IPL 2024: ಆರ್​ಸಿಬಿಗೆ ಆಪತ್ಬಾಂಧವರಾದ ಡಿಕೆ- ಅನುಜ್; 174 ರನ್ ಟಾರ್ಗೆಟ್

|

Updated on: Mar 22, 2024 | 10:01 PM

IPL 2024: ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ತಂಡ ಅನುಜ್ ರಾವೂತ್ ಹಾಗೂ ದಿನೇಶ್ ಕಾರ್ತಿಕ್​ ಅವರ ಅಮೋಘ ಜೊತೆಯಾಟದ ನೆರವಿನಿಂದಾಗಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿದೆ.

IPL 2024: ಆರ್​ಸಿಬಿಗೆ ಆಪತ್ಬಾಂಧವರಾದ ಡಿಕೆ- ಅನುಜ್; 174 ರನ್ ಟಾರ್ಗೆಟ್
ಅನುಜ್- ದಿನೇಶ್ ಕಾರ್ತಿಕ್
Follow us on

ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಐಪಿಎಲ್ (IPL 2024) ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ತಂಡ ಅನುಜ್ ರಾವತ್ (Anuj Rawat) ಹಾಗೂ ದಿನೇಶ್ ಕಾರ್ತಿಕ್ (Dinesh Karthik)​ ಅವರ ಅಮೋಘ ಜೊತೆಯಾಟದ ನೆರವಿನಿಂದಾಗಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿದೆ. ಈ ಮೂಲಕ ಸಿಎಸ್​ಕೆ ತಂಡಕ್ಕೆ 174 ರನ್​ಗಳ ಟಾರ್ಗೆಟ್ ನೀಡಿದೆ. ಆರಂಭದಲ್ಲೇ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್​ಸಿವಿಗೆ ದಿನೇಶ್ ಕಾರ್ತಿಕ್ ಹಾಗೂ ಅನುಜ್ ರಾವತ್ ನೆರವಾದರು. ಈ ಇಬ್ಬರು ಕೊನೆಯ ಎಸೆತದವರಿಗೂ ಉಳಿದು 95 ರನ್​ಗಳ ಜೊತೆಯಾಟ ಆಡುವ ಮೂಲಕ ತಂಡವನ್ನು ಗೌರವತ್ಮಾಕ ಮೊತ್ತಕ್ಕೆ ಕೊಂಡೊಯ್ದರು. ಇತ್ತ ಸಿಎಸ್​ಕೆ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಮುಸ್ತಫಿಜುರ್ ರೆಹಮಾನ್ ಪ್ರಮುಖ 4 ವಿಕೆಟ್ ಪಡೆದರು.

ಆರ್​ಸಿಬಿಗೆ ಉತ್ತಮ ಆರಂಭ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆರ್​ಸಿಬಿ ಪರ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭವನ್ನೇ ನೀಡಿದರು. ಈ ಇಬ್ಬರು ಮೊದಲ ವಿಕೆಟ್​ಗೆ 41 ರನ್​ಗಳ ಜೊತೆಯಾಟ ಹಂಚಿಕೊಂಡರು. ಆದರೆ ಈ ವೇಳೆ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ನಾಯಕ ಡುಪ್ಲೆಸಿಸ್, ಮುಸ್ತಫಿಜುರ್ ಬೌಲಿಂಗ್​ನಲ್ಲಿ 35 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಆ ನಂತರ ಬಂದ ರಜತ್ ಪಾಟಿದರ್, ಐಪಿಎಲ್​ನಲ್ಲೂ ತಮ್ಮ ಕಳಪೆ ಫಾರ್ಮ್​ ಮುಂದುವರೆಸಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

IPL 2024: ಮೊದಲ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಕಿಂಗ್ ಕೊಹ್ಲಿ..!

ಸೊನ್ನೆ ಸುತ್ತಿದ ರಜತ್- ಗ್ಲೆನ್

ಮೂರನೇ ಕ್ರಮಾಂಕದಲ್ಲಿ ಬಂದ ಭರವಸೆಯ ಬ್ಯಾಟರ್ ಗ್ಲೆನ್ ಮ್ಯಾಕ್ಸ್​ವೆಲ್ ಕೂಡ ಯಾವುದೇ ಪರಿಣಾಮ ಬೀರದೆ ಮೊದಲ ಎಸೆತದಲ್ಲೇ ವಿಕೆಟ್​ ಕೀಪರ್​ಗೆ ಕ್ಯಾಚಿತ್ತು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಉತ್ತಮ ಆರಂಭದ ಹೊರತಾಗಿಯೂ ವಿಕೆಟ್​ಗಳ ದಿಢೀರ್​ ಪತನದಿಂದಾಗಿ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಕ್ಯಾಮರಾನ್ ಗ್ರೀನ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಆದರೆ ರಹಾನೆ ಹಿಡಿದ ಅದ್ಭುತ ಕ್ಯಾಚ್​ನಿಂದಾಗಿ ವಿರಾಟ್ ಕೊಹ್ಲಿ ಇನ್ನಿಂಗ್ಸ್ 21 ರನ್​ಗಳಿಗೆ ಅಂತ್ಯವಾಯಿತು.

ಡಿಕೆ- ಅನುಜ್ 95 ರನ್ ಜೊತೆಯಾಟ

ಕೊಹ್ಲಿ ವಿಕೆಟ್ ಬಳಿಕ ಗ್ರೀನ್ ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ಅವರು ಕೂಡ 18 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಹೀಗಾಗಿ ತಂಡ ಕೇವಲ 78 ರನ್​ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಲ್ಲಿಂದ ಜೊತೆಯಾದ ದಿನೇಶ್ ಕಾರ್ತಿಕ್ ಹಾಗೂ ಅನುಜ್ ರಾವತ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಈ ಇಬ್ಬರು 95 ರನ್​ಗಳ ಜೊತೆಯಾಟದ ಜೊತೆಗೆ ತಂಡವನ್ನು 170 ರನ್​ಗಳ ಗಡಿ ದಾಟಿಸಿದರು.

ಮುಸ್ತಫಿಜುರ್ 4 ವಿಕೆಟ್

ಅಂತಿಮವಾಗಿ ಅನುಜ್ ರಾವತ್ 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 48 ರನ್ ಕಲೆಹಾಕಿದರೆ, ದಿನೇಶ್ ಕಾರ್ತಿಕ್ 26 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 38 ರನ್ ಸಿಡಿಸಿದರು. ಇನ್ನು ಸಿಎಸ್​ಕೆ ಪರ ಅದ್ಭುತವಾಗಿ ಬೌಲಿಂಗ್ ಮಾಡಿದ ಮುಸ್ತಫಿಜುರ್ ರೆಹಮಾನ್ 4 ಓವರ್​ಗಳಲ್ಲಿ 29 ರನ್ ನೀಡಿ 4 ವಿಕೆಟ್ ಪಡೆದರೆ, ದೀಪಕ್ ಚಹಾರ್ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:45 pm, Fri, 22 March 24