IPL 2021 Points Table, Purple Cap, and Orange Cap: ಯಾವ ಆಟಗಾರನ ಕೈಯಲ್ಲಿದೆ ಆರೆಂಜ್ ಕ್ಯಾಪ್-ಪರ್ಪಲ್ ಕ್ಯಾಪ್?

Purple Cap, and Orange Cap IPL 2021: ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತೊಟ್ಟಿರುವ ಆಟಗಾರ ಆರ್​ಸಿಬಿ ತಂಡದ ಹರ್ಷಲ್ ಪಟೇಲ್. ಇವರು ಎಂಟು ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿದ್ದಾರೆ. ಈ ಬಾರಿ ಒಂದು ಸಲ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

IPL 2021 Points Table, Purple Cap, and Orange Cap: ಯಾವ ಆಟಗಾರನ ಕೈಯಲ್ಲಿದೆ ಆರೆಂಜ್ ಕ್ಯಾಪ್-ಪರ್ಪಲ್ ಕ್ಯಾಪ್?
Shikhar Dhawan

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಎರಡನೇ ಚರಣ ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ನಿನ್ನೆ ಸನ್​ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್(SRH vs DC) ನಡುವಣ ಪಂದ್ಯದ ಬಳಿಕ ಐಪಿಎಲ್ 2021 ಪಾಯಿಂಟ್ ಟೇಬಲ್​, (IPL 2021 Point Table), ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್​ (Orange Cap and Purple Cap) ಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆಟಗಾರರು ತಾಮುಂದು ನಾಮುಂದು ಎಂಬಂತೆ ಅದ್ಭುತ ಪ್ರದರ್ಶನ ತೋರುತ್ತಿದ್ದು, ಪೈಪೋಟಿ ಹೆಚ್ಚುತ್ತಿದೆ. ಸದ್ಯ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ತೊಟ್ಟಿರುವ ಆಟಗಾರರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್ (Shikhar Dhawan) ಇದ್ದಾರೆ. ಇವರು 9 ಪಂದ್ಯಗಳಲ್ಲಿ 422 ರನ್ ಗಳಿಸಿದ್ದು, ಈ ಆವೃತ್ತಿಯಲ್ಲಿ 3 ಅರ್ಧಶತಕ ಸಿಡಿಸಿದ್ದಾರೆ.

ಧವನ್ ಹಿಂಭಾಗದಲ್ಲೇ ಪಂಜಾಬ್ ಕಿಂಗ್ಸ್ ನಾಯಕ ಕೆ. ಎಲ್ ರಾಹುಲ್ ಇದ್ದು ಇವರು 8 ಪಂದ್ಯಗಳಲ್ಲಿ 390 ರನ್ ಸಿಡಿಸಿದ್ದಾರೆ. ಇವರ ಖಾತೆಯಿಂದ 4 ಅರ್ಧಶತಕ ಬಂದಿದ್ದು, 18 ಸಿಕ್ಸರ್, 31 ಫೋರ್ ಬಾರಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಮಯಾಂಕ್ ಅಗರ್ವಾಲ್ ಇದ್ದಾರೆ. ಇವರು ಎಂಟು ಪಂದ್ಯಗಳಲ್ಲಿ 327 ರನ್ ಗಳಿಸಿದ್ದಾರೆ.

ಇನ್ನೂ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತೊಟ್ಟಿರುವ ಆಟಗಾರ ಆರ್​ಸಿಬಿ ತಂಡದ ಹರ್ಷಲ್ ಪಟೇಲ್. ಇವರು ಎಂಟು ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿದ್ದಾರೆ. ಈ ಬಾರಿ ಒಂದು ಸಲ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಎರಡನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆವೇಶ್ ಖಾನ್ ಇದ್ದು ಇವರು 9 ಪಂದ್ಯಗಳಲ್ಲಿ 14 ವಿಕೆಟ್ ಕಿತ್ತಿದ್ದಾರೆ. ಮೂರನೇ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಕ್ರಿಸ್ ಮೊರೀಸ್ ಇದ್ದು, ಇವರು ಕೂಡ ಎಂಟು ಪಂದ್ಯಗಳಲ್ಲಿ 14 ವಿಕೆಟ್ ಕಬಳಿಸಿದ್ದಾರೆ.

ಪಾಯಿಂಟ್ ಟೇಬಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈವರೆಗೆ ಒಟ್ಟು 9 ಪಂದ್ಯಗಳನ್ನು ಆಡಿದ್ದು ಏಳರಲ್ಲಿ ಗೆಲುವು ಕಂಡಿದೆ. ಕೇವಲ ಎರಡು ಪಂದ್ಯಗಳಲ್ಲಷ್ಟೆ ಸೋತಿದೆ. ಒಟ್ಟು 14 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ +0.613 ನೆಟ್​ರೇಟ್​ನೊಂದಿಗೆ ಮೊದಲ ಸ್ಥಾನದಲ್ಲಿದೆ. ಎಂ. ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರನೇ ಸ್ಥಾನ ಮತ್ತು ಮುಂಬೈ ಇಂಡಿಯನ್ಸ್ ನಾಲ್ಕನೇ ಸ್ಥಾನದಲ್ಲಿದೆ.

IPL 2021 Points Table: SRH vs DC ಪಂದ್ಯದ ಬಳಿಕ ಐಪಿಎಲ್ 2021 ಪಾಯಿಂಟ್ ಟೇಬಲ್​ನಲ್ಲಿ ಮಹತ್ವದ ಬದಲಾವಣೆ

Shreyas Iyer: ತನ್ನನ್ನು ನಾಯಕನಾಗಿ ಆಯ್ಕೆ ಮಾಡದ ಬಗ್ಗೆ ಮೊದಲ ಬಾರಿ ಮೌನ ಮುರಿದ ಶ್ರೇಯಸ್ ಅಯ್ಯರ್

(IPL 2021 Standings ranking orange cap purple cap after SRH vs DC in Kannada 22nd September)

Read Full Article

Click on your DTH Provider to Add TV9 Kannada