ಆರ್‌ಸಿಬಿ ಹಾಗೂ ಸಿಎಸ್ಕೆ (RCB vs CSK) ನಡುವೆ ನಾಳೆ ಅಂದರೆ, ಮೇ 18 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಕದನ ನಡೆಯಲ್ಲಿದೆ. ಪ್ಲೇಆಫ್‌ಗೇರಲು ಈ ಪಂದ್ಯದ ಗೆಲುವು ಎರಡೂ ತಂಡಗಳಿಗು ಅತ್ಯವಶ್ಯಕವಾಗಿದೆ. ಆದರೆ ಈ ಪಂದ್ಯದ ಮೇಲೆ ಮಳೆಯ ಕರಿನೆರಳು ಆವರಿಸಿದೆ. ಇದು ಆರ್‌ಸಿಬಿ (RCB) ಅಭಿಮಾನಿಗಳ ಮನದಲ್ಲಿ ಆತಂಕ ಮೂಡಿಸಿದೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಸಿಎಸ್ಕೆ ತಂಡ ನಾಲ್ಕನೇ ತಂಡವಾಗಿ ಸುಲಭವಾಗಿ ಪ್ಲೇಆಫ್‌ಗೇರಲಿದೆ. ಇತ್ತ ಆರ್‌ಸಿಬಿ ಮತ್ತೊಮ್ಮೆ ಖಾಲಿ ಕೈಯಲ್ಲಿ ಲೀಗ್ನಿಂದ ಹೊರಬೀಳಬೇಕಿದೆ. ಅದೃಷ್ಟವಶಾತ್ ಪಂದ್ಯದ ದಿನ ಮಳೆ ಬಾರದೆ ಪಂದ್ಯ ನಡೆದರೂ ಆರ್‌ಸಿಬಿ ಪ್ಲೇಆಫ್‌ಗೇರುವ ಹಾದಿ ಅಷ್ಟು ಸುಲಭವಾಗಿಲ್ಲ. ಏಕೆಂದರೆ ಆರ್ಸಿಬಿಗಿಂತ, ಸಿಎಸ್ಕೆ ಈಗಾಗಲೇ ಒಂದು ಪಂದ್ಯವನ್ನು ಅಧಿಕವಾಗಿ ಗೆದ್ದಿರುವುದು ಮತ್ತು ಅದರ ನೆಟ್ ರನ್ರೇಟ್ (NRR) ಕೂಡ ಆರ್ಸಿಬಿಗಿಂತ ಉತ್ತಮವಾಗಿರುವುದು.
ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಆದರೆ ಆರ್‌ಸಿಬಿ ಕೇವಲ 12 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಈಗ ಚೆನ್ನೈ ಮುಂದಿನ ಸುತ್ತಿಗೆ ತಲುಪಲು ಕೇವಲ ಒಂದು ಜಯದ ಅಗತ್ಯವಿದೆ. ಆದರೆ ಬೆಂಗಳೂರಿಗೆ ಗೆಲುವಿನ ಅವಶ್ಯಕತೆ ಮಾತ್ರವಲ್ಲದೆ ಚೆನ್ನೈ ಅನ್ನು ನಿರ್ದಿಷ್ಟ ಅಂತರದಿಂದ ಸೋಲಿಸಬೇಕಾಗಿದೆ. ಅಂದರೆ, ಬೆಂಗಳೂರು ಆ ಅಂತರವನ್ನು ಸಾಧಿಸದಿದ್ದರೆ, ಸೋಲಿನ ಹೊರತಾಗಿಯೂ ಚೆನ್ನೈ ಪ್ಲೇಆಫ್ ತಲುಪುತ್ತದೆ.
ಆರ್‌ಸಿಬಿ ಪ್ಲೇಆಫ್‌ಗೇರಬೇಕೆಂದರೆ ಈ ಪಂದ್ಯದಲ್ಲಿ ಚೆನ್ನೈ ತಂಡವನ್ನು 18 ರನ್ ಅಥವಾ 11 ಎಸೆತಗಳು ಬಾಕಿ ಇರುವಂತೆಯೇ ಸೋಲಿಸಬೇಕು. ಇದು ಸಾಧ್ಯವಾದರೆ ಆರ್ಸಿಬಿಯ ನೆಟ್ ರನ್ರೇಟ್ ಸಿಎಸ್ಕೆಗಿಂತ ಉತ್ತಮವಾಗುವುದಲ್ಲದೆ, ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವುದರೊಂದಿಗೆ ಪ್ಲೇಆಫ್ಗೆ ಅರ್ಹತೆ ಪಡೆಯಲ್ಲಿದೆ. ಆದರೆ ಮೇ 18 ರಿಂದ 20 ರವರೆಗೆ ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಇದಕ್ಕಾಗಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮೇ 18ರಂದೇ ಆರ್‌ಸಿಬಿ ಹಾಗೂ ಸಿಎಸ್ಕೆ ನಡುವಿನ ಪಂದ್ಯ ನಡೆಯಲ್ಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ನಿಜವಾದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವುದು ಖಚಿತ. ಅಂತಹ ಪರಿಸ್ಥಿತಿಯಲ್ಲಿ, ಪಂದ್ಯವನ್ನು ಸಂಪೂರ್ಣವಾಗಿ ರದ್ದುಪಡಿಸಬಹುದು ಅಥವಾ ಸಮಯಕ್ಕನುಗುಣವಾಗಿ ಓವರ್‌ಗಳನ್ನು ಕಡಿತಗೊಳಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿ ಪ್ಲೇಆಫ್‌ಗೇರಲು ಏನು ಮಾಡಬೇಕು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಮಳೆಯಿಂದಾಗಿ ಪಂದ್ಯದಲ್ಲಿ ಓವರ್‌ಗಳನ್ನು ಕಡಿತಗೊಳಿಸಿದರೆ, ಆರ್‌ಸಿಬಿ ಎಷ್ಟು ಅಂತರದಲ್ಲಿ ಗೆಲ್ಲಬೇಕು ಎಂಬುದನ್ನು ನೋಡುವುದಾದರೆ.. ಪಂದ್ಯ 20 ಓವರ್‌ಗಳದ್ದಾಗಿದ್ದು ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಗಳಿಸಿದರೆ, ಸಿಎಸ್ಕೆ ತಂಡವನ್ನು 182 ರನ್‌ಗಳಿಗೆ ನಿರ್ಬಂಧಿಸಬೇಕಾಗುತ್ತದೆ. ಅಂದರೆ 18 ರನ್‌ಗಳಿಂದ ಸೋಲಿಸಬೇಕು. ಒಂದು ವೇಳೆ ಚೆನ್ನೈ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಟಾರ್ಗೆಟ್ ನೀಡಿದರೆ, ಆರ್‌ಸಿಬಿ ಈ ಗುರಿಯನ್ನು 11 ಎಸೆತಗಳು ಬಾಕಿ ಇರುವಂತೆ ಅಂದರೆ 18.1 ಓವರ್‌ಗಳಲ್ಲಿ ಸಾಧಿಸಬೇಕಾಗುತ್ತದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯದಲ್ಲಿ ಓವರ್‌ಗಳನ್ನು ಕಡಿತಗೊಳಿಸಿದರೆ ಆಗ ಆರ್‌ಸಿಬಿ ಏನು ಮಾಡುಬೇಕು ಎಂಬುದನ್ನು ನೋಡುವುದಾದರೆ..
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ