IPL 2024: ಆರ್ಸಿಬಿ ವಿರುದ್ಧ ಪೂರ್ಣ ಪಿಂಕ್ ಬಣ್ಣದ ಜೆರ್ಸಿ ತೊಡಲಿದೆ ರಾಜಸ್ಥಾನ್
IPL 2024: ರಾಜಸ್ಥಾನ ತಂಡವು ಸಂಪೂರ್ಣವಾಗಿ ಪಿಂಕ್ ಬಣ್ಣದ ಜೆರ್ಸಿಯನ್ನು ತೊಟ್ಟು ಆರ್ಸಿಬಿ ವಿರುದ್ಧ ಪಂದ್ಯವನ್ನಾಡಲಿದೆ. ಇದಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಡಿಯೋ ಬಿಡುಗಡೆ ಮಾಡಿರುವ ರಾಜಸ್ಥಾನ್ ಪ್ರಾಂಚೈಸಿ, ಈ ವಿಡಿಯೋದಲ್ಲಿ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಿದೆ.
ಐಪಿಎಲ್ (IPL 2024) 17ನೇ ಆವೃತ್ತಿಯ 19 ನೇ ಪಂದ್ಯದಲ್ಲಿ ಶನಿವಾರ ಅಂದರೆ ನಾಳೆ, ಆರ್ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ (RR vs RCB) ತಂಡವನ್ನು ಅವರದ್ದೇ ನೆಲದಲ್ಲಿ ಎದುರಿಸಲಿದೆ. ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಸ್ಥಳೀಯ ತಂಡ ರಾಜಸ್ಥಾನಕ್ಕೆ (Rajasthan Royals) ತುಂಬಾ ವಿಶೇಷವಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ರಾಜಸ್ಥಾನ ತಂಡ ಪ್ರಮುಖ ಬದಲಾವಣೆಗಳೊಂದಿಗೆ ಮೈದಾನಕ್ಕಿಳಿಯಲಿದೆ. ಈ ಮಾಹಿತಿಯನ್ನು ಫ್ರ್ಯಾಂಚೈಸ್ ತನ್ನ ಅಧಿಕೃತ X ಖಾತೆಯಲ್ಲಿ ಹಂಚಿಕೊಂಡಿದೆ. ಅದರಂತೆ ಆರ್ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಇಡೀ ರಾಜಸ್ಥಾನ ತಂಡ ವಿಶೇಷ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯಲಿದೆ.
ಪೂರ್ಣ ಪಿಂಕ್ ಬಣ್ಣದ ಜೆರ್ಸಿ
ಮೇಲೆ ಹೇಳಿದಂತೆ ರಾಜಸ್ಥಾನ ತಂಡವು ಸಂಪೂರ್ಣವಾಗಿ ಪಿಂಕ್ ಬಣ್ಣದ ಜೆರ್ಸಿಯನ್ನು ತೊಟ್ಟು ಆರ್ಸಿಬಿ ವಿರುದ್ಧ ಪಂದ್ಯವನ್ನಾಡಲಿದೆ. ಇದಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಡಿಯೋ ಬಿಡುಗಡೆ ಮಾಡಿರುವ ರಾಜಸ್ಥಾನ್ ಪ್ರಾಂಚೈಸಿ, ಈ ವಿಡಿಯೋದಲ್ಲಿ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಈ ಜೆರ್ಸಿ ಕೇವಲ ಒಂದು ಪಂದ್ಯಕ್ಕೆ ಮಾತ್ರ ಸೀಮಿತವಾಗಿದ್ದು, ಈ ಜೆರ್ಸಿ ಸಂಪೂರ್ಣ ಗುಲಾಬಿ ಬಣ್ಣದಿಂದ ಕೂಡಿರಲಿದೆ. ವಾಸ್ತವವಾಗಿ ರಾಯಲ್ಸ್ ತಂಡ ಪ್ರತಿ ಪಂದ್ಯಕ್ಕೂ ಗುಲಾಬಿ ಬಣ್ಣದ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯುತ್ತದೆ.
Tomorrow is special. We’re all-Pink, and this is our #PinkPromise to the women of Rajasthan. 💗☀️#RoyalsFamily | @RoyalRajasthanF pic.twitter.com/DcUt9gNZoG
— Rajasthan Royals (@rajasthanroyals) April 5, 2024
ಆದರೆ ಆ ಜೆರ್ಸಿಯ ಮೇಲೆ ಗುಲಾಬಿ ಬಣ್ಣದ ಜೊತೆಗೆ ಇತರ ಬಣ್ಣಗಳೂ ಇರುತ್ತವೆ. ಆದರೆ ಇದೀಗ ಏಪ್ರಿಲ್ 6ರಂದು ನಡೆಯಲಿರುವ ಪಂದ್ಯಕ್ಕೆ ಸಂಪೂರ್ಣ ಗುಲಾಬಿ ಬಣ್ಣದ ಜೆರ್ಸಿಯೊಂದಿಗೆ ತಂಡ ಪಂದ್ಯವನ್ನಾಡಲಿದೆ. #PinkPromise ಮಿಷನ್ ಅಡಿಯಲ್ಲಿ ರಾಜಸ್ಥಾನ ತಂಡ ಆಡುವ ವಿಶೇಷ ಪಂದ್ಯ ಇದಾಗಿದೆ. ಮಹಿಳೆಯರನ್ನು ಉತ್ತೇಜಿಸುವುದು ಈ ಮಿಷನ್‌ನ ಉದ್ದೇಶವಾಗಿದೆ. ಇದಕ್ಕಾಗಿ ಫ್ರಾಂಚೈಸಿ ಹಲವು ಯೋಜನೆಗಳನ್ನು ರೂಪಿಸಿದೆ.
On April 6, every six will count. It’s our #PinkPromise! 💗💪
With the support of trained women solar engineers from Rajasthan, every six hit tomorrow will help us power six homes! ☀️ pic.twitter.com/Vo7feGsbP3
— Rajasthan Royals (@rajasthanroyals) April 5, 2024
ಏನಿದು ಅಭಿಯಾನ?
ಈ #PinkPromise ಅಭಿಯಾನದ ಬಗ್ಗೆ ಹೇಳಬೇಕೆಂದರೆ, ಏಪ್ರಿಲ್ 6 ರಂದು ಆರ್ಸಿಬಿ ವಿರುದ್ಧದ ರಾಜಸ್ಥಾನದ ಪಂದ್ಯವು ಸಂಪೂರ್ಣವಾಗಿ ಮಹಿಳೆಯರಿಗೆ ಏಳಿಗೆಗೆ ಮೀಸಲಾಗಿದೆ. ಈ ಪಂದ್ಯದಲ್ಲಿ ಮಾರಾಟವಾಗುವ ಪ್ರತಿ ಟಿಕೆಟ್‌ನಿಂದ 100 ರೂ.ಗಳನ್ನು ಮಹಿಳೆಯರ ಅಭಿವೃದ್ಧಿಗೆ ನೀಡಲಾಗುವುದು. ಇಷ್ಟೇ ಅಲ್ಲ, ಈ ಪಂದ್ಯದಲ್ಲಿ ಪ್ರತಿ ಸಿಕ್ಸರ್‌ಗೆ ರಾಜಸ್ಥಾನದಲ್ಲಿನ ಆರು ಮನೆಗಳಿಗೆ ಸೌರಶಕ್ತಿಯನ್ನು ಒದಗಿಸಲಾಗುವುದು. ಅಲ್ಲದೆ ಟಿಕೆಟ್ ಮಾರಾಟದ ಆದಾಯದ ಒಂದು ಭಾಗವು ರಾಯಲ್ ರಾಜಸ್ಥಾನ್ ಫೌಂಡೇಶನ್‌ಗೆ ಹೋಗುತ್ತದೆ. ಹೀಗಾಗಿ ಈ ಪಂದ್ಯ ರಾಯಲ್ಸ್ ತಂಡಕ್ಕೆ ತುಂಬಾ ವಿಶೇಷವಾಗಿರಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:30 pm, Fri, 5 April 24