ಐಪಿಎಲ್ (IPL 2024) 17ನೇ ಆವೃತ್ತಿಯ 19 ನೇ ಪಂದ್ಯದಲ್ಲಿ ಶನಿವಾರ ಅಂದರೆ ನಾಳೆ, ಆರ್ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ (RR vs RCB) ತಂಡವನ್ನು ಅವರದ್ದೇ ನೆಲದಲ್ಲಿ ಎದುರಿಸಲಿದೆ. ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಸ್ಥಳೀಯ ತಂಡ ರಾಜಸ್ಥಾನಕ್ಕೆ (Rajasthan Royals) ತುಂಬಾ ವಿಶೇಷವಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ರಾಜಸ್ಥಾನ ತಂಡ ಪ್ರಮುಖ ಬದಲಾವಣೆಗಳೊಂದಿಗೆ ಮೈದಾನಕ್ಕಿಳಿಯಲಿದೆ. ಈ ಮಾಹಿತಿಯನ್ನು ಫ್ರ್ಯಾಂಚೈಸ್ ತನ್ನ ಅಧಿಕೃತ X ಖಾತೆಯಲ್ಲಿ ಹಂಚಿಕೊಂಡಿದೆ. ಅದರಂತೆ ಆರ್ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಇಡೀ ರಾಜಸ್ಥಾನ ತಂಡ ವಿಶೇಷ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯಲಿದೆ.
ಮೇಲೆ ಹೇಳಿದಂತೆ ರಾಜಸ್ಥಾನ ತಂಡವು ಸಂಪೂರ್ಣವಾಗಿ ಪಿಂಕ್ ಬಣ್ಣದ ಜೆರ್ಸಿಯನ್ನು ತೊಟ್ಟು ಆರ್ಸಿಬಿ ವಿರುದ್ಧ ಪಂದ್ಯವನ್ನಾಡಲಿದೆ. ಇದಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಡಿಯೋ ಬಿಡುಗಡೆ ಮಾಡಿರುವ ರಾಜಸ್ಥಾನ್ ಪ್ರಾಂಚೈಸಿ, ಈ ವಿಡಿಯೋದಲ್ಲಿ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಈ ಜೆರ್ಸಿ ಕೇವಲ ಒಂದು ಪಂದ್ಯಕ್ಕೆ ಮಾತ್ರ ಸೀಮಿತವಾಗಿದ್ದು, ಈ ಜೆರ್ಸಿ ಸಂಪೂರ್ಣ ಗುಲಾಬಿ ಬಣ್ಣದಿಂದ ಕೂಡಿರಲಿದೆ. ವಾಸ್ತವವಾಗಿ ರಾಯಲ್ಸ್ ತಂಡ ಪ್ರತಿ ಪಂದ್ಯಕ್ಕೂ ಗುಲಾಬಿ ಬಣ್ಣದ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯುತ್ತದೆ.
Tomorrow is special. We’re all-Pink, and this is our #PinkPromise to the women of Rajasthan. 💗☀️#RoyalsFamily | @RoyalRajasthanF pic.twitter.com/DcUt9gNZoG
— Rajasthan Royals (@rajasthanroyals) April 5, 2024
ಆದರೆ ಆ ಜೆರ್ಸಿಯ ಮೇಲೆ ಗುಲಾಬಿ ಬಣ್ಣದ ಜೊತೆಗೆ ಇತರ ಬಣ್ಣಗಳೂ ಇರುತ್ತವೆ. ಆದರೆ ಇದೀಗ ಏಪ್ರಿಲ್ 6ರಂದು ನಡೆಯಲಿರುವ ಪಂದ್ಯಕ್ಕೆ ಸಂಪೂರ್ಣ ಗುಲಾಬಿ ಬಣ್ಣದ ಜೆರ್ಸಿಯೊಂದಿಗೆ ತಂಡ ಪಂದ್ಯವನ್ನಾಡಲಿದೆ. #PinkPromise ಮಿಷನ್ ಅಡಿಯಲ್ಲಿ ರಾಜಸ್ಥಾನ ತಂಡ ಆಡುವ ವಿಶೇಷ ಪಂದ್ಯ ಇದಾಗಿದೆ. ಮಹಿಳೆಯರನ್ನು ಉತ್ತೇಜಿಸುವುದು ಈ ಮಿಷನ್‌ನ ಉದ್ದೇಶವಾಗಿದೆ. ಇದಕ್ಕಾಗಿ ಫ್ರಾಂಚೈಸಿ ಹಲವು ಯೋಜನೆಗಳನ್ನು ರೂಪಿಸಿದೆ.
On April 6, every six will count. It’s our #PinkPromise! 💗💪
With the support of trained women solar engineers from Rajasthan, every six hit tomorrow will help us power six homes! ☀️ pic.twitter.com/Vo7feGsbP3
— Rajasthan Royals (@rajasthanroyals) April 5, 2024
ಈ #PinkPromise ಅಭಿಯಾನದ ಬಗ್ಗೆ ಹೇಳಬೇಕೆಂದರೆ, ಏಪ್ರಿಲ್ 6 ರಂದು ಆರ್ಸಿಬಿ ವಿರುದ್ಧದ ರಾಜಸ್ಥಾನದ ಪಂದ್ಯವು ಸಂಪೂರ್ಣವಾಗಿ ಮಹಿಳೆಯರಿಗೆ ಏಳಿಗೆಗೆ ಮೀಸಲಾಗಿದೆ. ಈ ಪಂದ್ಯದಲ್ಲಿ ಮಾರಾಟವಾಗುವ ಪ್ರತಿ ಟಿಕೆಟ್‌ನಿಂದ 100 ರೂ.ಗಳನ್ನು ಮಹಿಳೆಯರ ಅಭಿವೃದ್ಧಿಗೆ ನೀಡಲಾಗುವುದು. ಇಷ್ಟೇ ಅಲ್ಲ, ಈ ಪಂದ್ಯದಲ್ಲಿ ಪ್ರತಿ ಸಿಕ್ಸರ್‌ಗೆ ರಾಜಸ್ಥಾನದಲ್ಲಿನ ಆರು ಮನೆಗಳಿಗೆ ಸೌರಶಕ್ತಿಯನ್ನು ಒದಗಿಸಲಾಗುವುದು. ಅಲ್ಲದೆ ಟಿಕೆಟ್ ಮಾರಾಟದ ಆದಾಯದ ಒಂದು ಭಾಗವು ರಾಯಲ್ ರಾಜಸ್ಥಾನ್ ಫೌಂಡೇಶನ್‌ಗೆ ಹೋಗುತ್ತದೆ. ಹೀಗಾಗಿ ಈ ಪಂದ್ಯ ರಾಯಲ್ಸ್ ತಂಡಕ್ಕೆ ತುಂಬಾ ವಿಶೇಷವಾಗಿರಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:30 pm, Fri, 5 April 24