SRH vs CSK Highlights, IPL 2024: ಹೈದರಾಬಾದ್‌ಗೆ ಸುಲಭ ತುತ್ತಾದ ಸಿಎಸ್‌ಕೆ
Sunrisers Hyderabad Vs Chennai Super Kings Highlights in Kannada: ಪ್ಯಾಟ್ ಕಮಿನ್ಸ್ ನಾಯಕತ್ವದ ಹೈದರಾಬಾದ್ ತಂಡವು ತನ್ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸುಲಭವಾಗಿ 6 ವಿಕೆಟ್‌ಗಳಿಂದ ಮಣಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೇರಿದೆ.
ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ 2024 ರಲ್ಲಿ ತನ್ನ ಎರಡನೇ ಗೆಲುವು ದಾಖಲಿಸಿದೆ. ಪ್ಯಾಟ್ ಕಮಿನ್ಸ್ ನಾಯಕತ್ವದ ಹೈದರಾಬಾದ್ ತಂಡವು ತನ್ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸುಲಭವಾಗಿ 6 ವಿಕೆಟ್‌ಗಳಿಂದ ಮಣಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೇರಿದೆ. ನಾಯಕ ಕಮಿನ್ಸ್ ಅವರ ಬಲಿಷ್ಠ ಬೌಲಿಂಗ್ ಜೊತೆಗೆ ಅಭಿಷೇಕ್ ಶರ್ಮಾ ಮತ್ತು ಏಡನ್ ಮಾರ್ಕ್ರಾಮ್ ಅವರ ಸ್ಫೋಟಕ ಇನ್ನಿಂಗ್ಸ್ ಸನ್ ರೈಸರ್ಸ್ಗೆ ಸುಲಭ ಜಯ ತಂದುಕೊಟ್ಟಿತು. ತವರು ಚೆಪಾಕ್‌ನಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದಿದ್ದ ಚೆನ್ನೈ, ತವರಿನಿಂದ ಹೊರಗೆ ನಡೆದ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ.
LIVE NEWS & UPDATES
-
ಹೈದರಾಬಾದ್‌ಗೆ 6 ವಿಕೆಟ್ ಜಯ
ಈ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ 18.1 ಓವರ್‌ಗಳಲ್ಲಿ 6 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಏಡನ್ ಮರ್ಕ್ರಾಮ್ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಅಭಿಷೇಕ್ ಶರ್ಮಾ 37 ರನ್ ಮತ್ತು ಟ್ರಾವಿಸ್ ಹೆಡ್ 31 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.
-
ಶಹಬಾಜ್ ಔಟ್
ಮೊಯಿನ್ ಅಲಿ ಸನ್ ರೈಸರ್ಸ್ ಹೈದರಾಬಾದ್‌ಗೆ ಮತ್ತೊಂದು ಪೆಟ್ಟು ನೀಡಿ ಶಹಬಾಜ್ ಅಹ್ಮದ್ಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಮಾರ್ಕ್ರಾಮ್ ಅವರನ್ನು ಔಟ್ ಮಾಡಿದ ನಂತರ, ಮೊಯಿನ್ ಅಲಿ ಶಹಬಾಜ್ ಅಹ್ಮದ್ ಅವರನ್ನು ಕೂಡ ಔಟ್ ಮಾಡಿದರು. ಶಹಬಾಜ್ 19 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. ಇದೀಗ ಹೆನ್ರಿಚ್ ಕ್ಲಾಸೆನ್ ಜೊತೆಗೆ ಹೊಸ ಬ್ಯಾಟ್ಸ್ ಮನ್ ಆಗಿ ಎಂಟ್ರಿಕೊಟ್ಟಿರುವ ನಿತೀಶ್ ರೆಡ್ಡಿ ಕ್ರೀಸ್ ನಲ್ಲಿದ್ದಾರೆ. ಹೈದರಾಬಾದ್ ಗೆಲುವಿಗೆ ಇನ್ನೂ 26 ಎಸೆತಗಳಲ್ಲಿ 25 ರನ್ ಗಳಿಸಬೇಕಿದೆ.
-
ಮಾರ್ಕ್ರಾಮ್ ಅರ್ಧಶತಕ, ಔಟ್
ಚೆನ್ನೈನ ಸ್ಪಿನ್ನರ್ ಮೊಯಿನ್ ಅಲಿ ಏಡೆನ್ ಮಾರ್ಕ್ರಾಮ್ ಅವರನ್ನು ಔಟ್ ಮಾಡುವ ಮೂಲಕ ಹೈದರಾಬಾದ್‌ಗೆ ಮೂರನೇ ಹೊಡೆತ ನೀಡಿದರು. ಮಾರ್ಕ್ರಾಮ್ ಅರ್ಧಶತಕ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ. ಮಾರ್ಕ್ರಾಮ್ 36 ಎಸೆತಗಳಲ್ಲಿ 50 ರನ್ ಗಳಿಸಿ ಮೊಯಿನ್ ಅಲಿ ಎಸೆತದಲ್ಲಿ ಎಲ್ ಬಿಡಬ್ಲ್ಯು ಔಟ್ ಆದರು. ಆದರೆ, ಹೈದರಾಬಾದ್ ಗೆಲುವಿನ ಸನಿಹದಲ್ಲಿದ್ದು, ಗೆಲುವಿಗೆ 35 ಎಸೆತಗಳಲ್ಲಿ 33 ರನ್ ಅಗತ್ಯವಿದೆ. ಪ್ರಸ್ತುತ ಶಹಬಾಜ್ ಅಹ್ಮದ್ 14 ಎಸೆತಗಳಲ್ಲಿ 11 ರನ್ ಮತ್ತು ಹೆನ್ರಿಚ್ ಕ್ಲಾಸೆನ್ ಎರಡು ಎಸೆತಗಳಲ್ಲಿ ಒಂದು ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಹೆಡ್ ಔಟ್
ಮಹೇಶ್ ಟೀಕ್ಷಣ ಎಸೆತದಲ್ಲಿ ಟ್ರಾವಿಸ್ ಹೆಡ್ ವಿಕೆಟ್ ಪತನವಾಗಿದೆ. ಅಮೋಘ ಫಾರ್ಮ್‌ನಲ್ಲಿದ್ದ ಹೆಡ್ 24 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 31 ರನ್ ಗಳಿಸಿ ಔಟಾದರು.
ಪವರ್‌ಪ್ಲೇ ಅಂತ್ಯ
ಪವರ್‌ಪ್ಲೇ ಮುಕ್ತಾಯಕ್ಕೆ ಹೈದರಾಬಾದ್ 78 ರನ್ ಗಳಿಸಿದೆ. ಗೆಲುವಿಗೆ 84 ಎಸೆತಗಳಲ್ಲಿ 88 ರನ್‌ಗಳ ಅಗತ್ಯವಿದೆ. ಮಾರ್ಕ್ರಾಮ್ 15 ರನ್ ಹಾಗೂ ಹೆಡ್ 24 ರನ್ ಗಳಿಸಿ ಆಡುತ್ತಿದ್ದಾರೆ.
ಅಭಿಷೇಕ್ ಔಟ್
ಮೂರನೇ ಓವರ್‌ನಲ್ಲಿ ಹೈದರಾಬಾದ್‌ಗೆ ಮೊದಲ ವಿಕೆಟ್ ಕಳೆದುಕೊಂಡಿದೆ. ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಅಭಿಷೇಕ್ 12 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ನೆರವಿನಿಂದ 37 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮುಖೇಶ್ ಚೌಧರಿ ಎಸೆದ ಎರಡನೇ ಓವರ್‌ನಲ್ಲಿ ಅವರು 27 ರನ್ ಬಾರಿಸಿದರು. ನಾಲ್ಕು ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ ಒಂದು ವಿಕೆಟ್ ಕಳೆದುಕೊಂಡು 57 ರನ್ ಆಗಿದೆ. ಸದ್ಯ ಏಡೆನ್ ಮಾರ್ಕ್ರಾಮ್ ಏಳು ಎಸೆತಗಳಲ್ಲಿ 10 ರನ್ ಹಾಗೂ ಟ್ರಾವಿಸ್ ಆರು ಎಸೆತಗಳಲ್ಲಿ ಒಂಬತ್ತು ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಹೈದರಾಬಾದ್ ಇನ್ನಿಂಗ್ಸ್ ಆರಂಭ
ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್ ಆರಂಭವಾಗಿದ್ದು, ಪರಿಣಾಮ ಸಬ್ಸ್ ಆಗಿ ಬಂದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸಲು ಬಂದಿದ್ದಾರೆ.
ಹೈದರಾಬಾದ್‌ಗೆ 166 ರನ್ ಟಾರ್ಗೆಟ್
ನಿಗದಿತ 20 ಓವರ್‌ಗಳಲ್ಲಿ ಸಿಎಸ್‌ಕೆ ತಂಡ 5 ವಿಕೆಟ್ ಕಳೆದುಕೊಂಡು 165 ರನ್ ಕಲೆಹಾಕಿದೆ. ಈ ಮೂಲಕ ಹೈದರಾಬಾದ್‌ಗೆ 166 ರನ್‌ಗಳ ಟಾರ್ಗೆಟ್ ನೀಡಿದೆ.
ಜಡೇಜಾ ಏಕಾಂಗಿ ಹೋರಾಟ
ಚೆನ್ನೈ ಸೂಪರ್ ಕಿಂಗ್ಸ್ ಆಲ್ ರೌಂಡರ್ ರವೀಂದ್ರ ಜಡೇಜಾ ತಂಡದ ಇನ್ನಿಂಗ್ಸ್ ನಿಭಾಯಿಸುತ್ಇದ್ದಾರೆ. ಜಡೇಜಾ ಅವರ ವೇಗದ ಇನ್ನಿಂಗ್ಸ್ ನೆರವಿನಿಂದ ಸಿಎಸ್ ಕೆ ಸ್ಕೋರ್ 150ರ ಗಡಿ ದಾಟಿದೆ. ಪ್ರಸ್ತುತ, ಜಡೇಜಾ 19 ಎಸೆತಗಳಲ್ಲಿ 25 ರನ್‌ಗಳೊಂದಿಗೆ ಮತ್ತು ಡೇರಿಲ್ ಮಿಚೆಲ್ ಆರು ಎಸೆತಗಳಲ್ಲಿ ಎಂಟು ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.
ರಹಾನೆ ಪೆವಿಲಿಯನ್‌ಗೆ
ಸನ್‌ರೈಸರ್ಸ್ ಹೈದರಾಬಾದ್ ವೇಗದ ಬೌಲರ್ ಜಯದೇವ್ ಉನದ್ಕತ್ ಸಿಎಸ್‌ಕೆಗೆ ನಾಲ್ಕನೇ ಹೊಡೆತ ನೀಡಿದರು. ಚೆನ್ನೈ ಪರ ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ 30 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರು.
ದುಬೆ ಔಟ್
ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ಶಿವಂ ದುಬೆ ಔಟಾಗಿದ್ದಾರೆ. ಶಿವಂ 24 ಎಸೆತಗಳಲ್ಲಿ 45 ರನ್ ಗಳಿಸಿ ಔಟಾದರು. ಸದ್ಯ ಅಜಿಂಕ್ಯ ರಹಾನೆ 28 ಎಸೆತಗಳಲ್ಲಿ 34 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಶತಕ ಪೂರೈಸಿದ ಸಿಎಸ್‌ಕೆ
ಶಿವಂ ದುಬೆ ಅದ್ಭುತ ಇನ್ನಿಂಗ್ಸ್‌ನ ಆಧಾರದ ಮೇಲೆ ಸಿಎಸ್‌ಕೆ 12 ಓವರ್‌ಗಳ ಅಂತ್ಯಕ್ಕೆ ಸ್ಕೋರ್ 100 ದಾಟಿದೆ. ಶಿವಂ ಮತ್ತು ರಹಾನೆ ನಡುವೆ 50 ರನ್‌ಗಳ ಜೊತೆಯಾಟವೂ ಇದೆ. ಶಿವಂ ಪ್ರಸ್ತುತ 21 ಎಸೆತಗಳಲ್ಲಿ 43 ರನ್ ಗಳಿಸಿ ಅರ್ಧಶತಕದ ಸಮೀಪದಲ್ಲಿದ್ದರೆ, ರಹಾನೆ 23 ಎಸೆತಗಳಲ್ಲಿ 24 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ರಚಿನ್ ಔಟ್
ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಭುವನೇಶ್ವರ್ ಕುಮಾರ್ ಎಸೆದ ನಾಲ್ಕನೇ ಓವರ್‌ನಲ್ಲಿ ರವೀಂದ್ರ ಕ್ಯಾಚಿತ್ತು ಔಟಾದರು. ರಚಿನ್ ಒಂಬತ್ತು ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು. ಇದಕ್ಕೂ ಮುನ್ನ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ರಚಿನ್ ಜೊತೆಗೂಡಿ ತಂಡಕ್ಕೆ ವೇಗದ ಆರಂಭ ನೀಡಿದ್ದರು, ಆದರೆ ಭುವನೇಶ್ವರ್ ಈ ಜೊತೆಯಾಟವನ್ನು ಕೊನೆಗೊಳಿಸಿದರು. ಸದ್ಯ ಗಾಯಕ್ವಾಡ್ 10 ಎಸೆತಗಳಲ್ಲಿ 13 ರನ್ ಗಳಿಸಿದ್ದು, ಅಜಿಂಕ್ಯ ರಹಾನೆ ಖಾತೆ ತೆರೆಯದೆ ಕ್ರೀಸ್‌ನಲ್ಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್
ರುತುರಾಜ್ ಗೈಕ್ವಾಡ್ (ಕ್ಯಾಪ್ಟನ್), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಡೆರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಮಹೇಶ್ ತಿಕ್ಷಣ.
ಸನ್‌ರೈಸರ್ಸ್ ಹೈದರಾಬಾದ್
ಅಭಿಷೇಕ್ ಶರ್ಮಾ, ಅಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್ (ವಿಕೆಟ್‌ಕೀಪರ್), ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ಶಹಬಾಜ್ ಅಹ್ಮದ್, ಪ್ಯಾಟ್ ಕಮ್ಮಿನ್ಸ್ (ಕ್ಯಾಪ್ಟನ್), ಜಯ್ದೇವ್ ಉನಾಡ್ಕಟ್, ಭುವನೇಶ್ವಾರ್ ಕುಮಾರ್, ಮಯಾಂಕ್ ಮಾರ್ಕಂಡೆ, ಟಿ ನಟರಾಜನ್.
ಟಾಸ್ ಗೆದ್ದ ಹೈದರಾಬಾದ್
ಟಾಸ್ ಗೆದ್ದ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - Apr 05,2024 7:01 PM