Video: ರ್‍ಯಾಲಿ ವೇಳೆ ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಟರ್ಬೆ ತಲೆಗೆ ಗುಂಡು ಹಾರಿಸಿದ ದಾಳಿಕೋರ
ದಕ್ಷಿಣ ಅಮೆರಿಕದಲ್ಲಿರುವ ಕೊಲಂಬಿಯಾದಲ್ಲಿ ಸಾರ್ವಜನಿಕ ರ್‍ಯಾಲಿಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಮಿಗುಯೆಲ್ ಉರಿಬೆ ಟರ್ಬೆ ತಲೆಗೆ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿರುವ ಘಟನೆ ನಡೆದಿದೆ. ಟರ್ಬೆ ತೀವ್ರವಾಗಿ ಗಾಯೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬ ಶಂಕಿತನನ್ನು ಬಂಧಿಸಲಾಗಿದೆ. ಅಧ್ಯಕ್ಷರ ಕಚೇರಿ ಹಿಂಸಾಚಾರವನ್ನು ಖಂಡಿಸಿದೆ. ಮಿಗುಯೆಲ್ ತಲೆಗೆ ಗುಂಡು ಹಾರಿಸಲಾಗಿದೆ ಎಂದು ಡೆಮಾಕ್ರಟಿಕ್ ಸೆಂಟರ್ ಪಕ್ಷ ಹೇಳಿಕೆ ನೀಡಿದೆ. ಆದರೆ, ಅವರ ಸ್ಥಿತಿ ಈಗ ಹೇಗಿದೆ ಎಂದು ಪಕ್ಷ ಹೇಳಿಲ್ಲ.

ಟ್ರಂಪ್ ಆಡಳಿತ ಕಾರ್ಯದರ್ಶಿ ಮಾರ್ಕೊ ರೂಬಿಯೊ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಸೆನೆಟರ್ ಮಿಗುಯೆಲ್ ಉರಿಬೆ ಮೇಲಿನ ದಾಳಿಯನ್ನು ಅಮೆರಿಕ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.ಮಿಗುಯೆಲ್ ಉರಿಬೆ ಟರ್ಬೆ ಕೊಲಂಬಿಯಾದ ಪ್ರಸಿದ್ಧ ವ್ಯಕ್ತಿ, ಅವರು ಪ್ರಮುಖ ರಾಜಕೀಯ ಕುಟುಂಬದಿಂದ ಬಂದವರು.
ಅವರ ತಂದೆ ಓರ್ವ ಉದ್ಯಮಿ ಮತ್ತು ಯೂನಿಯನ್ ನಾಯಕರಾಗಿದ್ದರು. ಅವರ ತಾಯಿ ಡಯಾನಾ ಟರ್ಬೆ 90 ರ ದಶಕದ ಪ್ರಸಿದ್ಧ ಪತ್ರಕರ್ತೆಯಾಗಿದ್ದರು. ಫಾಂಟಿಬಾನ್‌ನ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು, ಶಸ್ತ್ರಸಜ್ಜಿತ ದಾಳಿಕೋರರು ಸಂಸದರ ಮೇಲೆ ಹಿಂದಿನಿಂದ ಗುಂಡು ಹಾರಿಸಿದ್ದಾರೆ ಎಂದು ಅವರ ಪಕ್ಷ ತಿಳಿಸಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ