IPL 2024: ಗಗನಕ್ಕೇರಿದ ಆರ್​ಸಿಬಿ- ಸಿಎಸ್​ಕೆ ಪಂದ್ಯದ ಟಿಕೆಟ್ ಬೆಲೆ; ಕ್ರೀಡಾಂಗಣದ ಮುಂದೆ ಫ್ಯಾನ್ಸ್ ಆಕ್ರೋಶ

IPL 2024: ನಾಳೆ ನಡೆಯಲ್ಲಿರುವ ಪಂದ್ಯದ ಟಿಕೆಟ್​ಗಳು ಈ ಹಿಂದೆಯೇ ಆನ್​ಲೈನ್​ನಲ್ಲಿ ಮಾರಾಟವಾಗಿವೆ. ಅದಾಗ್ಯೂ ಮ್ಯಾಚ್ ಟಿಕೆಟ್​ಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾವಿರಾರು ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. ಆದರೆ ಆನ್​ಲೈನ್​ನಲ್ಲಿ ಈಗಾಗಲೇ ಟಿಕೆಟ್ ಸೋಲ್ಡ್ ಔಟ್ ಆಗಿರುವುದರಿಂದ ಅಭಿಮಾನಿಗಳಿಗೆ ಟಿಕೆಟ್ ಸಿಗುತ್ತಿಲ್ಲ. ಆದರೆ ಬ್ಲ್ಯಾಕ್​ನಲ್ಲಿ ಟಿಕೆಟ್​ಗಳನ್ನು ಭಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

IPL 2024: ಗಗನಕ್ಕೇರಿದ ಆರ್​ಸಿಬಿ- ಸಿಎಸ್​ಕೆ ಪಂದ್ಯದ ಟಿಕೆಟ್ ಬೆಲೆ; ಕ್ರೀಡಾಂಗಣದ ಮುಂದೆ ಫ್ಯಾನ್ಸ್ ಆಕ್ರೋಶ
ಪ್ರಾತಿನಿಧಿಕ ಚಿತ್ರ
Follow us
ಪೃಥ್ವಿಶಂಕರ
|

Updated on:May 17, 2024 | 6:08 PM

ಐಪಿಎಲ್ 2024 ರ (IPL 2024) ಪ್ಲೇಆಫ್‌ಗೆ ಹೋಗಲು ಪ್ರಯತ್ನಿಸುತ್ತಿರುವ ಎರಡು ಜನಪ್ರಿಯ ತಂಡಗಳಾದ ಆರ್​ಸಿಬಿ ಹಾಗೂ ಸಿಎಸ್​ಕೆ (RCB vs CSK) ನಡುವೆ ಮಾಡು ಇಲ್ಲವೇ ಮಡಿ ಪಂದ್ಯ ಇದೇ ಮೇ 18 ರಂದು ನಡೆಯಲ್ಲಿದೆ. ಈ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಾದ ತವರು ನೆಲವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣ  (M Chinnaswamy Stadium) ಆತಿಥ್ಯವಹಿಸುತ್ತಿದೆ. ಪ್ಲೇ ಆಫ್​ಗೇರಲು ಎರಡೂ ತಂಡಗಳಿಗೆ ಈ ಪಂದ್ಯದ ಗೆಲುವು ಬಹಳ ಮುಖ್ಯವಾಗಿರುವುದರಿಂದ ಪಂದ್ಯದ ರೋಚಕತೆ ತೀವ್ರವಾಗಿದೆ. ಅಭಿಮಾನಿಗಳು ಕೂಡ ಈ ಪಂದ್ಯವನ್ನು ವೀಕ್ಷಿಸಲು ಕುತೂಹಲದಿಂದ ಕಾಯುತ್ತಿದ್ದಾರೆ. ಈಗಾಗಲೇ ಈ ಪಂದ್ಯದ ಟಿಕೆಟ್​ಗಳು ಮಾರಾಟವಾಗಿವೆ. ಹೀಗಾಗಿ ಕಾಳಸಂತೆಯಲ್ಲಿ ಈ ಪಂದ್ಯದ ಟಿಕೆಟ್​ಗೆ ಭರ್ಜರಿ ಬೇಡಿಕೆಯುಂಟಾಗಿದೆ. ಈ ನಡುವೆ ಈ ಪಂದ್ಯದ ಟಿಕೆಟ್ ಖರೀದಿಸಲು ಕ್ರೀಡಾಂಗಣದ ಬಳಿ ಬಂದ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ. ಈಗಾಗಲೇ ಟಿಕೆಟ್​ಗಳು ಆನ್ಲೈನ್​ನಲ್ಲಿ ಮಾರಾಟವಾಗಿದ್ದು, ಬ್ಲ್ಯಾಕ್​ನಲ್ಲಿ ಟಿಕೆಟ್​ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಆಡಳಿತ ಮಂಡಳಿಯೂ ಕೈಜೋಡಿಸಿದೆ ಎಂದು ಅಭಿಮಾನಿಗಳು ಆರೋಪಿಸುತ್ತಿದ್ದಾರೆ.

ಬ್ಲ್ಯಾಕ್​ನಲ್ಲಿ ಭರ್ಜರಿ ಬೆಲೆ

ವಾಸ್ತವವಾಗಿ ನಾಳೆ ನಡೆಯಲ್ಲಿರುವ ಪಂದ್ಯದ ಟಿಕೆಟ್​ಗಳು ಈ ಹಿಂದೆಯೇ ಆನ್​ಲೈನ್​ನಲ್ಲಿ ಮಾರಾಟವಾಗಿವೆ. ಅದಾಗ್ಯೂ ಮ್ಯಾಚ್ ಟಿಕೆಟ್​ಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾವಿರಾರು ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. ಆದರೆ ಆನ್​ಲೈನ್​ನಲ್ಲಿ ಈಗಾಗಲೇ ಟಿಕೆಟ್ ಸೋಲ್ಡ್ ಔಟ್ ಆಗಿರುವುದರಿಂದ ಅಭಿಮಾನಿಗಳಿಗೆ ಟಿಕೆಟ್ ಸಿಗುತ್ತಿಲ್ಲ. ಆದರೆ ಬ್ಲ್ಯಾಕ್​ನಲ್ಲಿ ಟಿಕೆಟ್​ಗಳನ್ನು ಭಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

IPL 2024: ಮಳೆಯಿಂದ ಓವರ್​ ಕಡಿತಗೊಳಿಸಿದರೆ..? ಇಲ್ಲಿದೆ ಆರ್​ಸಿಬಿ ಪ್ಲೇಆಫ್​ ಲೆಕ್ಕಾಚಾರ

ದುಡ್ಡು ಇಸ್ಕೊಂಡು ಎಸ್ಕೇಪ್ ಆದರೆ..

ಈ ಬಗ್ಗೆ ಆರೋಪ ಹೊರಿಸಿರುವ ಅಭಿಮಾನಿಗಳು, ಆರ್​ಸಿಬಿ ಮ್ಯಾಚ್ ನೋಡಬೇಕೆಂದು ಬಂದಿದ್ದೀವಿ. ಆದರೆ ಆನ್ಲೈನ್​ನಲ್ಲಿ ಟಿಕೆಟ್ ಸೋಲ್ಡ್ ಔಟ್ ಮಾಡಿ, ಚಿನ್ನಸ್ವಾಮಿ ಕ್ರೀಡಾಂಗಣದವರು ಬ್ಲಾಕ್​ನಲ್ಲಿ ಟಿಕೆಟ್ ಮಾರಾಟ ಮಾಡ್ತಿದ್ದಾರೆ. 1500 ರೂಪಾಯಿ ಬೆಲೆಯ ಟಿಕೆಟ್​ಗೆ ಹತ್ತು ಸಾವಿರ ರೂಪಾಯಿ ಹೇಳ್ತಿದ್ದಾರೆ. 3 ಸಾವಿರ ರುಪಾಯಿ ಟಿಕೆಟ್​ಗೆ 15 ರಿಂದ 20 ಸಾವಿರ ರುಪಾಯಿ ಹೇಳ್ತಿದ್ದಾರೆ. ‌ಅದು ಟಿಕೆಟ್ ಕೊಡ್ತಾರೋ ಇಲ್ವೋ ಗೊತ್ತಿಲ್ಲ.

ನಾವು ಹಣ ಕೊಡಲು ರೆಡಿ ಇದ್ದೀವಿ. ಅವರು ಹಣ ತೆಗೆದುಕೊಂಡು ಟಿಕೆಟ್ ಕೊಡ್ತಾರೋ ಇಲ್ವೋ ಗೊತ್ತಿಲ್ಲ. ಅದಕ್ಕೆ ನಾವು ಟಿಕೆಟ್ ತೋರಿಸಿ ಆಮೇಲೆ ಹಣ ಕೊಡ್ತಿವಿ ಅಂತಿದ್ದೀವಿ. ಎಲ್ಲಾ ಒಳಗಿನವ್ರೇ ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ಟಿಕೆಟ್ ಕೊಡ್ತಿಲ್ಲ. ದೂರ ಕರೆದುಕೊಂಡು ಹೋಗಿ ಮಾತುಕತೆ ಮಾಡ್ತಾರೆ. ದುಡ್ಡು ಇಸ್ಕೊಂಡು ಎಸ್ಕೇಪ್ ಆದರೆ ನಮ್ಮ ಕಥೆ ಅಷ್ಟೇ ಎಂದು ಆರ್​ಸಿಬಿ ಅಭಿಮಾನಿಗಳು ಕ್ರೀಡಾಂಗಣದವರ ವಿರುದ್ಧ ಆರೋಪ ಮಾಡುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:05 pm, Fri, 17 May 24