ಬಿಡದಿ ಮ್ಯಾರಥಾನ್, ಐಪಿಎಲ್ ಪಂದ್ಯಾವಳಿ ವೀಕ್ಷಕರಿಗಾಗಿ ನಮ್ಮ ಮೆಟ್ರೋ ಅವಧಿ ವಿಸ್ತರಣೆ: ಇಲ್ಲಿದೆ ಟೈಮಿಂಗ್

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 24, 29, ಏ.2ರಂದು ಐಪಿಎಲ್ ಪಂದ್ಯಾವಳಿ ಹಿನ್ನೆಲೆ ವೀಕ್ಷಕರಿಗಾಗಿ ನಮ್ಮ ಮೆಟ್ರೋ ಸೇವೆಯನ್ನು ರಾತ್ರಿ 11.30ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿಯಾಗಿ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಹಾಫ್ ಮ್ಯಾರಥಾನ್​ನಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ ಭಾನುವಾರ ಬೆಳಗ್ಗೆ 7ರ ಬದಲು ಮುಂಜಾನೆ 4ರಿಂದ ಮೆಟ್ರೋ ಸೇವೆ ಆರಂಭಗೊಳ್ಳಲಿದೆ.

ಬಿಡದಿ ಮ್ಯಾರಥಾನ್, ಐಪಿಎಲ್ ಪಂದ್ಯಾವಳಿ ವೀಕ್ಷಕರಿಗಾಗಿ ನಮ್ಮ ಮೆಟ್ರೋ ಅವಧಿ ವಿಸ್ತರಣೆ: ಇಲ್ಲಿದೆ ಟೈಮಿಂಗ್
ನಮ್ಮ ಮೆಟ್ರೋ (ಸಂಗ್ರಹ ಚಿತ್ರ)
Follow us
Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on:Mar 22, 2024 | 5:29 PM

ಬೆಂಗಳೂರು, ಮಾರ್ಚ್​​ 22: ಭಾನುವಾರ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಹಾಫ್ ಮ್ಯಾರಥಾನ್ ಆಯೋಜನೆ ಮಾಡಲಾಗಿದ್ದು, ಮ್ಯಾರಥಾನ್​ನಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ ಭಾನುವಾರದಂದು ತನ್ನ ಎಲ್ಲಾ ನಾಲ್ಕು ಟರ್ಮಿನಲ್​ಗಳಿಂದ ಮತ್ತು ಇಂಟರ್​ಚೇಂಜ್​​ ಸ್ಟೇಷನ್​​ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ- ಮೆಜೆಸ್ಟಿಕ್​ನಿಂದ ಬೆಳಗ್ಗೆ 7ರ ಬದಲು ಮುಂಜಾನೆ 4ರಿಂದ ಮೆಟ್ರೋ (Namma Metro) ಸೇವೆ ಆರಂಭಗೊಳ್ಳಲಿದೆ. ಅದೇ ರೀತಿಯಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 24, 29, ಏ.2ರಂದು ಐಪಿಎಲ್ ಪಂದ್ಯಾವಳಿ ಹಿನ್ನೆಲೆ ವೀಕ್ಷಕರಿಗಾಗಿ ನಮ್ಮ ಮೆಟ್ರೋ ಕೊನೆಯ ಸೇವೆಯನ್ನು ರಾತ್ರಿ 11.30ರವರೆಗೆ ವಿಸ್ತರಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

IPL ಪಂದ್ಯ ನಡೆಯುವ ದಿನ ಮಧ್ಯಾಹ್ನ 2 ಗಂಟೆಯಿಂದ ರಿಟರ್ನ್ ಜರ್ನಿ ಸೇರಿ 50 ರೂ.ಗೆ ಪೇಪರ್ ಟಿಕೆಟ್ ಖರೀದಿಸಿ ಕಬ್ಬನ್​ಪಾರ್ಕ್, ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಸಬಹುದು. ರಾತ್ರಿ 8 ಗಂಟೆಯಿಂದ ದಿನದ ಸೇವೆ ಕೊನೆಗೊಳ್ಳುವವರೆಗೆ ಮಾನ್ಯವಾಗಿರುತ್ತೆ.

ನಮ್ಮ ಮೆಟ್ರೋ ಟ್ವೀಟ್​​

ಕಬ್ಬನ್​ಪಾರ್ಕ್, ಎಂ.ಜಿ.ರಸ್ತೆ ನಿಲ್ದಾಣದಲ್ಲಿ ಟೋಕನ್ ಲಭ್ಯವಿರುವುದಿಲ್ಲ. ಕ್ಯೂಆರ್​​ ಕೋಡ್ ಟಿಕೆಟ್, ಸ್ಮಾರ್ಟ್ ಕಾರ್ಡ್, ಎನ್​​​ಸಿಎಂಸಿ ಕಾರ್ಡ್ ಬಳಸಬಹುದಾಗಿದೆ. ಆ ಮೂಲಕ ಟಿಕೆಟ್ ಕೌಂಟರ್​ನಲ್ಲಿ ಜನಸಂದಣಿ ತಪ್ಪಿಸಲು ಬಿಎಂಆರ್​ಸಿಎಲ್​ನಿಂದ ಕ್ರಮಕೈಗೊಳ್ಳಲಾಗಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಲು ನಮ್ಮ ಮೆಟ್ರೋ ಸೂಚಿಸಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್​​​​​​ಫಾರ್ಮ್​​ ಸ್ಕ್ರೀನ್​ ಡೋರ್​​,​ ಗೇಟ್ ಅಳವಡಿಕೆ ಒತ್ತಡ

ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಗೆ ಇಂದು ಚಾಲನೆ ಸಿಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಫಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ತಂಡ ಮುಖಾಮುಖಿ ಆಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:16 pm, Fri, 22 March 24