
ಮುಸ್ತಾಫಿಜುರ್ ರೆಹಮಾನ್ (Mustafizur Rahman) ಅವರನ್ನು ಐಪಿಎಲ್‌ನಿಂದ (IPL) ಕೈಬಿಟ್ಟ ನಂತರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮತ್ತು ಬಾಂಗ್ಲಾದೇಶ ಸರ್ಕಾರ ಭಾರತದ ವಿರುದ್ಧ ಸಮರ ಸಾರಿವೆ. ಮುಸ್ತಾಫಿಜುರ್ ಅವರನ್ನು ಕೈಬಿಟ್ಟ ನಂತರ ಬಾಂಗ್ಲಾದೇಶ, ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಡಲು ನಿರಾಕರಿಸಿದೆ. ಬಾಂಗ್ಲಾದೇಶದ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಬೇಕೆಂದು ಬಾಂಗ್ಲಾದೇಶ ಐಸಿಸಿಗೆ ಮನವಿ ಸಲ್ಲಿಸಿದೆ. ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಏತನ್ಮಧ್ಯೆ, ಬಾಂಗ್ಲಾದೇಶ ಸರ್ಕಾರವು ಐಪಿಎಲ್ ಪ್ರಸಾರವನ್ನು ನಿಷೇಧಿಸಿದೆ.
ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಪಂದ್ಯಾವಳಿಯನ್ನು 120 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರ ಮತ್ತು ನೇರ ಪ್ರಸಾರ ಮಾಡಲಾಗುತ್ತದೆ. ಐಪಿಎಲ್ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಆದರೆ ಕೆಲವು ದೇಶಗಳು ಈ ಪಂದ್ಯಾವಳಿಯ ಪ್ರಸಾರವನ್ನು ನಿಷೇಧಿಸಿವೆ. ಬಾಂಗ್ಲಾದೇಶವನ್ನು ಹೊರತುಪಡಿಸಿ ಯಾವ ದೇಶಗಳು ಐಪಿಎಲ್ ಪ್ರಸಾರ ಮಾಡುವುದಿಲ್ಲ ಎಂಬುದನ್ನು ನೋಡುವುದಾದರೆ..
ಬಾಂಗ್ಲಾದೇಶ ಇತ್ತೀಚೆಗೆ ಐಪಿಎಲ್ ಅನ್ನು ನಿಷೇಧಿಸಿದೆ. ಬಾಂಗ್ಲಾದೇಶಕ್ಕೂ ಮೊದಲು ಪಾಕಿಸ್ತಾನ ಐಪಿಎಲ್ ಪ್ರಸಾರವನ್ನು ನಿಷೇದಿಸಿತ್ತು. ಕಳೆದ ಹಲವಾರು ವರ್ಷಗಳಿಂದ, ಪಾಕಿಸ್ತಾನದಲ್ಲಿ ಟಿವಿ ಚಾನೆಲ್‌ಗಳು ಅಥವಾ ಪ್ಲಾಟ್‌ಫಾರ್ಮ್‌ಗಳಲ್ಲಿ ಐಪಿಎಲ್ ಪ್ರಸಾರ ರದ್ದಾಗಿದೆ. ಪಾಕಿಸ್ತಾನದಲ್ಲಿ ಐಪಿಎಲ್ ವೀಕ್ಷಿಸಲು ವಿಪಿಎನ್‌ಗಳನ್ನು ಬಳಸಲಾಗುತ್ತದೆ. ಆದರೆ ಐಪಿಎಲ್ ಅನ್ನು ಅಧಿಕೃತವಾಗಿ ಪ್ರಸಾರ ಮಾಡುವುದಿಲ್ಲ.
ಮತ್ತೊಂದೆಡೆ, ಆಫ್ರಿಕಾ ಖಂಡ ಮತ್ತು ಮಧ್ಯ ಏಷ್ಯಾ ಅಥವಾ ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ಕ್ರಿಕೆಟ್ ಜನಪ್ರಿಯವಾಗಿಲ್ಲ. ಹೀಗಾಗಿ ಈ ಸ್ಥಳಗಳಲ್ಲಿಯೂ ಐಪಿಎಲ್ ಪ್ರಸಾರವಾಗುವುದಿಲ್ಲ. ಆದರೆ ಯುಪ್‌ಟಿವಿಯಂತಹ ವೇದಿಕೆಗಳು 70 ಕ್ಕೂ ಹೆಚ್ಚು ದೇಶಗಳಲ್ಲಿ ಸ್ಟ್ರೀಮಿಂಗ್ ಮಾಡುತ್ತಿವೆ. ಇದರಲ್ಲಿ ಕಾಂಟಿನೆಂಟಲ್ ಯುರೋಪ್, ಮಧ್ಯ ದಕ್ಷಿಣ ಅಮೆರಿಕಾ, ಆಗ್ನೇಯ ಏಷ್ಯಾದ ಕೆಲವು ಭಾಗಗಳು, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾದಂತಹ ದೇಶಗಳು ಸೇರಿವೆ. ಆದ್ದರಿಂದ ಐಪಿಎಲ್ ಪ್ರಸಾರವಾಗದ ದೇಶಗಳು ಬಹಳ ಕಡಿಮೆ.
ಆರ್ಸಿಬಿ ಸೇರಿದಂತೆ ಈ 3 ಐಪಿಎಲ್ ತಂಡಗಳ ಆಟಗಾರರಿಗಿಲ್ಲ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ
ಬಾಂಗ್ಲಾದೇಶದಲ್ಲಿ ಐಪಿಎಲ್ ಅಭಿಮಾನಿಗಳು ತುಂಬಾ ಇದ್ದಾರೆ. ಏಕೆಂದರೆ ಬಾಂಗ್ಲಾದೇಶದ ಅನೇಕ ಆಟಗಾರರು ಐಪಿಎಲ್ ಪಂದ್ಯಾವಳಿಯಲ್ಲಿ ಆಡಿದ್ದಾರೆ. ಕ್ರಿಕೆಟಿಗರಾದ ಅಬ್ದುರ್ ರಜಾಕ್, ಮೊಹಮ್ಮದ್ ಅಶ್ರಫುಲ್, ಮಶ್ರಫೆ ಮೊರ್ತಾಜಾ, ಲಿಟನ್ ದಾಸ್, ಮುಸ್ತಾಫಿಜುರ್ ರೆಹಮಾನ್ ಐಪಿಎಲ್‌ನಲ್ಲಿ ಆಡಿದ್ದಾರೆ. ಬಾಂಗ್ಲಾದೇಶದಲ್ಲಿ ಟಿ ಸ್ಪೋರ್ಟ್ಸ್ ಮೂಲಕ ಐಪಿಎಲ್ ಪ್ರಸಾರವಾಗುತ್ತಿತ್ತು. ಆದರೆ ಈಗ ಬಾಂಗ್ಲಾದೇಶ ಸರ್ಕಾರ ಅದನ್ನು ನಿಷೇಧಿಸಿದೆ. ಆದ್ದರಿಂದ, ಬಾಂಗ್ಲಾದೇಶದಲ್ಲಿರುವ ಐಪಿಎಲ್ ಪ್ರಿಯರು ಇನ್ನು ಮುಂದೆ ಈ ಪಂದ್ಯಾವಳಿಯನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ