ಐಪಿಎಲ್ 17ನೇ (IPL 2024) ಸೀಸನ್ನ 25ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Mumbai Indians vs Royal Challengers Bengaluru) ತಂಡಗಳು ಸೆಣಸಾಡಲಿವೆ. ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಮುಂಬೈ ಇಂಡಿಯನ್ಸ್ ಲೀಗ್ನಲ್ಲಿ ಏಕೈಕ ಗೆಲುವು ದಾಖಲಿಸಿದ್ದರೆ, ತನ್ನ ಆರ್‌ಸಿಬಿ ಕೂಡ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಒಂದೇ ಒಂದು ಪಂದ್ಯವನ್ನು ಗೆದ್ದಿದೆ. ಇದು ಮುಂಬೈಗೆ ನಾಲ್ಕನೇ ಪಂದ್ಯವಾಗಿದ್ದು, ಬೆಂಗಳೂರು ತಂಡಕ್ಕೆ ಆರನೇ ಪಂದ್ಯವಾಗಿದೆ. ಮುಂಬೈ 4 ಪಂದ್ಯಗಳಲ್ಲಿ 1 ರಲ್ಲಿ ಗೆದ್ದಿದ್ದರೆ, ಬೆಂಗಳೂರು ಐದರಲ್ಲಿ 1 ಬಾರಿ ಗೆಲುವಿನ ರುಚಿ ಕಂಡಿದೆ. ಹೀಗಾಗಿ ಎರಡೂ ತಂಡಗಳು ಗೆಲುವಿನ ಹಾದಿಗೆ ಮರಳಲು ಪ್ರಯತ್ನಿಸಲಿವೆ.
ಗುರುವಾರ, ಏಪ್ರಿಲ್ 11 ರಂದು ಮುಂಬೈ vs ಬೆಂಗಳೂರು ಪಂದ್ಯ ನಡೆಯಲಿದೆ.
ಮುಂಬೈ ಇಂಡಿಯನ್ಸ್ vs ಆರ್ಸಿವಿ ನಡುವಿನ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.
ಮುಂಬೈ vs ಬೆಂಗಳೂರು ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ. ಟಾಸ್ 7 ಗಂಟೆಗೆ ನಡೆಯಲಿದೆ.
ಮುಂಬೈ vs ಬೆಂಗಳೂರು ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.
ಮುಂಬೈ vs ಬೆಂಗಳೂರು ಪಂದ್ಯವನ್ನು ಮೊಬೈಲ್‌ನಲ್ಲಿ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು.
ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಟಿಮ್ ಡೇವಿಡ್, ಇಶಾನ್ ಕಿಶನ್, ವಿಷ್ಣು ವಿನೋದ್, ನೆಹಾಲ್ ವಧೇರಾ, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಪಿಯೂಷ್ ಚಾವ್ಲಾ, ಶ್ರೇಯಸ್ ಗೋಪಾಲ್, ಅನ್ಶುಲ್ ಕಾಂಬೋಜ್, ಮೊಹಮ್ಮದ್ ನಬಿ, ಶಮ್ಸ್ ಮುಲಾನಿ, ತಿಲಾಕಿಯೊ ಶೆಫರ್ಡ್, ಜಸ್ಪ್ರಿತ್ ಬುಮ್ರಾ, ಜೆರಾಲ್ಡ್ ಕೊಯೆಟ್ಜಿ, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್, ಅರ್ಜುನ್ ತೆಂಡೂಲ್ಕರ್, ನುವಾನ್ ತುಷಾರಾ, ನಮನ್ ಧೀರ್, ಶಿವಾಲಿಕ್ ಶರ್ಮಾ, ಲ್ಯೂಕ್ ವುಡ್ ಮತ್ತು ಕ್ವೆನಾ ಮಫಕಾ.
ಆರ್‌ಸಿಬಿ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ಯಶ್ ದಯಾಳ್, ವಿಜಯ್‌ಕುಮಾರ್ ವೈಶಾಖ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ರೀಸ್ ಟೋಪ್ಲೆ, ಸ್ವಪ್ನೀಲ್ ಸಿಂಗ್, ಕರ್ಣ್ ಶರ್ಮಾ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಮೊಹಮ್ಮದ್ ಸಿರಾಜ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಮಯಾಂಕ್ ದಾಗರ್, ಸುಯೇಶ್ ಪ್ರಭುದೇಸಾಯಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ವಿಲ್ ಜಾಕ್ಸ್, ಕ್ಯಾಮೆರಾನ್ ಗ್ರೀನ್, ಮೊಹಮ್ಮದ್ ಸಿರಾಜ್, ಮನೋಜ್ ಭಾಂಡಗೆ, ಆಕಾಶ್ ದೀಪ್, ರಜತ್ ಪಾಟಿದಾರ್, ಸೌರವ್ ಚೌಹಾಣ್ ಮತ್ತು ಅನುಜ್ ರಾವತ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ