ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ಪ್ರದರ್ಶನ ನೀಡಿ ಆರು ವಿಕೆಟ್‌ಗಳಿಂದ ಆರ್‌ಸಿಬಿಯನ್ನು ಮೊದಲ ಪಂದ್ಯದಲ್ಲಿ ಸೋಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿತು. ಅನುಜ್ ರಾವತ್ ಗರಿಷ್ಠ 48 ರನ್ ಗಳಿಸಿದರು. ಇದಕ್ಕುತ್ತರವಾಗಿ ಸಿಎಸ್ ಕೆ 18.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಗೆಲುವು ಸಾಧಿಸಿತು.
ಸಿಎಸ್‌ಕೆ ಗೆಲುವಿಗೆ 30 ಎಸೆತಗಳಲ್ಲಿ 46 ರನ್ಗಳ ಅಗತ್ಯವಿದೆ. ಕ್ರೀಸ್‌ನಲ್ಲಿ ಶಿವಂ ದುಬೆ ಹಾಗೂ ರವೀಂದ್ರ ಜಡೇಜಾ ಇದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್‌ಗೆ ಆರ್‌ಸಿಬಿ ನಾಲ್ಕನೇ ಹೊಡೆತ ನೀಡಿದೆ. ಕ್ಯಾಮರೂನ್ ಗ್ರೀನ್ ಆರ್‌ಸಿಬಿಗೆ ಮತ್ತೊಂದು ಯಶಸ್ಸು ತಂದುಕೊಟ್ಟಿದ್ದಾರೆ. ಗ್ರೀನ್ 22 ರನ್ ಗಳಿಸಿದ್ದ ಡೆರಿಲ್ ಮಿಚೆಲ್ ಅವರನ್ನು ಔಟ್ ಮಾಡಿದ್ದಾರೆ. ಇನ್ನು ಚೆನ್ನೈ ಗೆಲುವಿಗೆ 40 ಎಸೆತಗಳಲ್ಲಿ 62 ರನ್ ಗಳಿಸಬೇಕಿದೆ.
ಅಜಿಂಕ್ಯ ರಹಾನೆ ರೂಪದಲ್ಲಿ ಚೆನ್ನೈಗೆ ಮೂರನೇ ಹೊಡೆತ ಬಿದ್ದಿದೆ. ಅವರು 19 ಎಸೆತಗಳಲ್ಲಿ ಎರಡು ಸಿಕ್ಸರ್‌ಗಳ ನೆರವಿನಿಂದ 27 ರನ್ ಗಳಿಸಿ ಗ್ರೀನ್ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಶಿವಂ ದುಬೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಅವರು ಪ್ರಭಾವಿ ಆಟಗಾರ. 12 ಓವರ್‌ಗಳ ನಂತರ ತಂಡದ ಸ್ಕೋರ್ 109/3.
ರಚಿನ್ ರವೀಂದ್ರ 35 ರನ್ ಗಳಿಸಿ ಕರ್ಣ್ ಶರ್ಮಾ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಈ ವೇಳೆ ಅವರ ಬ್ಯಾಟ್‌ನಿಂದ ಮೂರು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಬಂದವು. ಸದ್ಯ ಅಜಿಂಕ್ಯ ರಹಾನೆ ಕ್ರೀಸ್‌ನಲ್ಲಿ ನಿಂತಿದ್ದಾರೆ. ಡೇರಿಲ್ ಮಿಚೆಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಏಳು ಓವರ್‌ಗಳ ನಂತರ ತಂಡದ ಸ್ಕೋರ್ 71/2.
ಸಿಎಸ್ಕೆಯ ಮೊದಲ ವಿಕೆಟ್ ಪತನವಾಗಿದೆ, ನಾಯಕ ರುತುರಾಜ್ ಗಾಯಕ್ವಾಡ್ ಮೂರು ಬೌಂಡರಿಗಳ ನೆರವಿನಿಂದ 15 ರನ್ ಗಳಿಸಿ ಔಟಾದರು. ಮೊದಲ ವಿಕೆಟ್‌ಗೆ ರುತುರಾಜ್ ಮತ್ತು ರಚಿನ್ ರವೀಂದ್ರ ನಡುವೆ 38 ರನ್‌ಗಳ ಜೊತೆಯಾಟವಿತ್ತು. ಅಜಿಂಕ್ಯ ರಹಾನೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
ಆರ್ಸಿಬಿ ನೀಡಿದ 174 ರನ್‌ಗಳ ಗುರಿ ಬೆನ್ನತ್ತಲು ಚೆನ್ನೈ ಸಜ್ಜಾಗಿದೆ. ರುತುರಾಜ್ ಗಾಯಕ್ವಾಡ್ ಮತ್ತು ರಚಿನ್ ರವೀಂದ್ರ ಬ್ಯಾಟಿಂಗ್ ಆರಂಭಿಸಿದ್ದಾರೆ. ಮೊದಲ ಓವರ್‌ನಲ್ಲಿ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ಎಂಟು ರನ್ ಗಳಿಸಿತ್ತು.
ಐಪಿಎಲ್‌ನ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಸಿಎಸ್‌ಕೆಗೆ 174 ರನ್‌ಗಳ ಟಾರ್ಗೆಟ್ ನೀಡಿದೆ.
ಅನುಜ್ ರಾವತ್ ಮತ್ತು ದಿನೇಶ್ ಕಾರ್ತಿಕ್ ಆರ್‌ಸಿಬಿಗೆ ಟ್ರಬಲ್ ಶೂಟರ್ ಎಂದು ಸಾಬೀತುಪಡಿಸಿದ್ದಾರೆ. ಇಬ್ಬರ ನಡುವೆ ಇದುವರೆಗೆ 50ಕ್ಕೂ ಹೆಚ್ಚು ರನ್ಗಳ ಜೊತೆಯಾಟ ನಡೆದಿದೆ. 78 ರನ್ ಗಳಿಸುವಷ್ಟರಲ್ಲಿ ತಂಡದ ಐದು ವಿಕೆಟ್‌ಗಳು ಬಿದ್ದಿದ್ದವು. ಆದರೆ ಆರು ಮತ್ತು ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಅನುಜ್ ಮತ್ತು ಕಾರ್ತಿಕ್ ಪ್ರಬಲ ಪ್ರದರ್ಶನ ತೋರುತ್ತಿದ್ದಾರೆ. 19 ಓವರ್‌ಗಳ ನಂತರ ತಂಡದ ಸ್ಕೋರ್ 165/5.
ವಿರಾಟ್ ಕೊಹ್ಲಿ ಬಳಿಕ ಆರ್‌ಸಿಬಿಯ ದುಬಾರಿ ಆಟಗಾರ ಕ್ಯಾಮರೂನ್ ಗ್ರೀನ್ ಕೂಡ ಪೆವಿಲಿಯನ್‌ಗೆ ಮರಳಿದ್ದಾರೆ. ಗ್ರೀನ್ ಕೂಡ ಮುಸ್ತಾಫಿಜೂರ್ಗೆ ಬಲಿಯಾದರು
21 ರನ್ ಗಳಿಸಿ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ್ದಾರೆ. ಇದರೊಂದಿಗೆ ಆರ್‌ಸಿಬಿಯ 4ನೇ ವಿಕೆಟ್ ಪತನವಾಗಿದೆ. ಅವರು ನಾಯಕ ಫಾಫ್ ಡು ಪ್ಲೆಸಿಸ್ ಜೊತೆ ಮೊದಲ ವಿಕೆಟ್‌ಗೆ 41 ರನ್‌ಗಳ ಜೊತೆಯಾಟ ನಡೆಸಿದರು. ಇದರ ನಂತರ ಅವರು ಕ್ಯಾಮರೂನ್ ಗ್ರೀನ್ ಜೊತೆ 35 ರನ್ಗಳ ಜೊತೆಯಾಟವನ್ನು ಮಾಡಿದರು.
ಸಿಎಸ್‌ಕೆ ವಿರುದ್ಧ ಅಜೇಯ 21 ರನ್ ಗಳಿಸಿ ಆಡುತ್ತಿರುವ ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ 12000 ರನ್ ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಐಪಿಎಲ್‌ನ ಮೊದಲ ಪಂದ್ಯದಲ್ಲೇ ಆರ್‌ಸಿಬಿಯ ಬ್ಯಾಟಿಂಗ್ ಕ್ರಮಾಂಕ ಕುಸಿದಿದೆ. ನಾಯಕ ಫಾಫ್ ಡುಪ್ಲೆಸಿಸ್ 35 ರನ್ ಗಳಿಸಿ ಔಟಾದರೆ, ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ರಜತ್ ಪಾಟಿದಾರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ಸದ್ಯ ವಿರಾಟ್ ಕೊಹ್ಲಿ 12 ಎಸೆತಗಳಲ್ಲಿ 11 ರನ್ ಹಾಗೂ ಕ್ಯಾಮರೂನ್ ಗ್ರೀನ್ 15 ಎಸೆತಗಳಲ್ಲಿ 1 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಒಂಬತ್ತು ಓವರ್‌ಗಳ ನಂತರ ತಂಡದ ಸ್ಕೋರ್ 63/3.
ಪವರ್ ಪ್ಲೇನಲ್ಲಿ ಆರ್ಸಿಬಿ ತಂಡ ಸಂಪೂರ್ಣ ಕುಸಿದಿದೆ. ಬೆಂಗಳೂರು ಪವರ್‌ಪ್ಲೇಯಲ್ಲಿಯೇ ತನ್ನ 3 ಅಪಾಯಕಾರಿ ಬ್ಯಾಟರ್ಗಳನ್ನು ಕಳೆದುಕೊಂಡಿದೆ. 6 ಓವರ್‌ಗಳ ನಂತರ ಆರ್ಸಿಬಿ ಸ್ಕೋರ್ 3 ವಿಕೆಟ್‌ಗೆ 42 ರನ್ ಆಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರನೇ ಹಿನ್ನಡೆ ಅನುಭವಿಸಿದೆ. ಆರ್‌ಸಿಬಿಯ ಅಪಾಯಕಾರಿ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಗೋಲ್ಡನ್ ಡಕ್ ಆದರು. ಈ ಪರಿಸ್ಥಿತಿಯಲ್ಲಿ ಆರ್‌ಸಿಬಿಗೆ ಮ್ಯಾಕ್ಸ್‌ವೆಲ್ ತುಂಬಾ ಅಗತ್ಯವಿತ್ತು, ಆದರೆ ಅವರು ಶೂನ್ಯ ಸ್ಕೋರ್‌ನಲ್ಲಿ ಔಟಾದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಹೊಡೆತ ನೀಡಿದೆ. ಮುಸ್ತಾಫಿಜುರ್ ರೆಹಮಾನ್ ಒಂದೇ ಓವರ್‌ನಲ್ಲಿ ಬೆಂಗಳೂರಿಗೆ ಎರಡು ಹೊಡೆತ ನೀಡಿದರು. ಮೊದಲು ಫಾಫ್ ಅವರನ್ನು ಔಟ್ ಮಾಡಿದ ಅವರು ನಂತರ ರಜತ್ಗೆ ಪೆವಿಲಿಯನ್ ಹಾದಿ ತೋರಿಸಿದರು.
ಆರ್‌ಸಿಬಿಯ ಮೊದಲ ವಿಕೆಟ್ ಪತನವಾಗಿದೆ. ನಾಯಕ ಡುಪ್ಲೆಸಿಸ್ 23 ಎಸೆತಗಳಲ್ಲಿ 8 ಬೌಂಡರಿ ಸಹಿತ 35 ರನ್ ಕಲೆಹಾಕಿ ಕ್ಯಾಚಿತ್ತು ಔಟಾದರು.
ಚೆನ್ನೈ ವಿರುದ್ಧ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಎದುರಾಳಿ ತಂಡದ ವಿರುದ್ಧ ಆಕ್ರಮಣಕಾರಿ ನಿಲುವು ತಳೆಯುವ ಮೂಲಕ ಮೊದಲ 3 ಓವರ್‌ನಲ್ಲಿ ತಂಡದ ಸ್ಕೋರ್ ಅನ್ನು 30 ರನ್‌ಗಳ ಗಡಿ ದಾಟಿಸಿದರು. ಚೆನ್ನೈ ಪರ ಮೂರನೇ ಓವರ್ ಬೌಲ್ ಮಾಡಲು ಬಂದ ದೀಪಕ್ ಚಹಾರ್ ಅವರ ಓವರ್‌ನಲ್ಲಿ ಅವರು 17 ರನ್ ಗಳಿಸಿದರು.
ಸದ್ಯ ಕ್ರೀಸ್‌ನಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಇದ್ದಾರೆ. ಎರಡು ಓವರ್‌ಗಳ ನಂತರ ತಂಡದ ಸ್ಕೋರ್ 16 ರನ್ ಆಗಿದೆ.
ಚೆನ್ನೈ ವಿರುದ್ಧ ಆರ್‌ಸಿಬಿ ಬ್ಯಾಟಿಂಗ್ ಆರಂಭಿಸಿದೆ. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಆರ್‌ಸಿಬಿಗೆ ಓಪನಿಂಗ್ ಮಾಡಲು ಮೈದಾನಕ್ಕೆ ಬಂದಿದ್ದಾರೆ. ಮೊದಲ ಓವರ್‌ನಲ್ಲಿ ಫಾಫ್ ಬೌಂಡರಿ ಕೂಡ ಹೊಡೆದರು.
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅನುಜ್ ರಾವತ್, ಕರ್ಣ್ ಶರ್ಮಾ, ಅಲ್ಜಾರಿ ಜೋಸೆಫ್, ಮಯಾಂಕ್ ದಾಗರ್, ಮೊಹಮ್ಮದ್ ಸಿರಾಜ್.
ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಾಹರ್, ಮಹೇಶ್ ತೀಕ್ಷಣ, ಮುಸ್ತಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ.
ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಜೊತೆಗೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಕೂಡ ಹೊರಬಿದ್ದಿದೆ.
ಐಪಿಎಲ್ 17ನೇ ಸೀಸನ್‌ಗೂ ಮುನ್ನ ವರ್ಣರಂಜಿತ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಆ ನಂತರ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಸೋನು ನಿಗಮ್, ಎಆರ್ ರೆಹಮಾನ್, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ, ಅರುಣ್ ಧುಮಾಲ್, ರಾಜೀವ್ ಶುಕ್ಲಾ, ಆರ್‌ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ವೇದಿಕೆಯಲ್ಲಿ ಜಮಾಯಿಸಿದರು. ಅಂತಿಮವಾಗಿ, ಸಿಎಸ್‌ಕೆ ಪರ ಹೊಸದಾಗಿ ಆಯ್ಕೆಯಾದ ನಾಯಕ ರುತುರಾಜ್ ಗಾಯಕ್ವಾಡ್ ಐಪಿಎಲ್ ಟ್ರೋಫಿಯನ್ನು ವೇದಿಕೆಯ ಮೇಲಿರಿಸಿದರು. ಆ ಬಳಿಕ ಪಟಾಕಿ ಸಿಡಿಸುವ ಮೂಲಕ ಉದ್ಘಾಟನಾ ಸಮಾರಂಭಕ್ಕೆ ಅಂತ್ಯ ಹಾಡಲಾಯಿತು.
ಎಆರ್ ರೆಹಮಾನ್ ಅವರು ಇಡೀ ತಂಡದೊಂದಿಗೆ ಜೈ ಹೋ ಹಾಡನ್ನು ಹಾಡಿದರು. ಈ ಹಾಡು ಆಸ್ಕರ್ ಪ್ರಶಸ್ತಿಯನ್ನೂ ಗಳಿಸಿದೆ. ಈ ಹಾಡಿನೊಂದಿಗೆ, ರೆಹಮಾನ್, ಮೋಹಿತ್ ಚೌಹಾಣ್ ಮತ್ತು ನೀತಿ ಮೋಹನ್ ಅವರನ್ನೊಳಗೊಂಡ ಬ್ಯಾಂಡ್‌ನ ಪ್ರದರ್ಶನ ಮತ್ತು ಉದ್ಘಾಟನಾ ಸಮಾರಂಭವು ಕೊನೆಗೊಂಡಿತು.
𝗣𝗼𝘄𝗲𝗿𝗵𝗼𝘂𝘀𝗲 💥@iTIGERSHROFF starts the #TATAIPL Opening Ceremony with his energetic performance 😍👏 pic.twitter.com/8HsssiKNPO
— IndianPremierLeague (@IPL) March 22, 2024
ನೀತಿ ಮೋಹನ್ ಕೂಡ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅವರು ಬರ್ಸೋ ರೇ ಮೇಘಾ-ಮೇಘಾ ಹಾಡಿಗೆ ಪ್ರದರ್ಶನ ನೀಡಿದರು. ಮತ್ತೊಬ್ಬ ಮಹಿಳಾ ಗಾಯಕಿ ಅವರನ್ನು ಬೆಂಬಲಿಸಿದರು. ಇಬ್ಬರೂ ತಮ್ಮ ಅಭಿನಯದ ಮೂಲಕ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಮನ ಗೆದ್ದರು.
ಸೋನು ನಿಗಮ್ ನಂತರ, ಎಆರ್ ರೆಹಮಾನ್ ಮಾ ತುಜೆ ಸಲಾಮ್ ಹಾಡಿನ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು
ಬಾಲಿವುಡ್ನ ಖ್ಯಾತ ಗಾಯ ಸೋನ್ ನಿಗಮ್ ವಂದೇ ಮಾತರಂ ಗೀತೆಯೊಂದಿಗೆ ತಮ್ಮ ಪ್ರದರ್ಶನ ಆರಂಭಿಸಿದ್ದಾರೆ.
ವಿವಿದ ಬಾಲಿವುಡ್ ಹಾಡುಗಳಿಗೆ ನೃತ್ಯ ಪ್ರದರ್ಶನ ನೀಡುತ್ತಿರುವ ಅಕ್ಷಯ್ ಕುಮಾರ್,ಟೈಗರ್ ಶ್ರಾಫ್
Lets Go 🙌🔥
IPL 2024 ❤️#IPL24 #IPLOpeningCeremony #RCBvCSK pic.twitter.com/V1w7LdDOm4— Tanay (@tanay_chawda1) March 22, 2024
ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆಲವೇ ಕ್ಷಣಗಳಲ್ಲಿ ಅಕ್ಷಯ್ ಕುಮಾರ್, ಸೋನು ನಿಗಮ್ ಅವರಂತಹ ಕಲಾವಿದರು ಪ್ರದರ್ಶನ ನೀಡಲಿದ್ದಾರೆ.
The stage is set, the lights are bright, and the stars are ready to shine at the #TATAIPL 2024 Opening Ceremony! 🎉🥳
Get ready for an unforgettable fusion of cricket and entertainment ft. a stellar lineup! ✨
🗓22nd March
⏰6:30 PM onwards pic.twitter.com/7POPthFITx— IndianPremierLeague (@IPL) March 20, 2024
ಸಂಜೆ 6.30ಕ್ಕೆ ಉದ್ಘಾಟನಾ ಸಮಾರಂಭ ಆರಂಭವಾಗಲಿದೆ. ಆ ಬಳಿಕ ರಾತ್ರಿ 8 ಗಂಟೆಗೆ ಮೊದಲ ಪಂದ್ಯ ಆರಂಭವಾಗಲಿದೆ.
ಕ್ರಿಕೆಟ್ ಆಕ್ಷನ್ ಪ್ರಾರಂಭವಾಗುವ ಮೊದಲು ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಎಆರ್ ರೆಹಮಾನ್, ಅಕ್ಷಯ್ ಕುಮಾರ್ ಮತ್ತು ಸೋನು ನಿಗಮ್ ಮುಂತಾದ ತಾರೆಯರು ಪ್ರದರ್ಶನ ನೀಡಲಿದ್ದಾರೆ.
ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಚೆಪಾಕ್ ಸ್ಟೇಡಿಯಂ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ತಾಲೀಮು ಮುಗಿದಿದೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
First time ever,
South people are going to see REAL RAW LIVE Action 🤯 #IPLOpeningCeremonyPower of #AkshayKumar 💥
#BadeMiyanChoteMiyan pic.twitter.com/owRzCaTUqT— M A 𝕏 A L U 🗡️ (@YourMasalu) March 22, 2024
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 17ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಆತಿಥೇಯ ಚೆನ್ನೈ 6 ವಿಕೆಟ್‌ಗಳಿಂದ ಬೆಂಗಳೂರು ತಂಡವನ್ನು ಸೋಲಿಸಿ ಲೀಗ್ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಇದರೊಂದಿಗೆ ಆರ್ಸಿಬಿ ವಿರುದ್ಧ ತನ್ನ ಪಾರುಪತ್ಯವನ್ನು ಮುಂದುವರೆಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿತು. ಅನುಜ್ ರಾವತ್ ಗರಿಷ್ಠ 48 ರನ್ ಗಳಿಸಿದರು. ಇದಕ್ಕುತ್ತರವಾಗಿ ಸಿಎಸ್ ಕೆ 18.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಗೆಲುವು ಸಾಧಿಸಿತು.
Published On - 5:33 pm, Fri, 22 March 24