
IPL 2025: ಐಪಿಎಲ್ನ 16ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ 12 ರನ್ಗಳ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಮಿಚೆಲ್ ಮಾರ್ಷ್. ಏಕೆಂದರೆ ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಮಾರ್ಷ್ ಪವರ್ಪ್ಲೇನಲ್ಲೇ 60 ರನ್ ಚಚ್ಚಿದ್ದರು. ಅಂತಹದೊಂದು ಸ್ಪೋಟಕ ಆರಂಭದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 203 ರನ್ಗಳಿಸಲು ಸಾಧ್ಯವಾಯಿತು.
ಕುತೂಹಲಕಾರಿ ವಿಷಯ ಎಂದರೆ ಇದೇ ಮಿಚೆಲ್ ಮಾರ್ಷ್ ಮೊದಲ ಓವರ್ನಲ್ಲೇ ಪೆವಿಲಿಯನ್ ಸೇರುತ್ತಿದ್ದರು. ಏಕೆಂದರೆ ಟ್ರೆಂಟ್ ಬೌಲ್ಟ್ ಎಸೆದ ಇನಿಂಗ್ಸ್ನ ಮೊದಲ ಓವರ್ನ 4ನೇ ಎಸೆತದಲ್ಲಿ ಮಾರ್ಷ್ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ್ದರು. ಆದರೆ ಇತ್ತ ವಿಕೆಟ್ ಕೀಪರ್ ಆಗಲಿ, ಮುಂಬೈ ಇಂಡಿಯನ್ಸ್ ಆಟಗಾರರಾಗಲಿ ಕ್ಯಾಚ್ಗಾಗಿ ಅಪೀಲ್ ಮಾಡಿರಲಿಲ್ಲ.
ಇದರ ಬೆನ್ನಲ್ಲೇ ರೀಪ್ಲೆನಲ್ಲಿ ಮಿಚೆಲ್ ಮಾರ್ಷ್ ಅವರ ಬ್ಯಾಟ್ಗೆ ಚೆಂಡು ತಾಗಿರುವುದನ್ನು ತೋರಿಸಲಾಯಿತು. ಅವಾಗಲೇ ಮುಂಬೈ ಇಂಡಿಯನ್ಸ್ ಆಟಗಾರರಿಗೆ ತಮ್ಮ ತಪ್ಪಿನ ಅರಿವಾಗಿದ್ದು. ಅಲ್ಲದೆ ಅತ್ಯುತ್ತಮ ಅವಕಾಶವನ್ನು ಕೈ ತಪ್ಪಿಸಿಕೊಂಡಿರುವುದಕ್ಕೆ ನಾಯಕ ಹಾರ್ದಿಕ್ ಪಾಂಡ್ಯ ಸೇರಿದಂತೆ ಕೆಲ ಆಟಗಾರರ ಮುಖದಲ್ಲಿ ನಿರಾಸೆ ಮೂಡಿತು.
— Drizzyat12Kennyat8 (@45kennyat7PM) April 4, 2025
ಅತ್ತ ಮೊದಲ ಓವರ್ನಲ್ಲಿ ಸಿಕ್ಕ ಜೀವದಾನವನ್ನು ಬಳಸಿಕೊಂಡ ಮಿಚೆಲ್ ಮಾರ್ಷ್ ಸ್ಪೋಟಕ ಇನಿಂಗ್ಸ್ ಆಡಿದರು. ಕೇವಲ 31 ಎಸೆತಗಳನ್ನು ಎದುರಿಸಿದ ಮಾರ್ಷ್ 2 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 60 ರನ್ ಚಚ್ಚಿದರು.
ಇನ್ನು ಐಡೆನ್ ಮಾರ್ಕ್ರಾಮ್ 53 ರನ್ಗಳ ಕೊಡುಗೆ ನೀಡಿದರು. ಈ ಎರಡು ಅರ್ಧಶತಕಗಳ ನೆರವಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 203 ರನ್ ಕಲೆಹಾಕಿತು.
204 ರನ್ಗಳ ಕಠಿಣ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ 43 ಎಸೆತಗಳಲ್ಲಿ 67 ರನ್ ಬಾರಿಸಿದರೂ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 191 ರನ್ಗಳಿಸಿ 12 ರನ್ಗಳಿಂದ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ: IPL 2025: ಸೋಲಿನ ಬೆನ್ನಲ್ಲೇ ರಿಷಭ್ ಪಂತ್ಗೆ ಸಂಜೀವ್ ಗೊಯೆಂಕಾ ಖಡಕ್ ಸೂಚನೆ
ಒಂದು ವೇಳೆ ಮಿಚೆಲ್ ಮಾರ್ಷ್ ಅವರ ವಿಕೆಟ್ ಮೊದಲ ಓವರ್ನಲ್ಲೇ ಪಡೆದಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಕೋರ್ 150ರ ಅಸುಪಾಸಿನಲ್ಲಿರುತ್ತಿತ್ತು. ಏಕೆಂದರೆ ಮಾರ್ಷ್ ಅವರನ್ನು ಹೊರತುಪಡಿಸಿ ಲಕ್ನೋ ಪರ ಯಾವುದೇ ಬ್ಯಾಟರ್ ಸ್ಪೋಟಕ ಇನಿಂಗ್ಸ್ ಆಡಿರಲಿಲ್ಲ. ಇತ್ತ ಸಿಕ್ಕ ಅವಕಾಶವನ್ನು ಕೈಚೆಲ್ಲುವ ಮೂಲಕ ಮುಂಬೈ ಇಂಡಿಯನ್ಸ್ ತಂಡವು 12 ರನ್ಗಳಿಂದ ಸೋಲೊಪ್ಪಿಕೊಂಡಿದ್ದಾರೆ.