AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಹಿತ್ ಶರ್ಮಾ ಹೆಗಲಿಗೆ ಮುಂಬೈ ಇಂಡಿಯನ್ಸ್ ‘ನಾಯಕ’ನ ಆಯ್ಕೆ!

IPL 2027: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್, ತನ್ನ ಭವಿಷ್ಯದ ಹೊಸ ನಾಯಕನ ಹುಡುಕಾಟಕ್ಕೆ ಇಳಿದಿದೆ. ವಿಶೇಷವೆಂದರೆ, ಈ ಜವಾಬ್ದಾರಿಯನ್ನು ಫ್ರಾಂಚೈಸಿಯು ಮಾಜಿ ನಾಯಕ ರೋಹಿತ್ ಶರ್ಮಾ ಅವರ ಮಾರ್ಗದರ್ಶನದಲ್ಲೇ ಮುನ್ನಡೆಸುತ್ತಿದೆ. ಹಿಟ್‌ಮ್ಯಾನ್ ಅವರ ಕ್ರಿಕೆಟ್ ಜಾಣ್ಮೆ ಹಾಗೂ ತಾಂತ್ರಿಕ ಸಲಹೆಗಳ ಆಧಾರದ ಮೇಲೆಯೇ ಮುಂಬೈ ಇಂಡಿಯನ್ಸ್ ತನ್ನ ಮುಂದಿನ ಸಾರಥಿಯನ್ನು ಆಯ್ಕೆ ಮಾಡಲಿದ್ದು, ಈ ಪ್ರಕ್ರಿಯೆ ತೀವ್ರ ಕುತೂಹಲ ಮೂಡಿಸಿದೆ.

ರೋಹಿತ್ ಶರ್ಮಾ ಹೆಗಲಿಗೆ ಮುಂಬೈ ಇಂಡಿಯನ್ಸ್ ‘ನಾಯಕ’ನ ಆಯ್ಕೆ!
Rohit Sharma
ಝಾಹಿರ್ ಯೂಸುಫ್
|

Updated on: Sep 02, 2026 | 10:03 AM

Share

ಇಂಡಿಯನ್ ಪ್ರೀಮಿಯರ್ ಲೀಗ್ 20ನೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹೊಸ ನಾಯಕ ಮುನ್ನಡೆಸುವುದು ಬಹುತೇಕ ಖಚಿತವಾಗಿದೆ. ಇದಕ್ಕಾಗಿ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ ಈಗಾಗಲೇ ಗಂಭೀರ ಚರ್ಚೆಗಳು ಆರಂಭವಾಗಿದ್ದು, ಈ ಮಹತ್ವದ ಆಂತರಿಕ ಸಭೆಗಳಲ್ಲಿ ಮಾಜಿ ನಾಯಕ ರೋಹಿತ್ ಶರ್ಮ ಅತ್ಯಂತ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ರೋಹಿತ್ ಅವರ ತಾಂತ್ರಿಕ ಸಲಹೆ ಹಾಗೂ ಮಾರ್ಗದರ್ಶನದ ಆಧಾರದ ಮೇಲೆಯೇ ಮುಂಬೈ ಫ್ರಾಂಚೈಸಿಯು ತನ್ನ ಮುಂದಿನ ನಾಯಕನನ್ನು ಆಯ್ಕೆ ಮಾಡಲಿದೆ ಎಂದು ವರದಿಯಾಗಿದೆ.

ನಾಯಕತ್ವ ತಿರಸ್ಕರಿಸಿದಿ ಹಿಟ್​ಮ್ಯಾನ್!

ಐದು ಬಾರಿ ಮುಂಬೈ ಇಂಡಿಯನ್ಸ್​ ತಂಡಕ್ಕೆ ಟ್ರೋಫಿ ತಂದುಕೊಟ್ಟಿರುವ 39 ವರ್ಷದ ರೋಹಿತ್ ಶರ್ಮಾ ಅವರಿಗೆ ಮರಳಿ ನಾಯಕತ್ವ ನೀಡಲು ಮ್ಯಾನೇಜ್‌ಮೆಂಟ್ ಆಸಕ್ತಿ ಹೊಂದಿತ್ತು. ಆದರೆ, ರೋಹಿತ್ ಮತ್ತೆ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದಾಗ್ಯೂ, ತಂಡದ ಮುಂದಿನ ಭವಿಷ್ಯ ಮತ್ತು ಹೊಸ ನಾಯಕನ ಆಯ್ಕೆಯ ಕುರಿತು ಮುಖ್ಯ ತರಬೇತುದಾರರೊಂದಿಗೆ ರೋಹಿತ್ ಸಕ್ರಿಯವಾಗಿ ಸಲಹೆ-ಸೂಚನೆಗಳನ್ನು ನೀಡುತ್ತಿದ್ದಾರೆ.

ಆಟಗಾರನಾಗಿ ಪಾಂಡ್ಯ:

ಕಳೆದ ಸೀಸನ್‌ಗಳಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ನಾಯಕತ್ವದ ಜವಾಬ್ದಾರಿಯಿಂದ ಮುಕ್ತಗೊಳಿಸಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ.

ಆದರೆ, ಮುಂಬರುವ ಸೀಸನ್‌ಗಾಗಿ ಪಾಂಡ್ಯ ಅವರನ್ನು ಕೇವಲ ಒಬ್ಬ ಆಟಗಾರನಾಗಿ ತಂಡದಲ್ಲೇ ಉಳಿಸಿಕೊಳ್ಳಲು ಫ್ರಾಂಚೈಸಿ ತೀವ್ರ ಆಸಕ್ತಿ ತೋರಿದೆ. ಮ್ಯಾನೇಜ್‌ಮೆಂಟ್‌ನ ಈ ‘ಕೇವಲ ಆಟಗಾರ’ ಎಂಬ ಹೊಸ ನಿಬಂಧನೆಗೆ ಹಾರ್ದಿಕ್ ಪಾಂಡ್ಯ ಒಪ್ಪಿಕೊಳ್ಳುತ್ತಾರಾ? ಅಥವಾ ಬೇರೆ ದಾರಿ ಹುಡುಕುತ್ತಾರಾ? ಎಂಬುದೇ ಸದ್ಯದ ಬಹುದೊಡ್ಡ ಕುತೂಹಲ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಗೆ ಹೊಸ ಷರತ್ತು ವಿಧಿಸಿದ ಮುಂಬೈ ಇಂಡಿಯನ್ಸ್

ಒಟ್ಟಾರೆಯಾಗಿ, ಮುಂಬೈ ಇಂಡಿಯನ್ಸ್ ತಂಡವು ತನ್ನ ಹಳೆಯ ವೈಭವ ಹಾಗೂ ಯಶಸ್ಸಿನ ದಿನಗಳನ್ನು ಮರಳಿ ಪಡೆಯಲು ಭರ್ಜರಿ ಸಿದ್ಧತೆ ನಡೆಸುತ್ತಿದೆ. ರೋಹಿತ್ ಶರ್ಮಾ ಅವರ ಅಪಾರ ಅನುಭವ, ಕ್ರಿಕೆಟ್ ಜಾಣ್ಮೆ ಹಾಗೂ ತಾಂತ್ರಿಕ ಮಾರ್ಗದರ್ಶನದ ನೆರಳಿನಲ್ಲೇ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯು ಹೊಸ ನಾಯಕತ್ವದ ಯುಗಕ್ಕೆ ನಾಂದಿ ಹಾಡಲು ಸಂಪೂರ್ಣವಾಗಿ ಸಜ್ಜಾಗುತ್ತಿದೆ. ಅದರಂತೆ ಐಪಿಎಲ್ 2027 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Follow Us
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್