AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಸಿಬಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಇಬ್ಬರು ವಿದೇಶಿ ಸ್ಟಾರ್ ಆಟಗಾರರು ಔಟ್?

ಆರ್​ಸಿಬಿಯಲ್ಲಿ ಕೆಲವೇ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಕಾರಣಕ್ಕೆ ಎರಡು ವಿದೇಶಿ ಆಟಗಾರರಿಗೆ ಬೇಂಚ್ ಕಾಯಿಸುವ ಕೆಲಸ ನೀಡಲು ನಿರ್ಧರಿಸಲಾಗಿದೆ ಎಂದು ವರದಿ ಆಗಿದೆ

ಆರ್​ಸಿಬಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಇಬ್ಬರು ವಿದೇಶಿ ಸ್ಟಾರ್ ಆಟಗಾರರು ಔಟ್?
ಗ್ರೀನ್-ಮ್ಯಾಕ್ಸ್​ವೆಲ್
ರಾಜೇಶ್ ದುಗ್ಗುಮನೆ
|

Updated on: Apr 11, 2024 | 9:51 AM

Share

ಆರ್​ಸಿಬಿ (RCB) ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಇಂದು ಮುಖಾಮುಖಿ ಆಗುತ್ತಿವೆ. ಐಪಿಎಲ್ ಈ ಸೀಸನ್​ನ​ 25ನೇ ಮ್ಯಾಚ್ ಇದಾಗಿದ್ದು, ಎರಡೂ ತಂಡಗಳು ತಲಾ ಎರಡು ಪಾಯಿಂಟ್ ಗಳಿಸಿ ಅಂಕಪಟ್ಟಿಯಲ್ಲಿ ಕೊನೆಯಲ್ಲಿವೆ. ಇಂದು ಗೆದ್ದ ತಂಡಕ್ಕೆ ಎರಡು ಅಂಕ ಸಿಗಲಿದೆ. ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರೋ ಆರ್​​ಸಿಬಿಗೆ ಇಂದು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗುತ್ತಿದೆ ಎನ್ನಲಾಗಿದೆ.

ಆರ್​ಸಿಬಿ ತಂಡ ಆಡಿದ ಐದು ಪಂದ್ಯಗಳಲ್ಲಿ ಒಂದು ಪಂದ್ಯ ಮಾತ್ರ ಗೆದ್ದಿದೆ. ಮುಂಬೈ ಇಂಡಿಯನ್ಸ್ ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದು ಮ್ಯಾಚ್ ಗೆದ್ದಿದೆ. ಹೀಗಾಗಿ ಎರಡೂ ತಂಡಗಳಿಗೆ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಮುಂಬೈಗೆ ಹೋಂ ಪಿಚ್ ಆಗಿರುವುದರಿಂದ ಇಂದಿನ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯೂ ಹೌದು. ಆರ್​ಸಿಬಿಯಲ್ಲಿ ಕೆಲವೇ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಕಾರಣಕ್ಕೆ ಎರಡು ವಿದೇಶಿ ಆಟಗಾರರಿಗೆ ಬೇಂಚ್ ಕಾಯಿಸುವ ಕೆಲಸ ನೀಡಲು ನಿರ್ಧರಿಸಲಾಗಿದೆ ಎಂದು ವರದಿ ಆಗಿದೆ

ವಿರಾಟ್ ಕೊಹ್ಲಿ ಮಾತ್ರ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ವಿದೇಶಿ ಆಟಗಾರರಾದ ಮ್ಯಾಕ್ಸ್​ವೆಲ್ ಹಾಗೂ ಕ್ಯಾಮರೂನ್ ಗ್ರೀನ್ ಸಂಪೂರ್ಣ ವಿಫಲತೆ ಕಂಡಿದ್ದಾರೆ. ಇಬ್ಬರೂ ಬೌಲಿಂಗ್ ಹಾಗೂ ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಮ್ಯಾಕ್ಸ್​ವೆಲ್​ ಐದು ಇನ್ನಿಂಗ್ಸ್​ನಲ್ಲಿ ಗಳಿಸಿದ್ದು 32 ರನ್ ಮಾತ್ರ. ಗ್ರೀನ್ 68 ರನ್ ಕಲೆ ಹಾಕಿದ್ದು, ಬೌಲಿಂಗ್​ನಲ್ಲಿ ದುಬಾರಿ ಆಗಿದ್ದಾರೆ.

ಇದನ್ನೂ ಓದಿ: ಮುಂಬೈ- ಆರ್​ಸಿಬಿ ಫೈಟ್; ಪಂದ್ಯ ಎಲ್ಲಿ ನಡೆಯಲ್ಲಿದೆ ಗೊತ್ತಾ?

ಇಂದಿನ ಪಂದ್ಯಕ್ಕೆ ಮ್ಯಾಕ್ಸ್​ವೆಲ್ ಬದಲು ವಿಲ್ ಜಾಕ್ಸ್ ಬರೋ ಸಾಧ್ಯತೆ ಇದೆ. ಈ ಮೂಲಕ ವಿರಾಟ್ ಕೊಹ್ಲಿ ಹಾಗೂ ಫಾಪ್​ ಡುಪ್ಲೆಸಿಸ್ ಓಪನಿಂಗ್ ತೆರಳಲಿದ್ದು, ಆ ಬಳಿಕ ವಿಲ್ ಜಾಕ್ಸ್ ಅಖಾಡಕ್ಕೆ ಇಳಿಯಲಿದ್ದಾರೆ. ಬೌಲಿಂಗ್​ನಲ್ಲೂ ಅವರು ಸಹಕಾರಿ ಆಗಲಿದ್ದಾರೆ. ರಜತ್ ಪಟಿದಾರ್ ಬದಲು ಮಹಿಪಾಲ್ ಲೊಮ್ರೊರ್ ಬರೋ ಸಾಧ್ಯತೆ ಇದೆ. ಗ್ರೀನ್​ನ ಕೈಬಿಟ್ಟರೆ ಆ ಸ್ಥಾನಕ್ಕೆ ಯಾರು ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ