- Kannada News Photo gallery Cricket photos IPL 2025: Jofra Archer and Saurabh added back to IPL auction list
IPL 2025: ಕೊನೆಯ ಕ್ಷಣದ ಬದಲಾವಣೆ: ಐಪಿಎಲ್ ಹರಾಜು ಪಟ್ಟಿಗೆ ಮೂವರ ಎಂಟ್ರಿ
IPL 2025 Mega Auction: ಐಪಿಎಲ್ ಸೀಸನ್-18ರ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯಲಿದೆ. ಸೌದಿ ಅರೇಬಿಯಾದ ಜಿದ್ಧಾದಲ್ಲಿ ಜರುಗಲಿರುವ ಈ ಹರಾಜಿನಲ್ಲಿ 574 ಕ್ಕೂ ಅಧಿಕ ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ.
Updated on: Nov 23, 2024 | 9:30 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ನಾಳೆ (ನ.24) ಆರಂಭವಾಗಲಿರುವ ಈ ಹರಾಜು ಪಟ್ಟಿಗೆ ಇದೀಗ ಮೂವರು ಆಟಗಾರರ ಹೆಸರು ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಮೆಗಾ ಹರಾಜಿಗಾಗಿ 574 ಆಟಗಾರರ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು.

ಇದೀಗ ಕೊನೆಯ ಕ್ಷಣದ ಬದಲಾವಣೆಯೊಂದಿಗೆ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರ ಹೆಸರನ್ನು ಹರಾಜು ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಆರ್ಚರ್ ಮೆಗಾ ಹರಾಜಿಗಾಗಿ ಹೆಸರು ನೋಂದಣಿ ಮಾಡಿಕೊಂಡಿದ್ದರೂ, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸೂಚನೆ ಮೇರೆಗೆ ಅವರನ್ನು ಅಂತಿಮ ಪಟ್ಟಿಗೆ ಸೇರ್ಪಡೆಗೊಳಿಸಿರಲಿಲ್ಲ. ಇದೀಗ ಇಸಿಬಿ ಕಡೆಯಿಂದ ಕ್ಲಿಯರೆನ್ಸ್ ಪಡೆದಿರುವ ಆರ್ಚರ್ ಶಾರ್ಟ್ ಲಿಸ್ಟ್ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತೊಂದೆಡೆ ಯುಎಸ್ಎ ವೇಗಿ ಸೌರಭ್ ನೇತ್ರಾವಲ್ಕರ್ ಕೂಡ ಈ ಬಾರಿಯ ಮೆಗಾ ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಶಾರ್ಟ್ ಲಿಸ್ಟ್ನಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ಅಂತಿಮ ಹಂತದ ಬದಲಾವಣೆ ವೇಳೆ ಕೆಲ ಫ್ರಾಂಚೈಸಿಗಳು ಸೌರಭ್ ನೇತ್ರಾವಲ್ಕರ್ ಹೆಸರನ್ನು ಕೂಡ ಹರಾಜು ಪಟ್ಟಿಗೆ ಸೇರ್ಪಡೆಗೊಳಿಸಲು ಸೂಚಿಸಿದ್ದಾರೆ.

ಹಾಗೆಯೇ ಮುಂಬೈ ಬ್ಯಾಟರ್ ಹಾರ್ದಿಕ್ ತಮೋರೆ ಹೆಸರು ಕೂಡ ಶಾರ್ಟ್ ಲಿಸ್ಟ್ಗೆ ಸೇರ್ಪಡೆಯಾಗಿದೆ. 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ತಾಮೋರೆ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ಕೆಲ ಫ್ರಾಂಚೈಸಿಗಳ ಸೂಚನೆ ಮೇರೆಗೆ ಹಾರ್ದಿಕ್ ಹೆಸರನ್ನು ಸಹ ಮೆಗಾ ಹರಾಜು ಪಟ್ಟಿಗೆ ಸೇರಿಸಲಾಗಿದೆ.

ಐಪಿಎಲ್ ಸೀಸನ್-18ರ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯಲಿದೆ. ಸೌದಿ ಅರೇಬಿಯಾದ ಜಿದ್ಧಾದಲ್ಲಿ ಜರುಗಲಿರುವ ಈ ಹರಾಜಿನಲ್ಲಿ 574 ಕ್ಕೂ ಅಧಿಕ ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಇವರಲ್ಲಿ ಗರಿಷ್ಠ 204 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ.
