IPL 2025: ಅಹಮದಾಬಾದ್‌ನಲ್ಲಿ ಮಳೆ ಆರಂಭ; ಆರಂಭವಾಗದ ಮುಂಬೈ- ಪಂಜಾಬ್ ಪಂದ್ಯ
Mumbai Indians vs Punjab Kings IPL 2025 Qualifier 2: ಐಪಿಎಲ್ 2025ರ ಕ್ವಾಲಿಫೈಯರ್ 2ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಮುಂಬೈ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಅಹಮದಾಬಾದ್‌ನಲ್ಲಿ ಭಾರೀ ಮಳೆ ಆರಂಭವಾಗಿದೆ. ಹೀಗಾಗಿ ಆಟವನ್ನು ನಿಗದಿತ ಸಮಯಕ್ಕೆ ಆರಂಭಿಸಲು ಸಾಧ್ಯವಾಗಿಲ್ಲ.

ಇಂದು ಐಪಿಎಲ್ 2025 (IPL 2025) ರ ಕ್ವಾಲಿಫೈಯರ್-2 ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ (MI vs PBKS) ನಡುವೆ ನಡೆಯುತ್ತಿದೆ. ಎರಡೂ ತಂಡಗಳು ಫೈನಲ್ ತಲುಪಲು ಒಂದು ಹೆಜ್ಜೆ ದೂರದಲ್ಲಿವೆ. ಈ ಪಂದ್ಯದ ಗೆಲುವು ತಂಡವನ್ನು ಪ್ರಶಸ್ತಿ ಪಂದ್ಯಕ್ಕೆ ಕೊಂಡೊಯ್ಯಲಿದೆ. ಒಂದೆಡೆ ಪಂಜಾಬ್ ತನ್ನ ಕೊನೆಯ ಪಂದ್ಯವನ್ನು ಸೋತರೆ, ಮತ್ತೊಂಡೆ ಮುಂಬೈ ಎಲಿಮಿನೇಟರ್ ಪಂದ್ಯವನ್ನು ಗೆದ್ದು ಬರುತ್ತಿದೆ. ಉಭಯ ತಂಡಗಳ ಈ ಕದನಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ (Narendra Modi Stadium) ಸಜ್ಜಾಗಿದೆ. ಅದರಂತೆ ನಿಗದಿತ ಸಮಯಕ್ಕೆ ಟಾಸ್ ಕೂಡ ನಡೆದಿದೆ. ಟಾಸ್ ಗೆದ್ದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಮುಂಬೈ ಮೊದಲು ಬ್ಯಾಟಿಂಗ್ ಮಾಡಬೇಕಾಗಿದೆ. ಆದರೆ ಮುಂಬೈ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಅಹಮದಾಬಾದ್‌ನಲ್ಲಿ ಮಳೆ ಸುರಿಯಲಾರಂಭಿಸಿದೆ. ಆರಂಭದಲ್ಲಿ ತುಂತುರ ಮಳೆ ಸುರಿಯುತ್ತಿತ್ತು. ಆದರೆ ಆ ನಂತರ ಮಳೆ ಧಾರಕಾರವಾಗಿ ಮಳೆ ಸುರಿಯಲಾರಂಭಿಸಿದೆ. ಹೀಗಾಗಿ ಉಭಯ ತಂಡಗಳಲ್ಲಿ ಆತಂಕ ಮನೆ ಮಾಡಿದೆ.
ಟಾಸ್ ನಡೆಯುವುದಕ್ಕೂ ಮುನ್ನವೇ ಜಿಟಿ ಜಿಟಿ ಮಳೆ ಶುರುವಾಗಿತ್ತು. ಹೀಗಾಗಿ ಎರಡೂ ತಂಡಗಳ ಆಟಗಾರರು ಮೈದಾನದಲ್ಲಿ ಅಭ್ಯಾಸ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ ಟಾಸ್ ನಡೆಯುವ ಸಮಯಕ್ಕೆ ಸರಿಯಾಗಿ ಮಳೆ ನಿಂತಿತು. ಹೀಗಾಗಿ ಟಾಸ್ ಕೂಡ ನಡೆದಿತ್ತು. ಆ ನಂತರ ನಿಗದಿತ ಸಮಯದಂತೆ ಬ್ಯಾಟಿಂಗ್ ಆರಂಭವಾಗಬೇಕಿತ್ತು. ಅಂಪೈರ್ಗಳು ಸಹ ಮೈದಾನಕ್ಕೆ ಬಂದಿದ್ದರು. ಆದರೆ ಈ ವೇಳೆಗೆ ಮಳೆ ಆರಂಭವಾಯಿತು. ಮಳೆಯಿಂದಾಗಿ ಮೈದಾನವನ್ನು ಕವರ್‌ಗಳಿಂದ ಮುಚ್ಚಲಾಗಿದೆ.
ಮೀಸಲು ದಿನವಿಲ್ಲ
ವಾಸ್ತವವಾಗಿ, ಕ್ವಾಲಿಫೈಯರ್-2 ಪಂದ್ಯಕ್ಕೂ ಯಾವುದೇ ಮೀಸಲು ದಿನವನ್ನು ನಿಗದಿಪಡಿಸಲಾಗಿಲ್ಲ. ಇದರರ್ಥ ಪಂದ್ಯದ ಫಲಿತಾಂಶವನ್ನು ಯಾವುದೇ ಬೆಲೆ ತೆತ್ತಾದರೂ ಜೂನ್ 1 ರಂದೇ ನಿರ್ಧರಿಸಬೇಕಾಗುತ್ತದೆ. ನಿಯಮಗಳ ಪ್ರಕಾರ, ಟಾಸ್ ಸಮಯದಲ್ಲಿ ಭಾರೀ ಮಳೆ ಬಂದರೆ, ಪಂದ್ಯವನ್ನು ಮುಗಿಸಲು ಹೆಚ್ಚುವರಿ ಸಮಯವನ್ನು ನಿಗದಿಪಡಿಸಿಲಾಗಿದೆ. ಆ ಪ್ರಕಾರ ಪ್ಲೇಆಫ್ ಪಂದ್ಯಗಳಿಗೆ 120 ನಿಮಿಷಗಳವರೆಗೆ ಹೆಚ್ಚುವರಿ ಸಮಯವನ್ನು ಕಾಯ್ದಿರಿಸಲಾಗಿದೆ.
IPL 2025: ಮುಂಬೈ ವಿರುದ್ಧ ಟಾಸ್ ಗೆದ್ದ ಪಂಜಾಬ್; ಎರಡು ತಂಡಗಳಲ್ಲೂ ಒಂದೊಂದು ಬದಲಾವಣೆ
ಪಂಜಾಬ್ ಫೈನಲ್ಗೆ
ಭಾರತೀಯ ಕಾಲಮಾನದ ಪ್ರಕಾರ, ರಾತ್ರಿ 11:56 ರೊಳಗೆ ಫಲಿತಾಂಶವನ್ನು ನಿರ್ಧರಿಸಲು ತಲಾ 5 ಓವರ್‌ಗಳ ಪಂದ್ಯವನ್ನು ಸಹ ಆಯೋಜಿಸಬಹುದು. ಆದರೆ, ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಬೇಕಾದರೆ, ಈ ಪರಿಸ್ಥಿತಿಯಲ್ಲಿ ಪಂಜಾಬ್ ಕಿಂಗ್ಸ್ ಫೈನಲ್ ತಲುಪುತ್ತದೆ. ಲೀಗ್ ಹಂತದಲ್ಲಿ ಪಂಜಾಬ್ ಹೆಚ್ಚು ಅಂಕಗಳನ್ನು ಗಳಿಸಿರುವ ಕಾರಣ ಪಂಜಾಬ್, ಆರ್ಸಿಬಿ ವಿರುದ್ಧ ಫೈನಲ್ನಲ್ಲಿ ಸೆಣಸಾಡಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:43 pm, Sun, 1 June 25
