IPL 2024: ಐಪಿಎಲ್ಗೆ ಬೆನ್ ಸ್ಟೋಕ್ಸ್ ಡೌಟ್..!
IPL 2024: ಬೆನ್ ಸ್ಟೋಕ್ಸ್ ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ. ಕಳೆದ ಸೀಸನ್ನಲ್ಲಿ ಸ್ಟೋಕ್ಸ್ ಅವರನ್ನು ಸಿಎಸ್ಕೆ ಫ್ರಾಂಚೈಸಿ ಬರೋಬ್ಬರಿ 16.25 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಗಾಯದ ಕಾರಣ ಇಂಗ್ಲೆಂಡ್ ಆಟಗಾರ ಆಡಿದ್ದು ಕೇವಲ 2 ಪಂದ್ಯಗಳನ್ನು ಮಾತ್ರ.
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ವಿಶ್ವಕಪ್ಗಾಗಿ ಏಕದಿನ ಕ್ರಿಕೆಟ್ ನಿವೃತ್ತಿ ಹಿಂಪಡೆಯಲು ನಿರ್ಧರಿಸಿದ್ದಾರೆ. ಆದರೆ ಅವರು ಏಕದಿನ ವಿಶ್ವಕಪ್ನಲ್ಲಿ ಕಾಣಿಸಿಕೊಂಡರೆ ಐಪಿಎಲ್ ಆಡುವುದು ಅನುಮಾನ. ಏಕೆಂದರೆ ಈ ಹಿಂದೆ ಸತತ ಪಂದ್ಯಗಳನ್ನಾಡುವುದು ತ್ರಾಸದಾಯಕ ಎಂದು ಸ್ಟೋಕ್ಸ್ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಅಲ್ಲದೆ ಟೆಸ್ಟ್ ಹಾಗೂ ಟಿ20 ಕ್ರಿಕೆಟ್ನಲ್ಲಿ ಮುಂದುವರೆದಿದ್ದರು.
ಇದೀಗ ಮತ್ತೆ ಏಕದಿನ ವಿಶ್ವಕಪ್ನಲ್ಲಿ ಭಾಗವಹಿಸುವಂತೆ ಸ್ಟೋಕ್ಸ್ ಮನವೊಲಿಸುವಲ್ಲಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಯಶಸ್ವಿಯಾಗಿದೆ. ಇತ್ತ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆಯುವುದು ನವೆಂಬರ್ 19 ರಂದು. ಇದರ ಬೆನ್ನಲ್ಲೇ ಇಂಗ್ಲೆಂಡ್ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಆಡಲಿದೆ.
ಈ ಸರಣಿ ಬಳಿಕ ಜನವರಿಯಲ್ಲಿ ಇಂಗ್ಲೆಂಡ್ ತಂಡ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಬರಲಿದೆ. ಈ ಸರಣಿಯ ಮುಕ್ತಾಯದ ಬೆನ್ನಲ್ಲೇ ಐಪಿಎಲ್ ಶುರುವಾಗಲಿದೆ. ಐಪಿಎಲ್ ಬೆನ್ನಲ್ಲೇ ಟಿ20 ವಿಶ್ವಕಪ್ ಕೂಡ ಪ್ರಾರಂಭವಾಗಲಿದೆ.
ಟೆಸ್ಟ್ ಕ್ರಿಕೆಟ್ಗೆ ಹೆಚ್ಚಿನ ಒತ್ತು ನೀಡುತ್ತಿರುವ ಸ್ಟೋಕ್ಸ್ ಭಾರತದ ವಿರುದ್ಧ ಸರಣಿಯಲ್ಲಿ ಕಾಣಿಸಿಕೊಳ್ಳಬಹುದು. ಇದಾದ ಬಳಿಕ ವಿಶ್ರಾಂತಿ ಪಡೆದು ಟಿ20 ವಿಶ್ವಕಪ್ನಲ್ಲಿ ಭಾಗವಹಿಸಬಹುದು.
ಸ್ಟೋಕ್ಸ್ ಸಮಸ್ಯೆ:
ಬೆನ್ ಸ್ಟೋಕ್ಸ್ ಕಳೆದ ಕೆಲ ತಿಂಗಳುಗಳಿಂದ ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಸಹ ಮುಂದಾಗಿದ್ದಾರೆ. ಆದರೆ ಏಕದಿನ ವಿಶ್ವಕಪ್ ಹಿನ್ನಲೆಯಲ್ಲಿ ತಮ್ಮ ಸರ್ಜರಿಯನ್ನು ಮುಂದೂಡಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಪರಿಪೂರ್ಣ ಆಲ್ರೌಂಡರ್ ಬದಲಾಗಿ ಸ್ಪೆಷಲ್ ಬ್ಯಾಟರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಇನ್ನು ಏಕದಿನ ವಿಶ್ವಕಪ್ ಬಳಿಕ ಭಾರತದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಬೆನ್ ಸ್ಟೋಕ್ಸ್ ಮುನ್ನಡೆಸಬೇಕಿದೆ. ಹೀಗಾಗಿ ಈ ಅವಧಿಯಲ್ಲೂ ಅವರು ಸರ್ಜರಿಗೆ ಒಳಗಾಗುವವ ಸಾಧ್ಯತೆಯಿಲ್ಲ. ಅಂದರೆ ಇಲ್ಲಿ ಭಾರತ ವಿರುದ್ಧದ ಸರಣಿಯ ಬಳಿಕ ಹಾಗೂ ಟಿ20 ವಿಶ್ವಕಪ್ ಮುಂಚಿತವಾಗಿ ಸ್ಟೋಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಹೆಚ್ಚು.
ಈ ಅವಧಿಯಲ್ಲೇ ಐಪಿಎಲ್ 2024 ಕೂಡ ಜರುಗಲಿದೆ. ಹೀಗಾಗಿಯೇ ಬೆನ್ ಸ್ಟೋಕ್ಸ್ ಐಪಿಎಲ್ನಿಂದ ಹಿಂದೆ ಸರಿದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಳಿದು ಬಂದಿದೆ.
CSK ತಂಡದಲ್ಲಿರುವ ಸ್ಟೋಕ್ಸ್:
ಬೆನ್ ಸ್ಟೋಕ್ಸ್ ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ. ಕಳೆದ ಸೀಸನ್ನಲ್ಲಿ ಸ್ಟೋಕ್ಸ್ ಅವರನ್ನು ಸಿಎಸ್ಕೆ ಫ್ರಾಂಚೈಸಿ ಬರೋಬ್ಬರಿ 16.25 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಗಾಯದ ಕಾರಣ ಇಂಗ್ಲೆಂಡ್ ಆಟಗಾರ ಆಡಿದ್ದು ಕೇವಲ 2 ಪಂದ್ಯಗಳನ್ನು ಮಾತ್ರ.
ಈ ಎರಡು ಪಂದ್ಯಗಳಲ್ಲಿ ಕಲೆಹಾಕಿದ್ದು ಕೇವಲ 15 ರನ್. ಹಾಗೆಯೇ 1 ಓವರ್ ಮಾತ್ರ ಬೌಲಿಂಗ್ ಮಾಡಿದ್ದರು. ಇದೀಗ ಮತ್ತೆ ಏಕದಿನ ಕ್ರಿಕೆಟ್ಗೆ ಮರಳುತ್ತಿರುವುದರಿಂದ ಬೆನ್ ಸ್ಟೋಕ್ಸ್ ಅವರ ಲೆಕ್ಕಾಚಾರಗಳು ಬದಲಾಗಲಿದೆ. ಅಲ್ಲದೆ ಮಾರ್ಚ್ ಬಳಿಕವಷ್ಟೇ ಅವರು ಸರ್ಜರಿಗೆ ಒಳಗಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Ben Stokes: ಧೋನಿ ದಾಖಲೆ ಮುರಿದ ಬೆನ್ ಸ್ಟೋಕ್ಸ್
ಇತ್ತ ಐಪಿಎಲ್ ಮಾರ್ಚ್ ಹಾಗೂ ಮೇ ನಡುವೆ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಬೆನ್ ಸ್ಟೋಕ್ಸ್ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ.