AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಆರ್​ಸಿಬಿ ವಿರುದ್ಧ ಕಣಕ್ಕಿಳಿಯುತ್ತಾರಾ ಹಾರ್ದಿಕ್, ಸೂರ್ಯ?

IPL 2026 RCB vs MI: ಆರ್​ಸಿಬಿ ಪ್ಲೇಆಫ್ ಆಸೆಗೆ ನಿರ್ಣಾಯಕವಾಗಿರುವ ಐಪಿಎಲ್ 2026ರ 54ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರಿಸಲಿದೆ. ಈ ಪಂದ್ಯಕ್ಕೆ ಮುನ್ನ ಮುಂಬೈ ತಂಡಕ್ಕೆ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಅವರ ಗಾಯದ ಸಮಸ್ಯೆ ದೊಡ್ಡ ಚಿಂತೆಯಾಗಿದೆ. ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಪರೀಕ್ಷೆ ಬಳಿಕ ಆಡುವ ಕುರಿತು ಸ್ಪಷ್ಟವಾಗಲಿದ್ದು, ಸೂರ್ಯಕುಮಾರ್ ಯಾದವ್ ಆಡುವುದು ಖಚಿತವಾಗಿದೆ. ಹಾರ್ದಿಕ್ ಗೈರುಹಾಜರಿಯಲ್ಲಿ ಸೂರ್ಯ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ.

ಪೃಥ್ವಿಶಂಕರ
|

Updated on: May 09, 2026 | 6:05 PM

Share
ಐಪಿಎಲ್ 2026 ರ 54ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಸೇಡಿನ ಸಮರಕ್ಕೆ ವೇದಿಕೆ ಸಜ್ಜಾಗಿದೆ. ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯ ಆರ್​ಸಿಬಿಗೆ ನಿರ್ಣಾಯಕವಾಗಿದ್ದರೆ, ಮುಂಬೈಗೆ ಕೇವಲ ಔಪಚಾರಿಕವಾಗಿದೆ (PC- IPL X).

1 / 5
ಏಕೆಂದರೆ ಆರ್​ಸಿಬಿ ಪ್ಲೇಆಫ್​ ರೇಸ್​​ನಲ್ಲಿದ್ದರೆ, ಇತ್ತ ಮುಂಬೈ ಪ್ಲೇಆಫ್ ರೇಸ್​​ನಿಂದ ಭಾಗಶಃ ಹೊರಬಿದ್ದಿದೆ. ಇದರ ನಡುವೆ ಮುಂಬೈ ತಂಡಕ್ಕೆ ಇಬ್ಬರು ಸ್ಟಾರ್ ಆಟಗಾರರ ಇಂಜುರಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತಂಡದ ಇಬ್ಬರು ಸ್ಟಾರ್ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಆರ್​ಸಿಬಿ ವಿರುದ್ಧ ಅವರು ಆಡುವ ಬಗ್ಗೆ ಇದೀಗ ಹೊಸ ಅಪ್​​ಡೇಟ್ ಹೊರಬಿದ್ದಿದೆ (PC- IPL X).

2 / 5
ಬೆನ್ನಿನ ಗಾಯದಿಂದಾಗಿ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕಳೆದ ಪಂದ್ಯದಲ್ಲಿ ಆಡಿರಲಿಲ್ಲ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಿದ್ದರು. ಇದೀಗ ಆರ್​ಸಿಬಿ ವಿರುದ್ಧ ಹಾರ್ದಿಕ್ ಕಣಕ್ಕಿಳಿಯುವುದರ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಆದರೆ ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ (PC- IPL X).

3 / 5
ವರದಿಯ ಪ್ರಕಾರ, ಪಂದ್ಯಕ್ಕೆ ಒಂದು ದಿನ ಮೊದಲು, ಅಂದರೆ ಮೇ 9 ರ ಶನಿವಾರದಂದು ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಈ ಪರೀಕ್ಷೆಯಲ್ಲಿ ಹಾರ್ದಿಕ್ ಪಾಸ್ ಆದರೆ, ರಾಯ್ಪುರದಲ್ಲಿ ತಂಡವನ್ನು ಕೂಡಿಕೊಳ್ಳುವುದರ ಜೊತೆಗೆ ಮೇ 10 ರಂದು ಆರ್​ಸಿಬಿ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಇಲ್ಲದಿದ್ದರೆ ಹಾರ್ದಿಕ್ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ (PC- IPL X).

4 / 5
ಹಾರ್ದಿಕ್ ಲಭ್ಯತೆಯ ಬಗ್ಗೆ ಪರಿಸ್ಥಿತಿ ಸ್ಪಷ್ಟವಾಗಿಲ್ಲವಾದರೂ, ತಂಡದ ಉಪನಾಯಕ ಸೂರ್ಯಕುಮಾರ್ ಯಾದವ್ ಆಡುವುದು ಖಚಿತ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ಸೂರ್ಯ ಪಂದ್ಯಕ್ಕಾಗಿ ರಾಯ್‌ಪುರದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಹೀಗಾಗಿ ಹಾರ್ದಿಕ್ ಈ ಪಂದ್ಯದಲ್ಲಿ ಆಡದಿದ್ದರೆ, ಆರ್​ಸಿಬಿ ವಿರುದ್ಧವೂ ಸೂರ್ಯ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ (PC- IPL X).

5 / 5
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us