IPL 2025 mega auction: ಅತ್ಯಂತ ಹಿರಿಯ ಜೇಮ್ಸ್ ಅಂಡರ್ಸನ್; ಅತ್ಯಂತ ಕಿರಿಯ ಯಾರು ಗೊತ್ತಾ?

|

Updated on: Nov 15, 2024 | 10:18 PM

IPL 2025 mega auction: ನವೆಂಬರ್ 24 ಮತ್ತು 25 ರಂದು ನಡೆಯುವ ಐಪಿಎಲ್ ಮೆಗಾ ಹರಾಜಿನಲ್ಲಿ ಒಟ್ಟು 574 ಆಟಗಾರರು ಭಾಗವಹಿಸಲಿದ್ದಾರೆ. ಇದರಲ್ಲಿ 366 ಭಾರತೀಯರು ಮತ್ತು 208 ವಿದೇಶಿ ಆಟಗಾರರು ಸೇರಿದ್ದಾರೆ. ಹರಾಜಿನಲ್ಲಿ ಬಾಗಿಯಾಗುವವರಲ್ಲಿ ಅತ್ಯಂತ ಕಿರಿಯ ಆಟಗಾರ 13 ವರ್ಷದ ವೈಭವ್ ಸೂರ್ಯವಂಶಿ ಆದರೆ, ಅತ್ಯಂತ ಹಿರಿಯ ಆಟಗಾರ ಜೇಮ್ಸ್ ಆಂಡರ್ಸನ್ ಆಗಿದ್ದಾರೆ.

IPL 2025 mega auction: ಅತ್ಯಂತ ಹಿರಿಯ ಜೇಮ್ಸ್ ಅಂಡರ್ಸನ್; ಅತ್ಯಂತ ಕಿರಿಯ ಯಾರು ಗೊತ್ತಾ?
ಐಪಿಎಲ್ ಹರಾಜು
Follow us on

ಇದೇ ತಿಂಗಳ ಅಂದರೆ ನವೆಂಬರ್ 24 ಮತ್ತು 25 ರಂದು ನಡೆಯಲ್ಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಎಷ್ಟು ಆಟಗಾರರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಖಚಿತವಾಗಿದೆ. ಬಿಸಿಸಿಐ ಇಂದು ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ ಈ ಬಾರಿ 574 ಆಟಗಾರರ ಮೇಲೆ ಹರಾಜು ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ಅತ್ಯಂತ ಹಿರಿಯ ಆಟಗಾರ ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ ಆಗಿದ್ದರೆ, ಅತ್ಯಂತ ಕಿರಿಯ ಆಟಗಾರ ಭಾರತದ ವೈಭವ್ ಸೂರ್ಯವಂಶಿ. ಬಿಸಿಸಿಐ ಪ್ರಕಟಿಸಿರುವ ಈ ಅಂತಿಮ ಪಟ್ಟಿಯಲ್ಲಿ 491 ನೇ ಸ್ಥಾನದಲ್ಲಿರುವ ವೈಭವ್, ಅನ್‌ಕ್ಯಾಪ್ಡ್ ಆಟಗಾರನಾಗಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಿಹಾರದ ಸಮಸ್ತಿಪುರದ ವೈಭವ್ ಸೂರ್ಯವಂಶಿಗೆ ಇನ್ನೂ 13 ವರ್ಷ. ಈ ಚಿಕ್ಕ ವಯಸ್ಸಿನಲ್ಲಿ, ಅವರು ರಣಜಿ ಟ್ರೋಫಿ, ಹೇಮಂತ್ ಟ್ರೋಫಿ, ಕೂಚ್ ಬೆಹಾರ್ ಟ್ರೋಫಿ ಮತ್ತು ವಿನೂ ಮಂಕಡ್ ಟ್ರೋಫಿಗಳನ್ನು ಆಡಿದ್ದಾರೆ. ಇತ್ತೀಚೆಗೆ ಭಾರತದ ಅಂಡರ್-19 ತಂಡಕ್ಕೂ ಆಯ್ಕೆಯಾಗಿದ್ದರು. ವೈಭವ್ ಸೂರ್ಯವಂಶಿ ಅವರು ವಿವಿಧ ಟೂರ್ನಿಗಳು ಸೇರಿದಂತೆ ಒಂದು ವರ್ಷದಲ್ಲಿ ಒಟ್ಟು 49 ಶತಕಗಳನ್ನು ಗಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಕೇವಲ 12 ವರ್ಷ ಮತ್ತು 284 ದಿನಗಳಲ್ಲಿ ತಮ್ಮ ಮೊದಲ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದಾರೆ. ಇದಲ್ಲದೇ ರಣಧೀರ್ ವರ್ಮಾ ಅಂಡರ್-19 ಏಕದಿನ ಪಂದ್ಯಾವಳಿಯಲ್ಲೂ ವೈಭವ್ ತ್ರಿಶತಕ ಬಾರಿಸಿದ್ದರು.

ಆಸ್ಟ್ರೇಲಿಯಾ ಎ ವಿರುದ್ಧ ಶತಕ

ಸೂರ್ಯವಂಶಿ ಈ ವರ್ಷದ ಜನವರಿಯಲ್ಲಿ ಬಿಹಾರ ಪರ ರಣಜಿಗೆ ಪದಾರ್ಪಣೆ ಮಾಡಿ ಉತ್ತಮ ಪ್ರದರ್ಶನ ನೀಡಿದ್ದರು. ಆ ನಂತರ ವೈಭವ್ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ಎ ತಂಡದಲ್ಲಿ ಆಯ್ಕೆ ಮಾಡಲಾಯಿತು. ಆಸ್ಟ್ರೇಲಿಯಾ ಎ ವಿರುದ್ಧವೂ ವೈಭವ್ ಅದ್ಭುತ ಪ್ರದರ್ಶನ ನೀಡಿ ಶತಕ ಸಿಡಿಸಿದ್ದರು. ವೈಭವ್ ಕೇವಲ 58 ಎಸೆತಗಳಲ್ಲಿ ಈ ಶತಕ ದಾಖಲಿಸಿದ್ದರು. ಅವರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಸೂರ್ಯವಂಶಿ ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೆ 5 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಆಡಿರುವ 10 ಇನ್ನಿಂಗ್ಸ್‌ಗಳಲ್ಲಿ 100 ರನ್ ಗಳಿಸಿದ್ದಾರೆ.

ಹರಾಜಿನಲ್ಲಿ 574 ಆಟಗಾರರು

ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿರುವ ಹರಾಜಿಗೆ ಒಟ್ಟು 574 ಆಟಗಾರರ ಹೆಸರು ಅಂತಿಮವಾಗಿದೆ. 574 ಆಟಗಾರರ ಪೈಕಿ 366 ಭಾರತೀಯರು ಮತ್ತು 208 ವಿದೇಶಿಯರು ಸೇರಿದಂತೆ 3 ಅಸೋಸಿಯೇಟ್ ದೇಶಗಳ ಆಟಗಾರರು ಸೇರಿದ್ದಾರೆ. ಈ ಹರಾಜಿನಲ್ಲಿ 318 ಭಾರತೀಯ ಅನ್‌ಕ್ಯಾಪ್ಡ್ ಆಟಗಾರರು ಮತ್ತು 12 ಅನ್‌ಕ್ಯಾಪ್ಡ್ ವಿದೇಶಿ ಆಟಗಾರರು ಭಾಗವಹಿಸಲಿದ್ದಾರೆ. ಒಟ್ಟು 204 ಸ್ಲಾಟ್‌ಗಳು ಖಾಲಿಯಿದ್ದು, ಅದರಲ್ಲಿ 70 ಸ್ಲಾಟ್‌ಗಳು ವಿದೇಶಿ ಆಟಗಾರರಿಗೆ ಮೀಸಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:05 pm, Fri, 15 November 24