MI vs LSG Highlights, IPL 2024: ಲಕ್ನೋ ವಿರುದ್ಧ ಕೊನೆಯ ಪಂದ್ಯದಲ್ಲೂ ಸೋತ ಮುಂಬೈ
Mumbai Indians Vs Lucknow Super Giants Highlights in Kannada: ಐಪಿಎಲ್ 2024 ರ 67 ನೇ ಪಂದ್ಯ ಮುಂಬೈ ಇಂಡಿಯನ್ಸ್ ತಂಡವನ್ನು 18 ರನ್ಗಳಿಂದ ಮಣಿಸುವಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಯಶಸ್ವಿಯಾಗಿದೆ. ಇದರೊಂದಿಗೆ ಮುಂಬೈ ತಂಡ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸೋಲುವುದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡು ಟೂರ್ನಿಯಿಂದ ಹೊರಬಿದ್ದಿದೆ.
LIVE NEWS & UPDATES
-
18 ರನ್ ಸೋಲು
ಐಪಿಎಲ್ 17ನೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ 18 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಲಕ್ನೋ ಮುಂಬೈಗೆ 215 ರನ್‌ಗಳ ಟಾರ್ಗೆಟ್ ನೀಡಿತ್ತು. ಗುರಿ ಬೆನ್ನಟ್ಟಿದ ಮುಂಬೈ ತಂಡ 20 ಓವರ್‌ಗಳಲ್ಲಿ 196 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಲಕ್ನೋ ಪರವಾಗಿ ನವೀನ್ ಉಲ್ ಹಕ್ ಮತ್ತು ರವಿ ಬಿಷ್ಣೋಯ್ ತಲಾ 2 ವಿಕೆಟ್ ಪಡೆದರು.
-
16 ಓವರ್ ಪೂರ್ಣ
215 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ 16 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ.
-
ಅರ್ಧಶತಕ ಬಾರಿಸಿ ರೋಹಿತ್ ಔಟ್
68 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದ ರೋಹಿತ್ ಶರ್ಮಾ ಪೆವಿಲಿಯನ್‌ಗೆ ವಾಪಸಾಗಿದ್ದಾರೆ.
ಮತ್ತೆ ಸೊನ್ನೆ ಸುತ್ತಿದ ಸೂರ್ಯ
ಮುಂಬೈ ಇಂಡಿಯನ್ಸ್ ಎರಡನೇ ವಿಕೆಟ್ ಕಳೆದುಕೊಂಡಿದ್ದು, ಸೂರ್ಯಕುಮಾರ್ ಯಾದವ್ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದ್ದಾರೆ.
ಬ್ರೆವಿಸ್ ಔಟ್
ಡೆವಾಲ್ಡ್ ಬ್ರೆವಿಸ್ 23 ರನ್ ಗಳಿಸಿ ನವೀನ್ ಉಲ್ ಹಕ್ಗೆ ಬಲಿಯಾದರು. 9 ಓವರ್‌ಗಳ ಅಂತ್ಯಕ್ಕೆ ಮುಂಬೈ ತಂಡ 1 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿದೆ.
ಪವರ್ ಪ್ಲೇ ಅಂತ್ಯ
6 ಓವರ್‌ಗಳ ಆಟದ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ಯಾವುದೇ ವಿಕೆಟ್ ನಷ್ಟವಿಲ್ಲದೆ 53 ರನ್ ಗಳಿಸಿದೆ. ರೋಹಿತ್ ಶರ್ಮಾ 39 ರನ್ ಹಾಗೂ ಡೆವಾಲ್ಡ್ ಬ್ರೆವಿಸ್ 10 ರನ್ ಗಳಿಸಿ ಆಡುತ್ತಿದ್ದಾರೆ.
ಮಳೆಯಿಂದಾಗಿ ಪಂದ್ಯ ಸ್ಥಗಿತ
ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯುತ್ತಿರುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು ನಿಲ್ಲಿಸಲಾಗಿದೆ. 215 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ತಂಡ 3.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 33 ರನ್ ಗಳಿಸಿತ್ತು. ರೋಹಿತ್ 20 ಮತ್ತು ಡೆವಾಲ್ಡ್ ಬ್ರೆವಿಸ್ 9 ರನ್ ಗಳಿಸಿ ಆಡುತ್ತಿದ್ದಾರೆ.
3 ಓವರ್ ಮುಕ್ತಾಯ
215 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 3 ಓವರ್‌ಗಳ ಆಟದ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 25 ರನ್ ಗಳಿಸಿದೆ. ಡೆವಾಲ್ಡ್ ಬ್ರೆವಿಸ್ 2, ರೋಹಿತ್ ಶರ್ಮಾ 19 ರನ್ ಗಳಿಸಿ ಆಡುತ್ತಿದ್ದಾರೆ.
215 ರನ್ ಟಾರ್ಗೆಟ್
ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳ ಆಟದ ಅಂತ್ಯಕ್ಕೆ 6 ವಿಕೆಟ್ ನಷ್ಟದಲ್ಲಿ 214 ರನ್ ಗಳಿಸಿತು. ಲಕ್ನೋ ಪರ ನಿಕ್ಲಾಸ್ ಪುರನ್ 75 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಮುಂಬೈ ಪರ ಪಿಯೂಷ್ ಚಾವ್ಲಾ ಮತ್ತು ನುವಾನ್ ತುಷಾರ ತಲಾ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
18 ಓವರ್ ಪೂರ್ಣ
18 ಓವರ್‌ಗಳ ಅಂತ್ಯಕ್ಕೆ ಲಕ್ನೋ ಸೂಪರ್ ಜೈಂಟ್ಸ್ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿದೆ. ಕೃನಾಲ್ ಪಾಂಡ್ಯ 7 ರನ್ ಗಳಿಸಿ ಆಡುತ್ತಿದ್ದರೆ, ಆಯುಷ್ ಬದೋನಿ 1 ರನ್ ಗಳಿಸಿ ಆಡುತ್ತಿದ್ದಾರೆ.
ಪೂರನ್ ಅರ್ಧಶತಕ
ನಿಕೋಲಸ್ ಪೂರನ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. 15 ಓವರ್‌ಗಳ ಅಂತ್ಯಕ್ಕೆ ಲಕ್ನೋ 3 ವಿಕೆಟ್ ಕಳೆದುಕೊಂಡ 159 ರನ್ ಗಳಿಸಿದೆ.
12 ಓವರ್ ಪೂರ್ಣ
12 ಓವರ್‌ಗಳ ಅಂತ್ಯಕ್ಕೆ ಲಕ್ನೋ ಸೂಪರ್ ಜೈಂಟ್ಸ್ 3 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದೆ. ಕೆಎಲ್ ರಾಹುಲ್ 40 ಮತ್ತು ನಿಕೋಲಸ್ ಪೂರನ್ 8 ರನ್ ಗಳಿಸಿ ಆಡುತ್ತಿದ್ದಾರೆ.
ಹೂಡಾ ಔಟ್
10ನೇ ಓವರ್‌ನಲ್ಲಿ ದೀಪಕ್ ಹೂಡಾ ವಿಕೆಟ್ ಪತನಗೊಂಡಿದೆ. ನಿಕೋಲಸ್ ಪುರನ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. 9.4 ಓವರ್‌ಗಳ ನಂತರ ತಂಡದ ಸ್ಕೋರ್ 69/3.
ಪವರ್‌ಪ್ಲೇ ಅಂತ್ಯ, ಸ್ಟೊಯಿನಿಸ್ ಔಟ್
ಪವರ್‌ಪ್ಲೇಯ ಕೊನೆಯ ಎಸೆತದಲ್ಲಿ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಪೀಯೂಷ್ ಚಾವ್ಲಾ ಔಟ್ ಮಾಡಿದರು. ಸ್ಟೊಯಿನಿಸ್ 22 ಎಸೆತಗಳಲ್ಲಿ 28 ರನ್‌ಗಳ ಇನ್ನಿಂಗ್ಸ್ ಆಡಿದರು.
ಆರು ಓವರ್‌ಗಳ ನಂತರ ತಂಡದ ಸ್ಕೋರ್ 56/2.
ಮೂರು ಓವರ್ ಮುಕ್ತಾಯ
ಲಕ್ನೋದ ಬ್ಯಾಟಿಂಗ್ ಆಮೆಗತಿಯಲ್ಲಿ ಸಾಗುತ್ತಿದೆ. ಮೂರು ಓವರ್‌ಗಳ ಆಟ ಮುಗಿದಿದ್ದು, ತಂಡದ ಸ್ಕೋರ್ ಇದುವರೆಗೆ ಕೇವಲ 14 ರನ್ ಆಗಿದೆ.
ಲಕ್ನೋ ಮೊದಲ ವಿಕೆಟ್ ಪತನ
ಲಕ್ನೋ ಮೊದಲ ಓವರ್‌ನ ಮೂರನೇ ಎಸೆತದಲ್ಲಿ ದೇವದತ್ ಪಡಿಕ್ಕಲ್ ಅವರ ವಿಕೆಟ್ ಕಳೆದುಕೊಂಡಿದೆ. ಪಡಿಕ್ಕಲ್ ಯಾವುದೇ ರನ್ ಗಳಿಸದೇ ಪೆವಿಲಿಯನ್‌ಗೆ ಮರಳಿದರು.
ಲಕ್ನೋ ಸೂಪರ್ ಜೈಂಟ್ಸ್
ಕೆಎಲ್ ರಾಹುಲ್ (ವಿಕೆಟ್ ಕೀಪರ್/ನಾಯಕ), ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಅರ್ಷದ್ ಖಾನ್, ಮ್ಯಾಟ್ ಹೆನ್ರಿ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್.
ಮುಂಬೈ ಇಂಡಿಯನ್ಸ್
ಇಶಾನ್ ಕಿಶನ್ (ವಿಕೆಟ್ ಕೀಪರ್), ನಮನ್ ಧೀರ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೂವಿಸ್, ಹಾರ್ದಿಕ್ ಪಾಂಡ್ಯ (ನಾಯಕ), ನೆಹಾಲ್ ವಧೇರಾ, ರೊಮಾರಿಯೊ ಶೆಫರ್ಡ್, ಅನ್ಶುಲ್ ಕಾಂಬೋಜ್, ಪಿಯೂಷ್ ಚಾವ್ಲಾ, ಅರ್ಜುನ್ ತೆಂಡೂಲ್ಕರ್, ನುವಾನ್ ತುಷಾರ.
ಟಾಸ್ ಗೆದ್ದ ಮುಂಬೈ
ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.
ಐಪಿಎಲ್ 2024 ರ 67 ನೇ ಪಂದ್ಯ ಮುಂಬೈ ಇಂಡಿಯನ್ಸ್ ತಂಡವನ್ನು 18 ರನ್ಗಳಿಂದ ಮಣಿಸುವಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಯಶಸ್ವಿಯಾಗಿದೆ. ಇದರೊಂದಿಗೆ ಮುಂಬೈ ತಂಡ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸೋಲುವುದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡು ಟೂರ್ನಿಯಿಂದ ಹೊರಬಿದ್ದಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ತಂಡದ ಪರ ನಾಯಕ ಕೆಎಲ್ ರಾಹುಲ್ 41 ಎಸೆತಗಳಲ್ಲಿ 55 ರನ್ ಸಿಡಿಸಿದರೆ, ಪೂರನ್ ಕೇವಲ 29 ಎಸೆತಗಳಲ್ಲಿ 75 ರನ್ ಸಿಡಿಸಿದ್ದರು. ಈ ಗುರಿ ಬೆನ್ನಟ್ಟಿದ ಮುಂಬೈ ತಂಡ 20 ಓವರ್‌ಗಳಲ್ಲಿ 196 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಲಕ್ನೋ ಪರವಾಗಿ ನವೀನ್ ಉಲ್ ಹಕ್ ಮತ್ತು ರವಿ ಬಿಷ್ಣೋಯ್ ತಲಾ 2 ವಿಕೆಟ್ ಪಡೆದರು.
Published On - May 17,2024 7:54 PM