IPL 2024 Auction: 2 ಕೋಟಿ ರೂ. ಮೂಲ ಬೆಲೆಯಲ್ಲಿ ಕೇವಲ ಮೂವರು ಭಾರತೀಯರು
IPL 2024 Auction: ಡಿಸೆಂಬರ್ 19 ರಂದು ದುಬೈನ ಕೋಕಾಕೋಲ ಅರೇನಾದಲ್ಲಿ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ವೇಳೆ 333 ಆಟಗಾರರ ಹೆಸರುಗಳನ್ನು ಬಿಡ್ಡಿಂಗ್ಗಾಗಿ ಕೂಗಲಾಗುತ್ತದೆ. ಇದರಲ್ಲಿ ಕೇವಲ 77 ಆಟಗಾರರಿಗೆ ಮಾತ್ರ ಐಪಿಎಲ್ 2024 ರಲ್ಲಿ ಅವಕಾಶ ದೊರೆಯಲಿದೆ.
IPL 2024
Follow us on
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 17ನೇ ಆವೃತ್ತಿಯ ಹರಾಜಿಗಾಗಿ ಫೈನಲ್ ಪಟ್ಟಿ ಸಿದ್ಧವಾಗಿದೆ. ಈ ಬಾರಿಯ ಐಪಿಎಲ್ ಆಕ್ಷನ್ಗಾಗಿ ಹೆಸರು ನೋಂದಾಯಿಸಿಕೊಂಡಿದ್ದ 1166 ಆಟಗಾರರಲ್ಲಿ ಕೇವಲ 333 ಪ್ಲೇಯರ್ಸ್ಗೆ ಮಾತ್ರ ಹರಾಜಿನಲ್ಲಿ ಅವಕಾಶ ನೀಡಲಾಗಿದೆ. ಇವರಲ್ಲಿ 214 ಭಾರತೀಯ ಆಟಗಾರಿದ್ದರೆ, 121 ವಿದೇಶಿ ಆಟಗಾರರಿದ್ದಾರೆ. ವಿಶೇಷ ಎಂದರೆ ಈ 333 ಆಟಗಾರರಲ್ಲಿ ಕೇವಲ 23 ಆಟಗಾರರು ಮಾತ್ರ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದಾರೆ.
ಅಂದರೆ ಈ ಬಾರಿಯ ಐಪಿಎಲ್ ಹರಾಜಿನಲ್ಲಿ 2 ಕೋಟಿ ರೂ. ಬೇಸ್ ಪ್ರೈಸ್ ಘೋಷಿಸಿರುವುದು ಕೇವಲ 23 ಆಟಗಾರರು ಮಾತ್ರ. ಇವರಲ್ಲಿ 20 ವಿದೇಶಿ ಆಟಗಾರರು ಎಂಬುದು ವಿಶೇಷ. ಅಂದರೆ ಮೂವರು ಭಾರತೀಯ ಆಟಗಾರರು ಮಾತ್ರ 2 ಕೋಟಿ ರೂ. ಮೂಲ ಬೆಲೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆ ಆಟಗಾರರು ಯಾರೆಲ್ಲಾ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ಈ ಬಾರಿಯ ಐಪಿಎಲ್ನಲ್ಲಿ ಮಿನಿ ಹರಾಜು ನಡೆಯಲಿದೆ. ಡಿಸೆಂಬರ್ 19 ರಂದು ದುಬೈನ ಕೋಕಾಕೋಲ ಅರೇನಾದಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ವೇಳೆ 333 ಆಟಗಾರರ ಹೆಸರುಗಳನ್ನು ಬಿಡ್ಡಿಂಗ್ಗಾಗಿ ಕೂಗಲಾಗುತ್ತದೆ. ಇದರಲ್ಲಿ ಕೇವಲ 77 ಆಟಗಾರರಿಗೆ ಮಾತ್ರ ಐಪಿಎಲ್ 2024 ರಲ್ಲಿ ಅವಕಾಶ ದೊರೆಯಲಿದೆ.