AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲ್ತುಳಿತದಿಂದ ಕಬ್ಬನ್ ಪಾರ್ಕಿನ ಗಿಡ-ಮರಗಳಿಗೂ ಹಾನಿ: ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಗೆ ಅಸೋಸಿಯೇಷನ್​ ದೂರು

ಆರ್​​ಸಿಬಿ ವಿಜಯೋತ್ಸವಕ್ಕೆ ಹರಿದು ಬಂದಿದ್ದ ಅಭಿಮಾನಿಗಳ ದಂಡು ಮಾಡಿದ್ದ ಅವಾಂತರಗಳು ಒಂದೆರಡಲ್ಲ. ಸಿಕ್ಕಸಿಕ್ಕ ಕಡೆಗಳಲ್ಲಿ ನುಗ್ಗಿ ದಾಂಧಲೆ ಮಾಡಿದ್ದರು. ಅಭಿಮಾನಿಗಳ ರಂಪಾಟದಿಂದ ಕಬ್ಬನ್ ಪಾರ್ಕ್‌ನ ಗಿಡಗಳಿಗೆ ಹಾನಿಯಾಗಿದೆ. ಈ ನಿಟ್ಟಿನಲ್ಲಿ ಕಬ್ಬನ್​ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್​ರಿಂದ ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಕಾಲ್ತುಳಿತದಿಂದ ಕಬ್ಬನ್ ಪಾರ್ಕಿನ ಗಿಡ-ಮರಗಳಿಗೂ ಹಾನಿ: ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಗೆ ಅಸೋಸಿಯೇಷನ್​ ದೂರು
ಮರವೇರಿದ ಅಭಿಮಾನಿ
Kiran Surya
| Edited By: |

Updated on:Jun 08, 2025 | 1:26 PM

Share

ಬೆಂಗಳೂರು, ಜೂನ್​ 08: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತ ಪ್ರಕರಣವನ್ನು ಸದ್ಯ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಆರ್​ಸಿಬಿ (RCB) ವಿಜಯೋತ್ಸವಕ್ಕೆ ಬಂದ್ದಿದ್ದ ಫ್ಯಾನ್ಸ್, ಅಭಿಮಾನದ ಹೆಸರಿನಲ್ಲಿ ಅತಿರೇಕ, ಹುಚ್ಚಾಟ ಮೆರೆದಿದ್ದರು. ಅವರ ರಂಪ, ರಾಮಾಯಣದಿಂದ ಸಾವು-ನೋವುಗಳೊಂದಿಗೆ ಪರಿಸರಕ್ಕೂ ಹಾನಿ ಆಗಿತ್ತು. ಜನರ ಕಾಲ್ತುಳಿತದಿಂದ ನೆಲಮಟ್ಟದ ಗಿಡಗಳು ನೆಲಸಮವಾಗಿವೆ. ಕಬ್ಬನ್​ ಪಾರ್ಕ್​​ನ ಗಿಡ, ಮರಗಳಿಗೂ ಹಾನಿ ಉಂಟಾಗಿದೆ. ಹೀಗಾಗಿ ಕಬ್ಬನ್​ಪಾರ್ಕ್ ನಡಿಗೆದಾರರ ಸಂಘದ (Park Walkers Association) ಅಧ್ಯಕ್ಷ ಉಮೇಶ್​ರಿಂದ ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಆರ್​ಸಿಬಿ ಐಪಿಎಲ್​​ನಲ್ಲಿ ಕಪ್​​ ಗೆಲ್ಲುವ ಮೂಲಕ ಕನ್ನಡಿಗರ 18 ವರ್ಷದ ಕನಸು ನನಸಾಗಿತ್ತು. ಇದೇ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಕಾಲ್ತುಳಿತದಿಂದ 11 ಜನ ಅಮಾಯಕರು‌ ಪ್ರಾಣ ತೆತ್ತರು. ಆದರೆ ವಿಧಾನಸೌಧ ಹಾಗೂ ಹೈಕೋರ್ಟ್ ಮುಂಭಾಗದಲ್ಲಿ ‌ಸೇರಿದ ಭಾರಿ ಜನರ ದಟ್ಟಣೆಯಿಂದಾಗಿ ಬ್ಯಾರಿಕೇಡ್​ಗಳು, ನೆಲಮಟ್ಟದ ಗಿಡಗಳನ್ನು ಅಥವಾ ಆರ್ನಮೆಂಟಲ್ ಪ್ಲಾಂಟ್ಸ್​ಗಳನ್ನು ಜನ ತುಳಿದು ಹಾಕಿದ್ದಾರೆ. ಇದರಿಂದಾಗಿ ಗಿಡಗಳೆಲ್ಲಾ ಮುರಿದು ಒಣಗಿ ಹೋಗಿ ಸರ್ವನಾಶವಾಗಿವೆ.

ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತಕ್ಕೆ DPRA ನಿರ್ಲಕ್ಷ್ಯ ಬಯಲು, ಅಪಾಯದ ಎಚ್ಚರಿಕೆ ನೀಡಿದ್ದ ಡಿಸಿಪಿ..!

ಇದನ್ನೂ ಓದಿ
Image
Stampede: ಮೃತರ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರ ಮೊತ್ತ ಹೆಚ್ಚಳ
Image
Stampede: ಕಾಲ್ತುಳಿತದಲ್ಲಿ ಗಾಯಗೊಂಡವರು 65 ಮಂದಿ ಆರ್​ಸಿಬಿ ಅಭಿಮಾನಿಗಳು
Image
ತನಿಖೆಗಿಳಿದ ಸಿಐಡಿ: ಸ್ಟೇಡಿಯಂಗೆ ಭೇಟಿ, ಇಂಚಿಂಚೂ ಮಾಹಿತಿ ಸಂಗ್ರಹ
Image
ಬೆಂಗಳೂರು ಕಾಲ್ತುಳಿತ ದುರಂತದ ವರದಿ ನೀಡುವಂತೆ ಕುನ್ಹಾ ಆಯೋಗಕ್ಕೆ ಸೂಚನೆ

ಕೇವಲ ವಿಧಾನಸೌಧ ಮುಂಭಾಗದ ಗಿಡಗಳಿಗೆ ಮಾತ್ರ ಹಾನಿಯಾಗಿಲ್ಲ. ಎದುರುಗಡೆ ಇರುವ ಕಬ್ಬನ್ ಪಾರ್ಕ್​​ನ ಗೇಟ್​ನ್ನು ಹಾರಿ ಜನ ಬಂದಿದ್ದರು. ಜೊತೆಗೆ ಪ್ರಾಣವನ್ನು ಲೆಕ್ಕಿಸದೇ ಮರವೇರಿ ಕುಳಿತ್ತಿದ್ದರು. ಇದರಿಂದ ಸಾಕಷ್ಟು ಮರಗಳಿಗೂ ಡ್ಯಾಮೇಜ್​ ಉಂಟಾಗಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರ್​ಸಿಬಿ, ಕೆಎಸ್ ಸಿಎ, ಡಿಎನ್​ಎ ವಿರುದ್ದ ಸಿಡಿ ಸಾಕ್ಷಿ ಸಮೇತ ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ವಿಧಾನಸೌಧದ ಗಾರ್ಡನ್ ಏರಿಯಾ, ಫೆನ್ಸಿಂಗ್ ಪೀಸ್ ಪೀಸ್

ಆರ್​ಸಿಬಿ ಸಮಾರಂಭ ವೀಕ್ಷಣೆಗೆ ವಿಧಾನಸೌಧದ ಬಳಿ ಸಾಗರೋಪಾದಿಯಲ್ಲಿ ಫ್ಯಾನ್ಸ್ ಸೇರಿದ್ದರು. ಸಿಕ್ಕ ಸಿಕ್ಕ ಜಾಗಕ್ಕೆ ನುಗ್ಗಿದ್ದರು. ಆದರೆ ಹೀಗೆ ಬಂದೋರು ಹಾಗೇ ಸುಮ್ಮನೆ ಹೋಗ್ಲಿಲ್ಲ. ಬದಲಾಗಿ ವಿಧಾನಸೌಧದ ಗಾರ್ಡನ್ ಏರಿಯಾ, ಕೆಂಪೇಗೌಡ ಪ್ರತಿಮೆ ಬಳಿ ಫೆನ್ಸಿಂಗ್​ನ ಪೀಸ್ ಪೀಸ್ ಮಾಡಿದ್ದರು. ಆಕರ್ಷಕ ವಿದ್ಯುತ್ ದೀಪಗಳನ್ನೂ ಧ್ವಂಸ ಮಾಡಿದ್ದರು.

ಇದನ್ನೂ ಓದಿ: Bengaluru stampede: ಬೆಂಗಳೂರು ಕಾಲ್ತುಳಿತ ಪ್ರಕರಣ: ಮಹತ್ವದ ತೀರ್ಮಾನ ಕೈಗೊಂಡ ಬಿಸಿಸಿಐ

ಚಿನ್ನಸ್ವಾಮಿ ಸ್ಟೇಡಿಯಂಗೆ ನುಗ್ಗಲು ಯತ್ನಿಸಿದ ಅಭಿಮಾನಿಗಳು ಗೇಟ್​ಗಳನ್ನೇ ಮುರಿದು ಹಾಕಿದ್ದರು. ಗೇಟ್ ನಂ.3ನ್ನು ಮುರಿದು ಹಾಕಿದ್ದ ಅಭಿಮಾನಿಗಳು, ಸ್ಟೇಡಿಯಂ ಒಳಗೂ ದಾಂದಲೆ ಸೃಷ್ಟಿಸಿದ್ದರು. ಹೂ ಕುಂಡಗಳನ್ನೂ ಹೊಡೆದು, ಧ್ವಂಸ ಗೊಳಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:42 pm, Sun, 8 June 25

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು