IPL 2024: ಬಾಟಲಿ ಎಸೆದು, ದಯಾಳ್ ಮೇಲೆ ಉಗ್ರರೂಪ ತಾಳಿದ್ರಾ ಕೊಹ್ಲಿ..? ವಿಡಿಯೋ ವೈರಲ್

IPL 2024: ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಆರ್‌ಸಿಬಿ ಹೀನಾಯ ಸೋಲು ಕಂಡಿದೆ. ಇದೇ ವೇಳೆ ನಿರ್ಣಾಯಕ ಹಂತದಲ್ಲಿ ಆರ್​ಸಿಬಿ ವೇಗಿ ಯಶ್ ದಯಾಳ್ ಕೆಟ್ಟ ಬೌಲಿಂಗ್ ಮಾಡುವ ಮೂಲಕ ದುಬಾರಿಯಾಗಿದ್ದಕ್ಕೆ ವಿರಾಟ್ ಕೊಹ್ಲಿ ಮೈದಾನದಲ್ಲೇ ಉಗ್ರರೂಪ ತಾಳಿದ ಘಟನೆ ಇದೀಗ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ.

IPL 2024: ಬಾಟಲಿ ಎಸೆದು, ದಯಾಳ್ ಮೇಲೆ ಉಗ್ರರೂಪ ತಾಳಿದ್ರಾ ಕೊಹ್ಲಿ..? ವಿಡಿಯೋ ವೈರಲ್
ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on:May 23, 2024 | 6:35 PM

ಐಪಿಎಲ್ (IPL) ಟ್ರೋಫಿ ಗೆಲ್ಲುವುದು ಆರ್‌ಸಿಬಿ (RCB) ಪಾಲಿಗೆ ಮತ್ತೆ ಕನಸಾಗಿಯೇ ಉಳಿದಿದೆ. ಲೀಗ್​​ನಲ್ಲಿ ಆರ್​ಸಿಬಿ ಅದ್ಭುತವಾದ ಪುನರಾಗಮನವನ್ನು ಮಾಡಿದಾಗ ಎಲ್ಲರೂ ಈ ತಂಡ ಕಪ್ ಗೆಲ್ಲುತ್ತದೆ ಎಂದು ಭಾವಿಸಿದ್ದರು. ಅಲ್ಲದೆ ಇಷ್ಟು ವರ್ಷ ಸಾಧ್ಯವಾಗದೆ ಇರುವುದು ಈ ಐಪಿಎಲ್ ಸೀಸನ್‌ನಲ್ಲಿ ಸಾಧ್ಯವಾಗಬಹುದು ಎಂದು ಒಂದು ಕ್ಷಣ ಎಲ್ಲರಿಗೂ ಅನಿಸಿತು. ಆದರೆ ಆರ್‌ಸಿಬಿ ಆಟಗಾರರು ಮತ್ತು ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳು ತಮ್ಮ ಮನದಲ್ಲಿ ಮೂಡಿಸಿಕೊಂಡಿದ್ದ ಕನಸುಗಳು ಕನಸಾಗಿಯೇ ಉಳಿದಿದೆ. ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಆರ್‌ಸಿಬಿ ಹೀನಾಯ ಸೋಲು ಕಂಡಿದೆ. ಇದೇ ವೇಳೆ ನಿರ್ಣಾಯಕ ಹಂತದಲ್ಲಿ ಆರ್​ಸಿಬಿ ವೇಗಿ ಯಶ್ ದಯಾಳ್ (Yash Dayal) ಕೆಟ್ಟ ಬೌಲಿಂಗ್ ಮಾಡುವ ಮೂಲಕ ದುಬಾರಿಯಾಗಿದ್ದಕ್ಕೆ ವಿರಾಟ್ ಕೊಹ್ಲಿ (Virat Kohli) ಮೈದಾನದಲ್ಲೇ ಉಗ್ರರೂಪ ತಾಳಿದ ಘಟನೆ ಇದೀಗ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ.

ಬಾಟಲಿ ಎಸೆದು ನಿಂದಿಸಿದ್ರಾ ವಿರಾಟ್?

ವಾಸ್ತವವಾಗಿ ರಾಜಸ್ಥಾನದ ಇನಿಂಗ್ಸ್‌ನ 17 ನೇ ಓವರ್‌ ಬೌಲ್ ಮಾಡುವ ಜವಬ್ದಾರಿಯನ್ನು ಯಶ್ ದಯಾಲ್ ಅವರಿಗೆ ನೀಡಲಾಯಿತು. ಮೊದಲ ಎರಡು ಎಸೆತಗಳಲ್ಲಿ ಕೇವಲ 2 ರನ್ ನೀಡಿದ್ದ ಯಶ್ ದಯಾಳ್ ಮತ್ತೆ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಇದರ ನಂತರ ಅವರು ಎರಡು ಕೆಟ್ಟ ಎಸೆತಗಳನ್ನು ಎಸೆದರು, ಅದರಲ್ಲಿ ಶಿಮ್ರಾನ್ ಹೆಟ್ಮೆಯರ್ ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ಮೂರನೇ ಎಸೆತದಲ್ಲಿ ಫುಲ್ ಟಾಸ್ ಬೌಲ್ ಮಾಡಿದ ದಯಾಳ್ ಮುಂದಿನ ಎಸೆತವನ್ನು ಆಫ್ ಸ್ಟಂಪ್ ಹೊರಗೆ ಬೌಲ್ ಮಾಡಿದರು. ಈ ಎರಡು ಕೆಟ್ಟ ಎಸೆತಗಳಲ್ಲಿ 8 ರನ್ ಬಂದವು.

Virat Kohli, IPL 2024: ಐಪಿಎಲ್​ನಲ್ಲಿ ಇತಿಹಾಸ ಬರೆದ ಕಿಂಗ್ ಕೊಹ್ಲಿ..!

ನಿರ್ಣಾಯಕ ಹಂತದಲ್ಲಿ ಕೆಟ್ಟ ಬೌಲಿಂಗ್ ಮಾಡಿದ ಯಶ್ ದಯಾಳ್​ರನ್ನು ನೋಡಿ ಇನ್ನಿಲ್ಲದಂತೆ ಕೋಪ ಹೊರಹಾಕಿದ್ದಾರೆ. ಇಲ್ಲಿಗೆ ನಿಲ್ಲದ ಕೊಹ್ಲಿ, ಎನರ್ಜಿ ಡ್ರಿಂಕ್ ಕುಡಿದು ಬಾಟಲಿಯನ್ನು ಬೌಂಡರಿ ಲೈನ್ ಮೇಲೆ ಎಸೆದರು. ಜೊತೆಗೆ ಏನನ್ನೋ ಗೊಣಗುತ್ತಿರುವಂತೆಯೂ ಕಂಡುಬಂತು. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಆರ್‌ಸಿಬಿ ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಕಾರಣ

ಕಳೆದ 6 ಪಂದ್ಯಗಳಲ್ಲಿ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ್ದ ಆರ್​ಸಿಬಿ, ಎಲಿಮಿನೇಟರ್ ಪಂದ್ಯದಲ್ಲಿ ಎಡವಿತು. ನಾಯಕ ಡುಪ್ಲೆಸಿಸ್ 17 ರನ್ ಗಳಿಸಿ ಔಟಾದರೆ, ಕೊಹ್ಲಿ 24 ಎಸೆತಗಳಲ್ಲಿ 33 ರನ್, ಗ್ರೀನ್ 27 ರನ್ ಮತ್ತು ಪಾಟಿದಾರ್ 34 ರನ್‌ಗಳ ಇನ್ನಿಂಗ್ಸ್ ಆಡಿದರು. ಆದರೆ ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅಲ್ಲದೆ, ಮ್ಯಾಕ್ಸ್‌ವೆಲ್ ಖಾತೆಯನ್ನು ತೆರೆಯಲಾಗಿಲ್ಲ. ಹೀಗಾಗಿ ಆರ್‌ಸಿಬಿ ತಂಡ ಕೇವಲ 172 ರನ್ ಗಳಿಸಲಷ್ಟೇ ಶಕ್ತವಾಗಿದ್ದು, ಇದು ರಾಜಸ್ಥಾನಕ್ಕೆ ಸುಲಭವಾಗಿ ಗುರಿ ಬೆನ್ನಟ್ಟಲು ಸಹಾಯ ಮಾಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:32 pm, Thu, 23 May 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ