IPL 2021 Points Table: SRH vs DC ಪಂದ್ಯದ ಬಳಿಕ ಐಪಿಎಲ್ 2021 ಪಾಯಿಂಟ್ ಟೇಬಲ್ನಲ್ಲಿ ಮಹತ್ವದ ಬದಲಾವಣೆ
Points Table IPL 2021: ಡೆಲ್ಲಿ ಕ್ಯಾಪಿಟಲ್ಸ್ ತಂಡ ಈವರೆಗೆ ಒಟ್ಟು 9 ಪಂದ್ಯಗಳನ್ನು ಆಡಿದ್ದು ಏಳರಲ್ಲಿ ಗೆಲುವು ಕಂಡಿದೆ. ಕೇವಲ ಎರಡು ಪಂದ್ಯಗಳಲ್ಲಷ್ಟೆ ಸೋತಿದೆ. ಒಟ್ಟು 14 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ +0.613 ನೆಟ್ರೇಟ್ನೊಂದಿಗೆ ಮೊದಲ ಸ್ಥಾನದಲ್ಲಿದೆ.
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಎರಡನೇ ಚರಣ ರೋಚಕತೆ ಸೃಷ್ಟಿಸಲು ಶುರುವಾಗಿದೆ. ಬುಧವಾರ ಸನ್ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್(SRH vs DC) ನಡುವಣ ಪಂದ್ಯದ ಬಳಿಕ ಐಪಿಎಲ್ 2021 ಪಾಯಿಂಟ್ ಟೇಬಲ್ನಲ್ಲಿ (IPL 2021 Point Table) ಸಾಕಷ್ಟು ಬದಲಾವಣೆಗಳಾಗಿದ್ದು, ಪ್ಲೇ ಆಫ್ಗೇರುವ ತಂಡದ ಬಗ್ಗೆ ಕುತೂಹಲ ಮೂಡಿಸಿದೆ. ಎಸ್ಆರ್ಹೆಚ್ ವಿರುದ್ಧ ಡೆಲ್ಲಿ ತಂಡ 8 ವಿಕೆಟ್ಗಳ ಅಮೋಘ ಗೆಲುವು ಕಾಣುವ ಮೂಲಕ ಪಾಯಿಂಟ್ ಟೇಬಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಅನ್ನು ಹಿಂದಿಕ್ಕಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಈ ಮೂಲಕ ತನ್ನ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದೆ. ರಿಷಭ್ ಪಂತ್ (Rishabh Pant) ಪಡೆಗೆ ಇನ್ನೊಂದು ಪಂದ್ಯ ಗೆದ್ದರೆ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಈವರೆಗೆ ಒಟ್ಟು 9 ಪಂದ್ಯಗಳನ್ನು ಆಡಿದ್ದು ಏಳರಲ್ಲಿ ಗೆಲುವು ಕಂಡಿದೆ. ಕೇವಲ ಎರಡು ಪಂದ್ಯಗಳಲ್ಲಷ್ಟೆ ಸೋತಿದೆ. ಒಟ್ಟು 14 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ +0.613 ನೆಟ್ರೇಟ್ನೊಂದಿಗೆ ಮೊದಲ ಸ್ಥಾನದಲ್ಲಿದೆ.
ಎಂ. ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈವರೆಗೆ ಒಟ್ಟು 8 ಪಂದ್ಯಗಳನ್ನು ಆಡಿದ್ದು ಆರರಲ್ಲಿ ಗೆಲುವು ಕಂಡಿದೆ. ಕೇವಲ ಎರಡು ಪಂದ್ಯಗಳಲ್ಲಷ್ಟೆ ಸೋತಿದೆ. ಒಟ್ಟು 12 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ +1.223 ನೆಟ್ರೇಟ್ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಶುಕ್ರವಾರ ಆರ್ಸಿಬಿ ವಿರುದ್ಧ ಚೆನ್ನೈ ಪಂದ್ಯವಿದ್ದು ಇಲ್ಲಿ ಗೆದ್ದರೆ ಮತ್ತೆ ಅಗ್ರಸ್ಥಾನಕ್ಕೇರಲಿದೆ.
ಐಪಿಎಲ್ ಎರಡನೇ ಚರಣವನ್ನು ಕೆಟ್ಟದಾಗಿ ಪ್ರಾರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈವರೆಗೆ ಒಟ್ಟು 8 ಪಂದ್ಯಗಳನ್ನು ಆಡಿದ್ದು ಐದರಲ್ಲಿ ಗೆಲುವು ಕಂಡಿದೆ. ಮೂರು ಪಂದ್ಯಗಳಲ್ಲಷ್ಟೆ ಸೋತಿದೆ. ಒಟ್ಟು 10 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.706 ನೆಟ್ರೇಟ್ನೊಂದಿಗೆ ಮೂರನೇ ಸ್ಥಾನದಲ್ಲಿದೆ.
ಮುಂಬೈ ಇಂಡಿಯನ್ಸ್ ತಂಡ ಒಟ್ಟು 8 ಪಂದ್ಯಗಳನ್ನು ಆಡಿದ್ದು ಸೋಲು-ಗೆಲುವನ್ನು ಸಮಾನವಾಗಿ ಹಂಚಿಕೊಂಡಿದೆ. ನಾಲ್ಕರಲ್ಲಿ ಗೆಲುವು ನಾಲ್ಕರಲ್ಲಿ ಸೋತಿದೆ. ಒಟ್ಟು 8 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.071 ನೆಟ್ರೇಟ್ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ರಾಜಸ್ಥಾನ್ ರಾಯಲ್ಸ್ ತಂಡ ಈವರೆಗೆ ಒಟ್ಟು 8 ಪಂದ್ಯಗಳನ್ನು ಆಡಿದ್ದು ಮುಂಬೈ ರೀತಿಯಲ್ಲೇ ಇದೆ. ನಾಲ್ಕರಲ್ಲಿ ಗೆಲುವು ಕಂಡರೆ ನಾಲ್ಕನರಲ್ಲಿ ಸೋತಿದೆ. ಒಟ್ಟು 8 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.154 ನೆಟ್ರೇಟ್ನೊಂದಿಗೆ ಐದನೇ ಸ್ಥಾನದಲ್ಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಒಟ್ಟು 8 ಪಂದ್ಯಗಳನ್ನು ಆಡಿದ್ದು ಕೇವಲ ಮೂರು ಪಂದ್ಯಗಳಲ್ಲಷ್ಟೆ ಗೆಲುವು ಕಂಡಿದೆ. ಐದು ಪಂದ್ಯಗಳಲ್ಲಿ ಸೋತಿದೆ. ಒಟ್ಟು 6 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ +0.110 ನೆಟ್ರೇಟ್ನೊಂದಿಗೆ ಆರನೇ ಸ್ಥಾನದಲ್ಲಿದೆ.
ಇನ್ನೂ ಕೆ. ಎಲ್ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಪ್ಲೇ ಆಫ್ ಹಾದಿ ಕಠಿಣವಾಗಿದೆ. ಈವರೆಗೆ ಒಟ್ಟು 9 ಪಂದ್ಯಗಳನ್ನು ಆಡಿದ್ದು ಕೇವಲ 3 ಪಂದ್ಯಗಳನ್ನಷ್ಟೆ ಗೆದ್ದಿದೆ. ಆರು ಪಂದ್ಯಗಳಲ್ಲಿ ಸೋಲುಂಡಿದೆ. ಒಟ್ಟು 6 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.345 ನೆಟ್ರೇಟ್ನೊಂದಿಗೆ ಏಳನೇ ಸ್ಥಾನದಲ್ಲಿದೆ.
ಸನ್ರೈಸರ್ಸ್ ಹೈದಬಾದ್ ತಂಡ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಒಂದರಲ್ಲಷ್ಟೆ ಗೆದ್ದಿದೆ. ಏಳು ಪಂದ್ಯಗಳಲ್ಲಿ ಸೋಲುಂಡಿದೆ. ಪಾಯಿಂಟ್ ಪಟ್ಟಿಯಲ್ಲಿ -0.689 ನೆಟ್ರೇಟ್ನೊಂದಿಗೆ ಕೊನೇಯ ಎಂಟನೇ ಸ್ಥಾನದಲ್ಲಿದೆ.
Shreyas Iyer: ತನ್ನನ್ನು ನಾಯಕನಾಗಿ ಆಯ್ಕೆ ಮಾಡದ ಬಗ್ಗೆ ಮೊದಲ ಬಾರಿ ಮೌನ ಮುರಿದ ಶ್ರೇಯಸ್ ಅಯ್ಯರ್
(IPL Points Table 2021 Standings ranking orange cap purple cap after SRH vs DC in Kannada 22nd September)