Shreyas Iyer: ತನ್ನನ್ನು ನಾಯಕನಾಗಿ ಆಯ್ಕೆ ಮಾಡದ ಬಗ್ಗೆ ಮೊದಲ ಬಾರಿ ಮೌನ ಮುರಿದ ಶ್ರೇಯಸ್ ಅಯ್ಯರ್
IPL 2021, SRHvsDC: ಐಪಿಎಲ್ ಮೊದಲಾರ್ಧದಲ್ಲಿ ಡೆಲ್ಲಿ ನಿರ್ವಹಣೆ ಗಮನಾರ್ಹ ಮಟ್ಟದಲ್ಲಿದ್ದರಿಂದ ರಿಷಭ್ ಪಂತ್ ಅವರನ್ನೇ ನಾಯಕನಾಗಿ ಮುಂದುವರಿಸಲು ನಿರ್ಧರಿಸಲಾಯಿತು. ಸದ್ಯ ಶ್ರೇಯಸ್ ಅಯ್ಯರ್ ಈ ಕುರಿತು ಮಾತನಾಡಿದ್ದಾರೆ.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ 2021ರ (IPL 2021) 33ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (SRH vs DC) ತಂಡ 8 ವಿಕೆಟ್ಗಳ ಅಮೋಘ ಗೆಲುವು ಕಂಡಿತು. ಈ ಮೂಲಕ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೆ ಮತ್ತೆ ಏರಿದ್ದು 14 ಅಂಕ ಸಂಪಾದಿಸಿದೆ. ಇನ್ನೊಂದು ಪಂದ್ಯ ಗೆದ್ದರೆ ರಿಷಭ್ ಪಂತ್ (Rishabh Pant) ಪಡೆ ಪ್ಲೇ ಆಫ್ಗೆ ತಲುಪಲಿದೆ. ಕಳೆದ ಸೀಸನ್ನಲ್ಲಿ ಡೆಲ್ಲಿ ತಂಡವನ್ನು ನಾಯಕನಾಗಿ ಶ್ರೇಯಸ್ ಅಯ್ಯರ್ (Shreyas Iyer) ಮುನ್ನಡೆಸಿದ್ದರು. ತಂಡವನ್ನು ಫೈನಲ್ ವರೆಗೂ ಕೊಂಡೊಯ್ಯಿದಿದ್ದರು. ಆದರೆ, ಈ ಬಾರಿ ಇಂಜುರಿಯಿಂದಾಗಿ ಅಯ್ಯರ್ ಮೊದಲ ಐಪಿಎಲ್ ಚರಣಕ್ಕೆ ಅಲಭ್ಯರಾಗಿದ್ದರು. ಹೀಗಾಗಿ ಡೆಲ್ಲಿ (Delhi Capitals) ಫ್ರಾಂಚೈಸಿ ರಿಷಭ್ ಪಂತ್ ಅವರನ್ನು ನಾಯಕನಾಗಿ ಮಾಡಿತು. ಸದ್ಯ ಎರಡನೇ ಚರಣದಲ್ಲಿ ಅಯ್ಯರ್ ಕಣಕ್ಕಿಳಿದಿದ್ದಾರೆ. ಆದರೆ, ನಾಯಕನಾಗಿ ಪಂತ್ ಅವರನ್ನೇ ಮುಂದುವರೆಸಲಾಗಿದೆ. ಈ ಬಗ್ಗೆ ಅಯ್ಯರ್ ತುಟಿಬಿಚ್ಚಿದ್ದಾರೆ.
ಐಪಿಎಲ್‌ನ ಮೊದಲಾರ್ಧದ ಪಂದ್ಯಗಳ ಆರಂಭಕ್ಕೆ ಕೆಲವೇ ದಿನಗಳ ಮುನ್ನ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರು. ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿ ವೇಳೆ ಶ್ರೇಯಸ್ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಭುಜದ ಮೇಲೆ ಬಲವಾಗಿ ಬಿದ್ದು ಪೆಟ್ಟು ಮಾಡಿಕೊಮಡಿದ್ದರು. ಈ ಗಾಯದ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಪಡೆದ ಕಾರಣ 3 ತಿಂಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತಾಯಿತು.
ಹೀಗಾಗಿ ಮೊದಲ ಚರಣದ ಐಪಿಎಲ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿದರು. ಜುಲೈನಲ್ಲಿ ಭಾರತ ತಂಡದ ಶ್ರೀಲಂಕಾ ಪ್ರವಾಸಕ್ಕೂ ಶ್ರೇಯಸ್ ಅವರನ್ನು ಆಯ್ಕೆ ಮಾಡಲಾಗಿರಲಿಲ್ಲ. ಹೀಗಾಗಿ ಅಯ್ಯರ್ ಅಲಭ್ಯತೆಯಿಂದಾಗಿ ರಿಷಭ್ ಪಂತ್ ತಂಡವನ್ನು ಮುನ್ನಡೆಸಿದ್ದಾರೆ. ಸಿಕ್ಕ ಜವಾಬ್ಧಾರಿಯನ್ನು ಅದ್ಭುತವಾಗಿ ನಿರ್ವಹಿಸಿದ್ದ ಪಂತ್ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಐಪಿಎಲ್ ಮೊದಲಾರ್ಧದಲ್ಲಿ ಡೆಲ್ಲಿ ನಿರ್ವಹಣೆ ಗಮನಾರ್ಹ ಮಟ್ಟದಲ್ಲಿದ್ದು, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಹೀಗಾಗಿ ಪಂತ್ ಅವರನ್ನೇ ನಾಯಕನಾಗಿ ಮುಂದುವರಿಸಲು ನಿರ್ಧರಿಸಲಾಯಿತು. ಸದ್ಯ ಶ್ರೇಯಸ್ ಅಯ್ಯರ್ ಈ ಕುರಿತು ಮಾತನಾಡಿದ್ದು, ಈ ನಿರ್ಧಾರ ಫ್ರಾಂಚೈಸಿಗೆ ಬಿಟ್ಟ ವಿಚಾರ, ಅವರು ತೆಗೆದುಕೊಂಡ ತೀರ್ಮಾನವನ್ನು ನಾನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
“ನಮಗೆ ನಾಯಕತ್ವದ ಜವಾಬ್ದಾರಿ ಸಿಕ್ಕಾಗ ಯೋಚನಾ ಶಕ್ತಿಯನ್ನ ಬದಲಾಯಿಸಬೇಕಾಗುತ್ತದೆ. ನಮ್ಮ ನಿರ್ಧಾರ ಮಹತ್ವದ್ದಾಗಿರುತ್ತದೆ. ರಿಷಭ್ ಪಂತ್ ಈ ಬಾರಿ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಅದಕ್ಕಾಗಿ ಫ್ರಾಂಚೈಸಿ ಅವರನ್ನೇ ನಾಯಕನಾಗಿ ಮುಂದುವರೆಸಲು ತೀರ್ಮಾನಿಸಿತು. ಈ ನಿರ್ಧಾರವನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ. ನಾನೀಗ ಬ್ಯಾಟಿಂಗ್ ಕಡೆಗೆ ಎಲ್ಲ ಗಮನವನ್ನು ನೀಡುತ್ತೇನೆ. ಸಂಕಷ್ಟದ ಸಂದರ್ಭದಲ್ಲಿ ತಂಡಕ್ಕೆ ಯಾವರೀತಿ ಆಸರೆಯಾಗಬೇಕು ಎಂಬ ಬಗ್ಗೆ ಗಮನಿಸುತ್ತಿದ್ದೇನೆ” ಎಂದು ಅಯ್ಯರ್ ಹೇಳಿದ್ದಾರೆ.
We love you, 4️⃣0️⃣0️⃣0️⃣ ?
Congratulations on the mega milestone, @ShreyasIyer15 ?#YehHaiNayiDilli #IPL2021 #DCvSRH pic.twitter.com/Xi8R7tjcCM
— Delhi Capitals (@DelhiCapitals) September 22, 2021
4000 ರನ್ ಪೂರೈಸಿದ ಅಯ್ಯರ್:
ಹೈದರಬಾದ್ ವಿರುದ್ಧದ ಪಂದ್ಯದಲ್ಲಿ ಅಯ್ಯರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 41 ಎಸೆತಗಳಲ್ಲಿ ತಲಾ 2 ಫೋರ್, ಸಿಕ್ಸರ್ ಬಾರಿಸಿ ಅಜೇಯ 47 ರನ್ ಸಿಡಿಸಿದರು. ಈ ಮೂಲಕ ಅಯ್ಯರ್ ಟಿ-20 ಮಾದರಿಯ ಕ್ರಿಕೆಟ್ನಲ್ಲಿ 4000 ರನ್ ಪೂರೈಸಿದ ವಿಶೇಷ ಸಾಧನೆ ಮಾಡಿದರು.
IPL 2021, MI vs KKR: ಅಬುಧಾಬಿಯಲ್ಲಿಂದು ಹೈವೋಲ್ಟೇಜ್ ಪಂದ್ಯ: ಮುಂಬೈ-ಕೋಲ್ಕತ್ತಾ ನಡುವೆ ಯಾರಿಗೆ ವಿಜಯ?
(Shreyas Iyer completes 4000 runs and breaks silence on Delhi Capitals captaincy situation in IPL 2021)