IPL 2025
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಸೌದಿ ಅರೇಬಿಯಾದ ಜಿದ್ಧಾದಲ್ಲಿ ನವೆಂಬರ್ 24 ಮತ್ತು 25 ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ಒಟ್ಟು 577 ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ. ಈ ಮೆಗಾ ಆಕ್ಷನ್ ಎಷ್ಟು ಗಂಟೆಗೆ ಆರಂಭವಾಗಲಿದೆ? ಯಾವ ಚಾನೆಲ್ನಲ್ಲಿ ವೀಕ್ಷಿಸಬಹುದು ಎಂಬಿತ್ಯಾದಿ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…
ಮೆಗಾ ಹರಾಜು ಎಷ್ಟು ಗಂಟೆಗೆ ಶುರು?
ಐಪಿಎಲ್ ಸೀಸನ್-18ರ ಮೆಗಾ ಹರಾಜು ಸೌದಿ ಅರೇಬಿಯಾ ಸಮಯ ಮಧ್ಯಾಹ್ನ 1 ಗಂಟೆಗೆ ಹಾಗೂ ಭಾರತೀಯ ಕಾಲಮಾನ ಸಂಜೆ 3.30 ರಿಂದ ಶುರುವಾಗಲಿದೆ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಈ ಬಾರಿಯ ಮೆಗಾ ಹರಾಜನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಸಿನಿಮಾ ಆ್ಯಪ್ನಲ್ಲೂ ಉಚಿತ ಲೈವ್ ಸ್ಟ್ರೀಮಿಂಗ್ ಇರಲಿದೆ.
ಹರಾಜು ಪಟ್ಟಿಯಲ್ಲಿರುವ ಆಟಗಾರರೆಷ್ಟು?
ಈ ಬಾರಿಯ ಮೆಗಾ ಹರಾಜಿಗೆ 1574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಈ ಆಟಗಾರರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಅದರಂತೆ ಫೈನಲ್ ಲಿಸ್ಟ್ನಲ್ಲಿ 577 ಆಟಗಾರರು ಸ್ಥಾನ ಪಡೆದಿದ್ದಾರೆ.
ವಿದೇಶಿ ಆಟಗಾರರ ಸಂಖ್ಯೆ ಎಷ್ಟು?
577 ಆಟಗಾರರಲ್ಲಿ 367 ಭಾರತೀಯರು ಮತ್ತು 210 ವಿದೇಶಿ ಆಟಗಾರರಿದ್ದಾರೆ.
ಎಷ್ಟು ಆಟಗಾರರಿಗೆ ಅವಕಾಶ?
10 ಫ್ರಾಂಚೈಸಿಗಳು 46 ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿದ್ದು, ಇನ್ನುಳಿದ 204 ಆಟಗಾರರಿಗಾಗಿ ಹರಾಜು ಪ್ರಕ್ರಿಯೆ ನಡೆಯಲಿದೆ. ಹೀಗಾಗಿ 577 ಆಟಗಾರರಲ್ಲಿ ಗರಿಷ್ಠ 204 ಪ್ಲೇಯರ್ಸ್ಗೆ ಮಾತ್ರ ಚಾನ್ಸ್ ಸಿಗಲಿದೆ.
ಆಟಗಾರರ ಮೂಲಬೆಲೆ ಎಷ್ಟು?
- 2 ಕೋಟಿ ರೂ- 82 ಆಟಗಾರರು
- 1.5 ಕೋಟಿ ರೂ- 27 ಆಟಗಾರರು
- 1.25 ಕೋಟಿ ರೂ- 18 ಆಟಗಾರರು
- 1 ಕೋಟಿ ರೂ- 23 ಆಟಗಾರರು
- 75 ಲಕ್ಷ ರೂ- 92 ಆಟಗಾರರು
- 50 ಲಕ್ಷ ರೂ- 8 ಆಟಗಾರರು
- 40 ಲಕ್ಷ ರೂ- 5 ಆಟಗಾರರು
- 30 ಲಕ್ಷ ರೂ- 320 ಆಟಗಾರರು
ಒಟ್ಟು ಹರಾಜು ಮೊತ್ತವೆಷ್ಟು?
ಈ ಬಾರಿಯ ಮೆಗಾ ಹರಾಜಿಗಾಗಿ ಒಟ್ಟು 120 ಕೋಟಿ ರೂ. ಅನ್ನು ನಿಗದಿಪಡಿಸಲಾಗಿದೆ. ಇದೀಗ 10 ಫ್ರಾಂಚೈಸಿಗಳು ರಿಟೈನ್ ಮಾಡಿಕೊಂಡಿರುವ ಆಟಗಾರರ ಮೊತ್ತವನ್ನು ಒಟ್ಟು ಹರಾಜು ಮೊತ್ತದಿಂದ ಕಡಿತಗೊಳಿಸಲಾಗುತ್ತದೆ. ಇನ್ನುಳಿದ ಮೊತ್ತದಲ್ಲಿ ಪ್ರತಿ ಫ್ರಾಂಚೈಸಿಗಳು ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.
ಪ್ರತಿ ಫ್ರಾಂಚೈಸಿಗಳ ಬಳಿ ಇರುವ ಹರಾಜು ಮೊತ್ತ ಎಷ್ಟು?
- ಚೆನ್ನೈ ಸೂಪರ್ ಕಿಂಗ್ಸ್ : 55 ಕೋಟಿ ರೂ.
- ಡೆಲ್ಲಿ ಕ್ಯಾಪಿಟಲ್ಸ್ : 73 ಕೋಟಿ ರೂ.
- ಕೊಲ್ಕತ್ತಾ ನೈಟ್ ರೈಡರ್ಸ್ : 51 ಕೋಟಿ ರೂ.
- ರಾಯಲ್ ಚಾಲೆಂಜರ್ಸ್ ಬೆಂಗಳೂರು : 83 ಕೋಟಿ ರೂ.
- ರಾಜಸ್ಥಾನ್ ರಾಯಲ್ಸ್ : 41 ಕೋಟಿ ರೂ.
- ಲಕ್ನೋ ಸೂಪರ್ ಜೈಂಟ್ಸ್ : 69 ಕೋಟಿ ರೂ.
- ಮುಂಬೈ ಇಂಡಿಯನ್ಸ್ : 45 ಕೋಟಿ ರೂ.
- ಸನ್ರೈಸರ್ಸ್ ಹೈದರಾಬಾದ್ : 45 ಕೋಟಿ ರೂ.
- ಗುಜರಾತ್ ಟೈಟಾನ್ಸ್ : 69 ಕೋಟಿ ರೂ.
- ಪಂಜಾಬ್ ಕಿಂಗ್ಸ್ : 110.5 ಕೋಟಿ ರೂ.
ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಇತಿಹಾಸ ನಿರ್ಮಿಸಿದ ರಿಷಭ್ ಪಂತ್
ಪ್ರತಿ ಫ್ರಾಂಚೈಸಿಗಳು ಎಷ್ಟು ಆಟಗಾರರನ್ನು ಖರೀದಿಸಬಹುದು?
- ಚೆನ್ನೈ ಸೂಪರ್ ಕಿಂಗ್ಸ್: 20 ಆಟಗಾರರು (7 ವಿದೇಶಿ ಆಟಗಾರರು)
- ರಾಯಲ್ ಚಾಲೆಂಜರ್ಸ್ ಬೆಂಗಳೂರು: 22 ಆಟಗಾರರು (8 ವಿದೇಶಿ ಆಟಗಾರರು)
- ಸನ್ರೈಸರ್ಸ್ ಹೈದರಾಬಾದ್: 20 ಆಟಗಾರರು (5 ವಿದೇಶಿ ಆಟಗಾರರು)
- ಮುಂಬೈ ಇಂಡಿಯನ್ಸ್: 20 ಆಟಗಾರರು (8 ವಿದೇಶಿ ಆಟಗಾರರು)
- ಡೆಲ್ಲಿ ಕ್ಯಾಪಿಟಲ್ಸ್: 21 ಆಟಗಾರರು (7 ವಿದೇಶಿ ಆಟಗಾರರು)
- ರಾಜಸ್ಥಾನ್ ರಾಯಲ್ಸ್: 19 ಆಟಗಾರರು (7 ವಿದೇಶಿ ಆಟಗಾರರು)
- ಪಂಜಾಬ್ ಕಿಂಗ್ಸ್: 23 ಆಟಗಾರರು (8 ವಿದೇಶಿ ಆಟಗಾರರು)
- ಕೊಲ್ಕತ್ತಾ ನೈಟ್ ರೈಡರ್ಸ್: 19 ಆಟಗಾರರು (6 ವಿದೇಶಿ ಆಟಗಾರರು)
- ಗುಜರಾತ್ ಟೈಟಾನ್ಸ್: 20 ಆಟಗಾರರು (7 ವಿದೇಶಿ ಆಟಗಾರರು)
- ಲಕ್ನೋ ಸೂಪರ್ ಜೈಂಟ್ಸ್: 20 ಆಟಗಾರರು (7 ವಿದೇಶಿ ಆಟಗಾರರು)
ಐಪಿಎಲ್ ಹರಾಜಿನಲ್ಲಿರುವ ಆಟಗಾರರು ಯಾರೆಲ್ಲಾ?
ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 577 ಆಟಗಾರರ ಪಟ್ಟಿ ಇಲ್ಲಿದೆ.