IPL 2027 ಹರಾಜಿನಲ್ಲಿ ಯಾವ ತಂಡದ ಪರ್ಸ್ ಎಷ್ಟು? ಇಲ್ಲಿದೆ 10 ತಂಡಗಳ ಸಂಪೂರ್ಣ ಲೆಕ್ಕಾಚಾರ

ಐಪಿಎಲ್ 2027 ಮಿನಿ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಆಟಗಾರರ ರಿಟೆನ್ಷನ್ ಬಳಿಕ ತಂಡಗಳ ಪರ್ಸ್‌ನಲ್ಲಿ ಉಳಿದಿರುವ ಹಣ ಮತ್ತು ಖಾಲಿ ಇರುವ ಆಟಗಾರರ ಸ್ಥಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಲಕ್ನೋ ಸೂಪರ್ ಜೈಂಟ್ಸ್ ಅತಿ ಹೆಚ್ಚು ಹಣದೊಂದಿಗೆ ಹರಾಜಿಗೆ ಸಿದ್ಧವಾಗಿದ್ದರೆ, ಗುಜರಾತ್ ಟೈಟಾನ್ಸ್ ಬಳಿ ಕಡಿಮೆ ಹಣವಿದೆ. ಡೆಲ್ಲಿ ಮತ್ತು ಮುಂಬೈ ಹೆಚ್ಚು ಆಟಗಾರರನ್ನು ಖರೀದಿಸಬಹುದು. ಡಿಸೆಂಬರ್ 16ರಂದು ಗೋವಾದಲ್ಲಿ ಹರಾಜು ನಡೆಯಲಿದೆ.

IPL 2027 ಹರಾಜಿನಲ್ಲಿ ಯಾವ ತಂಡದ ಪರ್ಸ್ ಎಷ್ಟು? ಇಲ್ಲಿದೆ 10 ತಂಡಗಳ ಸಂಪೂರ್ಣ ಲೆಕ್ಕಾಚಾರ
Ipl 2027

Updated on: Nov 18, 2026 | 10:33 AM

ಐಪಿಎಲ್ 2027ರ ಮಿನಿ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ನವೆಂಬರ್ 17ರ ಗಡುವಿನೊಳಗೆ ಬಿಸಿಸಿಐಗೆ ಸಲ್ಲಿಸಿವೆ. ಕಳೆದ ಕೆಲವು ತಿಂಗಳುಗಳಿಂದ ನಡೆದ ಆಟಗಾರರ ಟ್ರೇಡಿಂಗ್ ಮತ್ತು ರಿಟೆನ್ಷನ್ ಪ್ರಕ್ರಿಯೆ ಮುಗಿದಿದ್ದು, ಇದೀಗ ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ ಮತ್ತು ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸುವ ಅವಕಾಶವಿದೆ ಎಂಬ ಲೆಕ್ಕಾಚಾರ ಸ್ಪಷ್ಟವಾಗಿದೆ.

ಯಾವ ತಂಡದ ಬಳಿ ಅತಿ ಹೆಚ್ಚು ಹಣ ಉಳಿದಿದೆ?

ಐಪಿಎಲ್ 2027ರ ಮಿನಿ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಅತಿ ಹೆಚ್ಚು ಹಣದೊಂದಿಗೆ ಕಣಕ್ಕಿಳಿಯಲಿದೆ. ಆಟಗಾರರನ್ನು ಉಳಿಸಿಕೊಂಡ ಬಳಿಕ ಲಕ್ನೋ ತಂಡದ ಪರ್ಸ್‌ನಲ್ಲಿ ಬರೋಬ್ಬರಿ 47.45 ಕೋಟಿ ರೂ. ಉಳಿದಿದೆ. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬಳಿ 41.65 ಕೋಟಿ ರೂ. ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬಳಿ 40.15 ಕೋಟಿ ರೂ. ಹಣವಿದೆ. ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ತಂಡದ ಬಳಿ ಕೇವಲ 8.75 ಕೋಟಿ ರೂ. ಮಾತ್ರ ಉಳಿದಿದ್ದು, ಅತಿ ಕಡಿಮೆ ಹಣ ಹೊಂದಿರುವ ತಂಡ ಎನಿಸಿಕೊಂಡಿದೆ.

Loading...

ಆಟಗಾರರ ಖರೀದಿಗೆ ಹೆಚ್ಚು ಅವಕಾಶ ಯಾವ ತಂಡಕ್ಕಿದೆ?

ಖಾಲಿ ಇರುವ ಆಟಗಾರರ ಸ್ಥಾನಗಳ ಲೆಕ್ಕಾಚಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಂಚೂಣಿಯಲ್ಲಿವೆ. ಈ ಎರಡೂ ತಂಡಗಳು ತಲಾ 9 ಆಟಗಾರರನ್ನು ಖರೀದಿಸಬಹುದು. ಇನ್ನೊಂದೆಡೆ, ಗುಜರಾತ್ ಟೈಟಾನ್ಸ್ ತಂಡದಲ್ಲಿ ಕೇವಲ 3 ಸ್ಥಾನಗಳು ಮಾತ್ರ ಖಾಲಿಯಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ 5 ಆಟಗಾರರ ಸ್ಥಾನಗಳು ಖಾಲಿಯಿವೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ತಲಾ 7 ಆಟಗಾರರನ್ನು ಖರೀದಿಸುವ ಅವಕಾಶ ಹೊಂದಿವೆ.

10 ತಂಡಗಳ ವಿವರ ಇಂತಿದೆ

ತಂಡ

ಉಳಿದಿರುವ ಹಣ

ಖಾಲಿ ಸ್ಥಾನಗಳು

ವಿದೇಶಿ ಆಟಗಾರರ ಸ್ಥಾನ

ಲಕ್ನೋ ಸೂಪರ್ ಜೈಂಟ್ಸ್

47.45 ಕೋಟಿ

7

3

ಕೋಲ್ಕತ್ತಾ ನೈಟ್ ರೈಡರ್ಸ್

41.65 ಕೋಟಿ

8

3

ಸನ್‌ರೈಸರ್ಸ್ ಹೈದರಾಬಾದ್

40.15 ಕೋಟಿ

7

3

ಡೆಲ್ಲಿ ಕ್ಯಾಪಿಟಲ್ಸ್

39.50 ಕೋಟಿ

9

4

ಮುಂಬೈ ಇಂಡಿಯನ್ಸ್

32.60 ಕೋಟಿ

9

2

ಚೆನ್ನೈ ಸೂಪರ್ ಕಿಂಗ್ಸ್

28.05 ಕೋಟಿ

6

2

ರಾಜಸ್ಥಾನ್ ರಾಯಲ್ಸ್

27.05 ಕೋಟಿ

6

2

ಪಂಜಾಬ್ ಕಿಂಗ್ಸ್

18.60 ಕೋಟಿ

6

2

ರಾಯಲ್ ಚಾಲೆಂಜರ್ಸ್ ಬೆಂಗಳೂರು

14.15 ಕೋಟಿ

6

1

ಗುಜರಾತ್ ಟೈಟಾನ್ಸ್

8.75 ಕೋಟಿ

3

2

ಮಿನಿ ಹರಾಜು ಯಾವಾಗ?

ಐಪಿಎಲ್ 2027ರ ಮಿನಿ ಹರಾಜು ಡಿಸೆಂಬರ್ 16, 2026ರಂದು ಗೋವಾದಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಎಲ್ಲಾ 10 ತಂಡಗಳು ತಮಗೆ ಅಗತ್ಯವಿರುವ ಆಟಗಾರರನ್ನು ಖರೀದಿಸಲು ಪೈಪೋಟಿ ನಡೆಸಲಿವೆ. 2025ರಿಂದ 2027ರವರೆಗಿನ ಮೂರು ವರ್ಷಗಳ ಅವಧಿಯ ಆರಂಭದಲ್ಲಿ ಪ್ರತಿ ತಂಡಕ್ಕೂ ಆಟಗಾರರ ಖರೀದಿಗಾಗಿ 120 ಕೋಟಿ ರೂ. ಪರ್ಸ್ ನಿಗದಿಪಡಿಸಲಾಗಿತ್ತು. ನಿಯಮದ ಪ್ರಕಾರ ಪ್ರತಿ ಮಿನಿ ಹರಾಜಿಗೂ ಮುನ್ನ ಈ ಮೊತ್ತಕ್ಕೆ ಹೆಚ್ಚುವರಿಯಾಗಿ 5 ಕೋಟಿ ರೂ. ಸೇರಿಸಲಾಗುತ್ತದೆ.

ಹೀಗಾಗಿ ಐಪಿಎಲ್ 2027ರ ಮಿನಿ ಹರಾಜಿನಲ್ಲಿ ಪ್ರತಿ ತಂಡದ ಒಟ್ಟು ಪರ್ಸ್ ಮೊತ್ತ 130 ಕೋಟಿ ರೂ.ಗೆ ಏರಿಕೆಯಾಗಲಿದೆ. ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಹರಾಜಿನಲ್ಲಿ ಯಾವ ತಂಡ ಬಲಿಷ್ಠ ಆಟಗಾರರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 am, Wed, 18 November 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us