AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಮಗಳನ್ನು ಡೇಟ್​ಗೆ ಕಳುಹಿಸುವಂತೆ ಕೊಹ್ಲಿ ಬಳಿ ಮನವಿ; ನೆಟ್ಟಿಗರು ದೂರಿದ್ದು ಯಾರನ್ನು ಗೊತ್ತಾ?

IPL 2023: ವಾಸ್ತವವಾಗಿ ಆರ್‌ಸಿಬಿ ಮತ್ತು ಚೆನ್ನೈ ನಡುವಿನ ಈ ಪಂದ್ಯದ ವೇಳೆ ಪುಟ್ಟ ಬಾಲಕನೊಬ್ಬ ಕೈಯಲ್ಲಿ ಪ್ಲಕಾರ್ಡ್ ಹಿಡಿದು ನಿಂತಿದ್ದ. ಆ ಪ್ಲಕಾರ್ಡ್​ನಲ್ಲಿ 'ವಿರಾಟ್ ಅಂಕಲ್, ನಾನು ವಾಮಿಕಾ ಅವರನ್ನು ಡೇಟ್‌ಗೆ ಕರೆದುಕೊಂಡು ಹೋಗಬಹುದೇ?' ಎಂದು ಬರೆಯಲಾಗಿತ್ತು.

IPL 2023: ಮಗಳನ್ನು ಡೇಟ್​ಗೆ ಕಳುಹಿಸುವಂತೆ ಕೊಹ್ಲಿ ಬಳಿ ಮನವಿ; ನೆಟ್ಟಿಗರು ದೂರಿದ್ದು ಯಾರನ್ನು ಗೊತ್ತಾ?
ವಿರಾಟ್ ಕೊಹ್ಲಿ
ಪೃಥ್ವಿಶಂಕರ
|

Updated on:Apr 19, 2023 | 6:27 PM

Share

ಏ.17 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 24ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ (Royal Challengers Bangalore vs Chennai Super Kings) ವಿರುದ್ಧ 8 ರನ್‌ಗಳಿಂದ ಸೋತಿದ್ದು ಈಗ ಹಳೆಯ ವಿಚಾರ. ಉಭಯ ತಂಡಗಳು ಮೈದಾನದಲ್ಲಿ ರನ್ ಮಳೆ ಹರಿಸಿ ಅಭಿಮಾನಿಗಳಿಗೆ ಬರಪೂರ ಮನರಂಜನೆ ನೀಡಿದ್ದವು. ಅದರಲ್ಲೂ ಕೊನೆಯ ಐಪಿಎಲ್ ಆಡುತ್ತಿರುವ ಧೋನಿಯನ್ನು ನೋಡುವ ಸಲುವಾಗಿಯೇ ಇಡೀ ಕ್ರೀಡಾಂಗಣ ಭರ್ತಿಯಾಗಿತ್ತು. ಇದರ ನಡುವೆ ಪುಟ್ಟ ಅಭಿಮಾನಿಯೊಬ್ಬ ಸ್ಟ್ಯಾಂಡ್‌ನಲ್ಲಿ ಪೋಸ್ಟರ್ ಹಿಡಿದು ಕುಳಿತಿರುವ ಫೋಟೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರವಾಗಿ ಪರ ವಿರೋಧದ ಚರ್ಚೆ ಕೂಡ ನಡೆಯುತ್ತಿದೆ.

ವಾಸ್ತವವಾಗಿ ಆರ್‌ಸಿಬಿ ಮತ್ತು ಚೆನ್ನೈ ನಡುವಿನ ಈ ಪಂದ್ಯದ ವೇಳೆ ಪುಟ್ಟ ಬಾಲಕನೊಬ್ಬ ಕೈಯಲ್ಲಿ ಪ್ಲಕಾರ್ಡ್ ಹಿಡಿದು ನಿಂತಿದ್ದ. ಆ ಪ್ಲಕಾರ್ಡ್​ನಲ್ಲಿ ‘ವಿರಾಟ್ ಅಂಕಲ್, ನಾನು ವಾಮಿಕಾ ಅವರನ್ನು ಡೇಟ್‌ಗೆ ಕರೆದುಕೊಂಡು ಹೋಗಬಹುದೇ?’ ಎಂದು ಬರೆಯಲಾಗಿತ್ತು. ಇದೀಗ ಈ ಪುಟ್ಟ ಬಾಲಕ ಇಂತಹ ಬೇಡಿಕೆಯನ್ನಿಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಆದಾಗ್ಯೂ, ಈ ಪುಟ್ಟ ಅಭಿಮಾನಿಯ ಈ ರೀತಿಯ ಕೊರಿಕೆಗೆ ನೆಟಿಜನ್‌ಗಳಿಂದ ಮಿಶ್ರ ಪ್ರತಿಕ್ರಿಯೆಗಳು ಮತ್ತು ಕಾಮೆಂಟ್‌ಗಳು ಕಂಡುಬರುತ್ತಿವೆ.

IPL 2023: ಲಕ್ಷ ಮೌಲ್ಯದ 16 ಬ್ಯಾಟ್‌, ಶೂ, ಗ್ಲೌಸ್‌ ಕಳ್ಳತನ! ಡೆಲ್ಲಿ ತಂಡದ ನಿದ್ದೆಗೆಡಿಸಿದ ಕಳ್ಳರು

ಇದು ನಿಮ್ಮ ತಪ್ಪು, ನಿಮ್ಮ ಮಗನದ್ದಲ್ಲ

“ಒಂದು ವೇಳೆ ನಾನು ವಾಮಿಕಾ ಪೋಷಕರಾಗಿದ್ದರೆ, ಇದನ್ನು ಓದಲು ನನಗೆ ತುಂಬಾ ಕೋಪ ಬರುತ್ತಿತ್ತು! ಈ ಸೋಶಿಯಲ್ ಮೀಡಿಯಾ ವ್ಯಾಮೋಹವನ್ನು ಪೋಷಕರೂ ನಿಲ್ಲಿಸಬೇಕು! ಇದು ನಿಮ್ಮ ತಪ್ಪು, ನಿಮ್ಮ ಮಗನದ್ದಲ್ಲ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.’ದಯವಿಟ್ಟು ವಾಮಿಕಾಳನ್ನು ಬಿಟ್ಟುಬಿಡಿ. ಆ (ಚಿಕ್ಕ) ಮಗುವಿಗೂ ಈ ಬೋರ್ಡಿನ ಮೇಲೆ ಬರೆದಿರುವುದು ಅರ್ಥವಾಗುವುದಿಲ್ಲ. ಫೇಮಸ್ ಆಗಲು ಜನರು ಏನು ಬೇಕಾದರೂ ಮಾಡಬಹುದು’ ಎಂದು ನೆಟ್ಟಿಗರು ಆ ಪುಟ್ಟ ಬಾಲಕನ ಪೋಷಕರನ್ನು ಟೀಕಿಸಿದ್ದಾರೆ.

ಮುಖ್ಯವಾಗಿ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮಗಳು ವಾಮಿಕಾ ವಿಚಾರದಲ್ಲಿ ತುಂಬಾ ಸಂವೇದನಾಶೀಲರಾಗಿದ್ದಾರೆ. ಮಗಳು ಜನಿಸಿ ವರ್ಷಗಳೇ ಕಳೆದಿದ್ದರೂ ಇದುವರೆಗು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಗಳ ಫೋಟೋವನ್ನಾಗಲಿ ಅಥವಾ ಮುಖವನ್ನಾಗಲಿ ಎಂದಿಗೂ ತೋರಿಸುವುದಿಲ್ಲ. ಇಷ್ಟು ಮಾತ್ರವಲ್ಲದೆ, ವಿಮಾನ ನಿಲ್ದಾಣದಲ್ಲಿಯೂ ಸಹ, ಮಗಳ ಫೋಟೋಗಳನ್ನು ತೆಗೆಯದಂತೆ ಕೊಹ್ಲಿ ಕ್ಯಾಮೆರಾಪರ್‌ಸನ್‌ಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುತ್ತಿರುವುದು ಕಂಡುಬಂದಿದೆ.

ಏತನ್ಮಧ್ಯೆ, ಐಪಿಎಲ್ 2023 ರಲ್ಲಿ, ಬೆಂಗಳೂರು ತಂಡ ಇದುವರೆಗೆ ಐದು ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆದ್ದಿದೆ. ತಂಡವು ತನ್ನ ಮುಂದಿನ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಏಪ್ರಿಲ್ 20 ರಂದು ಮೊಹಾಲಿಯಲ್ಲಿ ಆಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:26 pm, Wed, 19 April 23

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು