ಕಾಂಗ್ರೆಸ್ ಸೇರಲು ಮುಂದಾಗಿದ್ದ ಮಾಧುಸ್ವಾಮಿ ಮನವೊಲಿಸಿದ ಬಿಎಸ್​​ವೈ, ಆದ್ರೂ ಸೋಮಣ್ಣಗೆ ಬೆಂಬಲವಿಲ್ಲ

ಕಲ್ಪತರು ನಾಡು ತುಮಕೂರು ಲೋಕಸಭಾ ಕ್ಷೇತ್ರದ ಬಂಡಾಯ ಬಿಜೆಪಿಗೆ ಬಿಸಿ ತುಪ್ಪವಾಗಿದ್ದು, ನುಂಗಲು ಆಗದೇ, ಉಗಿಯಲು ಆಗದೆ ಹಿಂಸೆ ಅನುಭವಿಸುತ್ತಿದೆ. ಇಬ್ಬಿಬ್ಬರು ಮಾಜಿ ಸಚಿವರ ಟಿಕೆಟ್ ಪೈಪೋಟಿಯಲ್ಲಿ ವಿ ಸೋಮಣ್ಣ ಟಿಕೆಟ್ ಗಳಿಸಿರುವುದನ್ನು ಮಾಜಿ ಸಚಿವ ಸ್ಥಳೀಯ ಜೆಸಿ ಮಾಧುಸ್ವಾಮಿಗೆ ನುಂಗಲಾರದ ತುತ್ತಾಗಿದೆ. ಇನ್ನು ಬಿಜೆಪಿ ತೊರೆಯಲು ಮುಂದಾಗಿದ್ದ ಜೆಸಿ ಮಾಧುಸ್ವಾಮಿ ಅವರನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಸಹ ಸೋಮಣ್ಣ ವಿರುದ್ಧದ ಅಸಮಾಧಾನ ಮಾತ್ರ ತಣ್ಣಗಾಗಿಲ್ಲ.

ಕಾಂಗ್ರೆಸ್ ಸೇರಲು ಮುಂದಾಗಿದ್ದ ಮಾಧುಸ್ವಾಮಿ ಮನವೊಲಿಸಿದ ಬಿಎಸ್​​ವೈ, ಆದ್ರೂ ಸೋಮಣ್ಣಗೆ ಬೆಂಬಲವಿಲ್ಲ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Mar 22, 2024 | 5:40 PM

ತುಮಕೂರು, (ಮಾರ್ಚ್ 22): ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ ಕೈತಪ್ಪಿದ್ದಕ್ಕೆ ಮಾಜಿ ಸಚಿವ ಜೆಸಿ ಮಾಧುಸ್ವಾಮಿ (JC Madhuswamy) ಅಸಮಾಧಾನಗೊಂಡಿದ್ದು, ಕಾಂಗ್ರೆಸ್​ನತ್ತ ಮುಖ ಮಾಡಿದ್ದರು. ಆದ್ರೆ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ(bs yediyurappa) ಪ್ರವೇಶ ಮಾಡಿ ಮಾಧುಸ್ವಾಮಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು (ಮಾರ್ಚ್ 22) ತುಮಕೂರು ಜಿಲ್ಲೆ ತುರುವೇಕೆರೆ ಹೊರವಲಯದಲ್ಲಿರುವ ಮಾಜಿ ಶಾಸಕ ಮಸಾಲ ಜಯರಾಂ ತೋಟದ ಮನೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಮಾಧುಸ್ವಾಮಿ ಅವರನ್ನು ಬಿಎಸ್​ವೈ ಸಮಾಧಾನಪಡಿಸಿದ್ದಾರೆ. ಇದರೊಂದಿಗೆ ಮಾಧುಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವುದನ್ನು ತಡೆದಿದ್ದಾರೆ. ಆದ್ರೆ, ಮಾಧುಸ್ವಾಮಿ ಮುನಿಸು ಮಾತ್ರ ತಣ್ಣಗಾಗಿಲ್ಲ. ಹೌದು…ಬಿಜೆಪಿ ಅಭ್ಯರ್ಥಿ ಸೋಮಣ್ಣಗೆ ಬೆಂಬಲ ಇಲ್ಲ ಎಂದಿದ್ದಾರೆ.

ಸಂಧಾನ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಾಧುಸ್ವಾಮಿ, ಯಡಿಯೂರಪ್ಪ ಹೇಳಿದ್ದಕ್ಕೆ ನಾನು ಚುನಾವಣೆಗೆ ರೆಡಿಯಾಗಿದ್ದೆ.ಬಿಎಸ್​ವೈರನ್ನು ಬೆಂಬಲಿಸಿ ಜೆಡಿಯು ಬಿಟ್ಟು ಬಿಜೆಪಿಗೆ ಹೋಗಿದ್ದು. ಈಗ ಬಿ.ಎಸ್​.ಯಡಿಯೂರಪ್ಪ ಪಕ್ಷ ಬಿಡೋದು ಬೇಡ ಎಂದಿದ್ದಾರೆ. ಒಂದು ಬರುತ್ತೆ ಹೋಗುತ್ತೆ ಎಂದಿದ್ದಾರೆ, ಅದಕ್ಕೆ ಸುಮ್ಮನಾಗುತ್ತೇನೆ. ಪಕ್ಷ ಬಿಡಲು ಪ್ಲಾನ್ ಮಾಡಿದ್ದೆ, ಈ ಬಗ್ಗೆ ಬಿಎಸ್​ವೈಗೂ ಹೇಳಿದ್ದೆ. ಯಡಿಯೂರಪ್ಪ ಜತೆ ಪಕ್ಷದ ವಿಚಾರವಷ್ಟೇ ಚರ್ಚೆ ಆಗಿದೆ. ಸೋಮಣ್ಣಗೆ ಬೆಂಬಲ ನೀಡುವ ಬಗ್ಗೆ ಚರ್ಚೆ ಆಗಿಲ್ಲ. ಈ ಬಗ್ಗೆ ಒತ್ತಡ ಹಾಕಬೇಡಿ ಎಂದು ಯಡಿಯೂರಪ್ಪಗೆ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಮಾಧುಸ್ವಾಮಿ ಅವರು ಸೋಮಣ್ಣಗೆ ಬೆಂಬಲ ಇಲ್ಲ ಎನ್ನುವ ಅರ್ಥದಲ್ಲಿ ಹೇಳಿದರು.

ಇದನ್ನೂ ಓದಿ: ಮೈತ್ರಿ ಅಸಮಾಧಾನ ಸರಿಪಡಿಸಲು ಬಿಜೆಪಿ ಹೈಕಮಾಂಡ್ ಕಸರತ್ತು: ಮೈಸೂರಿನಲ್ಲಿ ಮೋದಿ, ದೇವೇಗೌಡ ಬಹಿರಂಗ ಸಭೆಗೆ ಚಿಂತನೆ

ಯಡಿಯೂರಪ್ಪ ಪಕ್ಷ ಬಿಡಬೇಡಿ ಅಂದಿದ್ದಾರೆ. ಆಯ್ತು ಅಂದಿದ್ದೇನೆ. ಸದ್ಯಕ್ಕೆ ಪಕ್ಷ ಬಿಡಲ್ಲ ಯಡಿಯೂರಪ್ಪಗೂ ನಮಗೂ ಪಕ್ಷದ ವಿಚಾರ ಅಷ್ಟೇ ಚರ್ಚೆ. ಸೋಮಣ್ಣರಿಗೆ ಬೆಂಬಲ ನೀಡೊದು ಚರ್ಚೆ ಆಗಿಲ್ಲ. ಈ ಚುನಾವಣೆ ಬಗ್ಗೆ ಒತ್ತಡ ಹಾಕಬೇಡಿ ಎಂದು ಯಡಿಯೂರಪ್ಪಗೆ ಹೇಳಿದ್ದೆ‌ನೆ. ನೋಡೊಣ ಬಿಡಿ ಇನ್ನೂ ಒಂದು ತಿಂಗಳ ಸಮಯ ಇದೆ ಎಂದಿದ್ದಾರೆ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಹೇಳಿದ್ದೇನು?

ಇನ್ನು ಇದೇ ವೇಳೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಜೆ.ಸಿ.ಮಾಧುಸ್ವಾಮಿ ಗೊಂದಲದಲ್ಲಿ ಇದ್ದರೂ ನಾನು ಬಂದಿದ್ದೇನೆ. ಮುಂದೆ ಜೆ.ಸಿ.ಮಾಧುಸ್ವಾಮಿಗೆ ಒಳ್ಳೆಯ ಸ್ಥಾನಮಾನ ಸಿಗಲಿದೆ. ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಪಕ್ಷ ಬಿಡಲ್ಲ. ಸೋಮಣ್ಣ ಪರ ಕೆಲಸ ಮಾಡೋದು ಮಾಧುಸ್ವಾಮಿಗೆ ಬಿಟ್ಟದ್ದು,ಬೇಸರ ಮಾಡಿಕೊಂಡಿದ್ದರೂ ಸರಿಪಡಿಸಬೇಕೆಂದು ಬಂದಿದ್ದೇನೆ. ನಾನು ಪಕ್ಷ ಬಿಡಲ್ಲ ಎಂದು ಹೇಳಿದ್ದಾರೆ. ಇದರಿಂದ ಖುಷಿ ಆಗಿದೆ. ಟಿಕೆಟ್ ಹಂಚಿಕೆ ಮಾಡಿದ್ದು ರಾಷ್ಟ್ರೀಯ ನಾಯಕರು, ನಾವಲ್ಲ ಎಂದು ಸ್ಪಷ್ಟಪಡಿಸಿದರು.

ಒಟ್ಟಿನಲ್ಲಿ ಯಡಿಯೂರಪ್ಪ ಅವರು ಮಾಧುಸ್ವಾಮಿ ಅವರನ್ನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಸೋಮಣ್ಣಗೆ ಬೆಂಬಲಿಸುವಂತೆ ಒಂದು ಮಾತು ಸಹ ಹೇಳಿಲ್ವಂತೆ. ಹೀಗಾಗಿ ತುಮಕೂರಿನಲ್ಲಿ ಬಿಜೆಪಿಗೆ ಒಳ ಏಟು ತಪ್ಪಿದ್ದಲ್ಲ.

ರಾಜ್ಯದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್