AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಒಂದೇ ಓವರ್​ನಲ್ಲಿ 25 ರನ್ ಚಚ್ಚಿದ ಡಿಕೆ- ಅನುಜ್..! ವಿಡಿಯೋ ನೋಡಿ

IPL 2024: ದಿನೇಶ್ ಕಾರ್ತಿಕ್ ಹಾಗೂ ಅನುಜ್ ರಾವತ್ 95 ರನ್​ಗಳ ಅದ್ಭುತ ಜೊತೆಯಾಟ ನೀಡಿದರು. ಅಲ್ಲದೆ ಕೊನೆಯವರೆಗೂ ನಿಂತು ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಈ ವೇಳೆ ಈ ಇಬ್ಬರು ಸೇರಿ ಒಂದೇ ಓವರ್​ನಲ್ಲಿ 25 ರನ್ ಕಲೆಹಾಕಿದ ಘಟನೆಯೂ ನಡೆಯಿತು.

IPL 2024: ಒಂದೇ ಓವರ್​ನಲ್ಲಿ 25 ರನ್ ಚಚ್ಚಿದ ಡಿಕೆ- ಅನುಜ್..! ವಿಡಿಯೋ ನೋಡಿ
ಅನುಜ್ ರಾವತ್- ದಿನೇಶ್ ಕಾರ್ತಿಕ್
ಪೃಥ್ವಿಶಂಕರ
|

Updated on:Mar 22, 2024 | 10:59 PM

Share

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 17ನೇ ಆವೃತ್ತಿಯ ಐಪಿಎಲ್​ನ (IPL 2024) ಆರಂಭಿಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ತಂಡ (Chennai Super Kings vs Royal Challengers Bengaluru) ಹಾಲಿ ಚಾಂಪಿಯನ್ನರಿಗೆ 174 ರನ್​​ಗಳ ಗೆಲುವಿನ ಗುರಿ ನೀಡಿದೆ. ಉತ್ತಮ ಆರಂಭದ ಹೊರತಾಗಿಯೂ ಆರ್​ಸಿಬಿಯ ಮಧ್ಯಮ ಕ್ರಮಾಂಕ ದಿಢೀರ್ ಕುಸಿತ ಕಂಡಿತು. ಹೀಗಾಗಿ ತಂಡ 78 ರನ್​ ಆಗುವಷ್ಟರಲ್ಲೇ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಸಿಎಸ್​ಕೆ ಪಂದ್ಯದಲ್ಲಿ ಪೂರ್ಣ ಹಿಡಿತ ಸಾಧಿಸಿತ್ತು. ಆದರೆ ಆ ಬಳಿಕ ಜೊತೆಯಾದ ದಿನೇಶ್ ಕಾರ್ತಿಕ್ (Dinesh Karthik)​ ಹಾಗೂ ಅನುಜ್ ರಾವತ್ (Anuj Rawat) 95 ರನ್​ಗಳ ಅದ್ಭುತ ಜೊತೆಯಾಟ ನೀಡಿದರು. ಅಲ್ಲದೆ ಕೊನೆಯವರೆಗೂ ನಿಂತು ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಈ ವೇಳೆ ಈ ಇಬ್ಬರು ಸೇರಿ ಒಂದೇ ಓವರ್​ನಲ್ಲಿ 25 ರನ್ ಕಲೆಹಾಕಿದ ಘಟನೆಯೂ ನಡೆಯಿತು.

ಇನ್ನಿಂಗ್ಸ್ ಕಟ್ಟಿದ ಡಿಕೆ- ಅನುಜ್

ವಾಸ್ತವವಾಗಿ ನಿಯಮಿತ ಅಂತರದಲ್ಲಿ ವಿಕೆಟ್​ಗಳು ಪತನವಾದುದ್ದರಿಂದ ಆರ್​ಸಿಬಿ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಆರು ಮತ್ತು ಏಳನೇ ವಿಕೆಟ್​ಗೆ ಜೊತೆಯಾದ ದಿನೇಶ್ ಕಾರ್ತಿಕ್ ಹಾಗೂ ಅನುಜ್ ರಾವತ್ ನಿಧಾನವಾಗಿ ತಂಡದ ಇನ್ನಿಂಗ್ಸ್ ಕಟ್ಟಿದರು. 13ನೇ ಓವರ್​ ಆರಂಭದಿಂದ ಜೊತೆಯಾದ ಈ ಇಬ್ಬರು 20ನೇ ಓವರ್​ವರೆಗೆ ಬ್ಯಾಟ್ ಬೀಸಿದರು. ಅಂತಿಮವಾಗಿ ಈ ಇಬ್ಬರ ನಡುವೆ ಆರನೇ ವಿಕೆಟ್​ಗೆ ಕೇವಲ 50 ಎಸೆತಗಳಲ್ಲಿ 95 ರನ್​ಗಳ ಜೊತೆಯಾಟ ಕೂಡ ಬಂತು.

IPL 2024: ಆರ್​ಸಿಬಿಗೆ ಆಪತ್ಬಾಂಧವರಾದ ಡಿಕೆ- ಅನುಜ್; 174 ರನ್ ಟಾರ್ಗೆಟ್

ಒಂದೇ ಓವರ್​ನಲ್ಲಿ 25 ರನ್

ಈ ಹಂತದಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದ್ದ ಇನ್ನಿಂಗ್ಸ್ ವೇಗ ನೀಡಲು ಮುಂದಾದ ಈ ಇಬ್ಬರು ತುಷಾರ ದೇಶಪಾಂಡೆ ಬೌಲ್ ಮಾಡಿದ 18ನೇ ಓವರ್​​ ಅನ್ನು ಗುರಿಯಾಗಿಸಿಕೊಂಡರು. ಓವರ್​ನ ಮೊದಲ ಎಸೆತ ವೈಡ್ ಆಯಿತು. ನಂತರದ ಎಸೆತವನ್ನು ದಿನೇಶ್ ಕಾರ್ತಿಕ್ ಸಿಕ್ಸರ್​ಗಟ್ಟಿದರು. ಓವರ್​ನ ಎರಡನೇ ಎಸೆತ ಕೂಡ ವೈಡ್ ಆಯಿತು. ಮುಂದಿನ ಎಸೆತದಲ್ಲಿ ಕಾರ್ತಿಕ್ ಸಿಂಗಲ್ ತೆಗೆದುಕೊಂಡರು. ನಂತರ ಸ್ಟ್ರೈಕ್​ಗೆ ಬಂದ ಅನುಜ್ ಮೂರು ಮತ್ತು ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರೆ, ಕೊನೆಯ ಎಸೆತದಲ್ಲಿ ಒಂದು ಬೌಂಡರಿ ಬಾರಿಸಿದರು. ಹೀಗಾಗಿ ಈ ಪಂದ್ಯದಲ್ಲಿ ಒಟ್ಟು 25 ರನ್​ಗಳು ಬಂದವು.

ಈ ಇಬ್ಬರು 95 ರನ್​​ಗಳ ಜೊತೆಯಾಟ ಆಡಿದಲ್ಲದೆ ವೈಯಕ್ತಿಕವಾಗಿಯೂ ಉತ್ತಮ ಪ್ರದರ್ಶನ ನೀಡಿದರು. 20 ನೇ ಓವರ್​ನ ಕೊನೆಯ ಎಸೆತದಲ್ಲಿ ರನೌಟ್​ಗೆ ಬಲಿಯಾದ ಅನುಜ್ ರಾವತ್ ತಮ್ಮ ಇನ್ನಿಂಗ್ಸ್​ನಲ್ಲಿ 25 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 48 ರನ್ ಬಾರಿಸಿದರು. ಇತ್ತ ಅನುಜ್​ಗೆ ಉತ್ತಮ ಸಾಥ್ ನೀಡಿದ ಕಾರ್ತಿಕ್ ಕೂಡ 26 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 38 ರನ್ ಕಲೆಹಾಕಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:56 pm, Fri, 22 March 24

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ