AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರ್ದಿಕ್ ಪಾಂಡ್ಯಗೆ ಹೊಸ ಷರತ್ತು ವಿಧಿಸಿದ ಮುಂಬೈ ಇಂಡಿಯನ್ಸ್

Hardik Pandya: ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಒಟ್ಟು 39 ಪಂದ್ಯಗಳಲ್ಲಿ ಮುನ್ನಡೆಸಿದ್ದು, ಈ ಪೈಕಿ ಮುಂಬೈ ಪಡೆ ಗೆದ್ದಿರುವುದು ಕೇವಲ 15 ಪಂದ್ಯಗಳಲ್ಲಿ ಮಾತ್ರ. ಇನ್ನು ಪಾಂಡ್ಯ ಮುಂದಾಳತ್ವದಲ್ಲಿ ಮುಂಬೈ ಫ್ರಾಂಚೈಸಿಯು ಬರೋಬ್ಬರಿ 24 ಪಂದ್ಯಗಳಲ್ಲಿ ಸೋಲನುಭವಿಸಿದೆ. ಅಂದರೆ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಹೀಗಾಗಿಯೇ ಪಾಂಡ್ಯರನ್ನು ನಾಯಕತ್ವದಿಂದ ಕೆಳಗಿಳಿಸಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮುಂದಾಗಿದೆ.

ಹಾರ್ದಿಕ್ ಪಾಂಡ್ಯಗೆ ಹೊಸ ಷರತ್ತು ವಿಧಿಸಿದ ಮುಂಬೈ ಇಂಡಿಯನ್ಸ್
Hardik PandyaImage Credit source: IPL
ಝಾಹಿರ್ ಯೂಸುಫ್
|

Updated on: Sep 02, 2026 | 8:50 AM

Share

ಐಪಿಎಲ್ 2027ರಲ್ಲಿ ಹಾರ್ದಿಕ್ ಪಾಂಡ್ಯ ಯಾವ ತಂಡದ ಪರ ಕಣಕ್ಕಿಳಿಯಲಿದ್ದಾರೆ? ಈ ಕುತೂಹಲಕಾರಿ ಪ್ರಶ್ನೆಗೆ ಇನ್ನೂ ಸಹ  ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇದಕ್ಕೆ ಮುಖ್ಯ ಕಾರಣ ಕಳೆದ ಕೆಲವು ತಿಂಗಳುಗಳಿಂದ ಪಾಂಡ್ಯ ವಿಷಯದಲ್ಲಿ ನಡೆಯುತ್ತಿದ್ದ ಹೈ-ಪ್ರೊಫೈಲ್ ಟ್ರೇಡಿಂಗ್ (ವರ್ಗಾವಣೆ) ಪ್ರಕ್ರಿಯೆಯ ಚರ್ಚೆಗಳು. ಆದರೆ ಇದೀಗ ಹೊರಬಿದ್ದಿರುವ ವರದಿಗಳ ಪ್ರಕಾರ, ಈ ಎಲ್ಲಾ ಟ್ರೇಡಿಂಗ್ ವದಂತಿಗಳಿಗೆ ಬ್ರೇಕ್ ಹಾಕಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯೇ ಹಾರ್ದಿಕ್ ಪಾಂಡ್ಯರನ್ನು ಉಳಿಸಿಕೊಳ್ಳಲು ಸಜ್ಜಾಗಿದೆ.

ಆದರೆ, ಈ ಉಳಿಸಿಕೊಳ್ಳುವಿಕೆಯ ಹಿಂದೆ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಪಾಂಡ್ಯ ಮುಂದೆ ಒಂದು ಮುಖ್ಯ ಷರತ್ತನ್ನು ಇಟ್ಟಿದೆ ಎಂದು ವರದಿಯಾಗಿದೆ. ಅದೇನೆಂದರೆ, ಮುಂಬರುವ ಸೀಸನ್‌ನಲ್ಲಿ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಮುಂದುವರಿಯಬೇಕಾದರೆ ಅವರು ಕೇವಲ ಒಬ್ಬ ಆಟಗಾರನಾಗಿ ಮಾತ್ರ ಆಡಬೇಕಾಗುತ್ತದೆ. ಅಂದರೆ ನಾಯಕತ್ವದ ಜವಾಬ್ದಾರಿಯನ್ನು ಬಿಟ್ಟುಕೊಡಬೇಕಾಗುತ್ತದೆ.

ಕಳೆದ ಐಪಿಎಲ್ 2026ರ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್​ ತಂಡವು 9ನೇ ಸ್ಥಾನಕ್ಕೆ ಕುಸಿದ ಹಿನ್ನೆಲೆಯಲ್ಲಿ ಮ್ಯಾನೇಜ್ಮೆಂಟ್ ಈ ಕಠಿಣ ನಿರ್ಧಾರಕ್ಕೆ ಬಂದಿದೆ. ಈಗ ಚೆಂಡು ಹಾರ್ದಿಕ್ ಪಾಂಡ್ಯ ಅವರ ಅಂಗಳದಲ್ಲಿದ್ದು, ಅವರು ಈ ಷರತ್ತಿಗೆ ಒಪ್ಪಿ ಮುಂಬೈನಲ್ಲಿ ಉಳಿಯುತ್ತಾರಾ ಅಥವಾ ಮೆಗಾ ಹರಾಜಿನತ್ತ ಮುಖ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಟ್ರೇಡಿಂಗ್ ಮಾತುಕತೆ ವಿಫಲ;

ಕಳೆದ ಕೆಲವು ತಿಂಗಳುಗಳಿಂದ ಹಾರ್ದಿಕ್ ಪಾಂಡ್ಯ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಅಥವಾ ಬೇರೆ ತಂಡಗಳಿಗೆ ಟ್ರೇಡ್ ಮಾಡಲಾಗುತ್ತದೆ ಎಂಬ ಬಲವಾದ ವದಂತಿಗಳು ಹರಿದಾಡುತ್ತಿದ್ದವು. ಆದರೆ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಸೂಕ್ತವಾದ ಆಟಗಾರರ ಬದಲಾವಣೆ ಅಥವಾ ಸಮನಾದ ಒಪ್ಪಂದ ಬೇರೆ ತಂಡಗಳಿಂದ ಸಿಗದ ಕಾರಣ ಈ ಟ್ರೇಡಿಂಗ್ ಮಾತುಕತೆಗಳು ಸದ್ಯಕ್ಕೆ ಸ್ಥಗಿತಗೊಂಡಿವೆ. ಹೀಗಾಗಿ, ಹಾರ್ದಿಕ್ ಅವರನ್ನು ತಂಡದಲ್ಲೇ ಉಳಿಸಿಕೊಂಡು, ಅವರ ಮೇಲಿರುವ ನಾಯಕತ್ವದ ಒತ್ತಡವನ್ನು ಕಡಿಮೆ ಮಾಡಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ.

ಪಾಂಡ್ಯ ಮುಂದಿರುವ ಸವಾಲು!

ಕಳೆದ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಕಾಣಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ, ಮುಂಬರುವ ಆವೃತ್ತಿಯಲ್ಲಿ ಕೇವಲ ಒಬ್ಬ ಆಟಗಾರನಾಗಿ ತಂಡದಲ್ಲಿ ಮುಂದುವರಿಯುತ್ತಾರಾ ಎಂಬುದೇ ಈಗಿರುವ ದೊಡ್ಡ ಪ್ರಶ್ನೆ. ಒಂದು ವೇಳೆ ಮುಂಬೈ ಮ್ಯಾನೇಜ್‌ಮೆಂಟ್ ಮತ್ತು ಹಾರ್ದಿಕ್ ನಡುವೆ ಈ ಹೊಸ ಪಾತ್ರದ ಕುರಿತು ಒಮ್ಮತ ಮೂಡದಿದ್ದರೆ, ಮೆಗಾ ಹರಾಜಿಗೂ ಮುನ್ನ ಅವರು ತಂಡದಿಂದ ಬಿಡುಗಡೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಂದರೆ, ಹಾರ್ದಿಕ್ ಪಾಂಡ್ಯ ಮುಂದೆ ಈಗ ಮುಂಬೈ ಇಟ್ಟಿರುವ ಷರತ್ತಿಗೆ ಒಪ್ಪಿ ತಂಡದಲ್ಲೇ ಉಳಿಯುವುದು ಅಥವಾ ರಿಲೀಸ್ ಆಗಿ ನೇರವಾಗಿ ಹರಾಜಿನಲ್ಲಿ ಅದೃಷ್ಟ ಪರೀಕ್ಷಿಸುವುದು—ಈ ಎರಡೇ ದಾರಿಗಳು ಉಳಿದುಕೊಂಡಿವೆ.

ಇದನ್ನೂ ಓದಿ: ಟೀಮ್ ಇಂಡಿಯಾದಿಂದ 8 ಆಟಗಾರರು ಔಟ್

ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ 2027ರ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಸೃಷ್ಟಿಯಾಗಿರುವ ಈ ನಾಯಕತ್ವದ ಬಿಕ್ಕಟ್ಟು ಭಾರೀ ಕುತೂಹಲ ಮೂಡಿಸಿದೆ. ಹಾರ್ದಿಕ್ ಪಾಂಡ್ಯ ಅವರು ಮ್ಯಾನೇಜ್‌ಮೆಂಟ್‌ನ ಕಠಿಣ ಷರತ್ತಿಗೆ ತಲೆಬಾಗಿ ಕೇವಲ ಆಟಗಾರನಾಗಿ ಮುಂಬೈ ತಂಡದಲ್ಲೇ ಮುಂದುವರಿಯುತ್ತಾರಾ, ಅಥವಾ ಮುಂಬೈ ಫ್ರಾಂಚೈಸಿಗೆ ಗುಡ್‌ಬೈ ಹೇಳಿ ಹರಾಜಿನ ಅಂಗಳಕ್ಕೆ ಜಿಗಿಯುತ್ತಾರಾ ಎಂಬುದು ಇನ್ನು ಕೆಲವೇ ದಿನಗಳಲ್ಲಿ ಸ್ಪಷ್ಟವಾಗಲಿದೆ.

Follow Us
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್