‌ನ ಐದನೇ ಎಸೆತದಲ್ಲಿ ಸೂರ್ಯಕುಮಾರ್ ಶಾರ್ಟ್ ಬಾಲ್ ಅನ್ನು ಫೈನ್ ಲೆಗ್‌ಗೆ ಎಳೆದು ಅದ್ಭುತ ಸಿಕ್ಸರ್ ಬಾರಿಸಿದರು.
ಸತತ ಮೂರು ಬೌಂಡರಿ
ಮುಂಬೈ 100 ರನ್ ಗಡಿ ದಾಟಿದೆ. ಲಿವಿಂಗ್‌ಸ್ಟನ್ ಅವರ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ಸತತ 3 ಬೌಂಡರಿಗಳನ್ನು ಬಾರಿಸಿದರು.
ರೋಹಿತ್ ಶರ್ಮಾ ಔಟ್
ರೋಹಿತ್ ಶರ್ಮಾ ಔಟಾಗಿದ್ದಾರೆ. 10ನೇ ಓವರ್ ಎಸೆದ ಲಿಯಾಮ್ ಲಿವಿಂಗ್ ಸ್ಟನ್ ಅವರ ಮೂರನೇ ಎಸೆತದಲ್ಲಿ ರೋಹಿತ್ ಬೌಲರ್ ಕೈಗೆ ಕ್ಯಾಚ್ ನೀಡಿದರು.
ಅದ್ಭುತ ಸಿಕ್ಸರ್
ರೋಹಿತ್ ಶರ್ಮಾ 9ನೇ ಓವರ್‌ನಲ್ಲಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದರು. ರೋಹಿತ್ ಶರ್ಮಾ ಓವರ್‌ನ ಮೂರನೇ ಎಸೆತದಲ್ಲಿ ಅದ್ಭುತ ಸಿಕ್ಸರ್ ಬಾರಿಸಿದರೆ, ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಪಡೆದರು.
ಪವರ್‌ಪ್ಲೇ ಮುಗಿದಿದೆ
ಎರಡನೇ ಇನ್ನಿಂಗ್ಸ್‌ನ ಪವರ್‌ಪ್ಲೇ ಮುಗಿದಿದೆ. ಈ ಆರು ಓವರ್‌ಗಳಲ್ಲಿ ಮುಂಬೈ 54 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತು. ಈ ಓವರ್‌ನಲ್ಲಿ ಮುಂಬೈ 50 ರನ್ ಪೂರೈಸಿತು.
ರೋಹಿತ್ ಮತ್ತೊಂದು ಸಿಕ್ಸರ್
ಐದನೇ ಓವರ್‌ನ ನಾಲ್ಕನೇ ಎಸೆತದಲ್ಲಿ ರೋಹಿತ್ ಶರ್ಮಾ ಸ್ಕ್ವೇರ್ ಲೆಗ್‌ನಲ್ಲಿ ಸಿಕ್ಸರ್ ಬಾರಿಸಿದರು. . ಓವರ್‌ನ ಅಂತಿಮ ಎಸೆತದಲ್ಲಿ ಗ್ರೀನ್ ಬೌಂಡರಿ ಹೊಡೆದರು.
ರೋಹಿತ್ ಶರ್ಮಾ ಸಿಕ್ಸರ್
ಅರ್ಷದೀಪ್ ಸಿಂಗ್ ಎಸೆದ ನಾಲ್ಕನೇ ಓವರ್‌ನ ಕೊನೆಯ ಎಸೆತದಲ್ಲಿ ರೋಹಿತ್ ಲ್ಯಾಪ್ ಶಾಟ್ ಆಡಿ ಸಿಕ್ಸರ್ ಬಾರಿಸಿದರು. ಇದಕ್ಕೂ ಮುನ್ನ ಗ್ರೀನ್ ಬೌಂಡರಿ ಬಾರಿಸಿದ್ದರು. ಆ ಓವರ್‌ನಲ್ಲಿ 12 ರನ್ ಬಂದವು.
ಗ್ರೀನ್ಸ್ ಸಿಕ್ಸ್
ಮೂರನೇ ಓವರ್‌ನಲ್ಲಿ ಹರ್‌ಪ್ರೀತ್ ಸಿಂಗ್ ಎಸೆತದಲ್ಲಿ ಕ್ಯಾಮರೂನ್ ಗ್ರೀನ್ ಅದ್ಭುತ ಸಿಕ್ಸರ್ ಬಾರಿಸಿದರು. ಆ ಓವರ್‌ನಲ್ಲಿ ಮುಂಬೈ 8 ರನ್ ಗಳಿಸಿತು.
ಕಿಶನ್ ಔಟ್
ಮುಂಬೈಗೆ ಮೊದಲ ಹೊಡೆತ ಬಿದ್ದಿದೆ. ಇಶಾನ್ ಕಿಶನ್ ಔಟಾಗಿದ್ದಾರೆ. ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಇಶಾನ್‌ಗೆ ಮ್ಯಾಥ್ಯೂ ಶಾರ್ಟ್ಗೆ ಕ್ಯಾಚ್ ನೀಡಿದರು.
ಮುಂಬೈ ಇನ್ನಿಂಗ್ಸ್ ಆರಂಭ
ಮುಂಬೈ ಇನ್ನಿಂಗ್ಸ್ ಆರಂಭವಾಗಿದೆ. ಇಶಾನ್ ಕಿಶನ್ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಲು ಬಂದಿದ್ದಾರೆ.ಮ್ಯಾಥ್ಯೂ ಶಾರ್ಟ್ ಪಂಜಾಬ್ ಪರ ಬೌಲಿಂಗ್ ಆರಂಭಿಸುತ್ತಿದ್ದಾರೆ.
214 ರನ್ ಟಾರ್ಗೆಟ್
ಮೊದಲು ಬ್ಯಾಟ್ ಮಾಡಿದ ಪಂಜಾಬ್ 214 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ನಾಯಕ ಸ್ಯಾಮ್ ಕರನ್ ತಂಡದ ಪರ ಅದ್ಭುತ ಇನ್ನಿಂಗ್ಸ್ ಆಡಿ 55 ರನ್ ಬಾರಿಸಿದರು.ಕೊನೆಯ ಓವರ್‌ನಲ್ಲಿ ಜಿತೇಶ್ ಶರ್ಮಾ ಏಳು ಎಸೆತಗಳಲ್ಲಿ 25 ರನ್ ಬಾರಿಸಿದರು.
ಜಿತೇಶ್ ಸಿಕ್ಸರ್
ವಿಕೆಟ್ ಪಡೆದರೂ ಈ ಓವರ್‌ನಲ್ಲಿ ಕ್ಯಾಮರೂನ್‌ಗೆ ನಾಲ್ಕು ಸಿಕ್ಸರ್‌ಗಳು ಸಿಡಿದವು. ಆರಂಭದಲ್ಲಿ ಕರನ್ ಸತತ ಎರಡು ಸಿಕ್ಸರ್ ಬಾರಿಸಿದರೆ, ಜಿತೇಶ್ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್ ಬಾರಿಸಿದರು. ಆ ಓವರ್‌ನಲ್ಲಿ ಪಂಜಾಬ್ 25 ರನ್ ಗಳಿಸಿತು.
ಭಾಟಿಯಾ ಔಟ್
ಹರ್‌ಪ್ರೀತ್ ಸಿಂಗ್ ಅವರ ವಿಕೆಟ್ ಅನ್ನು ಕ್ಯಾಮರೂನ್ ಗ್ರೀನ್ ಕಬಳಿಸಿದ್ದಾರೆ. ಹರ್‌ಪ್ರೀತ್ ಸಿಂಗ್ ಭಾಟಿಯಾ 41 ರನ್ ಗಳಿಸಿ ಮರಳಿದರು.
ಹರ್ಪ್ರೀತ್ ಸಿಕ್ಸ್
17ನೇ ಓವರ್‌ನ ಮೊದಲ ಎಸೆತದಲ್ಲಿ ಸ್ಯಾಮ್ ಕರನ್ ಫುಲ್ ಟಾಸ್ ಎಸೆತದಲ್ಲಿ ಬೌಂಡರಿ ಬಾರಿಸಿದರು. ಹರ್ ಪ್ರೀತ್ ಸಿಂಗ್ ಓವರ್‌ನ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.
ಅರ್ಜುನ್ ದುಬಾರಿ
ಅರ್ಜುನ್ ತೆಂಡೂಲ್ಕರ್ ಈ ಓವರ್‌ನಲ್ಲಿ ಒಂದು ವೈಡ್ ಮತ್ತು ಒಂದು ನೋಬಾಲ್ ಸೇರಿದಂತೆ 31 ರನ್ ನೀಡಿದರು. 16ನೇ ಓವರ್ ಎಸೆದ ಅರ್ಜುನ್ಗೆ ಸ್ಯಾಮ್ ಕರನ್ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ಓವರ್‌ನ ಎರಡನೇ ಎಸೆತವನ್ನು ವೈಡ್ ಮಾಡಿದ ನಂತರ ಮುಂದಿನ ಎಸೆತದಲ್ಲಿ ಬೌಂಡರಿ ಬಂತು. ಓವರ್‌ನ ನಾಲ್ಕನೇ ಮತ್ತು ಅಂತಿಮ ಎಸೆತದಲ್ಲಿ ಎರಡು ಬೌಂಡರಿಗಳು ಬಂದವು. ಇದೇ ವೇಳೆ ಹರ್ ಪ್ರೀತ್ ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.
ಕರನ್ ಬೌಂಡರಿ
ಹೃತಿಕ್ ಶೋಕಿನ್ ಎಸೆತದಲ್ಲಿ ಹರ್ ಪ್ರೀತ್ ಸಿಂಗ್ ಬೌಂಡರಿ ಬಾರಿಸಿದರು. ಮುಂದಿನ ಓವರ್‌ನಲ್ಲಿ ಸ್ಯಾಮ್ ಕರನ್ ಮತ್ತೊಮ್ಮೆ ಕ್ಯಾಮರೂನ್ ಗ್ರೀನ್ಗೆ ಬೌಂಡರಿ ಹೊಡೆದರು. 14ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಲಾಂಗ್ ಆನ್ ಕಡೆಗೆ ಬೌಂಡರಿ ಬಾರಿಸಿದರು.
ಪಂಜಾಬ್ ಶತಕ ಪೂರ್ಣ
14ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸ್ಯಾಮ್ ಕರನ್ ಪಂಜಾಬ್ ತಂಡವನ್ನು 100ರ ಗಡಿ ದಾಟಿಸಿದರು. ಈ ವೇಳೆ ಹರ್‌ಪ್ರೀತ್ ಭಾಟಿಯಾ ಕ್ಯಾಪ್ಟನ್ ಕರನ್ ಜೊತೆ ಕ್ರೀಸ್‌ನಲ್ಲಿದ್ದಾರೆ.
ಪಂಜಾಬ್ ನಿಧಾನಗತಿಯ ಬ್ಯಾಟಿಂಗ್
11ನೇ ಓವರ್‌ನಲ್ಲಿ ಹೃತಿಕ್ ಶೋಕಿನ್ ಬಂದು 5 ರನ್ ನೀಡಿದರು. ಮುಂದಿನ ಓವರ್‌ನಲ್ಲಿ ಕ್ಯಾಮರೂನ್ ಗ್ರೀನ್ 5 ಡಾಟ್ ಬಾಲ್‌ಗಳನ್ನು ಎಸೆದರು ಮತ್ತು ಕೇವಲ ಒಂದು ರನ್ ನೀಡಿದರು. ಹೀಗಾಗಿ 12 ಎಸೆತಗಳಲ್ಲಿ ಕೇವಲ 6 ರನ್ ಬಂದಿವೆ.
ಟೈಡೆ ಔಟ್
10ನೇ ಓವರ್‌ನ ಮೂರನೇ ಎಸೆತದಲ್ಲಿ ಟೈಡೆ ಔಟ್ ಆದರು. ಚಾವ್ಲಾ ಅವರನ್ನು ಔಟ್ ಮಾಡಿದರು.
ಲಿವಿಂಗ್‌ಸ್ಟನ್ ಔಟ್
ಲಿಯಾಮ್ ಲಿವಿಂಗ್‌ಸ್ಟನ್ ಔಟ್. 10ನೇ ಓವರ್‌ನ ಮೊದಲ ಎಸೆತದಲ್ಲಿ ಅವರನ್ನು ಪಿಯೂಷ್ ಚಾವ್ಲಾ ಔಟ್ ಮಾಡಿದರು.
ಲಿವಿಂಗ್‌ಸ್ಟನ್‌ನ ಸಿಕ್ಸರ್
9ನೇ ಓವರ್‌ನ ಎರಡನೇ ಎಸೆತದಲ್ಲಿ ಲಿವಿಂಗ್‌ಸ್ಟನ್ ಸ್ಕ್ವೇರ್ ಲೆಗ್ ಮೇಲೆ ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ಪಂಜಾಬ್ 10 ರನ್ ಗಳಿಸಿತು.
ಪ್ರಭಾಸಿಮ್ರನ್ ಔಟ್
ಇನಿಂಗ್ಸ್‌ನ ಮೊದಲ ಓವರ್ ಅನ್ನು ಅದ್ಭುತವಾಗಿ ಬೌಲ್ ಮಾಡಿದ ಅರ್ಜುನ್ ತಮ್ಮ 2ನೇ ಓವರ್‌ನಲ್ಲಿ ಭಯಂಕರ ಯಾರ್ಕರ್ ಮೂಲಕ ಪ್ರಭಾಸಿಮ್ರನ್ ಅವರ ವಿಕೆಟ್ ಕಬಳಿಸಿದರು.
ಚಾವ್ಲಾಗೆ 2 ಬೌಂಡರಿ
ಪವರ್ ಪ್ಲೇನ ಅಂತಿಮ ಓವರ್‌ನಲ್ಲಿ ಪ್ರಭುಸಿಮ್ರಾನ್ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಹಾಗೂ ಅಂತಿಮ ಬಾಲ್‌ನಲ್ಲಿ ಸ್ಕ್ವೇರ್ ಲೆಗ್ ಕಡೆಗೆ ಬೌಂಡರಿ ಹೊಡೆದರು.
ಅಥರ್ವ ಸಿಕ್ಸರ್
ಜೋಫ್ರಾ ಓವರ್‌ನ ಐದನೇ ಎಸೆತದಲ್ಲಿ ಅಥರ್ವ ಥರ್ಡ್ಮ್ಯಾನ್ ಕಡೆ ಸಿಕ್ಸರ್ ಹೊಡೆದರು.
ಪ್ರಭಾಸಿಮ್ರಾನ್ ಸಿಕ್ಸರ್
ಪ್ರಭಾಸಿಮ್ರಾನ್ ಎರಡು ಅದ್ಭುತ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಜೇಸನ್ ಬೆಹ್ರೆನ್‌ಡಾರ್ಫ್ ಅವರ ಓವರ್‌ನ ಮೊದಲ ಎಸೆತವನ್ನು ಸ್ಕ್ವೇರ್ ಲೆಗ್ ಓವರ್ ಕಡೆ ಸಿಕ್ಸರ್‌ಗಟ್ಟಿದರೆ, ಓವರ್‌ನ ಮೂರನೇ ಎಸೆತದಲ್ಲಿ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಮೇಲೆ ಸಿಕ್ಸರ್ ಬಾರಿಸಿದರು. ಆ ಓವರ್‌ನಲ್ಲಿ ಪಂಜಾಬ್ 16 ರನ್ ಗಳಿಸಿತು.
ಶಾರ್ಟ್ ಔಟ್
ಮ್ಯಾಥ್ಯೂ ಶಾರ್ಟ್ ಔಟ್. ಇದರೊಂದಿಗೆ ಪಂಜಾಬ್ನ ಮೊದಲ ವಿಕೆಟ್ ಪತನವಾಯಿತು. ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ಅವರನ್ನು ಕ್ಯಾಮರೂನ್ ಗ್ರೀನ್ ಔಟ್ ಮಾಡಿದರು.
ಪಂದ್ಯ ಪ್ರಾರಂಭ
ಪಂಜಾಬ್ ಇನ್ನಿಂಗ್ಸ್ ಆರಂಭವಾಗಿದೆ. ಪ್ರಭಾಸಿಮ್ರಾನ್ ಸಿಂಗ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಲು ಮ್ಯಾಥ್ಯೂ ಬಂದಿದ್ದಾರೆ. ಅರ್ಜುನ್ ತೆಂಡೂಲ್ಕರ್ ಮುಂಬೈನಿಂದ ಮೊದಲ ಓವರ್ ಎಸೆಯುತ್ತಿದ್ದಾರೆ.
ಪಂಜಾಬ್ ಕಿಂಗ್ಸ್
ಸ್ಯಾಮ್ ಕರನ್(ನಾಯಕ), ಅರ್ಥವ್ ಟೈಡೆ, ಪ್ರಭ್‌ಸಿಮ್ರಾನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹರ್‌ಪ್ರೀತ್ ಸಿಂಗ್ ಭಾಟಿಯಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್.
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ತಿಲಕ್ ವರ್ಮಾ, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕಿನ್, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್ಡಾರ್ಫ್
ಕೊನೆಯ ಓವರ್‌ನಲ್ಲಿ 4 ವಿಕೆಟ್
ಕೊನೆಯ 6 ಎಸೆತಗಳಲ್ಲಿ 12 ರನ್ ಬಾರಿಸುವಲ್ಲಿ ವಿಫಲವಾದ ಲಕ್ನೋ ತಂಡ 7 ರನ್‌ಗಳ ಹೀನಾಯ ಸೋಲು ಕಂಡಿದೆ. ಇನ್ನು ಇದೇ ಓವರ್‌ನಲ್ಲಿ ಮೋಹಿತ್ ಶರ್ಮಾ 4 ವಿಕೆಟ್ ಉರುಳಿಸಿದರು. ಇದರಲ್ಲಿ 2 ವಿಕೆಟ್ ರನೌಟ್ನಿಂದ ಬಂದವು.
Published On - Apr 22,2023 7:03 PM