IPL 2024: ಕುಚಿಕು ಕುಚಿಕು ಕುಚಿಕು… ಕೊಹ್ಲಿ-ಗಂಭೀರ್ ಕುಚಿಕು: ವಿಡಿಯೋ ವೈರಲ್

| Updated By: ಝಾಹಿರ್ ಯೂಸುಫ್

Updated on: Apr 21, 2024 | 11:35 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್​ 2024) 36ನೇ ಪಂದ್ಯದಲ್ಲಿ ಕೆಕೆಆರ್ ಹಾಗೂ ಆರ್​ಸಿಬಿ ತಂಡಗಳು ಮುಖಾಮುಖಿಯಾಗಲಿದೆ. ಸಂಜೆ 3.30 ರಿಂದ ಶುರುವಾಗಲಿರುವ ಈ ಪಂದ್ಯವು ಕೆಕೆಆರ್​ ಪಾಲಿಗೆ 7ನೇ ಪಂದ್ಯವಾದರೆ, ಆರ್​ಸಿಬಿ ಪಾಲಿಗೆ 8ನೇ ಪಂದ್ಯ. ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಮೊದಲಾರ್ಧದ ಕೊನೆಯ ಪಂದ್ಯದಲ್ಲಿ ಜಯಗಳಿಸುವ ಇರಾದೆಯಲ್ಲಿದೆ. ಇತ್ತ ಆರ್​ಸಿಬಿ ದ್ವಿತೀಯಾರ್ಧದ ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.

IPL 2024: ಕುಚಿಕು ಕುಚಿಕು ಕುಚಿಕು... ಕೊಹ್ಲಿ-ಗಂಭೀರ್ ಕುಚಿಕು: ವಿಡಿಯೋ ವೈರಲ್
Virat Kohli - Gautam Gambhir
Follow us on

IPL 2024: ವಿರಾಟ್ ಕೊಹ್ಲಿ (Virat Kohli) ಮತ್ತು ಗೌತಮ್ ಗಂಭೀರ್ (Gautam Gambhir) ಮುಖಾಮುಖಿಯಾದರೆ ಅಲ್ಲೊಂದಷ್ಟು ಕಿರಿಕ್, ಒಂದಷ್ಟು ದ್ವೇಷ… ಮತ್ತೊಂದಷ್ಟು ವಾಗ್ವಾದ… ಎಂಬುದು ಸಾಮಾನ್ಯವಾಗಿತ್ತು. ಹೀಗಾಗಿಯೇ RCB vs KKR ನಡುವಣ ಪಂದ್ಯವು ಎಲ್ ಪ್ರೈಮೆರೊ ಮ್ಯಾಚ್ ಆಗಿ ಗುರುತಿಸಿಕೊಂಡಿತ್ತು. ಈ ಹಿಂದೆ ಆರ್​ಸಿಬಿ-ಕೆಕೆಆರ್ ನಡುವಣ ಪಂದ್ಯದ ವೇಳೆ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಮೈದಾನದಲ್ಲೇ ಮಾತಿನ ಚಕಮಕಿ ನಡೆಸಿದ್ದರು.

ಇನ್ನು ಕಳೆದ ವರ್ಷ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯದ ವೇಳೆ LSG ತಂಡದ ಮೆಂಟರ್ ಆಗಿದ್ದ ಗಂಭೀರ್ ಆರ್​ಸಿಬಿ ಅಭಿಮಾನಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ರಣರೋಚಕ ಪಂದ್ಯದಲ್ಲಿ LSG ಗೆಲ್ಲುತ್ತಿದ್ದಂತೆ ಆರ್​ಸಿಬಿ ಅಭಿಮಾನಿಗಳತ್ತ ಮುಖ ಮಾಡಿ ಗಂಭೀರ್ ಬಾಯಿ ಮುಚ್ಚಿಕೊಂಡಿರುವಂತೆ ಸನ್ನೆ ಮಾಡಿದ್ದರು. ಇದೀಗ ಗಂಭೀರ್ ಕೆಕೆಆರ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೀಗಾಗಿಯೇ ಆರ್​ಸಿಬಿ ಮತ್ತು ಕೆಕೆಆರ್ ನಡುವಣ ಪಂದ್ಯದ ವೇಳೆ ರೋಚಕ ಪೈಪೋಟಿಯನ್ನು ನಿರೀಕ್ಷಿಸಲಾಗಿತ್ತು. ಆದರೆ ಕೆಕೆಆರ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದರು. ಅಲ್ಲದೆ ಅಭಿಮಾನಿಗಳಿಗೆ ಕ್ರೀಡಾಸ್ಫೂರ್ತಿಯ ಸಂದೇಶ ಸಾರಿದ್ದಾರೆ.

ಆರ್​ಸಿಬಿ ಇನಿಂಗ್ಸ್​ನ​ ಸ್ಟ್ರಾಟರ್ಜಿಕ್ ಟೈಮ್ ಔಟ್ ವೇಳೆ ಮೈದಾನಕ್ಕೆ ಆಗಮಿಸಿದ ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ವಿರಾಟ್ ಕೊಹ್ಲಿಗೆ ಹಸ್ತಲಾಘವ ನೀಡಿದರು. ಅಲ್ಲದೆ ಇಬ್ಬರು ಪರಸ್ಪರ ಆಲಿಂಗನೊಂದಿಗೆ ಮಾತುಕತೆ ನಡೆಸಿದರು. ಈ ಮೂಲಕ ಈ ಹಿಂದಿನ ಎಲ್ಲಾ ಕಹಿ ಘಟನೆಗಳು ಅಲ್ಲಿಗೆ ಮುಗಿದೆ, ನಮ್ಮಿಬ್ಬರ ನಡುವೆ ಏನಿಲ್ಲಾ, ಮುನಿಸಂತು ಇಲ್ಲವೇ ಇಲ್ಲ ಎಂಬ ಸಂದೇಶ ಸಾರಿದ್ದರು.

ಇದನ್ನೂ ಓದಿ: IPL 2024: ಹೆಡ್ ಸಿಡಿಲಬ್ಬರ: ಸುರೇಶ್ ರೈನಾ ದಾಖಲೆ ಜಸ್ಟ್ ಮಿಸ್..!

ಇದೀಗ ಮತ್ತೊಮ್ಮೆ ಕೆಕೆಆರ್ ಹಾಗೂ ಆರ್​ಸಿಬಿ ತಂಡಗಳು ಮುಖಾಮುಖಿಯಾಗಲು ಸಜ್ಜಾಗಿ ನಿಂತಿದೆ. ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ಉಭಯ ತಂಡಗಳು ಅಭ್ಯಾಸ ನಡೆಸುತ್ತಿದ್ದ ವೇಳೆ ಗೌತಿ-ಕೊಹ್ಲಿ ಭೇಟಿಯಾಗಿದ್ದಾರೆ.

ಈ ವಿಡಿಯೋವನ್ನು ಕೆಕೆಆರ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಗಂಭೀರ್ ಹಾಗೂ ಕೊಹ್ಲಿ ನಗುಮುಖದೊಂದಿಗೆ ಪರಸ್ಪರ ಹಾಸ್ಯ ಮಾಡುತ್ತಾ ಮಾತುಕತೆಯಲ್ಲಿ ತೊಡಗಿಸಿಕೊಂಡಿರುವುದು ಕಾಣಬಹುದು. ಒಟ್ಟಿನಲ್ಲಿ ಮೈದಾನದಲ್ಲಿ ಶುರುವಾದ ಜಗಳವನ್ನು ಮೈದಾನದಲ್ಲೇ ಕೊನೆಗೊಳಿಸುವ ಮೂಲಕ ಗೌತಮ್ ಗಂಭೀರ್-ವಿರಾಟ್ ಕೊಹ್ಲಿ ಕ್ರೀಡಾಸ್ಪೂರ್ತಿಯ ಸಂದೇಶ ಸಾರಿದ್ದಾರೆ.