IPL 2024: ‘ಆರೆಂಜ್ ಕ್ಯಾಪ್‌ನಿಂದ ಟ್ರೋಫಿ ಗೆಲ್ಲಲಾಗುವುದಿಲ್ಲ’: ಮತ್ತೊಮ್ಮೆ ಕೊಹ್ಲಿ ಕಾಲೆಳೆದ ಅಂಬಟಿ ರಾಯುಡು..!
IPL 2024: ಈ ಆವೃತ್ತಿಯಲ್ಲಿ ಬರೋಬ್ಬರಿ 741 ರನ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಹೀಗಾಗಿ ಕಿಂಗ್ ಕೊಹ್ಲಿಗೆ ಆರೆಂಜ್ ಕ್ಯಾಪ್ ನೀಡಲಾಗಿದೆ. ಈ ಬಗ್ಗೆ ಚೆನ್ನೈನ ಮಾಜಿ ಆಟಗಾರ ಅಂಬಟಿ ರಾಯುಡು ವ್ಯಂಗ್ಯವಾಡಿದ್ದು, ಮತ್ತೊಮ್ಮೆ ಕೊಹ್ಲಿಯನ್ನು ತೆಗಳುವ ಕೆಲಸ ಮಾಡಿದ್ದಾರೆ.
17ನೇ ಆವೃತ್ತಿಯ ಐಪಿಎಲ್ (IPL 2024) ಕೊನೆಗೊಂಡಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ 2024 ರ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (KKR vs SRH) ತಂಡವನ್ನು ಸೋಲಿಸುವ ಮೂಲಕ ಟ್ರೋಫಿ ಗೆದ್ದಿದೆ. ಆದರೆ ಈ ಬಾರಿಯಾದರೂ ಕಪ್ ಜಯಿಸಬೇಕೆಂಬ ಆರ್‌ಸಿಬಿಯ (RCB) 17 ವರ್ಷಗಳ ಕನಸು ಈ ಆವೃತ್ತಿಯಲ್ಲೂ ನನಸಾಗಲಿಲ್ಲ. ತಂಡ ಪ್ಲೇಆಫ್ ಸುತ್ತಿನಲ್ಲೇ ತನ್ನ ಪ್ರಯಾಣ ಮುಗಿಸಿತು. ಅದಾಗ್ಯೂ ಈ ಆವೃತ್ತಿಯಲ್ಲಿ ಆರ್ಸಿಬಿ ಪರ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅಮೋಘ ಪ್ರದರ್ಶನ ನೀಡಿದರು. ಪ್ರತಿ ಪಂದ್ಯದಲ್ಲೂ ಬ್ಯಾಟ್ನಿಂದ ಕೊಡುಗೆ ನೀಡಿದ ಕೊಹ್ಲಿ, ಇಡೀ ಟೂರ್ನಿಯಲ್ಲಿ ಅಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡರು. ಈ ಸಾಧನೆಗಾಗಿ ವಿರಾಟ್ ಆರೆಂಜ್ ಕ್ಯಾಪ್ ಅನ್ನು ತನ್ನದಾಗಿಸಿಕೊಂಡರು. ಆದರೆ ಕೊಹ್ಲಿಯ ಈ ಸಾಧನೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು (Ambati Rayudu) ಅವರ ಕಣ್ಕುಕ್ಕಿದೆ. ಹೀಗಾಗಿ ಕೊಹ್ಲಿ ಆರೆಂಜ್ ಕ್ಯಾಪ್ ಗೆದ್ದಿರುವ ವಿಚಾರವನ್ನು ಪ್ರಸ್ತಾಪಿಸಿ ರಾಯುಡು ಮತ್ತೊಮ್ಮೆ ಕೊಹ್ಲಿಯ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.
ಆರೆಂಜ್ ಕ್ಯಾಪ್ ಬಗ್ಗೆ ರಾಯುಡು ಹೇಳಿದ್ದೇನು?
ಈ ಆವೃತ್ತಿಯಲ್ಲಿ ಬರೋಬ್ಬರಿ 741 ರನ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಹೀಗಾಗಿ ಕಿಂಗ್ ಕೊಹ್ಲಿಗೆ ಆರೆಂಜ್ ಕ್ಯಾಪ್ ನೀಡಲಾಗಿದೆ. ಈ ಬಗ್ಗೆ ಚೆನ್ನೈನ ಮಾಜಿ ಆಟಗಾರ ಅಂಬಟಿ ರಾಯುಡು ವ್ಯಂಗ್ಯವಾಡಿದ್ದು, ಮತ್ತೊಮ್ಮೆ ಕೊಹ್ಲಿಯನ್ನು ತೆಗಳುವ ಕೆಲಸ ಮಾಡಿದ್ದಾರೆ. ಕೊಹ್ಲಿ ಆರೆಂಜ್ ಕ್ಯಾಪ್ ಪಡೆದ ಬಗ್ಗೆ ಕಾಮೆಂಟ್ ಮಾಡಿರುವ ರಾಯುಡು, ‘ಆರೆಂಜ್ ಕ್ಯಾಪ್‌ನಿಂದ ಐಪಿಎಲ್ ಟ್ರೋಫಿಯನ್ನು ಗೆಲ್ಲಲಾಗುವುದಿಲ್ಲ. ಟ್ರೋಫಿ ಗೆಲ್ಲಲು ತಂಡದ ಸಹಕಾರ ಅಗತ್ಯ. ಮಿಚೆಲ್ ಸ್ಟಾರ್ಕ್, ಆಂಡ್ರೆ ರಸೆಲ್, ಸುನಿಲ್ ನರೈನ್ ಅವರ ಕೊಡುಗೆಯನ್ನು ನಾವು ಕೋಲ್ಕತ್ತಾ ತಂಡದಲ್ಲೊ ನೋಡಬಹುದು. ಹೀಗಾಗಿ ಕೆಕೆಆರ್ ಟ್ರೋಫಿ ಗೆಲ್ಲಲು ಸಾಧ್ಯವಾಯಿತು. ಟ್ರೋಫಿ ಗೆಲ್ಲಲು, ಎಲ್ಲಾ ಆಟಗಾರರು ಸ್ವಲ್ಪ ಕೊಡುಗೆ ನೀಡಬೇಕು. ಆರೆಂಜ್ ಕ್ಯಾಪ್ ಗೆದ್ದ ಆಟಗಾರ ಟ್ರೋಫಿ ಗೆಲ್ಲುವುದಿಲ್ಲ ಎಂದು ರಾಯುಡು ಕೊಹ್ಲಿ ವಿರುದ್ಧ ಮತ್ತೊಮ್ಮೆ ಕುಹಕದ ಮಾತುಗಳನ್ನಾಡಿದ್ದಾರೆ.
“Orange caps don’t win you IPL trophy” ~ Ambati Rayudu 😭
Bro haven’t stopped cooking RCB and Kohli pic.twitter.com/FIL38RhWOB
— Div🦁 (@div_yumm) May 26, 2024
Ambati Rayudu said – “Virat Kohli is stalwarts and Legend there in the team. He sets so high standards which puts pressure on the youngsters to emulate him. So, Virat needs to lower his standards a bit so that the youngsters can be in good state of mind in the dressing room”. pic.twitter.com/qnboA0t7bO
— Tanuj Singh (@ImTanujSingh) May 26, 2024
ಆರ್ಸಿಬಿ ತಂಡವನ್ನು ಲೇವಡಿ ಮಾಡಿದ್ದ ರಾಯುಡು
ವಾಸ್ತವವಾಗಿ ಅಂಬಟಿ ರಾಯುಡು, ಕೊಹ್ಲಿ ಅಥವಾ ಆರ್ಸಿಬಿ ತಂಡದ ವಿರುದ್ಧ ಕಿಡಿಕಾರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಪ್ಲೇಆಫ್ ಸುತ್ತಿನ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಆರ್ಸಿಬಿ ಸೋತಾಗಲೂ ರಾಯುಡು ಆರ್‌ಸಿಬಿಯ ಆಟಗಾರರು ಮತ್ತು ಪ್ರಾಂಚೈಸಿಯನ್ನು ಟೀಕಿಸಿದ್ದರು. ಆ ವೇಳೆ ರಾಯುಡು, ‘ಆರ್ಸಿಬಿಯಲ್ಲಿ ತಂಡದ ಗೆಲುವಿಗಿಂತ ತಮ್ಮ ವೈಯಕ್ತಿಕ ಮೈಲಿಗಲ್ಲುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಆಟಗಾರರಿದ್ದಾರೆ. ತಂಡದಲ್ಲಿ ಶ್ರೇಷ್ಠ ಆಟಗಾರರಿದ್ದಾರೆ. ಆದರೆ ಇನ್ನೂ ಕೂಡ ಆರ್ಸಿಬಿ ಒಂದೇ ಒಂದು ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಏಕೆಂದರೆ ಬೆಂಗಳೂರಿನ ಆಟಗಾರರು ವೈಯಕ್ತಿಕ ಗುರಿಗಳ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ತಮ್ಮ ದಾಖಲೆಗಳಿಗಿಂತ ತಂಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಇಂತಹ ಆಟಗಾರರನ್ನು ಫ್ರಾಂಚೈಸಿ ತಂಡದಲ್ಲಿ ಸೇರಿಸಿಕೊಳ್ಳಬೇಕು’ ಎಂದು ರಾಯುಡು ಹೇಳಿಕೆ ನೀಡಿದ್ದರು. ಇಲ್ಲೂ ವಿರಾಟ್ ಕೊಹ್ಲಿಯೇ ರಾಯುಡು ಅವರ ಟಾರ್ಗೆಟ್ ಎಂಬುದು ಇದರಿಂದ ಸ್ಪಷ್ಟವಾಗಿತ್ತು.
ಈ ಐಪಿಎಲ್‌ನಲ್ಲಿ ಕೊಹ್ಲಿಯ ಪ್ರದರ್ಶನ
ವಿರಾಟ್ ಕೊಹ್ಲಿ ಈ ವರ್ಷ ಐಪಿಎಲ್‌ನಲ್ಲಿ 15 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ವಿರಾಟ್ 61.75ರ ಸರಾಸರಿಯಲ್ಲಿ 741 ರನ್ ಬಾರಿಸಿದ್ದರು. ಇದರಲ್ಲಿ 5 ಅರ್ಧ ಶತಕ ಮತ್ತು 1 ಶತಕವೂ ಸೇರಿತ್ತು. ವಿಶೇಷವೆಂದರೆ ವಿರಾಟ್ ಕೊಹ್ಲಿ 154.69 ಸ್ಟ್ರೈಕ್ ರೇಟ್‌ನಲ್ಲಿ 62 ಬೌಂಡರಿ ಮತ್ತು 38 ಸಿಕ್ಸರ್‌ಗಳನ್ನು ಒಳಗೊಂಡಂತೆ ಈ ರನ್ ಕಲೆಹಾಕಿದ್ದರು. ಅಲ್ಲದೆ ಈ ಸೀಸನ್ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Mon, 27 May 24