IPL 2024: ಮಳೆಯಿಂದ ಓವರ್​ ಕಡಿತಗೊಳಿಸಿದರೆ..? ಇಲ್ಲಿದೆ ಆರ್​ಸಿಬಿ ಪ್ಲೇಆಫ್​ ಲೆಕ್ಕಾಚಾರ

IPL 2024 RCB vs CSK Playoff Scenario: ಆರ್​ಸಿಬಿ ಪ್ಲೇಆಫ್‌ಗೇರಬೇಕೆಂದರೆ ಈ ಪಂದ್ಯದಲ್ಲಿ ಚೆನ್ನೈ ತಂಡವನ್ನು 18 ರನ್ ಅಥವಾ 11 ಎಸೆತಗಳು ಬಾಕಿ ಇರುವಂತೆಯೇ ಸೋಲಿಸಬೇಕು. ಇದು ಸಾಧ್ಯವಾದರೆ ಆರ್​ಸಿಬಿಯ ನೆಟ್​ ರನ್​ರೇಟ್​ ಸಿಎಸ್​ಕೆಗಿಂತ ಉತ್ತಮವಾಗುವುದಲ್ಲದೆ, ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವುದರೊಂದಿಗೆ ಪ್ಲೇಆಫ್​ಗೆ ಅರ್ಹತೆ ಪಡೆಯಲ್ಲಿದೆ.

IPL 2024: ಮಳೆಯಿಂದ ಓವರ್​ ಕಡಿತಗೊಳಿಸಿದರೆ..? ಇಲ್ಲಿದೆ ಆರ್​ಸಿಬಿ ಪ್ಲೇಆಫ್​ ಲೆಕ್ಕಾಚಾರ
ಆರ್​ಸಿಬಿ- ಸಿಎಸ್​ಕೆ
Follow us
ಪೃಥ್ವಿಶಂಕರ
|

Updated on: May 17, 2024 | 5:02 PM

ಆರ್​ಸಿಬಿ ಹಾಗೂ ಸಿಎಸ್​ಕೆ (RCB vs CSK) ನಡುವೆ ನಾಳೆ ಅಂದರೆ, ಮೇ 18 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಕದನ ನಡೆಯಲ್ಲಿದೆ. ಪ್ಲೇಆಫ್‌ಗೇರಲು ಈ ಪಂದ್ಯದ ಗೆಲುವು ಎರಡೂ ತಂಡಗಳಿಗು ಅತ್ಯವಶ್ಯಕವಾಗಿದೆ. ಆದರೆ ಈ ಪಂದ್ಯದ ಮೇಲೆ ಮಳೆಯ ಕರಿನೆರಳು ಆವರಿಸಿದೆ. ಇದು ಆರ್​ಸಿಬಿ (RCB) ಅಭಿಮಾನಿಗಳ ಮನದಲ್ಲಿ ಆತಂಕ ಮೂಡಿಸಿದೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಸಿಎಸ್​ಕೆ ತಂಡ ನಾಲ್ಕನೇ ತಂಡವಾಗಿ ಸುಲಭವಾಗಿ ಪ್ಲೇಆಫ್‌ಗೇರಲಿದೆ. ಇತ್ತ ಆರ್​ಸಿಬಿ ಮತ್ತೊಮ್ಮೆ ಖಾಲಿ ಕೈಯಲ್ಲಿ ಲೀಗ್​ನಿಂದ ಹೊರಬೀಳಬೇಕಿದೆ. ಅದೃಷ್ಟವಶಾತ್ ಪಂದ್ಯದ ದಿನ ಮಳೆ ಬಾರದೆ ಪಂದ್ಯ ನಡೆದರೂ ಆರ್​ಸಿಬಿ ಪ್ಲೇಆಫ್‌ಗೇರುವ ಹಾದಿ ಅಷ್ಟು ಸುಲಭವಾಗಿಲ್ಲ. ಏಕೆಂದರೆ ಆರ್​ಸಿಬಿಗಿಂತ, ಸಿಎಸ್​​ಕೆ ಈಗಾಗಲೇ ಒಂದು ಪಂದ್ಯವನ್ನು ಅಧಿಕವಾಗಿ ಗೆದ್ದಿರುವುದು ಮತ್ತು ಅದರ ನೆಟ್​ ರನ್​ರೇಟ್ (NRR)​ ಕೂಡ ಆರ್​ಸಿಬಿಗಿಂತ ಉತ್ತಮವಾಗಿರುವುದು.

ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಆದರೆ ಆರ್​ಸಿಬಿ ಕೇವಲ 12 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಈಗ ಚೆನ್ನೈ ಮುಂದಿನ ಸುತ್ತಿಗೆ ತಲುಪಲು ಕೇವಲ ಒಂದು ಜಯದ ಅಗತ್ಯವಿದೆ. ಆದರೆ ಬೆಂಗಳೂರಿಗೆ ಗೆಲುವಿನ ಅವಶ್ಯಕತೆ ಮಾತ್ರವಲ್ಲದೆ ಚೆನ್ನೈ ಅನ್ನು ನಿರ್ದಿಷ್ಟ ಅಂತರದಿಂದ ಸೋಲಿಸಬೇಕಾಗಿದೆ. ಅಂದರೆ, ಬೆಂಗಳೂರು ಆ ಅಂತರವನ್ನು ಸಾಧಿಸದಿದ್ದರೆ, ಸೋಲಿನ ಹೊರತಾಗಿಯೂ ಚೆನ್ನೈ ಪ್ಲೇಆಫ್ ತಲುಪುತ್ತದೆ.

ಪಂದ್ಯಕ್ಕೆ ಮಳೆಯ ಆತಂಕ

ಆರ್​ಸಿಬಿ ಪ್ಲೇಆಫ್‌ಗೇರಬೇಕೆಂದರೆ ಈ ಪಂದ್ಯದಲ್ಲಿ ಚೆನ್ನೈ ತಂಡವನ್ನು 18 ರನ್ ಅಥವಾ 11 ಎಸೆತಗಳು ಬಾಕಿ ಇರುವಂತೆಯೇ ಸೋಲಿಸಬೇಕು. ಇದು ಸಾಧ್ಯವಾದರೆ ಆರ್​ಸಿಬಿಯ ನೆಟ್​ ರನ್​ರೇಟ್​ ಸಿಎಸ್​ಕೆಗಿಂತ ಉತ್ತಮವಾಗುವುದಲ್ಲದೆ, ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವುದರೊಂದಿಗೆ ಪ್ಲೇಆಫ್​ಗೆ ಅರ್ಹತೆ ಪಡೆಯಲ್ಲಿದೆ. ಆದರೆ ಮೇ 18 ರಿಂದ 20 ರವರೆಗೆ ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಇದಕ್ಕಾಗಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮೇ 18ರಂದೇ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಪಂದ್ಯ ನಡೆಯಲ್ಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ನಿಜವಾದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವುದು ಖಚಿತ. ಅಂತಹ ಪರಿಸ್ಥಿತಿಯಲ್ಲಿ, ಪಂದ್ಯವನ್ನು ಸಂಪೂರ್ಣವಾಗಿ ರದ್ದುಪಡಿಸಬಹುದು ಅಥವಾ ಸಮಯಕ್ಕನುಗುಣವಾಗಿ ಓವರ್‌ಗಳನ್ನು ಕಡಿತಗೊಳಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಆರ್​ಸಿಬಿ ಪ್ಲೇಆಫ್‌ಗೇರಲು ಏನು ಮಾಡಬೇಕು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಓವರ್‌ಗಳನ್ನು ಕಡಿತಗೊಳಿಸಿದರೆ ಆರ್​ಸಿಬಿ ಹೇಗೆ ಗೆಲ್ಲಬೇಕು?

ಮಳೆಯಿಂದಾಗಿ ಪಂದ್ಯದಲ್ಲಿ ಓವರ್‌ಗಳನ್ನು ಕಡಿತಗೊಳಿಸಿದರೆ, ಆರ್‌ಸಿಬಿ ಎಷ್ಟು ಅಂತರದಲ್ಲಿ ಗೆಲ್ಲಬೇಕು ಎಂಬುದನ್ನು ನೋಡುವುದಾದರೆ.. ಪಂದ್ಯ 20 ಓವರ್‌ಗಳದ್ದಾಗಿದ್ದು ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಗಳಿಸಿದರೆ, ಸಿಎಸ್​ಕೆ ತಂಡವನ್ನು 182 ರನ್‌ಗಳಿಗೆ ನಿರ್ಬಂಧಿಸಬೇಕಾಗುತ್ತದೆ. ಅಂದರೆ 18 ರನ್‌ಗಳಿಂದ ಸೋಲಿಸಬೇಕು. ಒಂದು ವೇಳೆ ಚೆನ್ನೈ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಟಾರ್ಗೆಟ್ ನೀಡಿದರೆ, ಆರ್‌ಸಿಬಿ ಈ ಗುರಿಯನ್ನು 11 ಎಸೆತಗಳು ಬಾಕಿ ಇರುವಂತೆ ಅಂದರೆ 18.1 ಓವರ್‌ಗಳಲ್ಲಿ ಸಾಧಿಸಬೇಕಾಗುತ್ತದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯದಲ್ಲಿ ಓವರ್‌ಗಳನ್ನು ಕಡಿತಗೊಳಿಸಿದರೆ ಆಗ ಆರ್​ಸಿಬಿ ಏನು ಮಾಡುಬೇಕು ಎಂಬುದನ್ನು ನೋಡುವುದಾದರೆ..

  • ಮಳೆಯಿಂದಾಗಿ ಪಂದ್ಯವನ್ನು ತಲಾ 15 ಓವರ್‌ಗಳಿಗೆ ಸೀಮಿತಗೊಳಿಸಿದರೆ, ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಿ 170 ರನ್ ಗಳಿಸಿದರೆ, ಚೆನ್ನೈ ತಂಡವನ್ನು 152 ರನ್‌ಗಳಿಗೆ ಸೀಮಿತಗೊಳಿಸಬೇಕಾಗುತ್ತದೆ. ಒಂದು ವೇಳೆ ಸಿಎಸ್​ಕೆ ಮೊದಲು ಬ್ಯಾಟಿಂಗ್ ಮಾಡಿ 170 ರನ್ ಕಲೆಹಾಕಿದರೆ, ಆರ್​ಸಿಬಿ ಈ ಗುರಿಯನ್ನು 13.1 ಓವರ್‌ಗಳಲ್ಲಿ ಸಾಧಿಸಬೇಕಾಗಿದೆ.
  • ಒಂದು ವೇಳೆ ಪಂದ್ಯ ತಲಾ 10 ಓವರ್‌ಗಳಿಗೆ ಸೀಮಿತಗೊಂಡರೆ, ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಿ 100 ರನ್ ಗಳಿಸಿದರೆ, ಚೆನ್ನೈ ತಂಡವನ್ನು 82 ರನ್‌ಗಳಿಗೆ ಸೀಮಿತಗೊಳಿಸಬೇಕಾಗುತ್ತದೆ. ಚೆನ್ನೈ ತಂಡ ಮೊದಲು ಬ್ಯಾಟಿಂಗ್ ಮಾಡಿ 100 ರನ್ ಟಾರ್ಗೆಟ್ ನೀಡಿದರೆ, ಆರ್​ಸಿಬಿ 8.1 ಓವರ್‌ಗಳಲ್ಲಿ ಈ ಗುರಿಯನ್ನು ಸಾಧಿಸಬೇಕಾಗಿದೆ.
  • ಅಂತಿಮವಾಗಿ ಪಂದ್ಯ ತಲಾ 5 ಓವರ್‌ಗಳಿಗೆ ಸೀಮಿತಗೊಂಡರೆ, ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಿ 50 ರನ್ ಗಳಿಸಿತು ಎಂದಿಟ್ಟುಕೊಳ್ಳೋಣ, ಆಗ ಚೆನ್ನೈ ತಂಡವನ್ನು 32 ರನ್‌ಗಳಿಗೆ ಸೀಮಿತಗೊಳಿಸಬೇಕಾಗುತ್ತದೆ. ಚೆನ್ನೈ ಮೊದಲು ಬ್ಯಾಟಿಂಗ್ ಮಾಡಿ 50 ರನ್ ಗಳಿಸಿದರೆ, ಆಗ ಆರ್​ಸಿಬಿ 3.1 ಓವರ್‌ಗಳಲ್ಲಿ ಈ ರನ್ ಬಾರಿಸಬೇಕಾಗುತ್ತದೆ. ಆಗ ಮಾತ್ರ ತಂಡ ನೆಟ್​ ರನ್​ರೇಟ್ ಆಧಾರದ ಮೇಲೆ ಪ್ಲೇಆಫ್‌ಗೇರಬಹುದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್
ಶಿವಕುಮಾರ್ ಸ್ಥಿತಿ ನೋಡಿದರೆ ನನ್ನಲ್ಲಿ ಕರುಣೆ ಹುಟ್ಟುತ್ತದೆ: ಆರ್ ಅಶೋಕ
ಶಿವಕುಮಾರ್ ಸ್ಥಿತಿ ನೋಡಿದರೆ ನನ್ನಲ್ಲಿ ಕರುಣೆ ಹುಟ್ಟುತ್ತದೆ: ಆರ್ ಅಶೋಕ
ಸುರ್ಜೆವಾಲಾ ಭೇಟಿ ನಾಯಕರ ಆಂತರಿಕ ಕಾದಾಟವನ್ನು ತಹಬದಿಗೆ ತರುವುದೆ?‘
ಸುರ್ಜೆವಾಲಾ ಭೇಟಿ ನಾಯಕರ ಆಂತರಿಕ ಕಾದಾಟವನ್ನು ತಹಬದಿಗೆ ತರುವುದೆ?‘
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರೊಂದಿಗೂ ನನ್ನ ತಿಕ್ಕಾಟವಿಲ್ಲ: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರೊಂದಿಗೂ ನನ್ನ ತಿಕ್ಕಾಟವಿಲ್ಲ: ಜಾರಕಿಹೊಳಿ
ನಾವು ಅಧಿಕೃತವಾಗಿ ಸಭೆ ನಡೆಬೇಕೆಂದುಕೊಂಡಿದ್ದೆವು, ಮುಚ್ಚುಮರೆ ಇಲ್ಲ: ಖರ್ಗೆ
ನಾವು ಅಧಿಕೃತವಾಗಿ ಸಭೆ ನಡೆಬೇಕೆಂದುಕೊಂಡಿದ್ದೆವು, ಮುಚ್ಚುಮರೆ ಇಲ್ಲ: ಖರ್ಗೆ
ಪೊಲೀಸರು ಬಂಧಿಸಿರುವ ದುಷ್ಟವ್ಯಕ್ತಿ ಮಾನಸಿಕ ಅಸ್ವಸ್ಥನಲ್ಲ: ಕರ್ಣ
ಪೊಲೀಸರು ಬಂಧಿಸಿರುವ ದುಷ್ಟವ್ಯಕ್ತಿ ಮಾನಸಿಕ ಅಸ್ವಸ್ಥನಲ್ಲ: ಕರ್ಣ