IPL 2021​ ಹರಾಜು ಪ್ರಕ್ರಿಯೆಗೆ 1097 ಆಟಗಾರರು ನೋಂದಣಿ

ನೋಂದಣಿಗೆ ಫೆ.4 ಕೊನೆಯ ದಿನಾಂಕವಾಗಿತ್ತು. ಹೆಸರು ದಾಖಲಿಸಿದವರ ಪೈಕಿ 207 ಅಂತಾರಾಷ್ಟ್ರೀಯ ಆಟಗಾರರು ಹಾಗೂ ಟೀಂ ಇಂಡಿಯಾದಲ್ಲಿ ಗುರುತಿಸಿಕೊಂಡ 21 ಆಟಗಾರರು ಇದ್ದಾರೆ.

IPL 2021​ ಹರಾಜು ಪ್ರಕ್ರಿಯೆಗೆ 1097 ಆಟಗಾರರು ನೋಂದಣಿ
ಪ್ರಾತಿನಿಧಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 05, 2021 | 9:54 PM

ಇದೇ ತಿಂಗಳು ನಡೆಯಲಿರುವ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬರೋಬ್ಬರಿ 1097 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ವೆಸ್ಟ್​ ಇಂಡೀಸ್​ನಿಂದ ಅತಿ ಹೆಚ್ಚು ಅಂದರೆ 56 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾ (42) ಮತ್ತು ಮೂರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ (38) ಇದೆ.

ನೋಂದಣಿಗೆ ಫೆ.4 ಕೊನೆಯ ದಿನಾಂಕವಾಗಿತ್ತು. ಹೆಸರು ದಾಖಲಿಸಿದವರ ಪೈಕಿ 207 ಅಂತಾರಾಷ್ಟ್ರೀಯ ಆಟಗಾರರು ಹಾಗೂ ಟೀಂ ಇಂಡಿಯಾದಲ್ಲಿ ಗುರುತಿಸಿಕೊಂಡ 21 ಆಟಗಾರರು ಇದ್ದಾರೆ. ಉಳಿದಂತೆ, ರಾಷ್ಟ್ರೀಯ ತಂಡದಲ್ಲಿ ಆಡದೆ ಇರುವ 863 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಭಾರತೀಯರು 743 ಹಾಗೂ ವಿದೇಶದ 68 ಆಟಗಾರರು ಇದ್ದಾರೆ.

ಕಿಂಗ್ಸ್​ ಇಲವೆನ್​ ಪಂಜಾಬ್​ ಬಳಿ ಅತಿ ಹೆಚ್ಚು ಅಂದರೆ, 53.20 ಕೋಟಿ ರೂಪಾಯಿ ಉಳಿದುಕೊಂಡಿದೆ. ನಂತರದಲ್ಲಿ ಆರ್​ಸಿಬಿ (35.90 ಕೋಟಿ ರೂಪಾಯಿ), ರಾಜಸ್ಥಾನ್​ ರಾಯಲ್ಸ್ (34.85 ಕೋಟಿ ರೂಪಾಯಿ), ​ಚೆನ್ನೈ ಸೂಪರ್​ ಕಿಂಗ್ಸ್​ (22.9 ಕೋಟಿ ರೂಪಾಯಿ) ಮುಂಬೈ ಇಂಡಿಯನ್ಸ್​ (15.35 ಕೋಟಿ ರೂಪಾಯಿ), ಡೆಲ್ಲಿ ಕ್ಯಾಪಿಟಲ್ಸ್​ (12.9 ಕೋಟಿ ರೂಪಾಯಿ) ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ಸನ್​ ರೈಸರ್ಸ್​ ಹೈದರಾಬಾದ್ ಬಳಿ ತಲಾ 10.75 ಕೋಟಿ ರೂಪಾಯಿ ಇದೆ.

ಕೊರೊನಾದಿಂದ ಕಳೆದ ಬಾರಿಯ ಐಪಿಎಲ್​ ದುಬೈನಲ್ಲಿ ನಡೆದಿತ್ತು. ಈ ಬಾರಿ ಭಾರತದಲ್ಲಿಯೇ ಐಪಿಎಲ್​ ನಡೆಯುವ ಸಾಧ್ಯತೆ ಇದೆ. ಚೆನ್ನೈನಲ್ಲಿ ಫೆಬ್ರವರಿ 18ರಂದು ಐಪಿಎಲ್​ ಹರಾಜು ಪ್ರಕ್ರಿಯೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ.

India vs England Test Series | ಐಪಿಎಲ್ ಆಡುವಾಗ ಬಹಳಷ್ಟು ಅಂಶಗಳನ್ನು ವಿದೇಶಿ ಆಟಗಾರರೊಂದಿಗೆ ನಾವು ಶೇರ್ ಮಾಡಲ್ಲ: ರಹಾನೆ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ