IPL 2024: ಐಪಿಎಲ್ 2024 ಟೂರ್ನಿಗೆ ಶುರುವಾಯಿತು ಸಂಕಷ್ಟ: ಈ ಬಾರಿ ಭಾರತದಲ್ಲಿ ನಡೆಯುವುದು ಅನುಮಾನ

IPL 2024 vs General Election: ಈ ಬಾರಿಯ ಐಪಿಎಲ್ ಭಾರತದಲ್ಲಿ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಬಂದಿರುವ ಮಾಹಿತಿ ಪ್ರಕಾರ, ಮುಂದಿನ ವರ್ಷ ದೇಶದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗ ಪ್ರಕಟಿಸಿದ ನಂತರವೇ ಐಪಿಎಲ್ ಅಧಿಕಾರಿಗಳು ಟೂರ್ನಿ ಎಲ್ಲಿ ನಡೆಯಬೇಕು ಹಾಗೂ ವೇಳಾಪಟ್ಟಿ ಸಿದ್ದತೆಯನ್ನು ಆರಂಭಿಸಲಿದ್ದಾರೆ.

IPL 2024: ಐಪಿಎಲ್ 2024 ಟೂರ್ನಿಗೆ ಶುರುವಾಯಿತು ಸಂಕಷ್ಟ: ಈ ಬಾರಿ ಭಾರತದಲ್ಲಿ ನಡೆಯುವುದು ಅನುಮಾನ
IPL 2024
Follow us
Vinay Bhat
|

Updated on:Dec 01, 2023 | 12:51 PM

ಭಾರತ ಕ್ರಿಕೆಟ್ ತಂಡ ಬಿಡುವಿಲ್ಲದೆ ಕ್ರಿಕೆಟ್ ಆಡುತ್ತಿದೆ. ವಿಶ್ವಕಪ್ ಮುಗಿದ ಬೆನ್ನಲ್ಲೇ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ನಂತರ ದಕ್ಷಿಣ ಆಫ್ರಿಕಾ ಪ್ರವಾಸ ಹೀಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಿಡುವಿಲ್ಲದ ವೇಳಾಪಟ್ಟಿ ಭಾರತಕ್ಕಿದೆ. ಇದರ ನಡುವೆ ಐಪಿಎಲ್ 2024 ರ (IPL 2024) ಅಲೆ ಕೂಡ ಶುರುವಾಗಿದೆ. ಡಿಸೆಂಬರ್ 19 ರಂದು ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಇಲ್ಲಿ ಸುಮಾರು 70 ಆಟಗಾರರ ಭವಿಷ್ಯ ನಿರ್ಧಾರವಾಗಲಿದೆ. ಒಂದು ಅಂದಾಜಿನ ಪ್ರಕಾರ, ಈ 70 ಸ್ಥಾನಗಳನ್ನು ತುಂಬಲು 700 ಕ್ಕೂ ಹೆಚ್ಚು ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆದಾಗ್ಯೂ, ಶಾರ್ಟ್‌ಲಿಸ್ಟ್ ಮಾಡಿದ ಆಟಗಾರರು ಮಾತ್ರ ಹರಾಜಿಗೆ ಪ್ರವೇಶಿಸಲು ಸಾಧ್ಯ.

ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡುವುದು, ನಂತರ ಅವರ ಹರಾಜು, ಇದಕ್ಕೆ ಸಿದ್ಧತೆಗಳು ಭರ್ಜರಿ ಆಗಿ ಸಾಗುತ್ತಿದೆ. ಇದರ ನಡುವೆ ಐಪಿಎಲ್ 2024ರ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಅದರ ಪ್ರಕಾರ ಈ ಬಾರಿಯ ಐಪಿಎಲ್ ಭಾರತದಲ್ಲಿ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಬಂದಿರುವ ಮಾಹಿತಿ ಪ್ರಕಾರ, ಮುಂದಿನ ವರ್ಷ ದೇಶದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗ ಪ್ರಕಟಿಸಿದ ನಂತರವೇ ಐಪಿಎಲ್ ಅಧಿಕಾರಿಗಳು ಟೂರ್ನಿ ಎಲ್ಲಿ ನಡೆಯಬೇಕು ಹಾಗೂ ವೇಳಾಪಟ್ಟಿ ಸಿದ್ದತೆಯನ್ನು ಆರಂಭಿಸಲಿದ್ದಾರೆ.

IND vs AUS 4th T20I: ಇಂದು ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟಿ20 ಪಂದ್ಯ: ಭಾರತಕ್ಕೆ ಅಯ್ಯರ್ ಬಲ

ಇದನ್ನೂ ಓದಿ
Image
ರಾಯ್​ಪುರದಲ್ಲಿ ಶ್ರೇಯಸ್ ಅಯ್ಯರ್ ಭರ್ಜರಿ ಅಭ್ಯಾಸ: ಸ್ಫೋಟಕ ಆಟಕ್ಕೆ ರೆಡಿ
Image
4ನೇ ಟಿ20 ಪಂದ್ಯಕ್ಕೆ ಸೂರ್ಯ ಮಾಸ್ಟರ್ ಪ್ಲಾನ್: ಇಲ್ಲಿದೆ ಪ್ಲೇಯಿಂಗ್ XI
Image
IND vs SA ಸರಣಿ ಯಾವಾಗ?, ಎಷ್ಟು ಗಂಟೆಗೆ?, ನೇರಪ್ರಸಾರ?: ಇಲ್ಲಿದೆ ಮಾಹಿತಿ
Image
ವಿಶ್ವಕಪ್ ಆಡಿದ 12 ಆಟಗಾರರು ಔಟ್: ಆಫ್ರಿಕಾ ವಿರುದ್ಧದ ODI ಸರಣಿಗೆ ಬದಲಾವಣೆ

ಸಾರ್ವತ್ರಿಕ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸುವವರೆಗೆ, ಐಪಿಎಲ್ 2024 ಪಂದ್ಯಗಳ ದಿನಾಂಕ, ಸಮಯ ಮತ್ತು ಸ್ಥಳವನ್ನು ದೃಢೀಕರಿಸಲಾಗುವುದಿಲ್ಲ. ಸಾರ್ವತ್ರಿಕ ಚುನಾವಣೆಗೆ ಭದ್ರತೆಯೇ ದೊಡ್ಡ ಸಮಸ್ಯೆಯಾಗಲಿದೆ. ಹಾಗಾಗಿ ಐಪಿಎಲ್ ಭಾರತದಲ್ಲಿ ನಡೆಯಬೇಕೋ ಅಥವಾ ದೇಶದ ಹೊರಗೆ ನಡೆಯಬೇಕೋ ಎಂಬುದನ್ನು ಐಪಿಎಲ್ ಆಡಳಿತ ಮಂಡಳಿ ಸಾರ್ವತ್ರಿಕ ಚುನಾವಣೆಯ ದಿನಾಂಕ ಪಟ್ಟಿ ಸಿದ್ಧಪಡಿಸಿದ ನಂತರವೇ ನಿರ್ಧರಿಸಲಿದೆ.

ಮೂಲಗಳ ಪ್ರಕಾರ, ಮಾರ್ಚ್ 24 ಮತ್ತು ಮೇ 26, 2024 ರ ನಡುವಿನ ಐಪಿಎಲ್ 2024 ನಡೆಯಲಿದೆ. ವೆಸ್ಟ್ ಇಂಡೀಸ್ ಮತ್ತು USA ನಲ್ಲಿ ಜೂನ್ 4 ಮತ್ತು 30 ರ ನಡುವೆ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2024 ರನ್ನೂ ಬಿಸಿಸಿಐ ಪರಿಗಣಿಸಬೇಕಿದೆ. ಆಟಗಾರರು ತಮ್ಮ ರಾಷ್ಟ್ರೀಯ ತಂಡಗಳೊಂದಿಗೆ ಸೇರಲು ಮತ್ತು ಮಹತ್ವದ ಈವೆಂಟ್‌ಗೆ ತಯಾರಾಗಲು ಸಮಯವನ್ನು ಕೇಳುವ ಸಾಧ್ಯತೆ ಇದೆ. ಹೀಗಾಗಿ ಮೇ ಅಂತ್ಯದ ಒಂದು ವಾರದ ಮೊದಲು ಐಪಿಎಲ್ ಪಂದ್ಯಾವಳಿಯನ್ನು ಮುಕ್ತಾಯಗೊಳಿಸುವ ಒತ್ತಡವನ್ನು ಬಿಸಿಸಿಐ ಎದುರಿಸುತ್ತಿದೆ. ಆದಾಗ್ಯೂ, ಚುನಾವಣಾ ಆಯೋಗವು ಸಾರ್ವತ್ರಿಕ ಚುನಾವಣಾ ದಿನಾಂಕಗಳನ್ನು ಘೋಷಿಸಿದ ನಂತರ ಫೆಬ್ರವರಿಯಲ್ಲಿ ಮಾತ್ರ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Fri, 1 December 23

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್