Breaking: ಆರ್‌ಸಿಬಿಗೆ ಆ್ಯಂಡಿ ಫ್ಲವರ್ ಹೊಸ ಮುಖ್ಯ ಕೋಚ್! ಖಚಿತ ಪಡಿಸಿದ ಫ್ರಾಂಚೈಸ್
Royal Challengers Bangalore: ಮ್ಮ ಕೋಚಿಂಗ್ ಸಿಬ್ಬಂದಿಯಲ್ಲಿ ಭಾರಿ ಬದಲಾವಣೆ ಮಾಡಿರುವ ಆರ್‌ಸಿಬಿ ಫ್ರಾಂಚೈಸ್, ಮಾಜಿ ಜಿಂಬಾಬ್ವೆ ಕ್ರಿಕೆಟಿಗ ಮತ್ತು ಇಂಗ್ಲೆಂಡ್‌ನ ಮಾಜಿ ಕೋಚ್ ಆ್ಯಂಡಿ ಫ್ಲವರ್ ಅವರನ್ನು ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ.
ಇದುವರೆಗೆ ಐಪಿಎಲ್ (IPL) ಗೆಲ್ಲುವಲ್ಲಿ ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಮುಂದಿನ ಸೀಸನ್‌ಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಅದಕ್ಕೆ ಮೊದಲ ಹೆಜ್ಜೆಯಾಗಿ ತಮ್ಮ ಕೋಚಿಂಗ್ ಸಿಬ್ಬಂದಿಯಲ್ಲಿ ಭಾರಿ ಬದಲಾವಣೆ ಮಾಡಿರುವ ಆರ್‌ಸಿಬಿ ಫ್ರಾಂಚೈಸ್, ಮಾಜಿ ಜಿಂಬಾಬ್ವೆ ಕ್ರಿಕೆಟಿಗ ಮತ್ತು ಇಂಗ್ಲೆಂಡ್‌ನ ಮಾಜಿ ಕೋಚ್ ಆ್ಯಂಡಿ ಫ್ಲವರ್ (Andy Flower) ಅವರನ್ನು ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ. ಇದರೊಂದಿಗೆ ಆರ್‌ಸಿಬಿ ತಂಡದ ನಿರ್ದೇಶಕ ಮೈಕ್ ಹೆಸನ್ (Mike Hesson) ಮತ್ತು ಮುಖ್ಯ ಕೋಚ್ ಸಂಜಯ್ ಬಂಗಾರ್ (Sanjay Bangar) ಅವರ ಅಧಿಕಾರಾವಧಿಯನ್ನು ವಿಸ್ತರಿಸದಿರಲು ಫ್ರಾಂಚೈಸ್ ನಿರ್ಧರಿಸಿದ್ದು, ಇಬ್ಬರಿಗೂ ಧನ್ಯವಾದಗಳನ್ನು ತಿಳಿಸಿದೆ. ಫ್ರಾಂಚೈಸ್ ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದೆ.
ಅದಾಗ್ಯೂ ಆರ್‌ಸಿಬಿಗೆ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಆ್ಯಂಡಿ ಫ್ಲವರ್ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಬೆಂಗಳೂರಿಗಿಂತ ಮೊದಲು ಫ್ಲವರ್ ಲಕ್ನೋ ಸೂಪರ್‌ಜೈಂಟ್ಸ್ ತಂಡದ ಜೊತೆ ಕೆಲಸ ಮಾಡಿದ್ದಾರೆ. ಲಕ್ನೋ ತಂಡ ಐಪಿಎಲ್‌ನಲ್ಲಿ ಆಡಲು ಪ್ರಾರಂಭಿಸಿ ಕೇವಲ ಎರಡು ವರ್ಷಗಳಾಗಿವೆ. ಆದರೆ ಈ ತಂಡವನ್ನು ಬಲಿಷ್ಠಗೊಳಿಸುವಲ್ಲಿ ಫ್ಲವರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಫ್ಲವರ್ ಅಡಿಯಲ್ಲಿ, ಲಕ್ನೋ ಸತತ ಎರಡೂ ವರ್ಷಗಳಲ್ಲಿ (2022 ಮತ್ತು 2023) ಪ್ಲೇಆಫ್‌ಗೆ ಪ್ರವೇಶಿಸಿತು. ಲಕ್ನೋ ತಂಡಕ್ಕೆ ಸೇರುವ ಮೊದಲು ಫ್ಲವರ್ ಪಂಜಾಬ್ ಕಿಂಗ್ಸ್ ತಂಡದಲ್ಲೂ ಕೆಲಸ ಮಾಡಿದ್ದಾರೆ.
ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ..! ಏಷ್ಯಾಕಪ್ ಫೈನಲ್ನಲ್ಲಿ ಮಿಂಚಿದ ಆರ್‌ಸಿಬಿ ಆಟಗಾರ್ತಿಯರು
We are beyond thrilled to welcome ??? ???? ?? ????? and ??? ????? ??? winning coach ???? ?????? as the ???? ????? of RCB Men’s team. ??
Andy’s experience of coaching IPL & T20 teams around the world, and leading his teams to titles… pic.twitter.com/WsMYGCkcYT
— Royal Challengers Bangalore (@RCBTweets) August 4, 2023
ಇಂಗ್ಲೆಂಡ ತಂಡವನ್ನು ಚಾಂಪಿಯನ್ ಮಾಡಿದ್ದ ಫ್ಲವರ್
ಇದುವರೆಗೆ ಇಂಗ್ಲೆಂಡ್ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿದೆ. ಅದರಲ್ಲಿ ಈ ತಂಡವು 2010 ರಲ್ಲಿ ಪಾಲ್ ಕಾಲಿಂಗ್‌ವುಡ್ ನಾಯಕತ್ವದಲ್ಲಿ ತನ್ನ ಮೊದಲ ಟಿ20 ವಿಶ್ವಕಪ್ ಗೆದ್ದಿತ್ತು. ಆ ಸಮಯದಲ್ಲಿ ಫ್ಲವರ್ ತಂಡದ ಮುಖ್ಯ ಕೋಚ್ ಆಗಿದ್ದರು. ಅವರ ತರಬೇತಿಯಡಿಯಲ್ಲಿ ಇಂಗ್ಲೆಂಡ್ 2010-11 ರಲ್ಲಿ ತವರಿನಲ್ಲಿ ನಡೆದ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು 3-1 ರಿಂದ ಸೋಲಿಸಿತ್ತು. ಅಲ್ಲದೆ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯಲ್ಲೂ ಭಾರತವನ್ನು ಸೋಲಿಸಿತ್ತು.
ಚಾಂಪಿಯನ್ ಆಗುತ್ತಾ ಆರ್‌ಸಿಬಿ?
ಇನ್ನು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವು ಮೂರು ಬಾರಿ ಐಪಿಎಲ್‌ನಲ್ಲಿ ಫೈನಲ್‌ಗೆ ತಲುಪಿದೆ. ಆದರೆ ಒಮ್ಮೆ ಕೂಡ ವಿಜೇತರಾಗಲು ಸಾಧ್ಯವಾಗಲಿಲ್ಲ. ಇದೀಗ ಆ್ಯಂಡಿ ಫ್ಲವರ್ ಆರ್‌ಸಿಬಿ ತಂಡದ ಮುಖ್ಯ ಕೋಚ್ ಹುದ್ದೆಯನ್ನು ಅಲಂಕರಿಸಿದ್ದು, ತಂಡದ ಪ್ರಶಸ್ತಿ ಬರವನ್ನು ಕೊನೆಗಾಣಿಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ. ಫ್ಲವರ್ ಈಗಾಗಲೇ ಐಪಿಎಲ್‌ನಲ್ಲಿ ಕೆಲಸ ಮಾಡಿದ್ದು, ಇದಲ್ಲದೆ, ಅವರು ವಿಶ್ವದ ಇತರ ಫ್ರಾಂಚೈಸ್ ಲೀಗ್‌ಗಳಲ್ಲಿ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ. 2020 ರಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೇಂಟ್ ಲೂಸಿಯಾ ಝೌಕ್ಸ್ ತಂಡದ ಕೋಚ್ ಆಗಿದ್ದ ಫ್ಲವರ್, 2021 ರಲ್ಲಿ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಮುಲ್ತಾನ್-ಸುಲ್ತಾನ್ ತಂಡದಲ್ಲಿ ಸೇವೆ ಸಲ್ಲಿಸಿದ್ದರು. ಇಲ್ಲಿಂದ ಲಕ್ನೋ ತಂಡಕ್ಕೆ ಸೇರ್ಪಡೆಗೊಂಡ ಫ್ಲವರ್, 2023 ರಲ್ಲಿ ಐಎಲ್‌ಟಿ 20 ಲೀಗ್‌ನಲ್ಲಿ ಗಲ್ಫ್ ಜೈಂಟ್ಸ್ ತಂಡದ ತರಬೇತುದಾರರಾಗಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:56 am, Fri, 4 August 23