
ಐಪಿಎಲ್‌ನಲ್ಲಿ (IPL 2024) ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru vs Kolkata Knight Riders) ತಂಡಗಳು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ. ಈ ಎರಡೂ ತಂಡಗಳು ಮುಖಾಮುಖಿಯಾದಾಗ ಅಭಿಮಾನಿಗಳಿಗೆ ರಸದೌತಣವೇ ಸಿಗಲಿದೆ. ಇದಕ್ಕೆ ಈ ಹಿಂದೆ ನಡೆದ ಪಂದ್ಯಗಳೆ ಉದಾಹರಣೆಯಾಗಿದೆ. ಒಂದೆಡೆ ಉಭಯ ತಂಡಗಳ ಆಟಗಾರರ ಸಿಡಿಲಬ್ಬರದ ಬ್ಯಾಟಿಂಗ್ ಕಂಡುಬಂದರೆ, ಇನ್ನೊಂದೆಡೆ ಕೆಕೆಆರ್ ತಂಡದ ಮೆಂಟರ್ ಗೌತಮ್ ಗಂಭೀರ್ (Gautam Gambhir) ಹಾಗೂ ವಿರಾಟ್ ಕೊಹ್ಲಿ (Virat Kohli) ನಡುವಿನ ಶೀತಲ ಸಮರ ಪಂದ್ಯಕ್ಕೆ ಮೆರಗು ತರಲಿದೆ. ಇದೆಲ್ಲದರ ನಡುವೆ ಪಂದ್ಯ ಆರಂಭಕ್ಕೂ ಮುನ್ನ ಗೌತಮ್ ಗಂಭೀರ್ ಹೇಳಿಕೆಯೊಂದು ಹೊರಬಿದ್ದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಈ ಸಂದರ್ಶನದಲ್ಲಿ ಗೌತಮ್ ಗಂಭೀರ್, ಆರ್‌ಸಿಬಿ ಬಗ್ಗೆ ತೀರ ಕಟುವಾಗಿ ಮಾತನಾಡಿದ್ದಾರೆ. ‘ನಾನು ಪ್ರತಿ ಬಾರಿ, ಬಹುಶಃ ನನ್ನ ಕನಸಿನಲ್ಲಿಯೂ ಸೋಲಿಸಲು ಬಯಸುವ ಒಂದು ತಂಡ ಅಂದರೆ ಅದು ಆರ್‌ಸಿಬಿ ಎಂದಿದ್ದಾರೆ. ಯಾಕೆ ಹೀಗೆ ಹೇಳಿದ್ರಿ ಎಂದು ಆ್ಯಂಕರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ನನಗೆ ಅದು ಬೇಕು. ಆರ್‌ಸಿಬಿ ಉನ್ನತ ಮಟ್ಟದ ತಂಡ, ಶ್ರೇಷ್ಠ ತಂಡ. ಈ ತಂಡದಲ್ಲಿ ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅವರಂತಹ ಸ್ಟಾರ್ ಆಟಗಾರರು ಆಡಿದ್ದಾರೆ. ಆದರೆ ಅವರೆಲ್ಲ ಆಡಿದ್ದರೂ ತಂಡ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆದರೂ ನಾವು ಎಲ್ಲವನ್ನೂ ಸಾಧಿಸಿದ್ದೇವೆ ಎಂಬ ವರ್ತನೆಯನ್ನು ಈ ತಂಡ ತೋರಿಸುತ್ತದೆ.
.@GautamGambhir thinks @RCBTweets have massively underachieved in the past despite having @imVkohli, @henrygayle and @ABdeVilliers17 😬
Gambhir dreams of getting back on the field and beat Kohli & team yet again! 😱
Don’t miss Gambhir’s Kolkata take on Virat’s Bangalore! 💥… pic.twitter.com/Vvx6YNmqNS
— Star Sports (@StarSportsIndia) March 29, 2024
ಅಲ್ಲದೆ ನಮ್ಮ ತಂಡ ಆರ್‌ಸಿಬಿ ವಿರುದ್ಧ ಆಡಿದಾಗಲೆಲ್ಲ ಅದ್ಭುತ ಪ್ರದರ್ಶನ ನೀಡಿದೆ. ಅದರಲ್ಲಿ ಪ್ರಮುಖವಾಗಿ ಮೂರು ಗೆಲುವುಗಳ ಬಗ್ಗೆ ಹೇಳಬಹುದಾದರೆ.. ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಬ್ರೆಂಡನ್ ಮೆಕಲಮ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದರು. ಎರಡನೇಯದ್ದು, ಆರ್‌ಸಿಬಿ ತಂಡವನ್ನು ಕೇವಲ 49 ರನ್ಗಳಿಗೆ ಆಲೌಟ್ ಮಾಡಿತ್ತು. ಮೂರನೇಯದ್ದು, ಆರ್‌ಸಿಬಿ ವಿರುದ್ಧ ನಮ್ಮ ತಂಡ ಮೊದಲ ಆರು ಓವರ್ಗಳಲ್ಲಿ ಅಂದರೆ ಪವರ್ ಪ್ಲೇನಲ್ಲಿ ಶತಕ ಪೂರೈಸಿತ್ತು. ಅತ್ಯಂತ ಆಕ್ರಮಣಕಾರಿ ಬ್ಯಾಟಿಂಗ್ ಹೊಂದಿದ್ದ ತಂಡದ ವಿರುದ್ಧ ಈ ರೀತಿಯ ಪ್ರದರ್ಶನ ನೀಡಿರುವುದು ಅದ್ಭುತವಾಗಿದೆ. ನನ್ನ ಐಪಿಎಲ್ ವೃತ್ತಿಜೀವನದಲ್ಲಿ ನಾನು ಮಾಡಲು ಬಯಸುವ ಮತ್ತು ಇಷ್ಟಪಡುವ ಒಂದು ಕೆಲಸವಿದ್ದರೆ, ಅದು ಕ್ರಿಕೆಟ್ ಮೈದಾನಕ್ಕೆ ಹೋಗಿ ಆರ್‌ಸಿಬಿಯನ್ನು ಸೋಲಿಸುವುದು ಎಂದು ಗಂಭೀರ್ ಹೇಳಿದ್ದಾರೆ.
ಉಭಯ ತಂಡಗಳ ಮುಖಾಮುಖಿ ವರದಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಮೇಲುಗೈ ಸಾಧಿಸಿದೆ. ಐಪಿಎಲ್‌ನಲ್ಲಿ ಈ ಎರಡು ತಂಡಗಳ ನಡುವೆ ಇದುವರೆಗೆ 32 ಪಂದ್ಯಗಳು ನಡೆದಿವೆ. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 18 ಪಂದ್ಯಗಳನ್ನು ಗೆದ್ದಿದ್ದರೆ, 14 ಪಂದ್ಯಗಳಲ್ಲಿ ಸೋಲು ಕಂಡಿದೆ. ಇತ್ತ ಆರ್‌ಸಿಬಿ 14 ಪಂದ್ಯಗಳನ್ನು ಗೆದ್ದಿದ್ದರೆ, 18 ಪಂದ್ಯಗಳಲ್ಲಿ ಸೋಲು ಕಂಡಿದೆ. ಇನ್ನು ಕಳೆದ ಐದು ವರ್ಷಗಳಲ್ಲಿ ಎರಡು ತಂಡಗಳ ಮುಖಾಮುಖಿ ನೋಡುವುದಾದರೆ.. ಕಳೆದ 5 ವರ್ಷಗಳಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ 10 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಎರಡೂ ತಂಡಗಳು ತಲಾ 5 ಪಂದ್ಯಗಳನ್ನು ಗೆದ್ದಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:06 pm, Fri, 29 March 24