AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಸಿಗೋಣ… RCBಗೆ ಜೇಕಬ್ ಬೆಥೆಲ್ ಭಾವನಾತ್ಮಕ ವಿದಾಯ!

ಐಪಿಎಲ್ 2027ರ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಿಂದ ಬಿಡುಗಡೆಯಾಗಿರುವ ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಜೇಕಬ್ ಬೆಥೆಲ್, ಫ್ರಾಂಚೈಸಿ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ಭಾವನಾತ್ಮಕ ವಿದಾಯ ಹೇಳಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡಿರುವ ಅವರು, ಆರ್‌ಸಿಬಿ ಜೊತೆಗಿನ ಎರಡು ವರ್ಷಗಳ ಸ್ಮರಣೀಯ ಪಯಣವನ್ನು ನೆನೆದು ಭಾವುಕರಾಗಿದ್ದಾರೆ.

ಮತ್ತೆ ಸಿಗೋಣ... RCBಗೆ ಜೇಕಬ್ ಬೆಥೆಲ್ ಭಾವನಾತ್ಮಕ ವಿದಾಯ!
Jacob Bethell Image Credit source: IPL
ಝಾಹಿರ್ ಯೂಸುಫ್
|

Updated on: Nov 19, 2026 | 10:32 AM

Share

ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಿಂದ ಬಿಡುಗಡೆಯಾಗಿರುವ ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಜೇಕಬ್ ಬೆಥೆಲ್, ಫ್ರಾಂಚೈಸಿ ಹಾಗೂ ಅಭಿಮಾನಿಗಳಿಗೆ ಹೃದಯಸ್ಪರ್ಶಿ ವಿದಾಯದ ಸಂದೇಶವನ್ನು ಹಂಚಿಕೊಂಡಿದ್ದಾರೆ.

ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆರ್‌ಸಿಬಿ ತಂಡದೊಂದಿಗಿನ ತಮ್ಮ ಎರಡು ವರ್ಷಗಳ ಸ್ಮರಣೀಯ ಪಯಣವನ್ನು ನೆನಪಿಸಿಕೊಂಡಿರುವ ಬೆಥೆಲ್, ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಭಾವನಾತ್ಮಕ ವಿದಾಯ!

ಎರಡು ಅದ್ಭುತ ವರ್ಷಗಳಿಗಾಗಿ ಆರ್‌ಸಿಬಿಗೆ  ಧನ್ಯವಾದಗಳು. ನನ್ನ ಮೊದಲ ಐಪಿಎಲ್ ಅನುಭವವನ್ನು ಪಡೆಯಲು ಇದಕ್ಕಿಂತ ಉತ್ತಮವಾದ ಫ್ರಾಂಚೈಸಿಯನ್ನು ನಾನು ಬಯಸಲು ಸಾಧ್ಯವಿರಲಿಲ್ಲ. ಕ್ರಿಕೆಟ್‌ನ ಕೆಲವು ದಿಗ್ಗಜರೊಂದಿಗೆ ಡ್ರೆಸ್ಸಿಂಗ್ ರೂಮ್ ಮತ್ತು ಮೈದಾನವನ್ನು ಹಂಚಿಕೊಂಡಿದ್ದು ನನಗೆ ಸಿಕ್ಕ ದೊಡ್ಡ ಗೌರವವಾಗಿದೆ. ಅದಕ್ಕಿಂತ ಮುಖ್ಯವಾಗಿ, ಎರಡು ಟ್ರೋಫಿ ಗೆದ್ದ ಆವೃತ್ತಿಗಳ ಭಾಗವಾಗಿದ್ದು ನನಗೆ ತುಂಬಾ ವಿಶೇಷವಾಗಿದೆ.

ದುರದೃಷ್ಟವಶಾತ್, ಈ ವರ್ಷ ನಾನು ಐಪಿಎಲ್‌ನಲ್ಲಿ ಭಾಗವಹಿಸುತ್ತಿಲ್ಲ ಮತ್ತು ನನ್ನ ಮೊಣಕಾಲಿನ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಅವಿರತವಾಗಿ ಶ್ರಮಿಸಲಿದ್ದೇನೆ. ನಾನು ಭಾರತದಲ್ಲಿದ್ದಷ್ಟು ದಿನ ನನ್ನ ಮತ್ತು ತಂಡದ ಪಯಣವನ್ನು ಇಷ್ಟೊಂದು ವಿಶೇಷವಾಗಿಸಿದ ಎಲ್ಲಾ ಆರ್‌ಸಿಬಿ ಅಭಿಮಾನಿಗಳಿಗೆ ನನ್ನ ಪ್ರೀತಿಯನ್ನು ಹಂಚುತ್ತಿದ್ದೇನೆ. ಆರ್‌ಸಿಬಿ ಜೆರ್ಸಿಯಲ್ಲಿ ಇದು ನನ್ನ ಅಂತ್ಯವಲ್ಲ, ಆದಷ್ಟು ಬೇಗ ಮತ್ತೆ ಸಿಗೋಣ ಎಂಬ ಭರವಸೆಯಿದೆ ಎಂದು ಜೇಕಬ್ ಬೆಥೆಲ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

;

ಚಾಂಪಿಯನ್ ಪಯಣದ ನೆನಪು:

ತಮ್ಮ ಮೊದಲ ಐಪಿಎಲ್ ಅನುಭವವನ್ನು ನೀಡಿದ್ದಕ್ಕಾಗಿ ಆರ್‌ಸಿಬಿಗೆ ಧನ್ಯವಾದ ಅರ್ಪಿಸಿರುವ ಬೆಥೆಲ್ ಕ್ರಿಕೆಟ್ ದಿಗ್ಗಜರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಂಡದ ಎರಡು ಟ್ರೋಫಿ ಗೆಲುವಿನ ಋತುಗಳ ಭಾಗವಾಗಿದ್ದು ತಮ್ಮ ವೃತ್ತಿಜೀವನದ ವಿಶೇಷ ಕ್ಷಣ ಎಂದು ಬಣ್ಣಿಸಿದ್ದಾರೆ.

ಇದೇ ವೇಳೆ ಆರ್‌ಸಿಬಿ ಅಭಿಮಾನಿಗಳ ಅಪಾರ ಪ್ರೀತಿಗೆ ಧನ್ಯವಾದ ತಿಳಿಸಿರುವ ಅವರು, “ಇದು ಆರ್‌ಸಿಬಿ ಜೆರ್ಸಿಯಲ್ಲಿ ನನ್ನ ಅಂತ್ಯವಲ್ಲ, ಆದಷ್ಟು ಬೇಗ ಮತ್ತೆ ಸಿಗುವ ಭರವಸೆಯಿದೆ” ಎಂದು ಬರೆಯುವ ಮೂಲಕ ಮತ್ತೆ ತಂಡಕ್ಕೆ ಮರಳುವ ಆಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಚ್ಚರಿಯ ಆಯ್ಕೆ… ಇಬ್ಬರನ್ನು ಕೈಬಿಟ್ಟ ಟೀಮ್ ಇಂಡಿಯಾ!

ಒಟ್ಟಾರೆಯಾಗಿ, ತಮ್ಮ ಸ್ಫೋಟಕ ಆಟದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಮನಗೆದ್ದಿದ್ದ ಜೇಕಬ್ ಬೆಥೆಲ್, ಆದಷ್ಟು ಬೇಗ ಗಾಯದಿಂದ ಚೇತರಿಸಿಕೊಂಡು ಮತ್ತೆ ಮೈದಾನಕ್ಕೆ ಮರಳಲಿ ಎಂಬುದೇ ಆರ್‌ಸಿಬಿ ಫ್ಯಾನ್ಸ್‌ಗಳ ಆಶಯವಾಗಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More