Breaking: ರಣರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!

IPL 2024: ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​​ಸಿಬಿ ಹಾಗೂ ಸಿಎಸ್​ಕೆ ನಡುವಿನ ರಣರೋಚಕ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಪಡೆಯನ್ನು 27 ರನ್​ಗಳಿಂದ ಮಣಿಸಿದ ಫಾಫ್ ಪಡೆ ಪ್ಲೇಆಫ್​ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

Breaking: ರಣರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!
ಆರ್​ಸಿಬಿ
Follow us
ಪೃಥ್ವಿಶಂಕರ
|

Updated on:May 19, 2024 | 12:43 AM

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (M Chinnaswamy Stadium) ನಡೆದ ಆರ್​​ಸಿಬಿ ಹಾಗೂ ಸಿಎಸ್​ಕೆ (RCB vs CSK) ನಡುವಿನ ರಣರೋಚಕ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಪಡೆಯನ್ನು 27 ರನ್​ಗಳಿಂದ ಮಣಿಸಿದ ಫಾಫ್ ಪಡೆ ಪ್ಲೇಆಫ್​ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಲೀಗ್​ನಲ್ಲಿ ಸತತ 6 ಪಂದ್ಯಗಳನ್ನು ಸೋತು ಪ್ಲೇಆಫ್​ನಿಂದ ಹೊರಗುಳಿಯುವ ಆತಂಕದಲ್ಲಿದ್ದ ಆರ್​ಸಿಬಿ, ಆ ಬಳಿಕ ಅದ್ಭುತ ಪುನರಾಗಮನ ಮಾಡಿ ಸತತ 6 ಪಂದ್ಯಗಳನ್ನು ಗೆದ್ದು ಪಾಯಿಂಟ್​ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಇದರೊಂದಿಗೆ ಅಧಿಕೃತವಾಗಿ ಪ್ಲೇಆಫ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದು, ಇದೀಗ ಎಲಿಮಿನೆಟರ್ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಅಥವಾ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಕಲೆಹಾಕಿತು. ಗೆಲುವಿಗೆ 219 ರನ್ ಹಾಗೂ ಪ್ಲೇಆಫ್​ಗೆ ಅರ್ಹತೆ ಪಡೆಯಲು 201 ರನ್ ಗುರಿ ಪಡೆದು ಇನ್ನಿಂಗ್ಸ್ ಆರಂಭಿಸಿದ ಚೆನ್ನೈ 20 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 191 ರನ್ ಗಳಿಸಲಷ್ಟೇ ಶಕ್ತವಾಯಿತು.

ಆರ್​ಸಿಬಿಗೆ ಉತ್ತಮ ಆರಂಭ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಮೊದಲ ಮೂರು ಓವರ್​ಗಳಲ್ಲಿ ಅದ್ಭುತ ಆರಂಭ ನೀಡಿದರು. ಈ ಮೂರು ಓವರ್​ಗಳಲ್ಲಿ ತಂಡ 31 ರನ್ ಕಲೆಹಾಕಿತ್ತು. ಆದರೆ ಈ ಸಮಯದಲ್ಲಿ ಮಳೆ ಬಿದ್ದಿದ್ದರಿಂದ ಪಂದ್ಯವನ್ನು ನಿಲ್ಲಿಸಬೇಕಾಯಿತು. ಸುಮಾರು 45 ನಿಮಿಷಗಳ ಬಳಿಕ ಪಂದ್ಯವನ್ನು ಮರು ಆರಂಭಿಸಲಾಯಿತು. ಮಳೆ ಬಂದು ನಿಂತಿದ್ದರಿಂದ ಪಿಚ್​ನಲ್ಲಿ ಕೊಂಚ ಬದಲಾವಣೆ ಕಂಡುಬಂತು. ಇದರ ಲಾಭ ಪಡೆದ ಸಿಎಸ್​ಕೆ ಸ್ಪಿನ್ನರ್​ಗಳು, ಆರ್​ಸಿಬಿ ಆರಂಭಿಕರು ಬಿಗ್ ಶಾಟ್ ಆಡದಂತೆ ಕಟ್ಟಿಹಾಕಿದರು. ಹೀಗಾಗಿ ಆರ್​ಸಿಬಿ ತಂಡ ಮೊದಲ 6 ಓವರ್​ಗಳಲ್ಲಿ 42 ರನ್​ ಕಲೆಹಾಕಲಷ್ಟೇ ಶಕ್ತವಾಯಿತು.

IPL 2024: ಕಿಂಗ್ ಕೊಹ್ಲಿಯ ನೋ ಲುಕ್ ಸಿಕ್ಸರ್; ಕ್ರೀಡಾಂಗಣದ ಮೇಲ್ಛಾವಣಿಗೆ ಬಡಿದ ಚೆಂಡು! ವಿಡಿಯೋ ನೋಡಿ

ಮೊದಲ ವಿಕೆಟ್​ಗೆ 78 ರನ್ ಜೊತೆಯಾಟ

ಅದಾಗ್ಯೂ ಆರ್​ಸಿಬಿ ಆರಂಭಿಕರು ರನ್ ರೇಟ್ ಕುಸಿತ ಕಂಡರೂ ವಿಕೆಟ್​ ಬಿಟ್ಟುಕೊಡಲಿಲ್ಲ. ಹೀಗಾಗಿ ಮೊದಲ ವಿಕೆಟ್​ಗೆ ಆರಂಭಿಕರ ನಡುವೆ 78 ರನ್​ಗಳ ಜೊತೆಯಾಟ ಕಂಡುಬಂತು. ಇಲ್ಲಿ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 47 ರನ್ ಬಾರಿಸಿದ ವಿರಾಟ್ ಕೊಹ್ಲಿ, ಸಿಕ್ಸರ್ ಬಾರಿಸುವ ಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ನಾಯಕ ​ಫಾಫ್ ಡುಪ್ಲೆಸಿಸ್ ಕೂಡ 39 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 57 ರನ್ ಕಲೆಹಾಕಿ ದುರಾದೃಷ್ಟಕರ ರೀತಿಯಲ್ಲಿ ರನೌಟ್​​ಗೆ ಬಲಿಯಾದರು.

ಗ್ರೀನ್- ರಜತ್ ಸ್ಫೋಟಕ ಬ್ಯಾಟಿಂಗ್

ಇಲ್ಲಿಂದ ಜೊತೆಯಾದ ರಜತ್ ಪಾಟಿದರ್ ಹಾಗೂ ಕ್ಯಾಮರೂನ್ ಗ್ರೀನ್ ತಂಡವನ್ನು 17.4 ಓವರ್​ಗಳಲ್ಲಿ 184 ರನ್​​ಗಳಿಗೆ ಕೊಂಡೊಯ್ದರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಬಂದ ರಜತ್ 23 ಎಸೆತಗಳಲ್ಲಿ 43 ರನ್ ಬಾರಿಸಿದರೆ ಅವರಿಗೆ ಉತ್ತಮ ಸಾಥ್ ನೀಡಿದ ಕ್ಯಾಮರೂನ್ ಗ್ರೀನ್ 17 ಎಸೆತಗಳಲ್ಲಿ 38 ರನ್ ಬಾರಿಸಿದರು. ಕೊನೆಯಲ್ಲಿ ಬಂದ ದಿನೇಶ್ ಕಾರ್ತಿಕ್ 14 ರನ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ 16 ರನ್​ಗಳ ಕೊಡುಗೆ ನೀಡಿದರು.

ಸಿಎಸ್​ಕೆಗೆ ಕಳಪೆ ಆರಂಭ

ಇನ್ನು ಗೆಲುವಿಗೆ 219 ರನ್‌ಗಳ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಪಂದ್ಯದಲ್ಲಿ ಅತ್ಯಂತ ಕಳಪೆ ಆರಂಭ ಪಡೆದಿದ್ದು, ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ನಾಯಕ ರುತುರಾಜ್ ಗಾಯಕ್ವಾಡ್ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಇದರ ನಂತರ, 19 ಸ್ಕೋರ್‌ನಲ್ಲಿ ಡೆರಿಲ್ ಮಿಚೆಲ್ ರೂಪದಲ್ಲಿ ಸಿಎಸ್‌ಕೆ ಎರಡನೇ ವಿಕೆಟ್​ ಕಳೆದುಕೊಂಡಿತು. ಇಲ್ಲಿಂದ ರಚಿನ್ ರವೀಂದ್ರ ಮತ್ತು ಅಜಿಂಕ್ಯ ರಹಾನೆ ತಂಡದ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು ಮತ್ತು ಇಬ್ಬರ ನಡುವೆ ಮೂರನೇ ವಿಕೆಟ್‌ಗೆ 66 ರನ್‌ಗಳ ಪಾಲುದಾರಿಕೆ ಕಂಡುಬಂದಿತು. ಈ ಪಂದ್ಯದಲ್ಲಿ 33 ರನ್‌ಗಳ ಇನಿಂಗ್ಸ್‌ ಆಡಿದ ನಂತರ ರಹಾನೆ ಪೆವಿಲಿಯನ್‌ ಸೇರಿಕೊಂಡರು. ಇಲ್ಲಿಂದ ಸಿಎಸ್​ಕೆ ತಂಡ ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಲೇ ಇತ್ತು. ಇದಲ್ಲದೆ ತಂಡ 115 ರನ್‌ಗಳಾಗುವಷ್ಟರಲ್ಲಿ 61 ರನ್‌ಗಳ ಇನಿಂಗ್ಸ್‌ ಆಡಿದ್ದ ರಚಿನ್ ರವೀಂದ್ರ ಅವರ ವಿಕೆಟ್​ ಕಳೆದುಕೊಂಡ ಬಳಿಕ ಪಂದ್ಯದಲ್ಲಿ ಕೊಂಚ ಹಿನ್ನಡೆ ಅನುಭವಿಸಿತು.

ಧೋನಿ- ಜಡೇಜಾ ಹೋರಾಟ ವ್ಯರ್ಥ

ಇದಾದ ನಂತರ 119 ರನ್‌ಗಳಾಗುವಷ್ಟರಲ್ಲಿ ಶಿವಂ ದುಬೆ ರೂಪದಲ್ಲಿ ಸಿಎಸ್​ಕೆ ಐದನೇ ವಿಕೆಟ್ ಕಳೆದುಕೊಂಡರೆ, 129 ರನ್‌ಗಳಾಗಿದ್ದಾಗ ಮಿಚೆಲ್ ಸ್ಯಾಂಟ್ನರ್ ರೂಪದಲ್ಲಿ ಆರನೇ ವಿಕೆಟ್ ಕಳೆದುಕೊಂಡಿತು. ಇಲ್ಲಿ 7ನೇ ವಿಕೆಟ್‌ಗೆ ರವೀಂದ್ರ ಜಡೇಜಾ ಮತ್ತು ಮಹೇಂದ್ರ ಸಿಂಗ್ ಧೋನಿ ನಡುವೆ 27 ಎಸೆತಗಳಲ್ಲಿ 61 ರನ್‌ಗಳ ಜೊತೆಯಾಟ ಕಂಡುಬಂದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲಾಗಲಿಲ್ಲ ಅಥವಾ ಪ್ಲೇಆಫ್‌ಗೆ ಅರ್ಹತೆ ಗಳಿಸಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:16 am, Sun, 19 May 24

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್