ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್​​​​​​ಫಾರ್ಮ್​​ ಸ್ಕ್ರೀನ್​ ಡೋರ್​​,​ ಗೇಟ್ ಅಳವಡಿಕೆ ಒತ್ತಡ

ಗುರುವಾರ ನಮ್ಮ ಮೆಟ್ರೋದಲ್ಲಿ ಸಂಭವಿಸಿದ ಆತ್ಮಹತ್ಯೆ ಘಟನೆ ಸೇರಿದಂತೆ ಕಳೆದ ಜನವರಿಯಿಂದ ಇಲ್ಲಿವರೆಗೆ ಜನರು ಮೆಟ್ರೋ ಹಳಿಗಿಳಿದ ಐದು ಪ್ರಕರಣಗಳು ನಡೆದಿವೆ. ಇಷ್ಟು ಅವಘಡಗಳು ಸಂಭವಿಸಿದ ಮೇಲೂ PSD ಅಥವಾ PSG ಅಳವಡಿಸದ ಬಿಎಂಆರ್‌ಸಿಎಲ್ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್​​​​​​ಫಾರ್ಮ್​​ ಸ್ಕ್ರೀನ್​ ಡೋರ್​​,​ ಗೇಟ್ ಅಳವಡಿಕೆ ಒತ್ತಡ
ಮೆಟ್ರೋ ನಿಲ್ದಾಣದಲ್ಲಿನ ಪ್ಲಾಟ್​ ಫಾರ್ಮ್​​ ಸ್ಕ್ರೀನ್​​ ಗೇಟ್​
Follow us
ವಿವೇಕ ಬಿರಾದಾರ
|

Updated on:Mar 22, 2024 | 7:52 AM

ಬೆಂಗಳೂರು, ಮಾರ್ಚ್​ 22: ನಮ್ಮ ಮೆಟ್ರೋದಲ್ಲಿ (Namma Metro) ಗುರುವಾರ ಮಧ್ಯಾಹ್ನ ಸಂಭವಿಸಿದ ಆತ್ಮಹತ್ಯೆ ಪ್ರಕರಣ ಬೆನ್ನಲ್ಲೇ ಇಂತಹ ಅವಘಡಗಳು ಮರುಕಳಿಸದಂತೆ ತಡೆಯಲು ತಕ್ಷಣ ಎಲ್ಲ ನಿಲ್ದಾಣದಲ್ಲಿ ಶೀಘ್ರವಾಗಿ ಪ್ಲಾಟ್​​​​​ಫಾರ್ಮ್​​​​ ಸ್ಕ್ರೀನ್​ ಡೋರ್ ಅಥವಾ ಪ್ಲಾಟ್​​​​​ಫಾರ್ಮ್​​​​ ಸ್ಕ್ರೀನ್​ ಗೇಟ್ (PSG/PD)​ ಅವಳಡಿಸುವಂತೆ ಸಾರ್ವಜನಿಕರಿಂದ ಒತ್ತಡ ಹೆಚ್ಚಾಗಿದೆ. ಈ ಪ್ಲಾಟ್​​​​​ಫಾರ್ಮ್​​​​ ಸ್ಕ್ರೀನ್​ ಡೋರ್ ಅಳವಡಿಸಲು ಹೆಚ್ಚು ಹಣ ಖರ್ಚಾಗಲಿದ್ದು ಮತ್ತು ಕೆಲವು ತಾಂತ್ರಿಕ ಕಾರಣದಿಂದ ಅಳವಡಿಕೆ ಅಸಾಧ್ಯ ಎನ್ನಲಾಗುತ್ತಿದೆ.

ಪ್ಲಾಟ್​​​​​ಫಾರ್ಮ್​​​​ ಸ್ಕ್ರೀನ್​ ಡೋರ್​ ಅನ್ನು ಅಳವಡಿಸುವುದರಿಂದ ಪ್ರಯಾಣಿಕರು ಪ್ಲಾಟ್​​​​​ಫಾರ್ಮ್​​​​ನಿಂದ ಹಳಿಯ ಮೇಲೆ ಇಳಿಯುವುದನ್ನು ತಪ್ಪಿಸಬಹುದು. ಮುಂಬೈ ಮತ್ತು ದೆಹಲಿಯ ಭೂಗತ ಮೆಟ್ರೋ ನಿಲ್ದಾಣಗಳಲ್ಲಿ ಈಗಾಗಲೆ ಪ್ಲಾಟ್​​​​ ಫಾರ್ಮ್​​ ಸ್ಕ್ರೀನ್​ ಡೋರ್ ಅಳವಡಿಸಲಾಗಿದೆ.

ಇನ್ನು ನಮ್ಮ ಮೆಟ್ರೋದ ಪಿಂಕ್ ಮಾರ್ಗ (​ಕಾಳೇನ ಅಗ್ರಹಾರ-ನಾಗವಾರ) ನಿಲ್ದಾಣದ ವರೆಗಿನ 12 ನಿಲ್ದಾಣಗಳಲ್ಲಿ ಮತ್ತು ಮೆಟ್ರೋ ವಿಮಾನ ಭೂಗತ ನಿಲ್ದಾಣದಲ್ಲಿ ಪ್ಲಾಟ್​​​​​ಫಾರ್ಮ್​​​​ ಸ್ಕ್ರೀನ್​ ಗೇಟ್​ (PSG) ಅಳವಡಿಸಲು ಯೋಚಿಸಲಾಗಿದೆ. ಅಲ್ಲದೆ ಪಿಂಕ್​ ಮಾರ್ಗದ 6 ಎಲಿವೆಟೆಡ್​​ ನಿಲ್ದಾಣಗಳು ಹಾಗೂ ನೀಲಿ ಮಾರ್ಗದ 2A (ಕೇಂದ್ರ ಸಿಲ್ಕ ಬೋರ್ಡ್​​-ಕೆಆರ್​ ಪುರ) ವರಗಿನ 13 ನಿಲ್ದಾಣದಲ್ಲಿ ಮತ್ತು ನೀಲಿ ಮಾರ್ಗದ 2B (ಕೆಆರ್​ ಪುರ-ವಿಮಾನ ನಿಲ್ದಾಣ) ವರೆಗಿನ 17 ನಿಲ್ದಾಣ ಜೊತೆಗೆ ಗ್ರೇಡ್​ ಏರ್​​ಪೋರ್ಟ್​ ಸಿಟಿ ನಿಲ್ದಾಣದಲ್ಲಿ ಪ್ಲಾಟ್​​​​​ಫಾರ್ಮ್​​​​ ಸ್ಕ್ರೀನ್​ ಡೋರ್ (PSD) ಅಳವಡಿಸಲಾಗುತ್ತದೆ. (​ಕಾಳೇನ ಅಗ್ರಹಾರ-ನಾಗವಾರ) ಪಿಂಕ್ ಮಾರ್ಗ 2025ಕ್ಕೆ ಮತ್ತು ನೀಲಿ ಮಾರ್ಗ್​ 2026ಕ್ಕೆ ಪೂರ್ಣಗೊಳ್ಳಲಿದೆ.

ಇದನ್ನೂ ಓದಿ: ಮೆಟ್ರೋ ಬರುವಾಗ ಹಳಿಗೆ ಹಾರಿ ಯುವಕ ಆತ್ಮಹತ್ಯೆ; ರೈಲು ಸಂಚಾರ ಸ್ಥಗಿತ

ಪ್ರತಿ ಪ್ಲಾಟ್​​​​​ಫಾರ್ಮ್​​​​ ಸ್ಕ್ರೀನ್​ ಡೋರ್ 2.15 ಮೀ ಎತ್ತರವಿರುತ್ತದೆ. ಮತ್ತು ಪ್ಲಾಟ್​​​​​ಫಾರ್ಮ್​​​​ ಸ್ಕ್ರೀನ್​ ಗೇಟ್​ 1.4 ಮೀ ಎತ್ತರವಿರುತ್ತದೆ. ಈ ಯೋಜನೆಗೆ ಜಪಾನ್​​ನ ಅಂತರಾಷ್ಟ್ರೀಯ ಕಾರ್ಪೂರೇಶನ್​ ಏಜೆನ್ಸಿ ಹೂಡಿಕೆ ಮಾಡಿದೆ.

ಒಂದು ನಿಲ್ದಾಣದಲ್ಲಿ ಪ್ಲಾಟ್​​​​​ಫಾರ್ಮ್​​​​ ಸ್ಕ್ರೀನ್​ ಡೋರ್ ಅಥವಾ ಪ್ಲಾಟ್​​​​​ಫಾರ್ಮ್​​​​ ಸ್ಕ್ರೀನ್​ ಗೇಟ್​ ಅಳವಡಿಸಲು ಬರೊಬ್ಬರೊ 7-8 ಕೋಟಿ ರೂ. ಹಣದ ಅವಶ್ಯಕತೆ ಇದೆ. ಈಗಾಗಲೆ ಮೆಜೆಸ್ಟಿಕ್​ ರೈಲು ನಿಲ್ದಾಣದಲ್ಲಿ ಪ್ಲಾಟ್​​​​​ಫಾರ್ಮ್​​​​ ಸ್ಕ್ರೀನ್​ ಡೋರ್ ಅಳವಡಿಸಲಾಗಿದೆ.

ಈ ಬಗ್ಗೆ ನಮ್ಮ ಮೆಟ್ರೋದ ಹಿರಿಯ ಅಧಿಕಾರಿ ಮಾತನಾಡಿ, ಪ್ಲಾಟ್​​​​​ಫಾರ್ಮ್​​​​ ಸ್ಕ್ರೀನ್​ ಡೋರ್ ಅಥವಾ ಪ್ಲಾಟ್​​​​​ಫಾರ್ಮ್​​ ಸ್ಕ್ರೀನ್​ ಗೇಟ್ ಅಳವಡಿಕೆ ಸವಾಲಿನ ಕೆಲಸವಾಗಿದೆ. ಮತ್ತು ಈಗಾಗಲೆ ಕಾರ್ಯ ನಿರ್ವಹಿಸುತ್ತಿರುವ ನಿಲ್ದಾಣಗಳಲ್ಲಿ PSG ಅಥವಾ PSD ಅವಳವಡಿಸಲು ಕೆಲ ದಿನಗಳ ಕಾಲ ನಿಲ್ದಾಣದ ಕಾರ್ಯವನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದರು.

ಜನವರಿದ ಐದು ಪ್ರಕರಣಗಳು ಸಂಭವಿಸಿವೆ

ಕಳೆದ ಜನವರಿಯಿಂದ ಇಲ್ಲಿವರೆಗೆ ಜನರು ಮೆಟ್ರೋ ಹಳಿಗಿಳಿದ ಐದು ಪ್ರಕರಣಗಳು ನಡೆದಿವೆ. ಮೆಜೆಸ್ಟಿಕ್ ನಿಲ್ದಾಣ ಸೇರಿ ವಿವಿಧೆಡೆ ಜನ ಮೆಟ್ರೋ ಹಳಿಗಿಳಿದಿದ್ದಾರೆ. ಎಲ್ಲ ಸಂದರ್ಭದಲ್ಲೂ 20ರಿಂದ 45 ನಿಮಿಷದವರೆಗೆ ಮೆಟ್ರೋ ರೈಲುಗಳ ಸಂಚಾರ ವ್ಯತ್ಯಯವಾಗಿ ವಿವಿಧ ಕಡೆ ತೆರಳುವ ಪ್ರಯಾಣಿಕರು ಪರದಾಡಿದ್ದರು.

ಗುರುವಾರ ಯುವಕನೊಬ್ಬ ಆತ್ಮಹತ್ಯೆ ಘಟನೆ ಬಳಿಕ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಲವರು PSD ಅಥವಾ PSG ಅಳವಡಿಸದ ಬಿಎಂಆರ್‌ಸಿಎಲ್ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಸದ್ಯದ ನೇರಳೆ, ನೀಲಿ ಮೆಟ್ರೋ ಮಾರ್ಗದ ಎಲ್ಲ ನಿಲ್ದಾಣಗಳ ಪ್ಲಾಟ್​​​​​ಫಾರ್ಮ್​​​ಗಳಲ್ಲೂ ಪ್ಲಾಟ್‌ಫಾರ್ಮ್ ಸೀನ್ ಡೋರ್ ಅಳವಡಿಸಬೇಕು ಎಂದು ಸಾರಿಗೆ ತಜ್ಞರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:37 am, Fri, 22 March 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ