AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈ ಇಂಡಿಯನ್ಸ್​ ತಂಡಕ್ಕೆ ಅರ್ಷದೀಪ್ ಸಿಂಗ್ ಎಂಟ್ರಿ!

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​-20ರ ಮಿನಿ ಹರಾಜು ಡಿಸೆಂಬರ್ 16 ರಂದು ನಡೆಯಲಿದೆ. ಈ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಅರ್ಷದೀಪ್ ಸಿಂಗ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಪ್ರತಿಯಾಗಿ ಹಾರ್ದಿಕ್ ಪಾಂಡ್ಯರನ್ನು ಪಂಜಾಬ್ ಕಿಂಗ್ಸ್​ಗೆ ಬಿಟ್ಟುಕೊಟ್ಟಿದ್ದಾರೆ.

ಮುಂಬೈ ಇಂಡಿಯನ್ಸ್​ ತಂಡಕ್ಕೆ ಅರ್ಷದೀಪ್ ಸಿಂಗ್ ಎಂಟ್ರಿ!
Arshdeep SinghImage Credit source: x.com
ಝಾಹಿರ್ ಯೂಸುಫ್
|

Updated on: Nov 11, 2026 | 7:54 AM

Share

ಐಪಿಎಲ್ 2027ರ ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಬಿಗ್ ಸ್ವಾಪ್ ಡೀಲ್ ನಡೆದಿದೆ. ಉಭಯ ಫ್ರಾಂಚೈಸಿಗಳ ನಡುವೆ ನಡೆದಿರುವ ಈ ಒನ್-ಟು-ಒನ್ ‘ಪ್ಲೇಯರ್ ಸ್ವಾಪ್’ ಒಪ್ಪಂದಕ್ಕೆ ಬಿಸಿಸಿಐ ಅಧಿಕೃತ ಮುದ್ರೆ ಒತ್ತಿದ್ದು, ಅದರಂತೆ ಪಂಜಾಬ್ ಕಿಂಗ್ಸ್‌ನ ಸ್ಟಾರ್ ಎಡಗೈ ವೇಗಿ ಅರ್ಷದೀಪ್ ಸಿಂಗ್ ಈಗ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ. ಪ್ರತಿಯಾಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ.

ಇಬ್ಬರೂ ಆಟಗಾರರ ಒಪ್ಪಿಗೆ ಹಾಗೂ ಔಪಚಾರಿಕ ದಾಖಲೆಗಳ ಸಲ್ಲಿಕೆಯ ನಂತರ ಈ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. ಅದರಂತೆ ಮುಂಬರುವ ಸೀಸನ್​ನಲ್ಲಿ ಅರ್ಷದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲಿದ್ದಾರೆ.

ಯಾರಿಗೆ ಎಷ್ಟು ಮೊತ್ತ?

ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಈ ಮೆಗಾ ಟ್ರೇಡ್‌ನಲ್ಲಿ ಇಬ್ಬರೂ ಆಟಗಾರರು ತಮ್ಮ ಹಳೆಯ ಸ್ಯಾಲರಿ ಪ್ಯಾಕೇಜ್ ಅನ್ನು ಹಾಗೇ ಉಳಿಸಿಕೊಂಡಿದ್ದಾರೆ…

  •  ಅರ್ಷದೀಪ್ ಸಿಂಗ್: ₹18 ಕೋಟಿ ಮೊತ್ತದೊಂದಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
  • ಹಾರ್ದಿಕ್ ಪಾಂಡ್ಯ: ₹16.35 ಕೋಟಿ ಮೊತ್ತದೊಂದಿಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.

ಬುಮ್ರಾ-ಅರ್ಷ್ ಜುಗಲ್‌ಬಂದಿ:

ಮುಂಬೈ ಇಂಡಿಯನ್ಸ್ ತಂಡಕ್ಕೆ ಜಸ್​ಪ್ರೀತ್ ಬುಮ್ರಾ ಜೊತೆಗೂಡಿ ಎದುರಾಳಿಗಳನ್ನು ಧೂಳೀಪಟ ಮಾಡಬಲ್ಲ ಮತ್ತೊಬ್ಬ ಬಲಿಷ್ಠ ಭಾರತೀಯ ವೇಗಿಯ ಅಗತ್ಯವಿತ್ತು. ಈಗ ಅರ್ಷದೀಪ್ ಆಗಮನದಿಂದ ವಿಶ್ವದ ಅತ್ಯಂತ ಅಪಾಯಕಾರಿ ಡೆತ್-ಓವರ್ ಬೌಲಿಂಗ್ ಜೋಡಿ ಮುಂಬೈ ಇಂಡಿಯನ್ಸ್​​ಗೆ ಸಿಕ್ಕಂತಾಗಿದೆ. ಎಡಗೈ-ಬಲಗೈ ವೇಗದ ಕಾಂಬಿನೇಷನ್ ಮುಂಬೈ ಬೌಲಿಂಗ್‌ಗೆ ಹೊಸ ಕಳೆ ತಂದಿದೆ.

ಹಾಗೆಯೇ ಮುಂಬೈನ​ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭದಲ್ಲಿ ವೇಗಿಗಳಿಗೆ ಸಿಗುವ ಸ್ವಿಂಗ್ ಅನ್ನು ಅರ್ಷದೀಪ್ ಸಿಂಗ್ ಅತ್ಯುತ್ತಮವಾಗಿ ಬಳಸಿಕೊಳ್ಳಬಲ್ಲರು. ಪವರ್‌ಪ್ಲೇನಲ್ಲಿ ವಿಕೆಟ್ ಕೀಳುವ ಅವರ ಸಾಮರ್ಥ್ಯ ಮುಂಬೈ ಇಂಡಿಯನ್ಸ್​ ತಂಡಕ್ಕೆ ದೊಡ್ಡ ಶಕ್ತಿಯಾಗಲಿದೆ.

ಮುಂಬೈ ಇಂಡಿಯನ್ಸ್​ಗೆ ಹೊಸ ಸವಾಲು!

ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್​ ತಂಡವನ್ನು ತೊರೆದು ಪಂಜಾಬ್ ಕಿಂಗ್ಸ್ ಸೇರಿರುವುದರಿಂದ, ಮುಂಬೈ ಇಂಡಿಯನ್ಸ್ ತಂಡಕ್ಕೆ ಈಗ ಹೊಸ ನಾಯಕನ ಹುಡುಕಾಟ ಆರಂಭವಾಗಿದೆ. ಐಪಿಎಲ್ 2027ರ ಸೀಸನ್‌ನಲ್ಲಿ ಮುಂಬೈ ತಂಡವನ್ನು ರೋಹಿತ್ ಶರ್ಮಾ ಮತ್ತೆ ಮುನ್ನಡೆಸಲಿದ್ದಾರಾ ಅಥವಾ ಸೂರ್ಯಕುಮಾರ್ ಯಾದವ್‌ಗೆ ನಾಯಕತ್ವ ಸಿಗಲಿದೆಯೇ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆಮಾಡಿದೆ. ಮತ್ತೊಂದೆಡೆ, ರಿಕ್ಕಿ ಪಾಂಟಿಂಗ್ ಕೋಚಿಂಗ್‌ನಲ್ಲಿರುವ ಪಂಜಾಬ್ ಕಿಂಗ್ಸ್‌ಗೆ ಹಾರ್ದಿಕ್ ಪಾಂಡ್ಯ ರೂಪದಲ್ಲಿ ಒಬ್ಬ ಮ್ಯಾಚ್-ವಿನ್ನಿಂಗ್ ಆಲ್-ರೌಂಡರ್ ದೊರೆತಂತಾಗಿದೆ.

ಇದನ್ನೂ ಓದಿ: ಭಾರತದ ವಿರುದ್ಧದ ಟೆಸ್ಟ್​ ಸರಣಿಗೆ ಬಲಿಷ್ಠ ನ್ಯೂಝಿಲೆಂಡ್ ತಂಡ ಪ್ರಕಟ

ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ 2027ರ ಮೆಗಾ ಹರಾಜಿಗೂ ಮುನ್ನ ನಡೆದಿರುವ ಈ ಬ್ಲಾಕ್‌ಬಸ್ಟರ್ ಟ್ರೇಡ್ ಉಭಯ ತಂಡಗಳ ಭವಿಷ್ಯವನ್ನು ಬದಲಿಸುವ ಮುನ್ಸೂಚನೆ ನೀಡಿದೆ. ಅರ್ಷದೀಪ್ ಸಿಂಗ್ ಅವರ ಸೇರ್ಪಡೆಯಿಂದ ಮುಂಬೈ ಇಂಡಿಯನ್ಸ್ ಬೌಲಿಂಗ್ ವಿಭಾಗಕ್ಕೆ ಆನೆಬಲ ಬಂದಂತಾಗಿದ್ದರೆ, ಹಾರ್ದಿಕ್ ಪಾಂಡ್ಯ ಅವರ ಎಂಟ್ರಿಯಿಂದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆಲ್-ರೌಂಡರ್ ಬಲ ಹೆಚ್ಚಾಗಿದೆ. ಈ ಎರಡು ಮಹತ್ವದ ಬದಲಾವಣೆಗಳು ಉಭಯ ತಂಡಗಳಲ್ಲಿ ಯಾವ ರೀತಿ ಪ್ರಭಾವ ಬೀರಲಿವೆ ಎಂಬುದನ್ನು ಮುಂಬರುವ ಸೀಸನ್​ನಲ್ಲಿ ಕಾದುನೋಡಬೇಕಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಇಂದು ಈ ರಾಶಿಯವರು ಇತರರಿಂದ ಸಾಲ ಪಡೆಯದಿರಿ
ಇಂದು ಈ ರಾಶಿಯವರು ಇತರರಿಂದ ಸಾಲ ಪಡೆಯದಿರಿ
ಮಲ್ಲೇಶ್ವರಂ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದಲ್ಲಿ ಜೀವ ಭಯ
ಮಲ್ಲೇಶ್ವರಂ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದಲ್ಲಿ ಜೀವ ಭಯ
ಸಂಸತ್ ಭವನದಲ್ಲಿ ಮಹನೀಯರ ಫೋಟೋ ಜತೆ ಟಿಪ್ಪು ಫೋಟೋ ಇಡಬೇಕು: ವಾಟಾಳ್ ನಾಗರಾಜ್
ಸಂಸತ್ ಭವನದಲ್ಲಿ ಮಹನೀಯರ ಫೋಟೋ ಜತೆ ಟಿಪ್ಪು ಫೋಟೋ ಇಡಬೇಕು: ವಾಟಾಳ್ ನಾಗರಾಜ್
ಗಾನವಿ ಬುಸ್ ಅಂದ್ರೆ ಭಯ ಬೀಳ್ತಾರಾ ತಾಂಡವ್ ರಾಮ್?
ಗಾನವಿ ಬುಸ್ ಅಂದ್ರೆ ಭಯ ಬೀಳ್ತಾರಾ ತಾಂಡವ್ ರಾಮ್?
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ