RR vs GT Highlights, IPL 2024: ಅಜೇಯ ರಾಜಸ್ಥಾನ್ಗೆ ಸೋಲಿನ ಶಾಕ್ ನೀಡಿದ ಗುಜರಾತ್
Rajasthan Royals vs Gujarat Titans Highlights in Kannada: ಇಂದು ನಡೆದ ಐಪಿಎಲ್ 2024 ರ 24 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 3 ವಿಕೆಟ್‌ಗಳಿಂದ ಮಣಿಸಿದ ಗುಜರಾತ್ ಟೈಟಾನ್ಸ್ ಲೀಗ್ನಲ್ಲಿ 3ನೇ ಗೆಲುವು ದಾಖಲಿಸಿದೆ. ಇತ್ತ ಲೀಗ್ನಲ್ಲಿ ಅಜೇಯವಾಗಿದ್ದ ರಾಜಸ್ಥಾನ್ ತಂಡ ಮೊದಲ ಸೋಲು ಎದುರಿಸಿದೆ.
ಇಂದು ನಡೆದ ಐಪಿಎಲ್ 2024 ರ 24 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 3 ವಿಕೆಟ್‌ಗಳಿಂದ ಮಣಿಸಿದ ಗುಜರಾತ್ ಟೈಟಾನ್ಸ್ ಲೀಗ್ನಲ್ಲಿ 3ನೇ ಗೆಲುವು ದಾಖಲಿಸಿದೆ. ಇತ್ತ ಲೀಗ್ನಲ್ಲಿ ಅಜೇಯವಾಗಿದ್ದ ರಾಜಸ್ಥಾನ್ ತಂಡ ಮೊದಲ ಸೋಲು ಎದುರಿಸಿದೆ. ಈ ಪಂದ್ಯದಲ್ಲಿ ಗುಜರಾತ್ ನಾಯಕ ಶುಭಮನ್ ಗಿಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು 196 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ತಂಡ 20 ಓವರ್‌ನ ಕೊನೆಯ ಎಸೆತದಲ್ಲಿ 7 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿತು. ರಶೀದ್ ಖಾನ್ 20ನೇ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
LIVE NEWS & UPDATES
-
ಗುಜರಾತ್‌ಗೆ ಮೂರು ವಿಕೆಟ್ ಜಯ
ರೋಚಕ ಪಂದ್ಯದಲ್ಲಿ ಗುಜರಾತ್ ಮೂರು ವಿಕೆಟ್‌ಗಳಿಂದ ರಾಜಸ್ಥಾನವನ್ನು ಸೋಲಿಸಿದೆ. ರಶೀದ್ ಖಾನ್ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.
-
ಶಾರುಖ್ ಔಟ್
ಅವೇಶ್ ಖಾನ್ ಬೌಲಿಂಗ್ನಲ್ಲಿ ಶಾರುಖ್ ಖಾನ್‌ಗೆ ಎಲ್‌ಬಿಡಬ್ಲ್ಯೂ ಆಗಿದ್ದಾರೆ. ರಶೀದ್ ಖಾನ್ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಈಗ ತಂಡಕ್ಕೆ 13 ಎಸೆತಗಳಲ್ಲಿ 36 ರನ್‌ಗಳ ಅಗತ್ಯವಿದೆ.
-
ನಾಯಕ ಗಿಲ್ ಔಟ್
ನಾಯಕ ಗಿಲ್ 72 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಅವರನ್ನು ಸಂಜು ಸ್ಯಾಮ್ಸನ್ ಸ್ಟಂಪ್ ಮಾಡಿದರು. ಈ ಪಂದ್ಯದಲ್ಲಿ ಗಿಲ್ 163.63 ಸ್ಟ್ರೈಕ್ ರೇಟ್‌ನಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 72 ರನ್‌ಗಳ ಪ್ರಬಲ ಇನ್ನಿಂಗ್ಸ್ ಆಡಿದರು. ಶಾರುಖ್ ಖಾನ್ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
ವಿಜಯ್ ಶಂಕರ್ ಔಟ್
ಗುಜರಾತ್ ಟೈಟಾನ್ಸ್ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. 14ನೇ ಓವರ್‌ನ ಕೊನೆಯ ಎಸೆತದಲ್ಲಿ ಶಂಕರ್ ಔಟಾದರು. ತಂಡದ ಗೆಲುವಿಗೆ 33 ಎಸೆತಗಳಲ್ಲಿ 80 ರನ್‌ಗಳ ಅಗತ್ಯವಿದೆ.
ಗಿಲ್ ಅರ್ಧಶತಕ
ಗಿಲ್ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಅವರ ಟಿ20 ವೃತ್ತಿ ಬದುಕಿನ 24ನೇ ಅರ್ಧಶತಕ. ಸದ್ಯ ಅವರು 36 ಎಸೆತಗಳಲ್ಲಿ 51 ರನ್ ಹಾಗೂ ವಿಜಯ್ ಶಂಕರ್ ಒಂಬತ್ತು ಎಸೆತಗಳಲ್ಲಿ 16 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.
ಮನೋಹರ್ ಔಟ್
ಕುಲದೀಪ್ ಸೇನ್ 11ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅಭಿನವ್ ಮನೋಹರ್ ಅವರನ್ನು ಔಟ್ ಮಾಡಿದರು. ಇದಕ್ಕೂ ಮುನ್ನ ಅವರು ಈ ಓವರ್‌ನಲ್ಲಿ ಮ್ಯಾಥ್ಯೂ ವೇಡ್ ಅವರನ್ನು ಔಟ್ ಮಾಡಿದ್ದರು. ಮನೋಹರ್ ಕೇವಲ ಒಂದು ರನ್ ಗಳಿಸಲಷ್ಟೇ ಶಕ್ತರಾದರು. ವಿಜಯ್ ಶಂಕರ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. 11 ಓವರ್‌ಗಳ ನಂತರ ಗುಜರಾತ್ ಸ್ಕೋರ್ 83/3.
ಎರಡನೇ ವಿಕೆಟ್
ಕುಲದೀಪ್ ಸೇನ್ ಎರಡನೇ ವಿಕೆಟ್ ಉರುಳಿಸಿದ್ದಾರೆ. ಅವರು 11ನೇ ಓವರ್‌ನ ಮೊದಲ ಎಸೆತದಲ್ಲಿ ಮ್ಯಾಥ್ಯೂ ವೇಡ್ ಅವರನ್ನು ಔಟ್ ಮಾಡಿದರು. ಅಭಿನವ್ ಮನೋಹರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
ಮೊದಲ ವಿಕೆಟ್ ಪತನ
ಕುಲದೀಪ್ ಸೇನ್ ಗುಜರಾತ್‌ಗೆ ಮೊದಲ ಹೊಡೆತ ನೀಡಿದರು. ಅವರು ತಮ್ಮ ಮೊದಲ ಓವರ್‌ನಲ್ಲಿ ಸಾಯಿ ಸುದರ್ಶನ್ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಸುದರ್ಶನ್ 35 ರನ್ ಗಳಿಸಿ ಔಟಾದರು. ಮ್ಯಾಥ್ಯೂ ವೇಡ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
ಪವರ್‌ಪ್ಲೇ ಅಂತ್ಯ
ಪವರ್‌ಪ್ಲೇ ಮುಗಿದಿದ್ದು, ಗುಜರಾತ್ ತಂಡದ ಸ್ಕೋರ್ 42/0. ಗಿಲ್ ಮತ್ತು ಸುದರ್ಶನ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಇಬ್ಬರೂ 14 ರನ್ ಗಳಿಸಿದರು.
ಗುಜರಾತ್ ಇನ್ನಿಂಗ್ಸ್ ಪ್ರಾರಂಭ
ಗುಜರಾತ್ ಇನ್ನಿಂಗ್ಸ್ ಆರಂಭವಾಗಿದೆ. ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್ ಗಿಲ್ ಆರಂಭಿಕರಾಗಿ ಕ್ರೀಸ್‌ನಲ್ಲಿದ್ದಾರೆ. ಇಬ್ಬರೂ ಉತ್ತಮ ಫಾರ್ಮ್‌ನಲ್ಲಿರುವಂತೆ ತೋರುತ್ತಿದೆ. ಎರಡು ಓವರ್‌ಗಳ ನಂತರ ತಂಡದ ಸ್ಕೋರ್ 15/0.
197 ರನ್‌ಗಳ ಗುರಿ
ರಾಜಸ್ಥಾನ 20 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 196 ರನ್ ಗಳಿಸಿ ಗುಜರಾತ್‌ಗೆ 197 ರನ್‌ಗಳ ಗುರಿ ನೀಡಿತು.
ಪರಾಗ್ ಔಟ್
ಮೋಹಿತ್ ಶರ್ಮಾ ಎಸೆತದಲ್ಲಿ 76 ರನ್ ಬಾರಿಸಿದ್ದ ರಿಯಾನ್ ಪರಾಗ್ ಔಟಾದರು. ಪರಾಗ್, ಸಂಜು ಸ್ಯಾಮ್ಸನ್ ಅವರೊಂದಿಗೆ 130 ರನ್‌ಗಳ ಜೊತೆಯಾಟವನ್ನು ಮಾಡಿದರು. ಶಿಮ್ರಾನ್ ಹೆಟ್ಮೆಯರ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
ಸಂಜು ಅರ್ಧಶತಕ
ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಐಪಿಎಲ್ 17ನೇ ಸೀಸನ್ನ ಮೂರನೇ ಅರ್ಧಶತಕ ದಾಖಲಿಸಿದ್ದಾರೆ. ಇದರೊಂದಿಗೆ ರಾಜಸ್ಥಾನ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಸದ್ಯ ಅವರು 52 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.
ಶತಕದ ಪಾಲುದಾರಿಕೆ
ರಾಜಸ್ಥಾನ 42 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತ್ತು. ಇದಾದ ನಂತರ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ಇನ್ನಿಂಗ್ಸ್ ಕೈಗೆತ್ತಿಕೊಂಡರು. ಇವರಿಬ್ಬರ ನಡುವೆ ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟ ನಡೆದಿದೆ. ಸಂಜು 28 ಎಸೆತಗಳಲ್ಲಿ 46 ರನ್ ಹಾಗೂ ಪರಾಗ್ 42 ಎಸೆತಗಳಲ್ಲಿ 66 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.
ರಿಯಾನ್ ಪರಾಗ್ ಅರ್ಧಶತಕ
ರಿಯಾನ್ ಪರಾಗ್ ಐಪಿಎಲ್ 17ನೇ ಸೀಸನ್ನಲ್ಲಿ ಮೂರನೇ ಅರ್ಧಶತಕ ದಾಖಲಿಸಿದ್ದಾರೆ. 15 ಓವರ್‌ಗಳ ನಂತರ ತಂಡದ ಸ್ಕೋರ್ 134/2. ರಿಯಾನ್ ಮತ್ತು ಸ್ಯಾಮ್ಸನ್ ನಡುವೆ 92 ರನ್‌ಗಳ ಜೊತೆಯಾಟವಿದೆ.
12 ಓವರ್ ಮುಕ್ತಾಯ
ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ನಡುವೆ ಉತ್ತಮ ಜೊತೆಯಾಟ ಕಂಡುಬರುತ್ತಿದೆ. ಇವರಿಬ್ಬರ ನಡುವೆ 47 ರನ್*ಗಳ ಜೊತೆಯಾಟವಿದೆ. 12 ಓವರ್‌ಗಳ ನಂತರ ತಂಡದ ಸ್ಕೋರ್ 89/2.
ಒಂಬತ್ತು ಓವರ್ ಅಂತ್ಯಕ್ಕೆ 65/2
ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ನಡುವೆ ಉತ್ತಮ ಜೊತೆಯಾಟ ಅರಳುತ್ತಿದೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ನಾಯಕ ಅಜೇಯ 17 ರನ್ ಮತ್ತು ಪರಾಗ್ 15 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ. ಒಂಬತ್ತು ಓವರ್‌ಗಳ ನಂತರ ತಂಡದ ಸ್ಕೋರ್ ಎರಡು ವಿಕೆಟ್ ಕಳೆದುಕೊಂಡು 65 ರನ್‌ಗಳಿಗೆ ತಲುಪಿದೆ.
ಜೈಸ್ವಾಲ್ ಔಟ್
ಉಮೇಶ್ ಯಾದವ್ ಬೌಲಿಂಗ್ನಲ್ಲಿ ರಾಜಸ್ಥಾನ ಮೊದಲ ವಿಕೆಟ್ ಕಳೆದುಕೊಂಡಿದೆ. ಐದನೇ ಓವರ್‌ನ ಎರಡನೇ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಕ್ಯಾಚಿತ್ತು ಔಟಾಗಿದ್ದಾರೆ. ಮೊದಲ ವಿಕೆಟ್‌ಗೆ ಯಶಸ್ವಿ ಮತ್ತು ಬಟ್ಲರ್ ನಡುವೆ 32 ರನ್‌ಗಳ ಜೊತೆಯಾಟವಿತ್ತು. ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
ಮೂರು ಓವರ್ ಮುಕ್ತಾಯ
ಮೂರು ಓವರ್ ಅಂತ್ಯಕ್ಕೆ ರಾಜಸ್ಥಾನದ ಸ್ಕೋರ್ 22/0. ಯಶಸ್ವಿ ಜೈಸ್ವಾಲ್ 15 ಎಸೆತಗಳಲ್ಲಿ 18 ರನ್ ಬಟ್ಲರ್ ಮೂರು ಎಸೆತಗಳಲ್ಲಿ ನಾಲ್ಕು ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.
ರಾಜಸ್ಥಾನದ ಇನ್ನಿಂಗ್ಸ್ ಪ್ರಾರಂಭ
ಟಾಸ್ ಸೋತ ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಲು ಸಜ್ಜಾಗಿದೆ. ಆರಂಭಿಕರಾಗಿ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಕ್ರೀಸ್‌ನಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ ಇಬ್ಬರಿಂದಲೂ ಉತ್ತಮ ಆರಂಭ ನಿರೀಕ್ಷಿಸಲಾಗಿದೆ. ಮೊದಲ ಓವರ್‌ನ ನಂತರ ತಂಡದ ಸ್ಕೋರ್ 6/0.
ರಾಜಸ್ಥಾನ್ ರಾಯಲ್ಸ್
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್/ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಕುಲ್ದೀಪ್ ಸೇನ್, ಯುಜ್ವೇಂದ್ರ ಚಾಹಲ್.
ಗುಜರಾತ್ ಟೈಟಾನ್ಸ್
ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ವಿಜಯ್ ಶಂಕರ್, ಅಭಿನವ್ ಮನೋಹರ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್, ನೂರ್ ಅಹ್ಮದ್, ಮೋಹಿತ್ ಶರ್ಮಾ.
ಟಾಸ್ ಗೆದ್ದ ಗುಜರಾತ್
ಟಾಸ್ ಗೆದ್ದ ಗುಜರಾತ್ ನಾಯಕ ಶುಭ್ಮನ್ ಗಿಲ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ.
ಮಳೆಯಿಂದಾಗಿ ಟಾಸ್ ವಿಳಂಬ
ಇಂದೋರ್ನಲ್ಲಿ ಮಳೆಯಿಂದಾಗಿ ಟಾಸ್ ವಿಳಂಬವಾಗಿದೆ.
ಮುಖಾಮುಖಿ ವರದಿ
ಇದುವರೆಗೆ ಉಭಯ ತಂಡಗಳ ನಡುವೆ ಒಟ್ಟು ಐದು ಪಂದ್ಯಗಳು ನಡೆದಿವೆ. ಈ ಪೈಕಿ ಗುಜರಾತ್ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ರಾಜಸ್ಥಾನ ತಂಡ ಕೇವಲ ಒಂದು ಪಂದ್ಯವನ್ನು ಗೆದ್ದಿದೆ.
Published On - Apr 10,2024 7:00 PM