AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: 6,6,4,6, N6,0,4..! ಖಲೀಲ್ ಓವರ್​ನಲ್ಲಿ 33 ರನ್ ಚಚ್ಚಿದ ಶೆಫರ್ಡ್; ವಿಡಿಯೋ ನೋಡಿ

IPL 2025: 6,6,4,6, N6,0,4..! ಖಲೀಲ್ ಓವರ್​ನಲ್ಲಿ 33 ರನ್ ಚಚ್ಚಿದ ಶೆಫರ್ಡ್; ವಿಡಿಯೋ ನೋಡಿ

ಪೃಥ್ವಿಶಂಕರ
|

Updated on: May 03, 2025 | 11:51 PM

Romario Shepherd's Blitz: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ರೊಮಾರಿಯೊ ಶೆಫರ್ಡ್ ಅವರು ಕೇವಲ 14 ಎಸೆತಗಳಲ್ಲಿ ಅದ್ಭುತ ಅರ್ಧಶತಕ ಸಿಡಿಸಿದರು. ಇದು ಈ ಸೀಸನ್‌ನ ಅತಿ ವೇಗದ ಅರ್ಧಶತಕವಾಗಿದೆ. 19ನೇ ಓವರ್‌ನಲ್ಲಿ ಖಲೀಲ್ ಅಹ್ಮದ್ ವಿರುದ್ಧ 33 ರನ್ ಗಳಿಸಿ ತಂಡವನ್ನು 200 ರನ್ ಗಡಿ ದಾಟಿಸಿದರು. ಈ ಮೂಲಕ ಆರ್‌ಸಿಬಿ ಪರ ವೇಗದ ಅರ್ಧಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಆರ್​ಸಿಬಿಯ ಸ್ಫೋಟಕ ಬ್ಯಾಟ್ಸ್‌ಮನ್ ರೊಮಾರಿಯೊ ಶೆಫರ್ಡ್ ಕೇವಲ 14 ಎಸೆತಗಳಲ್ಲಿ ವೇಗದ ಅರ್ಧಶತಕ ದಾಖಲಿಸಿದರು. ಈ ಮೂಲಕ ಈ ಸೀಸನ್​ನ ಅತಿ ವೇಗದ ಶತಕ ಸಿಡಿಸಿದ ದಾಖಲೆ ಬರೆದ ರೊಮಾರಿಯೊ, ಆರ್​ಸಿಬಿ ಪರ ವೇಗದ ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 18ನೇ ಓವರ್​ನಲ್ಲಿ ಬ್ಯಾಟಿಂಗ್​ಗೆ ಬಂದ ಶೆಫರ್ಡ್, ಖಲೀಲ್ ಅಹ್ಮದ್ ಎಸೆದ 19ನೇ ಓವರ್​ನಲ್ಲಿ ಬೌಂಡರಿ, ಸಿಕ್ಸರ್​ಗಳ ಮಳೆಗರೆದು ತಂಡವನ್ನು 200 ರನ್​​ಗಳ ಗಡಿ ದಾಟಿಸಿದರು.

​ವಾಸ್ತವವಾಗಿ 18ನೇ ಓವರ್ ಅಂತ್ಯಕ್ಕೆ ಆರ್​​ಸಿಬಿ ಸ್ಕೋರ್ ಕೇವಲ 159 ರನ್ ಆಗಿತ್ತು. ಆದರೆ ಮುಂದಿನ 2 ಓವರ್‌ಗಳಲ್ಲಿ ಈ ವಿಂಡೀಸ್ ಬ್ಯಾಟ್ಸ್‌ಮನ್ ಪಂದ್ಯದ ಇಡೀ ಚಿತ್ರಣವನ್ನೇ ಬದಲಾಯಿಸಿದರು. 19 ನೇ ಓವರ್‌ನಲ್ಲಿ ಖಲೀಲ್ ಅಹ್ಮದ್ ಅವರನ್ನು ಗುರಿಯಾಗಿಸಿಕೊಂಡು ಶೆಫರ್ಡ್ ಈ ಓವರ್‌ನಲ್ಲಿ 4 ಸಿಕ್ಸರ್‌ ಮತ್ತು 2 ಬೌಂಡರಿಗಳನ್ನು ಬಾರಿಸುವ ಮೂಲಕ 33 ರನ್ ಗಳಿಸಿದರು. ಇದು ಈ ಸೀಸನ್​ನ ಅತ್ಯಂತ ದುಬಾರಿ ಓವರ್ ಎಂಬ ಬೇಡದ ದಾಖಲೆಯನ್ನು ಬರೆಯಿತು.